ನಿಮ್ಮ ಸ್ಮಾರ್ಟ್‌ಫೋನ್‌ ಬಿಸಿಯಾಗದಂತೆ ತಡೆಯಲು ಈ ಕ್ರಮಗಳನ್ನು ಅನುಸರಿಸಿ!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಿದೆ. ಸ್ಮಾರ್ಟ್‌ಫೋನ್‌ ದಿನನಿತ್ಯ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಆದರೂ ಸ್ಮಾರ್ಟ್‌ಫೋನ್‌ ಬಳಸುವಾಗ ಎಚ್ಚರಿಕೆ ವಹಿಸುವುದು ಕೂಡ ಮುಖ್ಯವಾಗಿದೆ. ಏಕೆಂದರೆ ಸ್ಮಾರ್ಟ್‌ಫೋನ್‌ಗಳು ಏಕಾಏಕಿ ಬ್ಲಾಸ್ಟ್‌ ಆಗುವ, ಇದಕ್ಕಿದಂತೆ ಬಿಸಿಯಾಗುವ ಸುದ್ದಿಗಳು ಆಗಾಗ ಕೇಳಿ ಬರುತ್ತಲೆ ಇದೆ. ನೀವು ಬಳಸುವ ಸ್ಮಾರ್ಟ್‌ಫೋನ್‌ ಕೂಡ ಬಿಸಿಯಾಗುವ ಅನುಭವ ನಿಮಗೆ ಬಂದಿರುತ್ತದೆ. ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಾದಂತೆ ಫೋನ್‌ ಬಿಸಿಯಾಗುವ ಅನುಭವ ಬರಲಿದೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ಬಳಕೆ ನಿರಂತರವಾಗಿದ್ದರೆ ಇದಕ್ಕಿದಂತೆ ಫೋನ್‌ ಬಿಸಿಯಾಗಿಬಿಡಿಲಿದೆ. ಇದಕ್ಕೆ ಸ್ಮಾರ್ಟ್‌ಫೋನ್‌ ಒಳಗೊಂಡಿರುವ ಫೀಚರ್ಸ್‌ಗಳು, ಗ್ರಾಫಿಕ್ಸ್‌, ಅಪ್ಲಿಕೇಶನ್‌ಗಳ ಬಳಕೆ ಮುಖ್ಯ ಕಾರಣ ಎನ್ನಲಾಗಿದೆ. ಸ್ಮಾರ್ಟ್‌ಫೋನ್‌ ಹೆಚ್ಚು ಬಿಸಿಯಾದಂತೆ ಫೋನ್‌ ಬ್ಲಾಸ್ಟ್‌ ಆಗುವ ಸಾದ್ಯತೆ ಕೂಡ ಇರುತ್ತದೆ. ಕೆಲವು ಸನ್ನಿವೇಶಗಳಲ್ಲಿ ಫೋನ್‌ನ ಕಮ್ಯೂನಿಕೇಶನ್‌ ಯೂನಿಟ್‌ ಮತ್ತು ಕ್ಯಾಮರಾ ಕೂಡ ಶಾಖವನ್ನು ಉಂಟುಮಾಡುತ್ತವೆ, ಇದರಿಂದ ಫೋನ್‌ ಹ್ಯಾಂಗ್‌ ಆಗುವ ಸಾಧ್ಯತೆ ಇದೆ. ಹಾಗಾದ್ರೆ ನಿಮ್ಮ ಸ್ಮಾರ್ಟ್‌ಫೋನ್‌ ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೋನ್‌ ಫುಲ್‌ ಚಾರ್ಜ್ ಮಾಡಬೇಡಿ

ಫೋನ್‌ ಫುಲ್‌ ಚಾರ್ಜ್ ಮಾಡಬೇಡಿ

ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಯಾವಾಗಲೂ ಫುಲ್‌ ಚಾರ್ಜ್‌ ಮಾಡಬೆಡಿ. ಯಾವಾಗಲೂ 100% ಚಾರ್ಜ್‌ ಬದಲಿಗೆ ಫೋನ್‌ನಲ್ಲಿ 90% ಚಾರ್ಜಿಂಗ್‌ ಇಟ್ಟುಕೊಳ್ಳಲು ಪ್ರಯತ್ನಿಸಿ. ಜೊತೆಗೆ ಫೋನ್ ಬ್ಯಾಟರಿಯನ್ನು 20% ಕಡಿಮೆ ಇರದಂತೆ ನೋಡಿಕೊಳ್ಳಬೇಕು. ಏಕೆಂದರೆ ಹಲವು ಬಾರಿ ಚಾರ್ಜ್ ಮಾಡುವುದು ಫೋನ್‌ ಅಧಿಕವಾಗಿ ಬಿಸಿಯಾಗಲು ಕಾರಣವಾಗುತ್ತದೆ. ಅಲ್ಲದೆ ಕಡಿಮೆ ಶಕ್ತಿಯು ಬ್ಯಾಟರಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರಿಂದ ನಿಮ್ಮ ಫೋನ್ ಅನ್ನು ನೀವು ದಿನಕ್ಕೆ 2-3 ಬಾರಿ ಚಾರ್ಜ್ ಮಾಡುವುದು ಉತ್ತಮ.

ಫೋನ್ ಕವರ್

ಫೋನ್ ಕವರ್

ಸ್ಮಾರ್ಟ್‌ಫೋನ್‌ಗಳು ಹೆಚ್ಚು ಬಿಸಿಯಾಗಲು ನಾವುಗಳು ಬಳಸುವ ಮೊಬೈಲ್‌ ಕವರ್‌ಗಳು ಕೂಡ ಕಾರಣ ಅನ್ನೊ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ಮೊಬೈಲ್‌ ಕವರ್‌ ಮೇಲೆ ಬೀಳುವ ಸೂರ್ಯನ ಬೆಳಕು ಮತ್ತು ಬಿಸಿ ವಾತಾವರಣದ ಪರಿಣಾಮ ಮೊಬೈಲ್‌ ಮೇಲೂ ಕೂಡ ಪರಿಣಾಮ ಬೀರಲಿದೆ. ಇದರಿಂದ ಮೊಬೈಲ್‌ ಕವರ್‌ಗಳು ಸೂರ್ಯನ ಶಾಖವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಇದರಿಂದ ನಿಮ್ಮ ಫೋನ್‌ ಕೂಲಿಂಗ್‌ ಅಲ್ಲಿ ಇರುವುದಕ್ಕೆ ಅಡ್ಡಿಯಾಗುತ್ತವೆ.ಆದರಿಂದ ನೀವು ನಿಮ್ಮ ಫೋನ್‌ ಕವರ್‌ ಅನ್ನು ಆಗಾಗ ಬದಲಾಯಿಸುವುದು ಉತ್ತಮ.

ಬ್ಯಾಕ್‌ಗ್ರೌಂಡ್‌ ಆಪ್ಸ್‌

ಬ್ಯಾಕ್‌ಗ್ರೌಂಡ್‌ ಆಪ್ಸ್‌

ನೀವು ಯಾವುದೇ ಆಪ್‌ಗಳಲ್ಲಿ ಕೆಲಸ ಮಾಡದಿದ್ದರೆ, ಅವುಗಳನ್ನು ಬ್ಯಾಂಕ್‌ಗ್ರೌಡ್‌ನಿಂದ ಕ್ಲೋಸ್‌ ಮಾಡುವುದು ಒಳ್ಳೆಯದು. ಯಾಕೆಂದರೆ ನೀವು ಈ ಅಪ್ಲಿಕೇಶನ್‌ಗಳನ್ನು ಬಳಸದೆ ಇದ್ದರೂ ಕೂಡ ಅವುಗಳು ತಮ್ಮ ಕಾರ್ಯನಿರ್ವಹಿಸುತ್ತಿರುತ್ತವೆ. ಇದರಿಂದ ಫೋನ್ ಬಿಸಿಯಾಗುತ್ತದೆ, ನೀವು ಬಳಸದೇ ಇರುವ ಆಪ್‌ಗಳನ್ನು ಮುಚ್ಚಲು ಆಪ್ ಐಕಾನ್ ಮೇಲೆ ಫೋರ್ಸ್ ಸ್ಟಾಪ್ ಆಯ್ಕೆ ಮಾಡುವುದು ಉತ್ತಮ.

ಫೋನ್ ಸೆಟ್ಟಿಂಗ್ಸ್‌

ಫೋನ್ ಸೆಟ್ಟಿಂಗ್ಸ್‌

ನಿಮ್ಮ ಸ್ಮಾರ್ಟ್‌ಫೋನ್‌ ಬ್ರೈಟ್‌ನೆಸ್‌ ಅನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಬ್ರೈಟ್‌ನೆಸ್‌ ಕಡಿಮೆ ಆದಷ್ಟು ನಿಮ್ಮ ಸ್ಮಾರ್ಟ್‌ಫೋನ್‌ ಕಡಿಮೆ ಬ್ಯಾಟರಿಯನ್ನು ಬಳಸುತ್ತದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಬಿಸಿಯಾಗುವುದು ಕಡಿಮೆ ಆಗಲಿದೆ.

ಚಾರ್ಜರ್ ಮತ್ತು ಯುಎಸ್‌ಬಿ

ಚಾರ್ಜರ್ ಮತ್ತು ಯುಎಸ್‌ಬಿ

ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಯಾವಾಗಲೂ ನಿಮ್ಮ ಫೋನಿನ ಚಾರ್ಜರ್ ಮೂಲಕವೇ ಚಾರ್ಜ್‌ ಮಾಡಿ. ಬೇರೆ ಮೊಬೈಲ್‌ಗಳ ಚಾರ್ಜರ್‌ ಅನ್ನು ಬಳಸಲು ಹೋಗಬೇಡಿ. ಹಾಗೆಯೇ ಯುಎಸ್‌ಬಿ ಕೇಬಲ್‌ಗಳ ಮೂಲಕ ಚಾರ್ಜ್‌ ಮಾಡುವುದನ್ನು ಕಡಿಮೆ ಮಾಡಿ. ಸ್ಮಾರ್ಟ್‌ಫೋನ್‌ ಅನ್ನು ನಕಲಿ ಚಾರ್ಜರ್ ಅಥವಾ ಯುಎಸ್‌ಬಿಯಿಂದ ಚಾರ್ಜ್ ಮಾಡಿದರೆ ಸ್ಮಾರ್ಟ್‌ಫೋನ್‌ ಹೆಚ್ಚಿನ ಪ್ರಮಾಣದಲ್ಲಿ ಬಿಸಿಯಾಗಲಿದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಏಕಾಏಕಿ ಬ್ಲಾಸ್ಟ್‌ ಆಗುವ ಸಾದ್ಯತೆ ಕೂಡ ಇರಲಿದೆ.

ಹಾಟ್‌ಸ್ಪಾಟ್ ಹೆಚ್ಚು ಬಳಕೆ!

ಹಾಟ್‌ಸ್ಪಾಟ್ ಹೆಚ್ಚು ಬಳಕೆ!

ನಾವು ಬಹಳ ಸಮಯ Wi-Fi ಮತ್ತು ಹಾಟ್‌ಸ್ಪಾಟ್ ಬಳಸಿದರೆ ನಮ್ಮ ಮೊಬೈಲ್ ಬಿಸಿಯಾಗುವ ಸಂಭವ ಹೆಚ್ಚಿರುತ್ತದೆ. ಅಷ್ಟೇ ಅಲ್ಲ ಬ್ಲ್ಯಾಸ್ಟ್‌ ಆಗುವ ಸಾದ್ಯತೆ ಕೂಡ ಇರಲಿದೆ. ಈ ಎರಡೂ ಫೀಚರ್‌ಗಳಿಂದ ಮೊಬೈಲ್ ಹೊರಗೆ ಹೆಚ್ಚು ರೇಡಿಯೇಷನ್‌ಗಳು ಬಿಡುಗಡೆಯಾಗುವುದರಿಂದ ಮೊಬೈಲ್ ಬಿಸಿಯಾಗಲು ಕಾರಣವಾಗಲಿದೆ. ಹಾಗಾಗಿ, ಹಾಟ್‌ಸ್ಪಾಟ್ ಬಳಕೆ ಕಡಿಮೆ ಮಾದುವುದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಬಿಸಿಯಾಗದಂತೆ ತಡೆಯಬಹುದು.

Most Read Articles
Best Mobiles in India

English summary
Here are tips to consider for saving your smartphone from overheating.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X