ವಾಟ್ಸಾಪ್‌ನಲ್ಲಿ ಟೈಪ್‌ ಮಾಡದೇ ಮೆಸೇಜ್‌ ಮಾಡಲು ಹೀಗೆ ಮಾಡಿ!

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇನ್ನು ವಾಟ್ಸಾಪ್‌ ಕೂಡ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಕೆಲವು ಫೀಚರ್ಸ್‌ಗಳು ಸಾಕಷ್ಟು ವಿಶೇಷ ಎನಿಸುತ್ತವೆ. ಇವುಗಳಲ್ಲಿ ಟೈಪ್‌ ಮಾಡದೆ ವಾಟ್ಸಾಪ್‌ ಮೆಸೇಜ್‌ ಮಾಡುವುದಕ್ಕೆ ಅವಕಾಶವಿರುವುದು ಕೂಡ ವಿಶೇಷ. ಇನ್ನು ನೀವು ವಾಟ್ಸಾಪ್‌ನಲ್ಲಿ ಟೈಪ್ ಮಾಡದೆಯೇ ಮೆಸೇಜ್‌ ಮಾಡುವುದಕ್ಕೆ ಕೆಲವು ಸೆಟ್ಟಿಂಗ್ಸ್‌ ಅನ್ನು ಕಾನ್ಫಿಗರ್ ಮಾಡಬೇಕಾಗುತ್ತದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನಲ್ಲಿ ನೀವು ಮೆಸೇಜ್‌ ಮಾಡುವುದಕ್ಕೆ ಟೆಕ್ಸ್ಟ್‌ ಟೈಪ್‌ ಮಾಡಬೇಕಾದ ಅವಶ್ಯಕತೆಯಿಲ್ಲ. ನೀವು ಏನು ಟೈಪ್‌ ಮಾಡಬೇಕು ಅಂತಾ ಅಂದುಕೊಳ್ಳುತ್ತಿರೋ ಆ ಸಂದೇಶವನ್ನು ಬರೀ ಮಾತಿನಲ್ಲಿ ಟೈಪ್‌ ಮಾಡಿ ಕಳುಹಿಸಬಹುದು. ಹಾಗಂತ ಇದು ವಾಯ್ಸ್‌ ಮೆಸೇಜ್‌ ಖಂಡಿತ ಅಲ್ಲ. ಬದಲಿಗೆ ನೀವು ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಬಳಸಿ ಮೆಸೇಜ್‌ ಅನ್ನು ಟೈಪ್‌ ಮಾಡಿಸಿ ಕಳುಹಿಸಬಹುದಾಗಿದೆ. ಹಾಗಾದ್ರೆ ನಿಮ್ಮ ವಾಟ್ಸಾಪ್‌ನಲ್ಲಿ ಟೈಪ್‌ ಮಾಡದೇ ಮೆಸೇಜ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಂಡ್ರಾಯ್ಡ್‌ನಲ್ಲಿ ಟೈಪ್ ಮಾಡದೆ ವಾಟ್ಸಾಪ್ ಮೆಸೇಜ್‌ ಮಾಡುವುದು ಹೇಗೆ?

ಆಂಡ್ರಾಯ್ಡ್‌ನಲ್ಲಿ ಟೈಪ್ ಮಾಡದೆ ವಾಟ್ಸಾಪ್ ಮೆಸೇಜ್‌ ಮಾಡುವುದು ಹೇಗೆ?

ಆಂಡ್ರಾಯ್ಡ್ ಡಿವೈಸ್‌ನಲ್ಲಿ ಟೈಪ್ ಮಾಡದೆಯೇ ನೀವು ವಾಟ್ಸಾಪ್ ಸಂದೇಶಗಳನ್ನು ಕಳುಹಿಸಲು ಗೂಗಲ್‌ ಅಸಿಸ್ಟೆಂಟ್‌ನ ಇತ್ತೀಚಿನ ಆವೃತ್ತಿಯನ್ನು ಇನ್‌ಸ್ಟಾಲ್ ಮಾಡಬೇಕಾಗುತ್ತದೆ. ನಂತರ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಹಂತ: 1 ಗೂಗಲ್ ಅಸಿಸ್ಟೆಂಟ್‌ನ ರೈಟ್‌ ಸೈಡ್‌ನಲ್ಲಿ ನಿಮ್ಮ ಪ್ರೊಫೈಲ್ ಫೋಟೋವನ್ನು ಟ್ಯಾಪ್ ಮಾಡುವ ಮೂಲಕ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಪರ್ಸನಲ್‌ ರಿಸಲ್ಟ್‌ಗಾಗಿ ಕೆಳಗೆ ಸ್ಕ್ರಾಲ್ ಮಾಡಿ. ಫಂಕ್ಷನ್‌ ಅನ್ನು ಆನ್ ಮಾಡಿ.
ಹಂತ: 2 ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಆಕ್ಟಿವೆಟ್‌ ಮಾಡಲು "ಹೇ ಗೂಗಲ್" ಅಥವಾ "ಒಕೆ ಗೂಗಲ್" ಎಂದು ಹೇಳಿ.
ಹಂತ: 3 ಈಗ, ನೀವು ವಾಟ್ಸಾಪ್‌ ಮೆಸೇಜ್‌ ಮಾಡಲು ಬಯಸುವ ಕಂಟ್ಯಾಕ್ಟ್‌ ಗೆ "ವಾಟ್ಸಾಪ್‌ ಮೆಸೇಜ್‌ ಮಾಡಲು ಗೂಗಲ್‌ ಅಸಿಸ್ಟೆಂಟ್‌ಗೆ ಹೇಳಿ.
ಹಂತ: 4 ವಾಟ್ಸಾಪ್ ಮೂಲಕ ನೀವು ಕಳುಹಿಸಲು ಬಯಸುವ ಮೆಸೇಜ್‌ ಅನ್ನು ಗೂಗಲ್‌ ಅಸಿಸ್ಟೆಂಟ್‌ಗೆ ಹೇಳಿರಿ. ನೀವು ಸ್ಪಷ್ಟವಾಗಿ ಹೇಳಿದರೆ ಮಾತ್ರ ಅಸಿಸ್ಟೆಂಟ್‌ ನಿಮ್ಮ ಮೆಸೇಜ್‌ ಅನ್ನು ಸಿದ್ದಪಡಿಸಲಿದೆ.
ಹಂತ: 5 ಈಗ ಸ್ಕ್ರೀನ್ ಮೇಲೆ ನೀವು ಹೇಳಿದ ಸಂದೇಶವನ್ನು ಗೂಗಲ್ ಅಸಿಸ್ಟೆಂಟ್ ಸಿದ್ದಪಡಿಸುತ್ತೆ. ನೀವು ಈಗ "ಸರಿ, ಕಳುಹಿಸಿ" ಎಂದು ಹೇಳಿದರೆ ಮೆಸೇಜ್‌ ಅನ್ನು ಸೆಂಡ್‌ ಮಾಡಲಿದೆ.

ಅಸಿಸ್ಟೆಂಟ್

ಒಂದು ವೇಳೆ ನೀವು ಹೇಳಿದ ನಿಮ್ಮ ಸಂದೇಶವನ್ನು ಕಳುಹಿಸಲು ಗೂಗಲ್ ಅಸಿಸ್ಟೆಂಟ್ ನಿಮ್ಮ ಅನುಮೋದನೆಯನ್ನು ಕೇಳದಿರಬಹುದು. ನೀವು ಈಗಾಗಲೇ ಸಂದೇಶ ಕಳುಹಿಸಿದ ಸಂಪರ್ಕಕ್ಕೆ ನೇರವಾಗಿ ಕಳುಹಿಸಬಹುದು. ಇದರಲ್ಲೂ ನೀವು ಕಂಪ್ಲೀಟ್‌ ಹ್ಯಾಂಡ್ಸ್-ಫ್ರೀ ಅನುಭವವನ್ನು ಪಡೆಯಲು ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡದೆ ಬಳಸಲು Google ಅಸಿಸ್ಟೆಂಟ್ ಅನ್ನು ಆಕ್ಟಿವ್‌ ಮಾಡಬಹುದು. ಇದಕ್ಕಾಗಿ ಜನಪ್ರಿಯ ಸೆಟ್ಟಿಂಗ್ಸ್‌> ಲಾಕ್ ಸ್ಕ್ರೀನ್‌ಗೆ ಹೋಗುವ ಮೂಲಕ ನೀವು ಸೆಟ್‌ ಮಾಡಬಹುದು.

ಐಒಎಸ್ ನಲ್ಲಿ ಟೈಪ್ ಮಾಡದೆ ವಾಟ್ಸಾಪ್ ಮೆಸೇಜ್‌ ಅನ್ನು ಸೆಂಡ್‌ ಮಾಡುವುದು ಹೇಗೆ?

ಐಒಎಸ್ ನಲ್ಲಿ ಟೈಪ್ ಮಾಡದೆ ವಾಟ್ಸಾಪ್ ಮೆಸೇಜ್‌ ಅನ್ನು ಸೆಂಡ್‌ ಮಾಡುವುದು ಹೇಗೆ?

ಐಒಎಸ್‌ನಲ್ಲಿ ಟೈಪ್ ಮಾಡದೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.
ಹಂತ:1 ಸೆಟ್ಟಿಂಗ್ಸ್‌> ಸಿರಿ ಮತ್ತು ಸರ್ಚ್‌ ಮತ್ತು ನಂತರ "ಹೇ ಸಿರಿ" ಗಾಗಿ ಆಲಿಸಿ.
ಹಂತ:2 ಕೆಳಗೆ ಸ್ಕ್ರಾಲ್ ಮಾಡಿ ಮತ್ತು ವಾಟ್ಸಾಪ್ ಅನ್ನು ಟ್ಯಾಪ್ ಮಾಡಿ ಮತ್ತು ನಂತರ ಸಿರಿ ಏಕೀಕರಣವನ್ನು ಸಕ್ರಿಯಗೊಳಿಸಲು ಕೇಳಿ ಸಿರಿಯೊಂದಿಗೆ ಬಳಸಿ ಸಕ್ರಿಯಗೊಳಿಸಿ.
ಹಂತ:3 ನಂತರ ನೀವು "ಹೇ ಸಿರಿ! ನೀವು ಯಾವ ಕಂಟ್ಯಾಕ್ಟ್‌ಗೆ ಮೆಸೇಜ್‌ ಮಾಡಬೇಕೋ ಅದನ್ನು ಹೇಳಿ.
ಹಂತ:4 ನೀವು ಯಾವ ಸಂದೇಶ ಕಳುಹಿಸಲು ಬಯಸುತ್ತೀರಿ ಎಂದು ಸಿರಿ ನಿಮ್ಮನ್ನು ಕೇಳುತ್ತದೆ. ನೀವು ಕಳುಹಿಸಲು ಬಯಸುವ ಮೆಸೇಜ್‌ ಅನ್ನು ಹೇಳಿದರೆ ಸಾಉ
ಹಂತ: 5 ಈಗ, ನಿಮ್ಮ ಸಿರಿ ನೀವು ಹೇಳಿದ ಸಂದೇಶವನ್ನು ಸಿದ್ದ ಪಡಿಸಿ, ನಿಮಗಾಗಿ ಮೆಸೇಜ್‌ ಅನ್ನು ಓದುತ್ತದೆ.
ಹಂತ: 6 ನೀವು ಸಂದೇಶವನ್ನು ಕಳುಹಿಸಲು ಸಿದ್ಧರಿದ್ದೀರಾ ಎಂದು ಸಿರಿ ಕೇಳುತ್ತದೆ. ನೀವು "ಹೌದು" ಎಂದು ಹೇಳಬಹುದು.

ನೀವು ಮೊದಲ ಬಾರಿಗೆ iOS ಡಿವೈಸ್‌ನಲ್ಲಿ ನಿಮ್ಮ ವಾಯ್ಸ್‌ ಅಸಿಸ್ಟೆಂಟ್‌ ಮೂಲಕ ವಾಟ್ಸಾಪ್‌ ಬಳಸುತ್ತಿದ್ದರೆ, ನಿಮ್ಮ ವಾಟ್ಸಾಪ್‌ ಡೇಟಾವನ್ನು ಪ್ರವೇಶಿಸಲು ನೀವು ಸಿರಿಗೆ ಅವಕಾಶ ನೀಡಬೇಕಾಗುತ್ತದೆ.

Best Mobiles in India

Read more about:
English summary
Can WhatsApp messages be sent without typing? Yes, that's possible thanks to advanced voice recognition support that users have on their Android phones as well as iPhone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X