ಒಂದೇ ಬಾರಿ ಎರಡು ವಾಟ್ಸಾಪ್ ಅಕೌಂಟ್‌ ಬಳಸುವುದು ಹೇಗೆ ಗೊತ್ತಾ?

|

ವಿಶ್ವದ ಜನಪ್ರಿಯ ಇನ್ಸಟಂಟ್‌ ಮೆಸೇಜಿಂಗ್‌ ಆಪ್‌ ವಾಟ್ಸಾಪ್‌ ತನ್ನ ಅನುಕೂಲಕರ ಫೀಚರ್ಸ್‌ಗಳಿಂದ ಬಳಕೆದಾರರ ನೆಚ್ಚಿನ ಆಪ್‌ ಆಗಿದೆ. ಇನ್ನ ಬಳಕೆದಾರರ ನೆಚ್ಚಿನ ಆಗಿರುವ ವಾಟ್ಸಾಪ್‌ ಅನ್ನು ಬಹುತೇಕ ಮಂದಿ ಎರಡೆರಡು ಸಂಖ್ಯೆಯ ವಾಟ್ಸಾಪ್‌ ಅನ್ನು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳು ಡ್ಯುಯಲ್ ಸಿಮ್ ಬೆಂಬಲಿಸುತ್ತವೆ. ಆದರೆ ನಿಮ್ಮ ಎರಡು ಸಿಮ್‌ ನಂಬರ್‌ನಲ್ಲೂ ವಾಟ್ಸಾಪ್ ಹೊಂದ ಬಹುದು. ಆದರೆ ಎರಡೂ ಫೋನ್ ಸಂಖ್ಯೆಗಳನ್ನು ಒಂದೇ ಬಾರಿಗೆ ಬಳಸುವುದು ಹೇಗೆ ಅನ್ನೊದು ಕೆಲವರಿಗೆ ತಿಳಿದೆ ಇರೋದಿಲ್ಲ. ಹಾಗಾದ್ರೆ ಏಕಕಾಲದಲ್ಲಿ ಎರಡು ಸಂಖ್ಯೆಯ ವಾಟ್ಸಾಪ್‌ ಅನ್ನು ಬಳಸುವುದು ಹೇಗೆ ಅನ್ನೊದನ್ನ ನಾವು ತಿಳಿಸಿಕೊಡ್ತೀವಿ.

ವಾಟ್ಸಾಪ್‌

ಹೌದು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಒಂದು ಸಮಯದಲ್ಲಿ ಒಂದು ಡಿವೈಸ್‌ನಲ್ಲಿ ವಾಟ್ಸಾಪ್‌ನಲ್ಲಿ ಒಂದು ಸಂಖ್ಯೆಯನ್ನು ಮಾತ್ರ ನೋಂದಾಯಿಸಬಹುದು ಮತ್ತು ಬಳಸಬಹುದು. ವಾಟ್ಸಾಪ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ಒಂದೇ ಅಪ್ಲಿಕೇಶನ್‌ನಂತೆ ಬಳಸಬೇಕಾಗಿತ್ತು, ಆದರೆ ಕಾಲಾನಂತರದಲ್ಲಿ ಅನೇಕ ಫೋನ್‌ಗಳು ಒಂದೇ ಅಪ್ಲಿಕೇಶನ್‌ನ ಎರಡು ಆವೃತ್ತಿಗಳನ್ನು ಹೊಂದಲು ನಿಮಗೆ ಅವಕಾಶ ನೀಡಿದ್ದು, ಇದಕ್ಕಾಗಿ ಅಪ್ಲಿಕೇಶನ್ ಕ್ಲೋನ್ ಅಥವಾ ವರ್ಕ್ ಪ್ರೊಫೈಲ್‌ನಂತಹ ಈಂಟರ್‌ಬಿಲ್ಟ್‌ ಫೀಚರ್ಸ್‌ ಅನ್ನು ಪರಿಚಯಿಸಿವೆ. ಇದ್ದರಿಂದ ನಿಮ್ಮ ಫೋನ್‌ನಲ್ಲಿ ಅಪ್ಲಿಕೇಶನ್ ಕ್ಲೋನ್ ಅಥವಾ ವರ್ಕ್ ಪ್ರೊಫೈಲ್ ಆಯ್ಕೆಯನ್ನು ಹೊಂದಿದ್ದರೆ, ಎರಡು ಅಪ್ಲಿಕೇಶನ್‌ಗಳಿಗೆ ನೀವು ಎರಡು ವಿಭಿನ್ನ ಫೋನ್ ಸಂಖ್ಯೆಗಳನ್ನು ಸುಲಭವಾಗಿ ಬಳಸಬಹುದಾಗಿದೆ. ಒಂದು ವೇಳೆ ಅದು ಆಗದಿದ್ದರೆ ಇದಕ್ಕಾಗಿ ಬೇರೆ ಆಯ್ಕೆಗಳಿವೆ ಅದರ ಬಗ್ಗೆ ತಿಳಿಸಿಕೊಡ್ತೀವಿ ಈ ಲೇಖನವನ್ನ ಓದಿರಿ.

ಅಪ್ಲಿಕೇಶನ್ ಕ್ಲೋನಿಂಗ್

ಅಪ್ಲಿಕೇಶನ್ ಕ್ಲೋನಿಂಗ್

ಅನೇಕ ಸ್ಮಾರ್ಟ್‌ಫೋನ್‌ಗಳು ಇಂಟರ್‌ಬಿಲ್ಟ್‌ ಫೀಚರ್ಸ್‌ ಅನ್ನು ಹೊಂದಿರುತ್ತವೆ. ಇದು ಬಳಕೆದಾರರಿಗೆ ಒಂದೇ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಎರಡು ಪ್ರತ್ಯೇಕ ಖಾತೆಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ. ಇದು ಸಂಪೂರ್ಣವಾಗಿ ಫೋನ್ ಬ್ರ್ಯಾಂಡ್, ಮಾದರಿ ಮತ್ತು ಅದು ಚಾಲನೆಯಲ್ಲಿರುವ ಸಾಫ್ಟ್‌ವೇರ್ ಆವೃತ್ತಿಯನ್ನು ಅವಲಂಬಿಸಿರುತ್ತದೆ. ನಿಮ್ಮ ಸ್ಮಾರ್ಟ್‌ಫೋನ್ ಈಗಾಗಲೇ ಈ ಆಯ್ಕೆಯನ್ನು ಹೊಂದಿದ್ದರೆ, ಒಂದೇ ಫೋನ್‌ನಿಂದ ವಾಟ್ಸಾಪ್‌ನಲ್ಲಿ ಎರಡು ಸಂಖ್ಯೆಗಳನ್ನು ಬಳಸಲು ನಿಮಗೆ ಸುಲಭ ಮತ್ತು ಅತ್ಯಂತ ಅನುಕೂಲಕರವಾದ ಆಯ್ಕೆಯಾಗಿದೆ.

ಅಪ್ಲಿಕೇಶನ್ ಕ್ಲೋನಿಂಗ್ ಒಳಗೊಂಡಿರುವ ಸ್ಮಾರ್ಟ್‌ಫೋನ್‌ಗಳು!

ಅಪ್ಲಿಕೇಶನ್ ಕ್ಲೋನಿಂಗ್ ಒಳಗೊಂಡಿರುವ ಸ್ಮಾರ್ಟ್‌ಫೋನ್‌ಗಳು!

ಸ್ಯಾಮ್‌ಸಂಗ್
ನೀವು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ, ನೀವು ವಾಟ್ಸಾಪ್‌ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡುವಾಗ ಎರಡನೇ ವಾಟ್ಸಾಪ್ ಖಾತೆಯನ್ನು ಬಳಸಲು ಬಯಸುತ್ತೀರಾ ಎಂದು ಡಿವೈಸ್‌ ಕೇಳುತ್ತದೆ. ಒಂದು ವೇಳೆ ನೀವು ಇದನ್ನು ಮೊದಲೇ ಮಾಡದಿದ್ದರೆ, ನೀವು ಈಗ ಅದನ್ನು ಮಾಡಬಹುದು. ಇದಕ್ಕಾಗಿ ನೀವು settings ಗೆ ಹೋಗಿ, Advanced features ಮತ್ತು ನಂತರ dual messenger ಕ್ಲಿಕ್ ಮಾಡಿ. ಇಲ್ಲಿ ನೀವು ಯಾವ ಅಪ್ಲಿಕೇಶನ್ ಅನ್ನು ಕ್ಲೋನ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಲು ನಿಮಗೆ ಸಾಧ್ಯವಾಗಲಿದೆ.

huawei ಮತ್ತು honor

huawei ಮತ್ತು honor
ಹುವಾವೇ ಮತ್ತು ಹಾನರ್ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಅಪ್ಲಿಕೇಶನ್‌ ಕ್ಲೋನಿಂಗ್‌ ಇಂಟರ್‌ಬಿಲ್ಟ್‌ ಮಾಡಲಾಗಿದೆ. ಇದಕ್ಕಾಗಿ, ನೀವು ನಿಮ್ಮ ಸ್ಮಾರ್ಟ್‌ಫೋನ್‌ನ settings ಗೆ ಹೋಗಿ ಅಲ್ಲದೆ ಅಪ್ಲಿಕೇಶನ್‌'ಗಳಿಗೆ ಹೋಗಿ ಮತ್ತು‘ ಆಪ್ ಟ್ವಿನ್ 'ಕ್ಲಿಕ್ ಮಾಡಿ ಮತ್ತು ವಾಟ್ಸಾಪ್ ಆಯ್ಕೆಮಾಡಿ. ಇದರಲ್ಲಿ ಅಪ್ಲಿಕೇಶನ್ ಐಕಾನ್ ಪಕ್ಕದಲ್ಲಿ ನೀಲಿ ಬ್ಯಾಡ್ಜ್ನೊಂದಿಗೆ ಕಾಪಿ ಮಾಡಿದ ಅಪ್ಲಿಕೇಶನ್ ಅನ್ನು ಲಾಂಚರ್‌ನಲ್ಲಿ ತೋರಿಸುತ್ತದೆ.

ಶಿಯೋಮಿ
ಶಿಯೋಮಿ ಸ್ಮಾರ್ಟ್‌ಫೋನ್‌ಗಗಳಲ್ಲಿ, ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ‘ಡ್ಯುಯಲ್ ಅಪ್ಲಿಕೇಶನ್‌ಗಳು' ಕ್ಲಿಕ್ ಮಾಡಿದರೆ ಸಾಕು ಈ ಸೇವೆ ಲಭ್ಯವಾಗಲಿದೆ.

ಒಪ್ಪೋ
ನಿಮ್ಮ ಹ್ಯಾಂಡ್‌ಸೆಟ್‌ನ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ‘ಕ್ಲೋನ್ ಅಪ್ಲಿಕೇಶನ್‌ಗಳು' ಕ್ಲಿಕ್ ಮಾಡಿ

ವಿವೋ
ವಿವೋ ಸ್ಮಾರ್ಟ್‌ಫೋನ್‌ಗಳು ‘ಆಪ್ ಕ್ಲೋನ್' ಅನ್ನು ಹೊಂದಿದ್ದು ಸೆಟ್ಟಿಂಗ್ಸ್‌ಗೆ ಹೋಗಿ ‘ಆಪ್ ಕ್ಲೋನ್' ಕ್ಲಿಕ್ ಮಾಡಿ. ನಂತರ ಡ್ಯುಯಲ್ ಅಪ್ಲಿಕೇಶನ್‌ಗಳನ್ನು ಬಳಸುವ ಆಯ್ಕೆಯನ್ನು ಕ್ಲಿಕ್‌ ಮಾಡಿದರೆ ಸಾಕು.

Whatsapp business

Whatsapp business

ಇನ್ನು ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ಅಪ್ಲಿಕೇಶನ್ ಕ್ಲೋನ್ ಆಯ್ಕೆ ಇಲ್ಲದಿದ್ದರೆ, ಬ್ಯುಸಿನೆಸ್‌ ವಾಟ್ಸಾಪ್ ನಿಮ್ಮ ಮತ್ತೊಂದು ಆಯ್ಕೆಯಾಗಿರಲಿದೆ. ಇದು ಬಹುತೇಕ ಎಲ್ಲಾ ಆಂಡ್ರಾಯ್ಡ್ ಮತ್ತು ಐಒಎಸ್ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದರಿಂದ ದರಿಂದಲೂ ಪ್ರಯೋಜನವಿದೆ. ಆದರೆ ಇದರಲ್ಲಿ ಒಬ್ಬರಿಗೆ, ನೀವು ಎರಡನೆಯ ಸಂಖ್ಯೆಯಿಂದ ಕಳುಹಿಸುವ ಸಂದೇಶ ಬ್ಯುಸಿನೆಸ್‌ ಖಾತೆಯ ಸಂದೇಶ ಅನ್ನೊದು ನೀವು ಸಂದೇಶ ಕಳುಹಿಸುವ ವ್ಯಕ್ತಿಗೆ ತಿಳಿದು ಬಿಡುತ್ತದೆ. ಅಲ್ಲದೆ ನಿಮಗೆ ವ್ಯವಹಾರ ಖಾತೆ ಅಗತ್ಯವಿದ್ದರೆ, ನಿಮ್ಮ ಎರಡನೇ ಸಂಖ್ಯೆಗೆ ನೀವು ಅದನ್ನು ತೆಗೆದು ಹಾಕಬೇಕಾಗುತ್ತದೆ. ಆದರೂ ನೀವು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಸುಲಭವಾಗಿ ವಾಟ್ಸಾಪ್ ಬಿಸಿನೆಸ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಬಹುದಾಗಿದ್ದು, ವಾಟ್ಸಾಪ್ ಬಿಸಿನೆಸ್ ಖಾತೆಯಿಂದ ಜನರನ್ನು ಇನ್ವೈಟ್‌ ಮಾಡುವ ಆಯ್ಕೆಯನ್ನು ಪಡೆಯಬಹುದಾಗಿದೆ.

parallel spaces and dual spaces

parallel spaces and dual spaces

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್ ಕ್ಲೋನಿಂಗ್ ಹೊಂದಿಲ್ಲ ಎನ್ನುವುದಾದರೆ ಎರಡು ಸಂಖ್ಯೆಗಳನ್ನು ಬಳಸಲು ನೀವು ‘ಸ್ಯಾಂಡ್‌ಬಾಕ್ಸ್' ಅನ್ನು ಉಪಯೋಗಿಸಬಹುದು. ಪ್ಯಾರಲೆಲ್‌ ಸ್ಪೆಸ್‌ ಅಥವಾ ಈ ಸ್ಯಾಂಡ್‌ಬಾಕ್ಸ್‌ಗಳನ್ನು ಸೆಟ್‌ ಮಾಡಬೇಕಾದರೆ ಅಪ್ಲಿಕೇಶನ್-ಕ್ಲೋನ್ ಫೀಚರ್ಸ್‌ ಮತ್ತು ವಾಟ್ಸಾಪ್ ಬಿಸಿನೆಸ್‌ಗಿಂತ ಹೆಚ್ಚಿನ ರಿಸೋರ್ಸ್‌ ಬೇಕಾಗುತ್ತದೆ. ಇದಕ್ಕಾಗಿ ಆಪ್ ಸ್ಟೋರ್ ಮತ್ತು ಪ್ಲೇ ಸ್ಟೋರ್‌ನಿಂದ ನೀವು ಡ್ಯುಯಲ್ ಸ್ಪೇಸ್ ಅನ್ನು ಡೌನ್‌ಲೋಡ್ ಮಾಡಬಹುದು, ಆದಾಗ್ಯೂ, ಇಲ್ಲಿ ನಿಮ್ಮ ಫೋನ್‌ನಲ್ಲಿರುವ ಎಲ್ಲ ಫೈಲ್‌ಗಳಿಗೆ ಮತ್ತು ಫೋಟೋಗಳಿಗೆ ಪ್ರವೇಶವನ್ನು ಹೊಂದಿವೆ, ಆದ್ದರಿಂದ ಅದರ ಬಗ್ಗೆ ಜಾಗರೂಕರಾಗಿರುವುದು ಉತ್ತಮ.

Best Mobiles in India

English summary
Have two phone numbers and need to use WhatsApp on both, but you have only one smartphone? Here's how you can use WhatsApp on both the numbers.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X