Home
ಸುದ್ದಿಜಾಲ

ಡಿಜಿ ಲಾಕರ್‌ನಲ್ಲಿ ನಿಮ್ಮ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡುವುದು ಹೇಗೆ?

ಇಂದಿನ ಡಿಜಿಟಲ್‌ ಯುಗದಲ್ಲಿ ನಿಮ್ಮ ಪ್ರಮುಖ ದಾಖಲೆಗಳನ್ನು ಡಿಜಿಟಲ್‌ ರೂಪದಲ್ಲಿ ಸೇವ್‌ ಮಾಡಬಹುದು. ಇದರಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ದಾಖಲೆಗಳನ್ನು ಹೊತ್ತೊಯ್ಯುವ ಅವಶ್ಯಕತೆಯಿಲ್ಲ. ಇನ್ನು ಸರ್ಕಾರದ ಸೌಲಭ್ಯಗಳನ್ನು ಪಡೆಯುವುದಕ್ಕೆ ಅವಶ್ಯಕತೆ ಎನಿಸುವ ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಕಾರ್ ನೋಂದಣಿ ಪ್ರಮಾಣಪತ್ರ, ಶೈಕ್ಷಣಿಕ ಪ್ರಮಾಣಪತ್ರ, ಜನನ ಪ್ರಮಾಣಪತ್ರ ಮುಂತಾದ ಅಧಿಕೃತ ದಾಖಲೆಗಳನ್ನು ಕೂಡ ನೀವು ಡಿಜಿಟಲ್ ರೂಪದಲ್ಲಿ ಇರಿಸಿಕೊಳ್ಳಬಹುದು. ಇದಕ್ಕಾಗಿಯೇ ಕ್ಲೌಡ್ ಆಧಾರಿತ ಅಪ್ಲಿಕೇಶನ್ ಡಿಜಿ ಲಾಕರ್ ಅನ್ನು ಸರ್ಕಾರ ಈಗಾಗಲೇ ಪರಿಚಯಿಸಿದೆ.

ಡಿಜಿಟಲ್‌

ಹೌದು, ಸರ್ಕಾರ ಸಾರ್ವಜನಿಕರಿಗೆ ತಮ್ಮ ಡಿಜಿಟಲ್‌ ದಾಖಲೆಗಳನ್ನು ಸ್ಟೋರೇಜ್‌ ಮಾಡುವುದಕ್ಕೆ ಡಿಜಿ ಲಾಕರ್‌ ಪರಿಚಯಿಸಿದೆ. ಡಿಜಿ ಲಾಕರ್‌ನಲ್ಲಿ ನೀವು ನಿಮ್ಮ ಅಗತ್ಯ ದಾಖಲೆಗಳನ್ನು ಸುರಕ್ಷಿತವಾಗಿ ಸೇವ್‌ ಮಾಡಬಹುದು. ಡಿಜಿ ಲಾಕರ್‌ಗೆ ಅಪ್‌ಲೋಡ್ ಮಾಡಿದ ದಾಖಲೆಗಳನ್ನು ಬಳಕೆದಾರರು ಎಲ್ಲಿ ಬೇಕಾದರೂ ಪ್ರವೇಶಿಸಬಹುದು. ಅಷ್ಟೇ ಅಲ್ಲ ಅವಶ್ಯಕತೆಯಿರುವ ಕಡೆ ಡಿಜಿಟಲ್‌ ದಾಖಲೆಗಳನ್ನು ತೋರಿಸಬಹುದು. ಇದರಿಂದ ಡಿಜಿ ಲಾಕರ್‌ ಸಾಕಷ್ಟು ಅನುಕೂಲಕರವಾಗಿದೆ. ಆದರೆ ಕೆಲವರಿಗೆ ಡಿಜಿಲಾಕರ್‌ನಲ್ಲಿ ಡಾಕ್ಯುಮೆಂಟ್‌ ಅಪ್‌ಲೋಡ್‌ ಮಾಡುವುದು ಹೇಗೆ ಅನ್ನೊದು ತಿಳಿದಿಲ್ಲ. ಹಾಗಾದ್ರೆ ಡಿಜಿ ಲಾಕರ್‌ನಲ್ಲಿ ನಿಮ್ಮ ಡಾಕ್ಯುಮೆಂಟ್‌ಗಳನ್ನು ಸೇವ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಜಿ ಲಾಕರ್‌ ಅಪ್ಲಿಕೇಶನ್‌

ಡಿಜಿ ಲಾಕರ್‌ ಅಪ್ಲಿಕೇಶನ್‌ ಮೂಲಕ ನೀವು ನಿಮ್ಮ ಪ್ರಮುಖ ದಾಳೆಗಳನ್ನು ಡಿಜಿಟಲ್‌ ರೂಪದಲ್ಲಿ ಸ್ಟೋರೇಜ್‌ ಮಾಡಬಹುದು. ಇನ್ನು ಡಿಜಿ ಲಾಕರ್ ಅಪ್ಲಿಕೇಶನ್ ಬಳಕೆದಾರರು ತಮ್ಮ ದಾಖಲೆಗಳನ್ನು ಸಂಗ್ರಹಿಸಲು 1GB ಕ್ಲೌಡ್ ಸ್ಟೋರೇಜ್‌ ಸಾಮರ್ಥ್ಯವನ್ನು ಒದಗಿಸುತ್ತದೆ. ಇನ್ನು ಈ ಕ್ಲೌಡ್ ಸ್ಟೋರೇಜ್ ಸುರಕ್ಷಿತವಾಗಿದೆ. ಏಕೆಂದರೆ ಇದು ರವಾನೆಯಾಗುವ ಎಲ್ಲಾ ಮಾಹಿತಿಗಾಗಿ 256-ಬಿಟ್ ಸುರಕ್ಷಿತ ಸಾಕೆಟ್ಸ್ ಲೇಯರ್ (SSL) ಎನ್‌ಕ್ರಿಪ್ಶನ್ ಅನ್ನು ಬಳಸುತ್ತದೆ. ಸದ್ಯ ನೀವು ಕೂಡ ಡಿಜಿಲಾಕರ್‌ನಲ್ಲಿ ಡಾಕ್ಯುಮೆಂಟ್‌ ಸೇವ್‌ ಮಾಡಬೇಕಾದ್ರೆ ಮೊದಲಿಗೆ ಡಿಜಿಲಾಕರ್‌ ಅಕೌಂಟ್‌ ಕ್ರಿಯೆಟ್‌ ಮಾಡುವುದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಡಿಜಿ ಲಾಕರ್‌ನಲ್ಲಿ ಅಕೌಂಟ್‌ ಕ್ರಿಯೆಟ್‌ ಮಾಡಲು ಹೀಗೆ ಮಾಡಿ?

ಡಿಜಿ ಲಾಕರ್‌ನಲ್ಲಿ ಅಕೌಂಟ್‌ ಕ್ರಿಯೆಟ್‌ ಮಾಡಲು ಹೀಗೆ ಮಾಡಿ?

ಹಂತ:1 ಮೊದಲಿಗೆ ನೀವು ಸರ್ಕಾರದ ವೆಬ್‌ಸೈಟ್ digilocker.gov.in ಗೆ ಹೋಗಿ.
ಹಂತ:2 ಇದರಲ್ಲಿ ನೀವು ಸೈನ್ ಅಪ್ ಆಯ್ಕೆಯನ್ನು ಬಲಭಾಗದಲ್ಲಿ ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ.
ಹಂತ:3 ನಂತರ ನಿಮ್ಮ ಹೆಸರು, ಜನ್ಮ ದಿನಾಂಕ, ಇಮೇಲ್ ಐಡಿ, ಸೇರಿದಂತೆ ಎಲ್ಲಾ ಅಗತ್ಯ ಮಾಹಿತಿಯನ್ನು ಸಲ್ಲಿಸಿ ಮತ್ತು ನೀವು ರಚಿಸಿದ ಪಾಸ್‌ವರ್ಡ್ ಅನ್ನು ನಮೂದಿಸಿ.
ಹಂತ:4 ಇದಾದ ನಂತರ, ನೀವು ನೀಡಿರುವ ಸಂಖ್ಯೆಯಲ್ಲಿ OTP ಅನ್ನು ನೀವು ಸ್ವೀಕರಿಸುತ್ತೀರಿ.
ಹಂತ:5 ನಂತರ ನೀವು OTP ಅಥವಾ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಬಳಸಿಕೊಂಡು ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಹಂತ:6 ಈಗ, ನಿಮ್ಮ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್ ಅನ್ನು ರಚಿಸುವ ಮೂಲಕ ನೀವು ಲಾಗ್ ಇನ್ ಮಾಡಬಹುದು.

ಡಿಜಿ ಲಾಕರ್‌ನಲ್ಲಿ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡುವುದು ಹೇಗೆ?

ಡಿಜಿ ಲಾಕರ್‌ನಲ್ಲಿ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಡಿಜಿ ಲಾಕರ್ ಅಪ್ಲಿಕೇಶನ್‌ಗೆ ಲಾಗ್ ಇನ್ ಆಗಿರಿ.
ಹಂತ:2 ನಂತರ, ಮೊದಲು ಅಪ್‌ಲೋಡ್ ಡಾಕ್ಯುಮೆಂಟ್ ಮೇಲೆ ಕ್ಲಿಕ್ ಮಾಡಿ.
ಹಂತ:3 ಇದರಲ್ಲಿ, ಅಪ್‌ಲೋಡ್ ಐಕಾನ್ ಮೇಲೆ ಕ್ಲಿಕ್ ಮಾಡಿ.
ಹಂತ:4 ಈಗ, ಲೋಕಲ್‌ ಡ್ರೈವ್‌ನಿಂದ ಫೈಲ್ ಅನ್ನು ಸರ್ಚ್‌ ಮಾಡಿ ಮತ್ತು ಅಪ್‌ಲೋಡ್ ಮಾಡಲು 'ಓಪನ್' ಆಯ್ಕೆಮಾಡಿ.
ಹಂತ:5 ಅಪ್‌ಲೋಡ್ ಮಾಡಿದ ಫೈಲ್ ಅನ್ನು ಅದರ ಪ್ರಕಾರವನ್ನು ನಿಯೋಜಿಸಲು 'ಡಾಕ್ ಪ್ರಕಾರವನ್ನು ಆಯ್ಕೆಮಾಡಿ' ಮೇಲೆ ಕ್ಲಿಕ್ ಮಾಡಿ. ಇಲ್ಲಿ ಎಲ್ಲಾ ದಾಖಲೆಗಳು ಒಟ್ಟಿಗೆ ಕಾಣಿಸಿಕೊಳ್ಳುತ್ತವೆ.
ಹಂತ:6 ಈಗ, ಡಾಕ್ಯುಮೆಂಟ್ ಪ್ರಕಾರವನ್ನು ಆಯ್ಕೆ ಮಾಡಿದ ನಂತರ, ಸೇವ್‌ ಕ್ಲಿಕ್ ಮಾಡಿ.
ಬಳಕೆದಾರರು ಇಷ್ಟ ಪಟ್ಟರೆ ಫೈಲ್ ನೇಮ್‌ ಅನ್ನು ರಿನೇಮ್‌ ಮಾಡಬಹುದು.

Best Mobiles in India

English summary
The Digi Locker app linked to an individual's Aadhaar number provides users with 1GB of cloud storage to store their documents.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+