ವ್ಯಾಪಾರದ ವೃದ್ಧಿಗೆ ನೆರವಾಗುತ್ತಿದೆ ವಾಟ್ಸ್‌ಆಪ್ ಬ್ಯುಸಿನೆಸ್!!

By GizBot Bureau
|

ವಾಟ್ಸ್ ಆಪ್ ಇಲ್ಲದೆ ಯಾರಿದ್ದಾರೆ ಹೇಳಿ.. ಯಾರ ಕೈಯಲ್ಲಿ ಆಂಡ್ರಾಯ್ಡ್ ಮೊಬೈಲ್ ಇದಿಯೋ ಅವರ ಬಳಿ ವಾಟ್ಸ್ ಆಪ್ ಇದೆ ಎಂದೇ ಅರ್ಥ. ಹೀಗಿರುವಾಗ ಬ್ಯುಸಿನೆಸ್ ಮಾಡುವವರು ಸುಮ್ಮನಿರಲು ಸಾಧ್ಯವೇ? ಅವರದ್ದೇನಿದ್ದರೂ, ಗ್ರಾಹಕರನ್ನು ಸೆಳೆಯುವ ಕೆಲಸ. ಈಗಿನ ಜನರೇಷನ್ನಿನ ಗ್ರಾಹಕರನ್ನು ಸೆಳೆಯಬೇಕು ಎಂದರೆ ವ್ಯಾಪಾರಿಗಳೂ ಕೂಡ ಅವರಂತೆಯೇ ಇರಬೇಕು ಅಂದರೆ ಅವರನ್ನು ಹತ್ತಿರದಿಂದ ಮಾತನಾಡಿಸುವಂತಿರಬೇಕು.ಅವರ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸುವವರಾಗಿರಬೇಕು.

ವ್ಯಾಪಾರದ ವೃದ್ಧಿಗೆ ನೆರವಾಗುತ್ತಿದೆ ವಾಟ್ಸ್‌ಆಪ್ ಬ್ಯುಸಿನೆಸ್!!

ಹೀಗೆ ಸ್ಪಂದಿಸಿದರೆ ಮಾತ್ರ ಗ್ರಾಹಕರು ಹೆಚ್ಚಾಗುತ್ತಾರೆ ಎಂಬುದು ಎಲ್ಲಾ ಬ್ಯುಸಿನೆಸ್ ಕಂಪೆನಿಗಳಿಗೆ ಮತ್ತು ಬ್ಯುಸಿನೆಸ್ ಮ್ಯಾನ್ ಗೆ ತಿಳಿದಿದೆ. ಹಾಗಾಗಿ ಆ ನಿಟ್ಟಿನಲ್ಲಿ ವ್ಯಾಪಾರ ಅಭಿವೃದ್ಧಿಗೆ ವ್ಯಾಪಾರಸ್ಥರು ಇತ್ತೀಚಿನ ದಿನಗಳಲ್ಲಿ ವಾಟ್ಸ್ ಆಪ್ ನ್ನು ಬಳಕೆ ಮಾಡಲು ಶುರುವಿಟ್ಟುಕೊಂಡಿದ್ದಾರೆ. ಹೌದು, ಗ್ರಾಹಕರ ನಡುವಿನ ಉತ್ತಮ ಬಾಂಧವ್ಯ ಮತ್ತು ಪ್ರಚಾರಕ್ಕೆ ವಾಟ್ಸ್ ಆಪ್ ಒಂದು ಉತ್ತಮ ಮಾರ್ಗವಾಗಿದೆ ಮತ್ತು ವಾಟ್ಸ್ ಆಪ್ ಮುಖಾಂತರವೇ ಹಲವಾರು ಉತ್ಪನ್ನಗಳು ಇತ್ತೀಚಿನ ದಿನಗಳಲ್ಲಿ ಮಾರಾಟವಾಗುತ್ತಿದೆ ಎಂದರೆ ಅತಿಶಯೋಕ್ತಿ ಆಗುವುದಿಲ್ಲ.

ಬೆಂಗಳೂರಿನ ಕಾಮಿಕ್ಸ್ ಮುದ್ರಣಗಾರರೊಬ್ಬರು ವಾಟ್ಸ್ ಆಪ್ ನಲ್ಲಿ ಪಬ್ಲಿಷ್ ಮಾಡಲು ಪ್ರಾರಂಭಿಸಿದ ಕೇವಲ ನಾಲ್ಕೇ ತಿಂಗಳಲ್ಲಿ 20,000 ಚಂದಾದಾರರನ್ನು ಪಡೆದಿದ್ದಾರಂತೆ ಮತ್ತು ಶೇಕಡಾ 40 ರ ಪ್ರಮಾಣದಲ್ಲಿ ಚಂದಾದಾರಿಕೆ ಪ್ರತಿತಿಂಗಳು ಹೆಚ್ಚುತ್ತಿದೆಯಂತೆ.

ಕಾಮಿಕ್ಸ್ ಉದ್ಯಮಕ್ಕೆ ಬರುವ ಮುನ್ನ ಫ್ಲಿಪ್ ಕಾರ್ಟ್ ಮತ್ತು ಶಿಯೋಮಿಯಲ್ಲಿ ಕೆಲಸ ಮಾಡಿದ ಐಐಟಿ- ರೂರ್ಕಿಯ ಹಳೆಯ ವಿದ್ಯಾರ್ಥಿಯಾಗಿರುವ ರಾಜೀವ್ ತಂಹಂಕರ್ ಹೇಳುವಂತೆ 2016 ರಲ್ಲಿ ಕಾಮಿಕ್ ಬುಕ್ ನ ಪಬ್ಲಿಷ್ ಮಾಡುವ ಕೆಲಸವನ್ನು ಅವರು ಆರಂಭಿಸಿದ್ದು ವಾಟ್ಸ್ ಆಪ್ ಬ್ಯುಸಿನೆಸ್ ಆರಂಭಿಸಿದ ಮೇಲೆ ಅವರ ಬ್ಯುಸಿನೆಸ್ ಹೆಚ್ಚು ಪ್ರಸಿದ್ಧಿಯಾಗಿದೆಯಂತೆ.

ಎರಡು ಕಾರಣಗಳಿಂದಾಗಿ ವಾಟ್ಸ್ ಆಪ್ ಬ್ಯುಸಿನೆಸ್ ಹೆಚ್ಚು ಪ್ರಸಿದ್ಧಿಯಾಗುತ್ತಿದೆ. ಒಂದು ವ್ಯಕ್ತಿಗತವಾಗಿರುವುದು ಮತ್ತು ನೇರನುಡಿಯ ಮೂಲಕ ನಿರ್ಶಿತವಾಗುವಿಕೆ. ಉದಾಹರಣೆಗೆ ಯಾವುದೇ ಕಾಮಿಕ್ ಸ್ಟೋರಿ ಇಷ್ಟವಾದರೆ,ಚಂದಾದಾರರು ವಾಟ್ಸ್ ಆಪ್ ನಲ್ಲಿ”ಲೈಕ್” ಮಾಡುವುದು ಹೃದಯದ ಚಿಹ್ನೆ ಹಾಕುವುದನ್ನು ಮಾಡುತ್ತಾರೆ, ಒಂದು ವೇಳೆ ಇಷ್ಟವಾಗದೇ ಇದ್ದರೂ ಕೂಡ ಅದನ್ನು ನೇರವಾಗಿ ವ್ಯಾಪಾರಸ್ಥರಿಗೆ ತಿಳಿಸುವ ಅವಕಾಶ ಇದರಲ್ಲಿರುತ್ತದೆ.

ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಭಾರತದಲ್ಲಿ ಸುಮಾರು 200 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಮತ್ತು ದೇಶದಲ್ಲಿ ವಾಟ್ಸ್ ಆಪ್ ಬ್ಯುಸಿನೆಸ್ ಆಪ್ ನ್ನು ಜನವರಿಯಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಸಣ್ಣ ವ್ಯಾಪಾರಸ್ಥರಿಗೆ ಕಮ್ಯುನಿಕೇಷನ್ ಗೆ ಅನುಕೂಲ ಮಾಡಿಕೊಡುವುದು ಈ ಆಪ್ ನ ಗುರಿಯಾಗಿತ್ತು.

ವ್ಯಾಪಾರದ ವೃದ್ಧಿಗೆ ನೆರವಾಗುತ್ತಿದೆ ವಾಟ್ಸ್‌ಆಪ್ ಬ್ಯುಸಿನೆಸ್!!

ಭಾರತದಲ್ಲಿರುವ ಹಲವಾರು ಕಂಪನಿಗಳು “ಬುಕ್ ಮೈ ಶೋ”ಮತ್ತು “oyo” ಸೇರಿದಂತೆ ಹಲವಾರು ಕಂಪೆನಿಗಳು ವಾಟ್ಸ್ ಆಪ್ ಬ್ಯುಸಿನೆಸ್ ಮುಖಾಂತರ ಗ್ರಾಹಕರ ಜೊತೆ ಸಂಪರ್ಕಕ್ಕೆ ಮುಂದಾಗುತ್ತಿದ್ದಾರೆ. ಈ ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಈಗಾಗಲೇ ವಾಟ್ಸ್ ಆಪ್ ಬ್ಯೂಸಿನೆಸ್ ಸಣ್ಣ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುತ್ತಿದೆ. ಸದ್ಯದಲ್ಲೇ ಏರ್ ಲೈನ್, ಈ-ಕಾಮರ್ಸ್ ಕಂಪನೆ, ಬ್ಯಾಂಕ್ ಗಳು ತಮ್ಮ ಗ್ರಾಹಕರ ಜೊತೆ ವಾಟ್ಸ್ ಆಪ್ ಮೂಲಕ ಸಂಪರ್ಕ ಹೊಂದಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುತ್ತಿವೆ ಎಂಬ ಬಗ್ಗೆ ವಾಟ್ಸ್ ಆಪ್ ಕಂಪೆನಿಯ ವಕ್ತಾರರು ಈ-ಮೇಲ್ ಮುಖಾಂತರ ತಿಳಿಸಿದ್ದಾರೆ. ಆ ಮೂಲಕ ವಾಟ್ಸ್ ಆಪ್ ಬ್ಯೂಸಿನೆಸ್ ವಿಶ್ವದಾದ್ಯಂತ 3 ಮಿಲಿಯನ್ ಜನರು ವಾಟ್ಸ್ ಆಪ್ ಬ್ಯೂಸಿನೆಸ್ ನಲ್ಲಿ ಆಕ್ಟೀವ್ ಆಗಲು ಸಾಧ್ಯವಾಗುತ್ತದೆ.

ಗ್ರಾಹಕರು ಕೇಳುವ ಸಂದೇಹಗಳಿಗೆ ಕೂಡಲೇ ಉತ್ತರ ನೀಡಲು ಈ ವಾಟ್ಸ್ ಆಪ್ ಬ್ಯೂಸಿನೆಸ್ ಆಪ್ ಹೆಚ್ಚು ಅನುಕೂಲಕರವಾಗಿರುವುದರ ಕಾರಣದಿಂದಾಗಿ ಬೆಂಗಳೂರಿನಲ್ಲಿರುವ ಇನ್ನೊಂದು ಕಂಪೆನಿ ಯುನಿಕಾರ್ನ್ ಪೆಟ್ ಸರ್ವೀಸ್ ಕೂಡ ಈ ಸೇವೆಯ ಸದುಪಯೋಗವನ್ನು ಪಡೆಯುತ್ತಿದೆ.

ಗ್ಲಾಸಿಕ್, ಕಣ್ಣಿನ ಕನ್ನಡಕ ಮತ್ತು ಸನ್ ಗ್ಲಾಸ್ ತಯಾರಿಕಾ ಕಂಪೆನಿ ಕೂಡ ವಾಟ್ಸ್ ಆಪ್ ಬ್ಯೂಸಿನೆಸ್ ಆಪ್ ನ ಬಳಕೆ ಮಾಡುತ್ತಿದ್ದು, ಆ ಮೂಲಕ ತನ್ನ ಗ್ರಾಹಕರ ಬಳಗವನ್ನು ವೃದ್ಧಿಸಿಕೊಂಡಿದೆ ಎಂಬುದು ತಿಳಿದಿದೆ. ವಾಟ್ಸ್ ಆಪ್ ಮುಖಾಂತರ ಈ ಕಂಪೆನಿಯು ತನ್ನ ಗ್ರಾಹಕರಿಗೆ ಅವರು ಬಯಸುವ ಕನ್ನಡಕದ ಚಿತ್ರ ಅಥವಾ ವಿಡಿಯೋಗಳನ್ನು ಕಳುಹಿಸುತ್ತದೆ ಮತ್ತು ಗ್ರಾಹಕರು ಆಯ್ಕೆ ಮಾಡಿದ ಕನ್ನಡಕವನ್ನು ಖರೀದಿಸಲು ವಾಟ್ಸ್ ಆಪ್ ಮೂಲಕವೇ ಪೇಮೆಂಟ್ ಲಿಂಕ್ ಕೂಡ ಕಳುಹಿಸಲಾಗುತ್ತದೆ. ಪೇಮೆಂಟ್ ಲಿಂಕ್ ನ್ನು ಕ್ಲಿಕ್ಕಿಸಿದ ಗ್ರಾಹಕರು ನೇರವಾಗಿ ಕಂಪೆನಿಯ ವೆಬ್ ಸೈಟ್ ನಲ್ಲಿ ಹಣ ಪಾವತಿಯನ್ನು ಆನ್ ಲೈನ್ ಮೂಲಕವೇ ಮಾಡಿ ತಮ್ಮ ಆರ್ಡರ್ ನ್ನು ನೀಡಬಹುದಾಗಿದೆ.

ಈಮೇಲ್ ಮತ್ತು ಎಸ್ ಎಂಎಸ್ ಗಳಿಗಿಂತ ವಾಟ್ಸ್ ಆಪ್ ಗ್ರಾಹಕರ ಜೊತೆ ಸಂಪರ್ಕ ಹೊಂದಲು ಇರುವ ಅತ್ಯುತ್ತಮ ವಿಧಾನವಾಗಿದೆ. ಈಮೇಲ್ ಗಳನ್ನು ಯಾವಾಗಲೂ ಪರಿಶೀಲಿಸುತ್ತಾ ಇರುವುದು ಕಠಿಣ ಮತ್ತು ಎಸ್ ಎಂ ಎಸ್ ಗಳ ಬಗೆಗಿನ ಕ್ರೇಝ್ ಈಗ ಜನರಲ್ಲಿ ಕಡಿಮೆಯಾಗಿತ್ತು ಆಗೊಮ್ಮೆ ಈಗೊಮ್ಮೆ ನೋಡುತ್ತಾರೆ. ಆದರೆ ವಾಟ್ಸ್ ಆಪ್ ಮೆಸೇಜ್ ಗಳು ಹಾಗಲ್ಲ. ಜನರಿಗೆ ಅಲರ್ಟ್ ಸಿಕ್ಕಿದ ಕೂಡಲೇ ಪರೀಕ್ಷಿಸುತ್ತಾರೆ ಮತ್ತು ಅದು ಜನರಿಗೆ ತುಂಬಾ ಆರಾಮದಾಯಕವಾಗಿ ಕೂಡ ಇದೆ. ಹಾಗಾಗಿ ವಾಟ್ಸ್ ಆಪ್ ನಲ್ಲಿ ಬ್ಯುಸಿನೆಸ್ ವೃದ್ಧಿಸಲು ಹೆಚ್ಚು ಅನುಕೂಲವಾಗಿದೆ.

ದೊಡ್ಡ ದೊಡ್ಡ ಕಂಪೆನಿಗಳೂ ಕೂಡ ಈಗ ವಾಟ್ಸ್ ಆಪ್ ಬ್ಯೂಸಿನೆಸ್ ಆಪ್ ಬಳಕೆ ಮಾಡಲು ಪ್ರಾರಂಭಿಸಿದ್ದು, ಗ್ರಾಹಕರ ಜೊತೆ ಅದರಲ್ಲೇ ಸಂಪರ್ಕ ರೂಪಿಸುತ್ತಿದೆ. ಆನ್ ಲೈನ್ ಟ್ರಾವೆಲ್ ಪ್ಲಾಟ್ ಫಾರ್ಮ್ ಗಳಾದ ಮೇಕ್ ಮೈ ಟ್ರಿಪ್, Goibibo ಗಳು ಈ-ಟಿಕೆಟ್ ಗಳನ್ನು ಕಳುಹಿಸಲು, ಹೊಟೆಲ್ ಬುಕ್ ಮಾಡಿದ ಓಚರ್ ಗಳನ್ನು ಗ್ರಾಹಕರಿಗೆ ತಲುಪಿಸಲು, ವಿಮಾನದಲ್ಲಿ ತಮ್ಮ ಸೀಟುಗಳನ್ನು ಕಾಯ್ದಿರಿಸಲು ವಾಟ್ಸ್ ಆಪ್ ನ್ನೇ ಬಳಕೆ ಮಾಡಲು ಶುರು ಮಾಡಿವೆ. ಅಷ್ಟೇ ಅಲ್ಲ ಕ್ಯಾನ್ಸಲೇಷನ್ ಕೂಡ ಇದರಲ್ಲೇ ಮಾಡಿ, ವಿವರ ಅಥವಾ ಪ್ರತಿಕ್ರಿಯೆಗಳನ್ನು ಕೂಡ ವಾಟ್ಸ್ ಆಪ್ ಮುಖಾಂತರವೇ ವ್ಯಾಪಾರಸ್ಥರು ಪಡೆಯುತ್ತಿದ್ದಾರೆ.

ಎಸ್ ಎಂ ಎಸ್ ಗೆ ಹೋಲಿಸಿದರೆ, ಗ್ರಾಹಕರು ವಾಟ್ಸ್ ಆಪ್ ಗೆ ಹೆಚ್ಚಾಗಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುತ್ತಾರೆ ಒಂದು ಕಂಪೆನಿಯ COO ಆಗಿರುವ ಅಭಿನವ್ ಸಿಹ್ನಾ.. ಹೀಗೆ ಇತ್ತೀಚೆಗೆ ವಾಟ್ಸ್ ಆಪ್ ಬ್ಯೂಸಿನೆಸ್ ಹೆಚ್ಚು ಪ್ರಸಿದ್ಧಿಗೊಳ್ಳುತ್ತಿದೆ ಮತ್ತು ಗ್ರಾಹಕರಿಗೂ ಕೂಡ ಹೆಚ್ಚು ಖರೀದಿಯಲ್ಲಿ ಆರಾಮದಾಯಕವಾದ ಅನುಭವವನ್ನು ಇದು ನೀಡುತ್ತಿದೆ. ಹಾಗಾಗಿ ವ್ಯಾಪಾರಸ್ಥರು ಮತ್ತು ಗ್ರಾಹಕರು ಇಬ್ಬರೂ ಕೂಡ ಇದರಿಂದ ಹೆಚ್ಚೆಚ್ಚು ಲಾಭಗಳನ್ನು ಪಡೆಯುತ್ತಿದ್ದಾರೆ.

Most Read Articles
Best Mobiles in India

English summary
Here's how WhatsApp Business is helping startups grow. To know more visit this kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more