ನಿಮ್ಮ ನೆಟ್‌ಫ್ಲಿಕ್ಸ್ ಖಾತೆ ಬಳಸುತ್ತಿರುವವರನ್ನು ರಿಮೂವ್ ಮಾಡುವುದು ಹೇಗೆ?
ಪ್ರಸ್ತುತ ದಿನಗಳಲ್ಲಿ ಭಾರತದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇದರಲ್ಲಿ ನೆಟ್‌ಫ್ಲಿಕ್ಸ್ ಪ್ಲಾಟ್‌ಫಾರ್ಮ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಇನ್ನು ನೆಟ್‌ಫ್ಲಿಕ್ಸ್ ತನ್ನ ಬಳಕೆದಾರರಿಗೆ ಹಲವು ಚಂದಾದಾರಿಕೆ ಪ್ಲಾನ್‌ಗಳನ್ನು ಪರಿಚಯಿಸಿದೆ. ಚಂದಾದಾರಿಕೆಯನ್ನು ಪಾವತಿಸುವ ಮೂಲಕ ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್ ಸೇವೆಯನ್ನು ಪಡೆದುಕೊಳ್ಳಬಹುದು. ಇನ್ನು ನೀವು ಆಯ್ಕೆ ಮಾಡುವ ಚಂದಾದಾರಿಕೆಗಳ ಆಧಾರದ ಮೇಲೆ ನಿಮ್ಮ ಅಕೌಂಟ್‌ನಲ್ಲಿ ನಿಮ್ಮ ಸ್ನೇಹಿತರು, ಕುಟುಂಬಸ್ಥರು ಕೂಡ ನೆಟ್‌ಫ್ಲಿಕ್ಸ್ ಅನ್ನು ಪ್ರವೇಶಿಸಬಹುದು.

ಹೌದು, ನೆಟ್‌ಫ್ಲಿಕ್ಸ್ ಖಾತೆಯನ್ನು ನೀವು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಬಹುದು. ನಿಮ್ಮ ಅಕೌಂಟ್ ಮೂಲಕ ನಿಮ್ಮ ಸ್ನೇಹಿತರು, ಕುಟುಂಬಸ್ಥರು ಕೂಡ ನೆಟ್‌ಫ್ಲಿಕ್ಸ್ ಪ್ರವೇಶಿಸಬಹುದು. ಒಂದು ವೇಳೆ ನೀವು ನಿಮ್ಮ ಅಕೌಂಟ್‌ನಲ್ಲಿ ಕುಟುಂಬಸ್ಥರು ಪ್ರವೇಶಿದಂತೆ ಮಾಡಲು, ನಿಮ್ಮ ನೆಟ್‌ಫ್ಲಿಕ್ಸ್ ಅಕೌಂಟ್‌ನಿಂದ ಸ್ನೇಹಿತರು ರಿಮೂವ್ ಮಾಡುವುದಕ್ಕೆ ಅವಕಾಶವಿದೆ. ಹಾಗಾದ್ರೆ ನೆಟ್‌ಫ್ಲಿಕ್ಸ್ ಅಕೌಂಟ್‌ನಲ್ಲಿ ಬೇರೆಯವರನ್ನು ರಿಮೂವ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಿಮ್ಮ ಅಕೌಂಟ್ ಪ್ರೊಫೈಲ್ನಲ್ಲಿ ಬೇರೆಯವರು ನೆಟ್‌ಫ್ಲಿಕ್ಸ್ ಬಳಸುವುದನ್ನು ತಡೆಯಬೇಕೆಂದರೆ ನೀವು ಪಾಸ್‌ವರ್ಡ್ ಬದಲಾಯಿಸುವುದು ಮುಖ್ಯವಾಗುತ್ತದೆ. ನೀವು ನೆಟ್‌ಫ್ಲಿಕ್ಸ್ ಖಾತೆಯ ಪಾಸ್‌ವರ್ಡ್ ಬದಲಾಯಿಸಿದ ತಕ್ಷಣ ನಿಮ್ಮ ಅಕೌಂಟ್ ಬಳಸುವ ಸ್ನೇಹಿತರು, ಕುಟುಂಬಸ್ಥರು ಲಾಗ್‌ಔಟ್ ಆಗುತ್ತಾರೆ. ಇದರಿಂದ ನೀವು ಮಾತ್ರವೇ ನಿಮ್ಮ ನೆಟ್‌ಫ್ಲಿಕ್ಸ್ ಅಕೌಂಟ್ ಅನ್ನು ಬಳಸುವುದಕ್ಕೆ ಸಾಧ್ಯವಾಗಲಿದೆ. ಇನ್ನು ನೀವು ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಅನ್ನು ಬದಲಾಯಿಸುವುದು ಕೂಡ ಸರಳವಾಗಿದೆ. ಅದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.

ನಿಮ್ಮ ನೆಟ್‌ಫ್ಲಿಕ್ಸ್ ಅಕೌಂಟ್ ಪಾಸ್‌ವರ್ಡ್ ಅನ್ನು ಬದಲಾಯಿಸುವುದು ಹೇಗೆ?
ಹಂತ:1 ಮೊದಲಿಗೆ ನೀವು ನಿಮ್ಮ ನೆಟ್‌ಫ್ಲಿಕ್ಸ್ ಖಾತೆಯನ್ನು ತೆರೆಯಿರಿ.
ಹಂತ:2 ಇದರಲ್ಲಿ ನೀವು ನಿಮ್ಮ ಪ್ರೊಫೈಲ್ ಆಯ್ಕೆಮಾಡಿ.
ಹಂತ:3 ನಂತರ ಡ್ರಾಪ್-ಡೌನ್‌ನಿಂದ "ಅಕೌಂಟ್" ಮೇಲೆ ಟ್ಯಾಪ್ ಮಾಡಿ.
ಹಂತ:4 ಈಗ "ಚೇಂಜ್ ಪಾಸ್‌ವರ್ಡ್ " ಆಯ್ಕೆಮಾಡಿ ಮತ್ತು ಸೈಟ್‌ನಲ್ಲಿನ ಸೂಚನೆಗಳನ್ನು ಅನುಸರಿಸಿ.
ಹಂತ:5 ಒಮ್ಮೆ ಅಪ್ಡೇಟ್ ಮಾಡಿದ ನಂತರ, ನೀವು "ಅಕೌಂಟ್" ವಿಭಾಗಕ್ಕೆ ಹಿಂತಿರುಗಿ,
ಹಂತ:6 ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ಎಲ್ಲಾ ಡಿವೈಸ್‌ಗಳಿಂದ ಸೈನ್ ಔಟ್ ಮಾಡಿ"
ಹಂತ:7 ಇದೀಗ "ದೃಢೀಕರಿಸಿ" ಅನ್ನು ಟ್ಯಾಪ್ ಮಾಡಬಹುದು.
ಹೀಗೆ ಮಾಡುವುದರಿಂದ ನೀವು ಎಲ್ಲಾ ಡಿವೈಸ್‌ಗಳಿಂದ ಲಾಗ್ ಔಟ್ ಆಗುತ್ತೀರಿ. ಇದರಿಂದ ನಿಮ್ಮ ಅಕೌಂಟ್ ಬಳಸುತ್ತಿದ್ದ ಸ್ನೇಹಿತರು ಕೂಡ ಲಾಗ್‌ಔಟ್ ಆಗಿಬಿಡುತ್ತಾರೆ, ನಂತರ ನೀವು ಹೊಸ ಪಾಸ್‌ವರ್ಡ್ ಕ್ರಿಯೆಟ್ ಮಾಡುವ ಮೂಲಕ ನಿಮ್ಮ ಅಕೌಂಟ್ ಪ್ರವೇಶಿಸಬಹುದಾಗಿದೆ. ನೀವು ಬೇರೆಯವರಿಗೆ ಪಾಸ್‌ವರ್ಡ್ ಹಂಚಿಕೊಂಡಾಗ ಮಾತ್ರ ನಿಮ್ಮ ಅಕೌಂಟ್ ಅನ್ನು ಬೇರೆಯವರು ಪ್ರವೇಶಿಸಲು ಸಾದ್ಯವಾಗಲಿದೆ.

ಇದಲ್ಲದೆ ನೀವು ನಿಮ್ಮ ನೆಟ್‌ಫ್ಲಿಕ್ಸ್ ಖಾತೆಯ ಐಡಿಯನ್ನು ಬೇರೆಯವರಿಗೆ ಕೊಟ್ಟಾಗ ನಿಮ್ಮ ಪ್ರೊಫೈಲ್ ಲಾಕ್ ಮಾಡಬೇಕಾದ ಸನ್ನಿವೇಶ ಬರಬಹುದು. ಇಲ್ಲಿ ನೀವು ನಿಮ್ಮ ಪ್ರೊಫೈಲ್ ಅನ್ನು ನೀವು ಮರೆಮಾಡಲು ಸಾಧ್ಯವಾಗದಿದ್ದರೂ, ನೀವು ಅದನ್ನು ಪಾಸ್‌ವರ್ಡ್‌ನೊಂದಿಗೆ ಖಂಡಿತವಾಗಿಯೂ ರಕ್ಷಿಸಬಹುದು. ಇದರಿಂದಾಗಿ ನಿಮ್ಮ ನೆಟ್‌ಫ್ಲಿಕ್ಸ್ ಪ್ರೊಫೈಲ್ ಅನ್ನು ನೀವು ಬಯಸಿದ ತನಕ ಅನಪೇಕ್ಷಿತ ಜನರಿಗೆ ಪರಿಶೀಲಿಸಲು ಸಾಧ್ಯವಾಗುವುದಿಲ್ಲ.

ನಿಮ್ಮ ನೆಟ್‌ಫ್ಲಿಕ್ಸ್ ಪ್ರೊಫೈಲ್ ಅನ್ನು ಲಾಕ್ ಮಾಡುವುದು ಹೇಗೆ?
ಹಂತ:1 ಒಮ್ಮೆ ನೀವು ನೆಟ್‌ಫ್ಲಿಕ್ಸ್ ವೆಬ್‌ಸೈಟ್‌ನಲ್ಲಿದ್ದರೆ, ನಿಮ್ಮ ರುಜುವಾತುಗಳೊಂದಿಗೆ ಲಾಗ್ ಇನ್ ಮಾಡಿ.
ಹಂತ:2 ಈಗ, ಎಲ್ಲಾ ಪ್ರೊಫೈಲ್‌ಗಳನ್ನು ಪ್ರದರ್ಶಿಸುವ ಪುಟವನ್ನು ನೀವು ನೋಡುತ್ತೀರಿ. ನೀವು ಲಾಕ್ ಮಾಡಲು ಬಯಸುವದನ್ನು ಟ್ಯಾಪ್ ಮಾಡಿ.
ಹಂತ:3 ಮೇಲಿನ ಬಲ ಮೂಲೆಯಲ್ಲಿ ಇರಿಸಲಾಗಿರುವ ಪ್ರೊಫೈಲ್ ಚಿತ್ರದೊಂದಿಗೆ ನೀವು ಈಗ ಖಾತೆ ಆಯ್ಕೆಯನ್ನು ಆರಿಸಬೇಕಾಗುತ್ತದೆ.
ಹಂತ:4 ‘ಪ್ರೊಫೈಲ್ ಮತ್ತು ಪೋಷಕರ ನಿಯಂತ್ರಣಗಳು' ಆಯ್ಕೆಯನ್ನು ಪಡೆಯಲು ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಿ.
ಹಂತ:5 ಈ ಆಯ್ಕೆಯು ಸಣ್ಣ ತಲೆಕೆಳಗಾದ ತ್ರಿಕೋನದೊಂದಿಗೆ ಇರುತ್ತದೆ. ಹೆಚ್ಚಿನ ಆಯ್ಕೆಗಳನ್ನು ನೋಡಲು ಅದರ ಮೇಲೆ ಟ್ಯಾಪ್ ಮಾಡಿ.
ಹಂತ:6 ನೀವು ಈಗ ಪ್ರೊಫೈಲ್ ಲಾಕ್ ಆಯ್ಕೆಯನ್ನು ನೋಡುತ್ತೀರಿ. ಅದನ್ನು ಆಯ್ಕೆ ಮಾಡಿ ಮತ್ತು ದೃಡೀಕರಿಸಲು ನಿಮ್ಮ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಅನ್ನು ನಮೂದಿಸಿ.
ಹಂತ:7 ಈಗ ನೀವು ನಿಮ್ಮ ಪ್ರೊಫೈಲ್‌ನಲ್ಲಿ 4-ಅಂಕಿಯ ಪಿನ್ ಅನ್ನು ಸೆಟ್‌ಮಾಡಿ, ಪಾಸ್‌ಕೋಡ್ ಅನ್ನು ದೃಡೀಕರಿಸಬೇಕಾಗುತ್ತದೆ. ಕೆಲವು ನಿಮಿಷಗಳ ನಂತರ, ನಿಮ್ಮ ನೆಟ್‌ಫ್ಲಿಕ್ಸ್ ಪ್ರೊಫೈಲ್ ಅನ್ನು ಪಿನ್‌ನೊಂದಿಗೆ ಸುರಕ್ಷಿತಗೊಳಿಸಲಾಗುತ್ತದೆ. ಇದೀಗ ನೀವು ವೀಕ್ಷಿಸುತ್ತಿರುವ ವಿಷಯವನ್ನು ಪ್ರವೇಶಿಸಲು ಯಾರಿಗೂ ಕೂಡ ಸಾಧ್ಯವಾಗುವುದಿಲ್ಲ.


Click it and Unblock the Notifications








