ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನಿಮ್ಮ ಹೆಸರು ನೋಂದಾಯಿಸುವುದು ಹೇಗೆ?

|

ರೈತರ ನೆರವಿಗಾಗಿ ಕೇಂದ್ರ ಸರ್ಕಾರ ಹಲವ ಯೋಜನೆಗಳನ್ನು ಜಾರಿಗೊಳಿಸಿದೆ. ಇದರಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಕೂಡ ಒಂದಾಗಿದೆ. ಪಿಎಂ ಕಿಸಾನ್ ಸಮ್ಮಾನ್‌ ನಿಧಿ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡ ರೈತರು ಪ್ರತಿ ವರ್ಷ ಆರು ಸಾವಿರ ರೂ.ಗಳ ಸಹಾಯಧನ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಆರು ಸಾವಿರ ರೂ.ಗಳನ್ನು ಎರಡು ಸಾವಿರ ರೂ,ಗಳಂತೆ ಮೂರು ಕಂತಿನಲ್ಲಿ ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತೆ.

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ

ಹೌದು, ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿಯಲ್ಲಿ ರೈತರಿಗೆ ಆರು ಸಾವಿರ ರೂ. ಸಹಾಯದನ ದೊರೆಯಲಿದೆ. ಇನ್ನು ಈ ಯೋಜನೆಯಡಿಯಲ್ಲಿ ಹೆಸರು ನೋಂದಾಯಿಸಿಕೊಳ್ಳದ ರೈತರು ಹೊಸದಾಗಿ ನೋಂದಾಯಿಸಿಕೊಳ್ಳುವ ಅವಕಾಶವಿದೆ. ಹೊಸ ರೈತರು ಸೆಪ್ಟೆಂಬರ್ 30 ರ ಮೊದಲು ಪಿಎಂ ಕಿಸಾನ್ ಆಪ್‌ನಲ್ಲಿ ನೋಂದಾಯಿಸಿಕೊಂಡರೆ ಡಿಸೆಂಬರ್ ಒಳಗೆ 4,000ರೂ.ಗಳ ಸಹಾಯ ಧನ ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಗೆ ಹೆಸರು ನೋಂದಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸಮ್ಮಾನ್

2019ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಅಂದಿನಿಂದ ಇಂದಿನವರಗೂ 9.75 ಕೋಟಿಗೂ ಹೆಚ್ಚಿನ ರೈತ ಕುಂಟುಬಗಳಿಗೆ ಪ್ರಯೋಜನ ಸಿಕ್ಕಿದೆ. ಇನ್ನು ಈ ಯೋಜನೆಯಲ್ಲಿ ಇಲ್ಲಿಯ ತನಕ ಹೆಸರು ನೋಂದಾಯಿಸಿಕೊಳ್ಳದ ರೈತರು ಈಗ ಹೆಸರನ್ನು ನೋಂದಾಯಿಸಲು ಅವಕಾಶ ನೀಡಲಾಗಿದೆ. ಅದರಲ್ಲೂ ಇದೇ ಸೆಪ್ಟೆಂಬರ್ 30 ರೊಳಗೆ ನೋಂದಾಯಿಸಿಕೊಂಡರೆ ರೈತರು ನೇರವಾಗಿ 4,000ರೂ. ಹಣ ಪಡೆಯಲು ಅರ್ಹರಾಗಿರುತ್ತಾರೆ. ಎರಡು ಕಂತುಗಳ ಹಣವನ್ನು (4 ಸಾವಿರ ರೂಪಾಯಿ) ಒಂದು ಬಾರಿ ಪಡೆಯುವುದಕ್ಕೆ ಅವಕಾಶ ಇದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಹೆಸರು ನೋಂದಾಯಿಸುವುದು ಹೇಗೆ?

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಹೆಸರು ನೋಂದಾಯಿಸುವುದು ಹೇಗೆ?

ಹಂತ:1 ಮೊದಲು ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನಿನಲ್ಲಿ PMKISAN GoI ಅಪ್ಲಿಕೇಶನ್‌ ಡೌನ್ಲೋಡ್ ಮಾಡಿ.

ಹಂತ:2 ನಂತರ ಅಪ್ಲಿಕೇಶನ್‌ ತೆರೆದು ಹೊಸ ರೈತ ನೋಂದಣಿಯ ಮೇಲೆ ಕ್ಲಿಕ್ ಮಾಡಿ.

ಹಂತ:3 ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಬೇಕು.

ಹಂತ:4 ನಂತರ ನಿಮ್ಮ ಹೆಸರು, ವಿಳಾಸ, ಬ್ಯಾಂಕ್ ಖಾತೆ ವಿವರಗಳು, ಐಎಫ್‌ಎಸ್‌ಸಿ ಕೋಡ್ ಸೇರಿದಂತೆ ಎಲ್ಲಾ ಅಗತ್ಯ ವಿವರಗಳನ್ನು ನಮೂದಿಸಿರಿ.

ಹಂತ:5 ಎಲ್ಲಾ ವಿವರವನ್ನು ಸಲ್ಲಿಸಿದ ನಂತರ, ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ ಅನ್ನೊದನ್ನ ಗಮನಿಸಿ. ನಂತರ, ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ:6 ಈಗ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸುವವರೆಗೆ ಕಾಯಿರಿ. ಪೂರ್ಣಗೊಂಡ ನಂತರ, ಪ್ರಯೋಜನಗಳನ್ನು ಅರ್ಹ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿ ಸ್ಟೇಟಸ್‌ ಪರಿಶೀಲಿಸುವುದು ಹೇಗೆ?

ಪಿಎಂ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿ ಸ್ಟೇಟಸ್‌ ಪರಿಶೀಲಿಸುವುದು ಹೇಗೆ?

ಹಂತ:1 ಮೊದಲಿಗೆ https://pmkisan.gov.in/beneficiarystatus.aspx ಲಿಂಕ್‌ ತೆರೆಯಿರಿ.
ಹಂತ:2 ನಂತರ ನಿಮಗೆ ಕಾಣಿಸುವ ಲಿಂಕ್ ನಲ್ಲಿ, ನಿಮಗೆ ಬೇಕಾದ ಟ್ಯಾಬ್ ಅನ್ನು ಆರಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
ಹಂತ:3 ಇದರಲ್ಲಿ ನಿಮ್ಮ ಆಧಾರ್ ಸಂಖ್ಯೆ, ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ.
ಹಂತ:4 'ಡೇಟಾ ಪಡೆಯಿರಿ' ಆಯ್ಕೆಯ ಮೇಲೆ ಟ್ಯಾಪ್ ಮಾಡಿ.

ಕಿಸಾನ್

ಇನ್ನು ಸರ್ಕಾರ ನಿಗದಿ ಪಡಿಸಿರುವ ದಿನಾಂಕಕ್ಕಿಂತ ಮುಂಚಿತವಾಗಿ ನೋಂದಣಿ ಪೂರ್ಣಗೊಂಡರೆ, PM ಕಿಸಾನ್ ಯೋಜನೆಯಡಿಯಲ್ಲಿ ನವೆಂಬರ್ ತಿಂಗಳೊಳಗೆ 2,000 ಜಮಾ ಆಗಲಿದೆ. ಇನ್ನೊಂದು ಕಂತು 2,000 ಅನ್ನು ಡಿಸೆಂಬರ್‌ನಲ್ಲಿ ನೇರವಾಗಿ ಖಾತೆಗೆ ತಲುಪಿಸಲಾಗುತ್ತದೆ. ಆ ಮೂಲಕ 4,000ರೂ. ಮೊತ್ತವನ್ನು ಪಡೆದುಕೊಳ್ಳಬಹುದಾಗಿದೆ. ಪ್ರಸ್ತುತ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಿಗೆ ಮಾತ್ರ ಲಭ್ಯವಿರುವ ಪಿಎಂ ಕಿಸಾನ್ ಯೋಜನೆ ಆಪ್ ಮೂಲಕ ನೀವು ನೇರವಾಗಿ ನೋಂದಣಿಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಬಹುದು.

Best Mobiles in India

Read more about:
English summary
New farmers under the PM Kisan Yojana programme can get ₹4,000 by December if they register on PM Kisan app before September 30.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X