Home
ಸುದ್ದಿಜಾಲ

ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಅವತಾರ್‌ ರಿಯಾಕ್ಷನ್‌ ಶೇರ್‌ ಮಾಡುವುದು ಹೇಗೆ?

ಇಂದಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಆಗಿ ಗುರುತಿಸಿಕೊಂಡಿದೆ. ಇನ್‌ಸ್ಟಾಗ್ರಾಮ್‌ ರೀಲ್ಸ್‌ ಮೂಲಕ ಯುವಜನರ ಹಾಟ್‌ ಫೇವರಿಟ್‌ ಆಗಿದೆ. ಇದಕ್ಕೆ ತಕ್ಕಂತೆ ಇನ್‌ಸ್ಟಾಗ್ರಾಮ್‌ ಕೂಡ ರೀಲ್ಸ್‌ನಲ್ಲಿ ವಿಶೇಷ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುತ್ತಾ ಬಂದಿದೆ. ಇದರಲ್ಲಿ ರೀಲ್ಸ್‌ನಲ್ಲಿ ಅವತಾರ್‌ ರಿಯಾಕ್ಷನ್‌ ಫಿಚರ್ಸ್‌ ಕೂಡ ಒಂದಾಗಿದೆ. ಚಾಟ್‌ಗಳಲ್ಲಿ ಮಾತ್ರ ಲಭ್ಯವಿದ್ದ ಅವತಾರ್‌ ರಿಯಾಕ್ಷನ್‌ ಇದೀಗ ರೀಲ್ಸ್‌ನಲ್ಲಿ ಕೂಡ ಶೇರ್‌ ಮಾಡುವುದಕ್ಕೆ ಅವಕಾಶವನ್ನು ಪಡೆದುಕೊಂಡಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಕೂಡ ಅವತಾರ್‌ ರಿಯಾಕ್ಷನ್‌ ಫೀಚರ್ಸ್‌ಗಳನ್ನು ಶೇರ್‌ ಮಾಡಬಹುದಾಗಿದೆ. ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಕೂಡ ಅವತಾರ್‌ಗಳ ಮೂಲಕ ರಿಯಾಕ್ಷನ್‌ ನೀಡುವುದಕ್ಕೆ ಅವಕಾಶ ದೊರೆಯಲಿದೆ. ಇದರಿಂದ ರೀಲ್ಸ್‌ ಅನ್ನು ಇನ್ನಷ್ಟು ಉಪಯುಕ್ತವಾಗಿ ಬಳಸಬಹುದಾಗಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ಗಳನ್ನು ಶೇರ್‌ ಮಾಡುವಾಗ ಅವತಾರ್‌ ರಿಯಾಕ್ಷನ್‌ ಅನ್ನು ಬಳಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಅವತಾರ ರಿಯಾಕ್ಷನ್‌ ಶೇರ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಅವತಾರ ರಿಯಾಕ್ಷನ್‌ ಶೇರ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ ತೆರೆಯಿರಿ.
ಹಂತ:2 ನಿಮ್ಮ ಸ್ನೇಹಿತರೊಂದಿಗೆ ಶೇರ್‌ ಮಾಡಲು ಬಯಸುವ ರೀಲ್ ಅನ್ನು ತೆರೆಯಿರಿ.
ಹಂತ:3 ಶೇರ್‌ ಬಟನ್ ಮೇಲೆ ಟ್ಯಾಪ್ ಮಾಡಿ.
ಹಂತ:4 ನೀವು ರೀಲ್ ಅನ್ನು ಶೇರ್‌ ಮಾಡಲು ಬಯಸುವ ಖಾತೆಯನ್ನು ಆಯ್ಕೆಮಾಡಿ.
ಹಂತ:5 ನೀವು ಆಯ್ಕೆ ಮಾಡಿದ ನಂತರ, ಒಂದು ಸಂದೇಶವನ್ನು ಬರೆಯಿರಿ, ಅದರ ಮೇಲೆ ಟ್ಯಾಪ್ ಮಾಡಿ, ಬಲಭಾಗದಲ್ಲಿ ಅವತಾರ್ ಬಟನ್ ಅನ್ನು ಕಾಣಬಹುದು.
ಹಂತ:6 ಈಗ, ನಿಮ್ಮ ಎಲ್ಲಾ ಮೆಟಾ ಅವತಾರ್ ಸ್ಟಿಕ್ಕರ್‌ಗಳನ್ನು ನೋಡಲು ನಿಮಗೆ ಸಾಧ್ಯವಾಗುತ್ತದೆ.
ಹಂತ:7 ನೀವು ಅವತಾರ್ ಸ್ಟಿಕ್ಕರ್ ಅನ್ನು ಟ್ಯಾಪ್ ಮಾಡಿದ ನಂತರ ಸೆಂಡ್‌ ಟ್ಯಾಪ್ ಮಾಡಿ.

ರಿಯಾಕ್ಷನ್‌

ಇದೀಗ, ನೀವು ಚಾಟ್‌ಗೆ ಭೇಟಿ ನೀಡಿದರೆ, ನೀವು ಕಳುಹಿಸಿದ ರೀಲ್ ನಿಮ್ಮ ಅವತಾರ್‌ ರಿಯಾಕ್ಷನ್‌ ಜೊತೆಗೆ ಕಾಣಲಿದೆ. ಇತರರೊಂದಿಗೆ ರೀಲ್‌ಗಳು ಅಥವಾ ಪೋಸ್ಟ್‌ಗಳನ್ನು ಶೇರ್‌ ಮಾಡುವಾಗ ಅವತಾರ್ ಅನ್ನು ನೇರವಾಗಿ ಬಳಸುವುದಕ್ಕೆ ಉತ್ತಮ ಮಾರ್ಗವಾಗಿದೆ. ಇದಲ್ಲದೆ, ನೀವು ಹೆಚ್ಚಿನ ಅವತಾರ್‌ ರಿಯಾಕ್ಷನ್‌ ಕಳುಹಿಸಲು ಬಯಸಿದರೆ, ನೀವು ಅದನ್ನು ನೇರವಾಗಿ ಸ್ಟಿಕ್ಕರ್‌ಗಳ ಆಯ್ಕೆಯಿಂದ ಮಾಡಬಹುದಾಗಿದೆ.

ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ ಬಳಕೆದಾರರು ತಮ್ಮ ರೀಲ್ಸ್‌ಗಳನ್ನು ಐಫೋನ್‌ನಲ್ಲಿ ಡೌನ್‌ಲೋಡ್‌ ಮಾಡಬೇಕಾದರೆ ಆಪ್ ಸ್ಟೋರ್‌ನಿಂದ Instadp ಅಥವಾ Igram.io ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಆದರೆ ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ರೀಲ್ಸ್ ಡೌನ್‌ಲೋಡರ್ ಅನ್ನು ಡೌನ್‌ಲೋಡ್‌ ಮಾಡಬೇಕಾಗುತ್ತದೆ. ಈ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡಿದ ನಂತರ ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.

ಸ್ಮಾರ್ಟ್‌ಫೋನ್‌

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ವಿಭಾಗಕ್ಕೆ ಹೋಗಿ.
ಹಂತ:3 ನಂತರ, ನಿಮ್ಮ ಡಿವೈಸ್‌ನಲ್ಲಿ ನೀವು ಡೌನ್‌ಲೋಡ್ ಮಾಡಲು ಬಯಸುವ ರೀಲ್‌ಗಳ ಲಿಂಕ್ ಅನ್ನು ಕಾಪಿ ಮಾಡಿ.
ಹಂತ:4 ಇದೀಗ ರೀಲ್ಸ್ ಡೌನ್‌ಲೋಡರ್ ಅಪ್ಲಿಕೇಶನ್ ತೆರೆಯಿರಿ ಮತ್ತು ನೀವು ಡೌನ್‌ಲೋಡ್ ಮಾಡಲು ಬಯಸುವ ರೀಲ್‌ನ ಲಿಂಕ್ ಅನ್ನು ಪೇಸ್ಟ್‌ ಮಾಡಿರಿ.
ಹಂತ:5 ಇದಾದ ನಂತರ ನೀವು ಡೌನ್‌ಲೋಡ್ ಬಟನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.

ಇದೀಗ ಇನ್‌ಸ್ಟಾಗ್ರಾಮ್‌ ರೀಲ್ಸ್‌ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಆಗಲಿವೆ. ಈ ರೀಲ್ಸ್‌ಗಳನ್ನು ನಿಮ್ಮ ಫೋನ್ ಗ್ಯಾಲರಿ ಅಪ್ಲಿಕೇಶನ್‌ನಲ್ಲಿ ಸ್ಟೋರೇಜ್‌ ಮಾಡಬಹುದಾಗಿದೆ.

Best Mobiles in India

English summary
Here's How to share Instagram reels with avatar reactions
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+