Home
ಸುದ್ದಿಜಾಲ

ಜಿಯೋ ಗ್ರಾಹಕರು ರೀಚಾರ್ಜ್‌ ಮಾಡಿಸದೆ 5GB ಡೇಟಾ ಪಡೆಯಲು ಹೀಗೆ ಮಾಡಿ?

ದೇಶದ ಟೆಲಿಕಾಂ ವಲಯಲ್ಲಿ ಜಿಯೋ ಟೆಲಿಕಾಂ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಏರ್‌ಟೆಲ್‌ ಮತ್ತು ವಿ ಟೆಲಿಕಾಂಗಳಿಗೆ ಪ್ರಬಲ ಪೈಪೋಟಿ ನೀಡುತ್ತಾ ಸಾಗಿದೆ. ಇದಕ್ಕಾಗಿ ರಿಲಯನ್ಸ್‌ ಜಿಯೋ ತನ್ನ ಗ್ರಾಹಕರಿಗೆ ಆಕರ್ಷಕ ಪ್ರಿಪೇಯ್ಡ್‌ ಹಾಗೂ ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಇದರೊಂದಿಗೆ ತನ್ನ ಬಳಕೆದಾರರಿಗೆ ಇತರೆ ಪ್ರಯೋಜನಗಳನ್ನು ಸಹ ನೀಡುತ್ತಾ ಬಂದಿದೆ. ಇದರಲ್ಲಿ ಡೇಟಾ ಲೋನ್‌ ನೀಡುವ ಸೇವೆ ಕೂಡ ಒಂದಾಗಿದೆ. ಗ್ರಾಹಕರಿಗೆ ಡೇಟಾ ಖಾಲಿಯಾದಾಗ ತಕ್ಷಣಕ್ಕೆ ಈ ಸೇವೆ ಸಹಾಯಕವಾಗಲಿದೆ.

ಜಿಯೋ

ಹೌದು, ಜಿಯೋ ತನ್ನ ಬಳಕೆದಾರರಿಗೆ ಡೇಟಾ ಖಾಲಿಯಾದಾಗ ಡಾಟಾ ಲೋನ್‌ ಪಡೆಯುವ ಅವಕಾಶವನ್ನು ನೀಡಿದೆ. ಬಳಕೆದಾರರು ತಮ್ಮ ಡಾಟಾ ಮುಗಿದಾಗ ತಕ್ಷಣವೇ ರೀಚಾರ್ಜ್ ಮಾಡಲು ಸಾಧ್ಯವಾಗದಿದ್ದರೆ, ಡಾಟಾವನ್ನು ಉಚಿತವಾಗಿ ಸಾಲ ಪಡೆಯಲು ಅನುಮತಿಸಲಿದೆ. ನೀವು ತಕ್ಷಣಕ್ಕೆ 1GB ಎಮರ್ಜೆನ್ಸಿ ಡೇಟಾ ಲೋನ್‌ ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲ ಜಿಯೋ ಗ್ರಾಹಕರು 5GB ಡೇಟಾ ವರೆಗೆ ಲೋನ್‌ ಪಡೆಯಬಹುದಾಗಿದೆ. ಹಾಗಾದ್ರೆ ಜಿಯೋದಲ್ಲಿ 5GB ಡಾಟಾ ಲೋನ್‌ ಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಿಯೋ

ಜಿಯೋ ಗ್ರಾಹಕರು 5GB ಡೇಟಾವನ್ನು ಎಮರ್ಜೆನ್ಸಿ ಲೋನ್‌ ತೆಗೆದುಕೊಳ್ಳಬಹುದಾಗಿದೆ. ಇದನ್ನು ನೀವು MyJio ಅಪ್ಲಿಕೇಶನ್‌ ಮೂಲಕ ಪಡೆಯಬಹುದಾಗಿದೆ. ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ಉಚಿತ ಡೇಟಾವನ್ನು ಸಕ್ರಿಯಗೊಳಿಸಲು ಹ್ಯಾಂಬರ್ಗರ್ ಮೆನುವನ್ನು ಟ್ಯಾಪ್ ಮಾಡಬೇಕಾಗುತ್ತದೆ. ಇದರಲ್ಲಿ ನೀವು "ಎಮರ್ಜೆನ್ಸಿ ಡೇಟಾ ಸಾಲ" ಟ್ಯಾಬ್‌ಗೆ ಹೋಗಬೇಕಾಗುತ್ತದೆ. ಇನ್ನು ಹೊಸದಾಗಿ ತೆಗೆದುಕೊಳ್ಳುವ ಹೊಸ ಎಮರ್ಜೆನ್ಸಿ ಡೇಟಾ ಲೋನ್‌ ಗ್ರಾಹಕರು ತಮ್ಮ ದೈನಂದಿನ ಡೇಟಾ ಕೋಟಾವನ್ನು ಮೀರುವ ಮತ್ತು ತಕ್ಷಣವೇ ರೀಚಾರ್ಜ್ ಮಾಡಲು ಸಾಧ್ಯವಾಗದ ಸಮಯದಲ್ಲಿ ದೊರೆಯಲಿದೆ. ಡಾಟಾವನ್ನು 'ಈಗ ರೀಚಾರ್ಜ್ ಮಾಡಿ ಮತ್ತು ನಂತರ ಪಾವತಿಸುವ ಅವಕಾಶ ಸಿಗಲಿದೆ.

ರಿಲಯನ್ಸ್

ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ 1GB ಯ ಡಾಟಾ ಲೋನ್‌ ಅನ್ನು 5 ಭಾರಿ ಪಡೆಯುವುದಕ್ಕೆ ಅವಕಾಶ ನೀಡಿದೆ. ಪ್ರತಿ 1GB ಡೇಟಾ ಪ್ಯಾಕ್‌ನ ಬೆಲೆ 11 ರೂಪಾಯಿ ಆಗಿದ್ದು, ಒಂದು ಸಮಯದಲ್ಲಿ, 1GB ಡೇಟಾವನ್ನು ಮಾತ್ರ ಲೋನ್‌ ಪಡೆಯಬಹುದು. ಅಲ್ಲದೆ ನೀವು 5GB ವರೆಗಿನ ಡೇಟಾವನ್ನು ಬಯಸಿದರೆ, ಎಮರ್ಜೆನ್ಸಿ ಡೇಟಾ ಲೋನ್‌ ಅನ್ನು ನಾಲ್ಕು ಬಾರಿ ಸಕ್ರಿಯಗೊಳಿಸುವ ಮೂಲಕ ಪಡೆದುಕೊಳ್ಳಬಹುದು. ಗ್ರಾಹಕರು 5GB ಡೇಟಾವನ್ನು ತೆಗೆದುಕೊಂಡರೆ, ಒಟ್ಟು ಡೇಟಾ ಸಾಲದ ಮೊತ್ತವು ರೂ 55 ಆಗಿರುತ್ತದೆ.

ಜಿಯೋ

ಇನ್ನು ಜಿಯೋ ತನ್ನ ಗ್ರಾಹಕರಿಗೆ 5GB ಡೇಟಾ ಲೋನ್‌ ಅನ್ನು ನೀಡುವಾಗ ಕೆಲವು ಕ್ರಮಗಳನ್ನು ಅನುಸರಿಸುವುದಕ್ಕೆ ಸೂಚಿಸಲಿದೆ. ಇದಕ್ಕಾಗಿ ನೀವು ಸಕ್ರಿಯ ಬಳಕೆದಾರರಾಗಿರಬೇಕಾಗುತ್ತದೆ. ಕೆಲವು ಕಾರಣಗಳಿಗಾಗಿ ಪಾವತಿಸಲು ಸಾಧ್ಯವಾಗದವರಿಗೆ ಇದು ಪರಿಹಾರವನ್ನು ನೀಡುತ್ತದೆ. ಹಾಗಾದ್ರೆ ಪ್ರಾರಂಭಿಕ ಹಂತದಲ್ಲಿ ಹಣವನ್ನು ಪಾವತಿಸದೆ ನೀವು ರಿಲಯನ್ಸ್ ಜಿಯೊದಿಂದ 5GB ವರೆಗೆ ಡೇಟಾವನ್ನು ಪಡೆಯುವುದಕ್ಕೆ ಏನೆಲ್ಲಾ ಕ್ರಮ ಅನುಸರಿಸಬೇಕು ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ರಿಲಯನ್ಸ್ ಜಿಯೋದಿಂದ 5GB ವರೆಗೆ ಡೇಟಾ ಲೋನ್‌ ಪಡೆಯುವುದು ಹೇಗೆ?

ರಿಲಯನ್ಸ್ ಜಿಯೋದಿಂದ 5GB ವರೆಗೆ ಡೇಟಾ ಲೋನ್‌ ಪಡೆಯುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ MyJio ಅಪ್ಲಿಕೇಶನ್ ತೆರೆಯಿರಿ ಮತ್ತು ಪೇಜ್‌ ಮೇಲಿನ ಎಡಭಾಗದಲ್ಲಿರುವ 'ಮೆನು' ಗೆ ಹೋಗಿ.
ಹಂತ:2 ಇದರಲ್ಲಿ ಮೊಬೈಲ್ ಸೇವೆಗಳ ಅಡಿಯಲ್ಲಿ 'ಎಮರ್ಜೆನ್ಸಿ ಡೇಟಾ ಲೋನ್‌' ಆಯ್ಕೆಮಾಡಿ.
ಹಂತ:3 ನಂತರ ಎಮರ್ಜೆನ್ಸಿ ಡೇಟಾ ಲೋನ್‌ ಬ್ಯಾನರ್‌ನಲ್ಲಿ 'ಕಂಟಿನ್ಯೂ' ಕ್ಲಿಕ್ ಮಾಡಿ.
ಹಂತ:4 ಇದೀಗ 'ಎಮರ್ಜೆನ್ಸಿ ಡೇಟಾ ಪಡೆಯಿರಿ' ಆಯ್ಕೆಯನ್ನು ಆಯ್ಕೆಮಾಡಿರಿ.
ಹಂತ:5 ಇದರಲ್ಲಿ ಎಮರ್ಜೆನ್ಸಿ ಡೇಟಾ ಲೋನ್‌ ಪ್ರಯೋಜನವನ್ನು ಪಡೆಯಲು 'Activate now' ಕ್ಲಿಕ್ ಮಾಡಿ.
ಹಂತ:6 ಇದೆಲ್ಲಾ ಮುಗಿದ ನಂತರ ನಿಮ್ಮ ಎಮೆರ್ಜೆನ್ಸಿ ಡೇಟಾ ಲೋನ್‌ ಪ್ರಯೋಜನವನ್ನು ಸಕ್ರಿಯಗೊಳಿಸಲಾಗುತ್ತದೆ.

ಜಿಯೋ

ಇನ್ನು ಜಿಯೋ ಕಂಪೆನಿ ಇತ್ತೀಚಿಗೆ ಹೊಸ ಜಿಯೋಫೋನ್‌ ನೆಕ್ಸ್ಟ್‌ ಬಿಡುಗಡೆ ಮಾಡಿದೆ. ಇದರ ಬೆಲೆಯು ಗ್ರಾಹಕರನ್ನು ಅಚ್ಚರಿಗೊಳಿಸಿದೆ. ಜಿಯೋಫೋನ್‌ ನೆಕ್ಸ್ಟ್‌ ಫೋನಿನ ಬೆಲೆಯು ಭಾರತದಲ್ಲಿ 6,499 ರೂ. ಆಗಿದೆ. ಅದಾಗ್ಯೂ ಗ್ರಾಹಕರಿಗೆ ಅನುಕೂಲ ಆಗಲೆಂದು ಸಂಸ್ಥೆಯು EMI ಅವಕಾಶ ಸಹ ಮಾಡಿಕೊಟ್ಟಿದೆ. ಗ್ರಾಹಕರು ಒಂದೇ ಬಾರಿ ಪೂರ್ಣ ಹಣ ಕೊಟ್ಟು ಖರೀದಿಸಬಹುದು. ಇಲ್ಲವೇ ಅನುಕೂಲಕರ EMI ಸೌಲಭ್ಯ ಪಡೆಯಬಹುದಾಗಿದೆ. ಈ ಫೋನ್ ಖರೀದಿಸುವ ಗ್ರಾಹಕರು ವಾಟ್ಸಾಪ್‌ ಮೂಲಕ ಸಹ ಮುಂಗಡ ಬುಕ್ಕಿಂಗ್ ಮಾಡಬಹುದು.

Best Mobiles in India

English summary
Reliance Jio offers emergency data loan packs of 1GB to its customers, which is visible in the company's MyJio app.to know more visit to kannada.gizbot.com.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+