ವಾಟ್ಸಾಪ್‌ನಲ್ಲಿ ಒಂದೇ ಬಾರಿಗೆ 100 ವೀಡಿಯೊಗಳನ್ನು ಶೇರ್ ಮಾಡುವುದು ಹೇಗೆ?
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಇತ್ತೀಚಿಗೆ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಏಕಕಾಲದಲ್ಲಿ 100 ಫೋಟೋಗಳು ಮತ್ತು ವೀಡಿಯೊಗಳನ್ನು ಸೆಂಡ್ ಮಾಡಲು ಅವಕಾಶ ನೀಡುವ ಫೀಚರ್ಸ್ ಕೂಡ ಒಂದಾಗಿದೆ. ಈ ಫೀಚರ್ಸ್‌ನಿಂದ ವಾಟ್ಸಾಪ್ ಬಳಕೆದಾರರು ಸಾಕಷ್ಟು ಉಪಯೋಗ ಎನಿಸಿದೆ. ಇದರಿಂದ ಹೆಚ್ಚಿನ ಫೋಟೋಗಳನ್ನು ಹಲವು ಭಾರಿ ಆಯ್ಕೆ ಮಾಡಿ ಕಳುಹಿಸುವ ಬದಲು ಒಂದೇ ಬಾರಿಗೆ ಕಳುಹಿಸುವುದಕ್ಕೆ ಸಾದ್ಯವಾಗಲಿದೆ.

ಹೌದು, ವಾಟ್ಸಾಪ್‌ನಲ್ಲಿ ಇನ್ಮುಂದೆ ನೀವು ಒಂದೇ ಬಾರಿಗೆ 100 ಫೋಟೋಗಳು ಮತ್ತು ವೀಡಿಯೊಗಳನ್ನು ಸೆಂಡ್ ಮಾಡಬಹುದು. ಬಳಕೆದಾರರು ಸಾಕಷ್ಟು ದಿನದಿಂದ ಬಯಸುತ್ತಿದ್ದ ಈ ಆಯ್ಕೆಯನ್ನು ಪರಿಚಯಿಸುವ ಮೂಲಕ ವಾಟ್ಸಾಪ್ ಮತ್ತೊಮ್ಮೆ ಶಹಬ್ಬಾಶ್ ಎನಿಸಿಕೊಂಡಿದೆ. ಆದರೆ ಈ ಫೀಚರ್ಸ್ ಅನ್ನು ಬಳಸುವುದು ಹೇಗೆ? ಇದರ ಬಗ್ಗೆ ಕೆಲವರಿಗೆ ಮಾಹಿತಿ ಕೂಡ ತಿಳಿದಿರುವುದಿಲ್ಲ. ಹಾಗಾದ್ರೆ ವಾಟ್ಸಾಪ್‌ನಲ್ಲಿ 100 ಚಿತ್ರಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ವಾಟ್ಸಾಪ್‌ನಲ್ಲಿ ಈ ಹಿಂದೆ ಏಕಕಾಲದಲ್ಲಿ 30 ಫೋಟೋಗಳನ್ನು ಮಾತ್ರ ಶೇರ್ ಮಾಡಲು ಅವಕಾಶ ನೀಡಿತ್ತು. ಇದರಿಂದ ಹೆಚ್ಚಿನ ಫೋಟೋಗಳನ್ನು ಸೆಂಡ್ ಮಾಡಬೇಕಾದರೆ ಒಂದು ವಾರಿಗೆ 30ರಂತೆ ಹಲವು ಭಾರಿ ಫೋಟೋಗಳನ್ನು ಆಯ್ಕೆ ಮಾಡಿ ಕಳಿಸಬೇಕಾಗಿತ್ತು. ಆದರೆ ಇದೀಗ ಏಕಕಾಲದಲ್ಲಿ 100 ಫೋಟೋಗಳು ಮತ್ತು ವೀಡಿಯೊಗಳನ್ನು ಸೆಂಡ್ ಮಾಡಲು ಅವಕಾಶವಿರುವುದರಿಂದ ಒಂದೇ ಆಲ್ಬಮ್‌ನಲ್ಲಿ ಹಲವು ಫೋಟೋಗಳನ್ನು ಸೆಂಡ್ ಮಾಡಬಹುದು. ಈ ಆಯ್ಕೆಯನ್ನು ಇತ್ತೀಚಿನ ವಾಟ್ಸಾಪ್ ಅಪ್ಡೇಟ್‌ನಲ್ಲಿ ಲಭ್ಯವಾಗುತ್ತಿದೆ.

ವಾಟ್ಸಾಪ್‌ನಲ್ಲಿ ಒಂದೇ ಬಾರಿಗೆ 100 ಚಿತ್ರಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡುವುದು ಹೇಗೆ?
ಹಂತ:1 ಮೊದಲಿಗೆ ವಾಟ್ಸಾಪ್ ತೆರೆಯಿರಿ.
ಹಂತ:2 ನಂತರ ನೀವು ಫೋಟೋಗಳನ್ನು ಸೆಂಡ್ ಮಾಡಲು ಬಯಸುವ ಚಾಟ್ ಅನ್ನು ಆಯ್ಕೆ ಮಾಡಿ.
ಹಂತ:3 ಇದೀಗ ಸ್ಕ್ರೀನ್ ಕೇಳಭಾಗದಲ್ಲಿ ಕಾಣುವ ಲಗತ್ತು ಐಕಾನ್ (ಪೇಪರ್ ಕ್ಲಿಪ್) ಮೇಲೆ ಟ್ಯಾಪ್ ಮಾಡಿ.
ಹಂತ:4 ನಂತರ ಫೋಟೋಗಳನ್ನು ಆಯ್ಕೆ ಮಾಡಲು ಆಯ್ಕೆಗಳ ಪಟ್ಟಿಯಿಂದ "ಗ್ಯಾಲರಿ" ಆಯ್ಕೆಮಾಡಿ.
ಹಂತ:5 ಇದೀಗ ನೀವು ನಿಮ್ಮ ಫೋಟೋಗಳನ್ನು ಸ್ಟೋರೇಜ್ ಮಾಡಿರುವ ಫೋಲ್ಡರ್ ಆಯ್ಕೆಮಾಡಿ.
ಹಂತ:6 ನಂತರ ನೀವು ಶೇರ್ ಮಾಡಲು ಬಯಸುವ ಮೊದಲ ಫೋಟೋವನ್ನು ಟ್ಯಾಪ್ ಮಾಡುವ ಮೂಲಕ ಆಯ್ಕೆಮಾಡಿ.
ಹಂತ:7 ಮೊದಲ ಫೋಟೋ ಹೈಲೈಟ್ ಆಗುವವರೆಗೆ ಅದನ್ನು ಪ್ರೆಸ್ ಮಾಡಿ ಹಿಡಿದುಕೊಳ್ಳಬೇಕು.
ಹಂತ:8 ಇದಾದ ನಂತರ ನೀವು ಶೇರ್ ಮಾಡಲು ಬಯಸುವ ಇತರ ಫೋಟೋಗಳ ಮೇಲೆ ಟ್ಯಾಪ್ ಮಾಡಬೇಕು.
ಹೀಗೆ ನೀವು ಒಂದು ಭಾರಿಗೆ 100 ಇಮೇಜ್‌ಗಳು ಮತ್ತು ವೀಡಿಯೊಗಳನ್ನು ಆಯ್ಕೆ ಮಾಡಬಹುದು.
ಇದಲ್ಲದೆ ವಾಟ್ಸಾಪ್ ತನ್ನ ಸ್ಟೇಟಸ್‌ನಲ್ಲಿ ಹೊಸ ಫೀಚರ್ಸ್‌ಗಳ ಸೇರ್ಪಡೆ ಆಗಿದೆ. ಬಳಕೆದಾರರಿಗೆ ಸ್ಟೇಟಸ್ ರಿಯಾಕ್ಷನ್, ಸ್ಟೇಟಸ್ ಅಪ್ಡೇಟ್ ವಿಭಾಗದಲ್ಲಿ ಹೊಸ ಆಯ್ಕೆಗಳನ್ನು ನೀಡಿದೆ. ಇದರಿಂದ ವಾಟ್ಸಾಫ್ ಸ್ಟೇಟಸ್ ಅಪ್ಡೇಟ್ ಮಾಡುವ ಬಳಕೆದಾರರು ಹೊಸ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಹೊಸ ಅಪ್ಡೇಟ್ ಫೀಚರ್ಸ್‌ಗಳು ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಆವೃತ್ತಿಗಳಲ್ಲಿಯೂ ಕೂಡ ಲಭ್ಯವಾಗಲಿದೆ.

ಸ್ಟೇಟಸ್ ಅನ್ನು ಯಾರೆಲ್ಲಾ ನೋಡಬಹುದು?
ವಾಟ್ಸಾಪ್ ಪರಿಚಯಿಸಿರುವ ಹೊಸ ಆಯ್ಕೆಗಳಲ್ಲಿ ನಿಮ್ಮ ಸ್ಟೇಟಸ್ ಅನ್ನು ಯಾರೆಲ್ಲಾ ನೋಡಬಹುದು ಎಂದು ಆಯ್ಕೆ ಮಾಡುವ ಆಯ್ಕೆ ನೀಡಲಾಗಿದೆ. ಇದರ ವಿಶೇಷತೆ ಏನೆಂದರೆ ಪ್ರತಿ ಸ್ಟೇಟಸ್ ಕೂಡ ನೀವು ಪ್ರೈವೆಸಿ ಸ್ಟೆಟ್ಟಿಂಗ್ಸ್ ಅನ್ನು ಅಪ್ಡೇಟ್ ಮಾಡಬಹುದು. ಅಲ್ಲದೆ ಪರ್ಸನಲ್ ಸ್ಟೇಟಸ್ ಅನ್ನು ಕೆಲವು ಆಯ್ದ ಬಳಕೆದಾರರಿಗೆ ಮಾತ್ರ ಕಾಣುವಂಯೆ ಮಾಡುವ ಆಯ್ಕೆಯನ್ನು ಸಹ ನೀಡಲಾಗಿದೆ.
ವಾಯ್ಸ್ ಸ್ಟೇಟಸ್ ಅಪ್‌ಲೋಡ್‌ಗೆ ಅವಕಾಶ!
ಇದಲ್ಲದೆ ವಾಟ್ಸಾಪ್ ಇದೇ ಮೊದಲ ಬಾರಿಗೆ ಬಳಕೆದಾರರಿಗೆ ಸ್ಟೇಟಸ್‌ನಲ್ಲಿ ವಾಯ್ಸ್ ನೋಟ್ ಅನ್ನು ಪೋಸ್ಟ್ ಮಾಡಲು ಅವಕಾಶ ನೀಡಿದೆ. ಅಂದರೆ ವಾಯ್ಸ್ ಸ್ಟೇಟಸ್ ಪೋಸ್ಟ್ ಮಾಡಲು ವಾಟ್ಸಾಪ್‌ನಲ್ಲಿ ಅವಕಾಶ ಲಭ್ಯವಿದೆ. ಅದರಂತೆ ವಾಟ್ಸಾಪ್‌ನಲ್ಲಿ ನೀವು 30 ಸೆಕೆಂಡುಗಳವರೆಗೆ ವಾಯ್ಸ್ ಸ್ಟೇಟಸ್ ಅನ್ನು ಪೋಸ್ಟ್ ಮಾಡಬಹುದಾಗಿದೆ. ಅಲ್ಲದೆ ಬಳಕೆದಾರರು ವಾಯ್ಸ್ ಸ್ಟೇಟಸ್ ಅನ್ನು ಕೆಲವು ಆಯ್ದ ಕಂಟ್ಯಾಕ್ಟ್‌ಗಳೊಂದಿಗೆ ಮಾತ್ರ ಶೇರ್ ಮಾಡುವ ಅವಕಾಶವನ್ನು ನೀಡಲಾಗಿದೆ.
ವಾಟ್ಸಾಪ್ ಸ್ಟೇಟಸ್ ರಿಯಾಕ್ಷನ್‌ನಲ್ಲಿ ಹೊಸ ಆಯ್ಕೆಗಳು!
ವಾಟ್ಸಾಪ್ ಸ್ಟೇಟಸ್‌ಗೆ ರಿಯಾಕ್ಷನ್ ನೀಡು ಆಯ್ಕೆಯಲ್ಲಿ ಹೊಸ ವಿಧಾನಗಳನ್ನು ಪರಿಚಯಿಸಲಾಗಿದೆ. ಅದರಂತೆ ವಾಟ್ಸಾಪ್ ಬಳಕೆದಾರರು ವಾಟ್ಸಾಪ್ ಸ್ಟೇಟಸ್‌ಗೆ ರಿಯಾಕ್ಷನ್ ನೀಡುವಾಗ ಎಮೋಜಿಗಳ ಮೂಲಕ ಪ್ರತಿಕ್ರಿಯೆ ನೀಡಬಹುದು. ಇದರಲ್ಲಿ ಎಂಟು ಎಮೋಜಿಗಳನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಇಲ್ಲವೇ ಟೆಕ್ಸ್ಟ್ ಮೆಸೇಜ್, ವಾಯ್ಸ್ ಮೆಸೇಜ್, ಸ್ಟಿಕ್ಕರ್‌ಗಳನ್ನು ಬಳಸಿಕೊಂಡು ವಾಟ್ಸಾಪ್ ಸ್ಟೇಟಸ್‌ಗೆ ರಿಪ್ಲೇ ಮಾಡಬಹುದಾಗಿದೆ.


Click it and Unblock the Notifications








