ಭಾರತದಲ್ಲಿ ಮಕ್ಕಳ ಅಶ್ಲೀಲತೆ ಮತ್ತು ಅತ್ಯಾಚಾರದ ವೀಡಿಯೋಗಳು ಹರಡದಂತೆ ನೋಡಿಕೊಳ್ಳುವುದು ಹೇಗೆ?
ಭಾರತ ಸರ್ಕಾರವು ಮಕ್ಕಳ ಅತ್ಯಾಚಾರ ಮತ್ತು ಅಶ್ಲೀಲತೆಗೆ ಸಂಬಂಧಿಸಿದ ವೀಡಿಯೋಗಳು ಮತ್ತು ಫೋಟೋಗಳು ವೆಬ್ ಸೈಟ್ ಗಳಲ್ಲಿ ಮತ್ತು ಅಂತರ್ಜಾಲಗಳಲ್ಲಿ ಹರಡುವುದನ್ನು ತಡೆಯುವುದಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಇತ್ತೀಚೆಗೆ ಅಶ್ಲೀಲತೆಗೆ ಸಂಬಂಧಿಸಿದ 827 ವೆಬ್ ಸೈಟ್ ಗಳನ್ನು ಬ್ಯಾನ್ ಮಾಡಿರುವುದರ ಜೊತೆಗೆ ಸರ್ಕಾರವು ಅಶ್ಲೀಲತೆಯ ತಡೆಗಾಗಿ ಸಪರೇಟ್ ವೆಬ್ ಸೈಟ್ ನ್ನು ಕೂಡ ನಿರ್ಮಿಸಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಪೋಲೀಸ್ ಟ್ರೈನಿಂಗ್:
ಮೆಸೇಜಿಂಗ್ ಆಪ್ ಗಳಲ್ಲಿ ಅಶ್ಲೀಲತೆಗೆ ಸಂಬಂಧಿಸಿದ ವಿಚಾರವು ಹರಡುವುದನ್ನು ಟ್ಯಾಕಲ್ ಮಾಡುವುದಕ್ಕೆ ಸಂಬಂಧಿಸಿದಂತೆ ಭಾರತದಾದ್ಯಂತ ಎಲ್ಲಾ ಪೋಲೀಸರಿಗೆ ಟ್ರೈನಿಂಗ್ ನ್ನು ಕೂಡ ನೀಡಲಾಗಿದೆ.

ವೆಬ್ ಸೈಟ್ ನಿರ್ಮಾಣ:
ಗೃಹ ಸಚಿವಾಲಯವು ಇದಕ್ಕೆ ಸಂಬಂಧಿಸಿದಂತೆ ನಿರ್ಧಿಷ್ಟ ವೆಬ್ ಸೈಟ್ ನ್ನು ಕೂಡ ನಿರ್ಮಿಸಿದ್ದು ಅಲ್ಲಿ ದೂರುಗಳನ್ನು ಮತ್ತು ಇದಕ್ಕೆ ಸಂಬಂಧಿಸಿದ ವಿಚಾರವನ್ನು ವರದಿ ಮಾಡುವುದಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಿದೆ. ಒಂದು ವೇಳೆ ನೀವು ಕೂಡ ಇಂತಹ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಅಂದರೆ ಮಕ್ಕಳ ಅಶ್ಲೀಲತೆ/ಮಕ್ಕಳ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ವಸ್ತುಗಲು/ಲೈಂಗಿಕ ದೌರ್ಜನ್ಯ ಇಂತಹದ್ದನ್ನು ತಿಳಿದರೆ ನೀವೇನು ಮಾಡಬೇಕು ಈ ಕೆಳಗೆ ಇದೆ ನೋಡಿ.

ಮಕ್ಕಳ ಅಶ್ಲೀಲತೆಯನ್ನು, ರೇಪ್ ವೀಡಿಯೋಸ್ ಗಳ ಬಗ್ಗೆ ವರದಿ ಮಾಡುವುದು ಹೇಗೆ?
• www.cybercrime.gov.in ಭೇಟಿ ನೀಡಿ
• ಹೋಮ್ ಪೇಜ್ ನಲ್ಲಿರುವ "Report Your Complaint" ನಲ್ಲಿ "report anonymously" ನ್ನು ಸೆಲೆಕ್ಟ್ ಮಾಡಿ.
• ನೀವು ಒಂದು ಅರ್ಜಿಯನ್ನು ಭರ್ತಿ ಮಾಡಬೇಕು
• ಈ ಅರ್ಜಿಯಲ್ಲಿ ನೀವೆಲ್ಲಿ ನೋಡಿದ್ದೀರಿ ಮತ್ತು ಹೇಗೆ ಕಂಡುಹಿಡಿದಿರಿ ಎಂಬುದನ್ನು ಬರೆಯಬೇಕು
• ಈ ವೀಡಿಯೋವನ್ನು ಹರಡುತ್ತಿರುವುದು ಯಾರು ಎಂಬ ಬಗ್ಗೆ ಅನುಮಾನವಿದ್ದರೂ ತಿಳಿಸಿ
• ನೀವು ಹತ್ತಿರದ ಪೋಲೀಸ್ ಸ್ಟೇಷನ್ ನ್ನು ಆಯ್ಕೆ ಮಾಡಬೇಕು ಮತ್ತು ದೂರಿಗೆ ಸಂಬಂಧಿಸಿದ ವಿವರಗಳನ್ನು ಬರೆಯಿರಿ. (ಇದರಲ್ಲಿ ದಾಖಲಿಸಿದ ದೂರು ಸಂಬಂಧಪಟ್ಟ ರಾಜ್ಯದ ಪೋಲೀಸ್ ಸ್ಟೇಷನ್ನಿನ ಅಧಿಕಾರಿಗಳಿಂದ ಸ್ವೀಕರಿಸಲ್ಪಡುತ್ತದೆ/ ದೂರುದಾರ ನೀಡಿದ ದಾಖಲಾತಿಗಳ ಪ್ರಕಾರ ಈ ದೂರನ್ನು ಸ್ವೀಕರಿಸಿ ವಿಚಾರಣೆ ನಡೆಸಲಾಗುತ್ತದೆ.)

ದೂರು ನೀಡಿ,ಟ್ರ್ಯಾಕ್ ಮಾಡಿ:
ದೂರನ್ನು ವೆಬ್ ಸೈಟ್ ನಲ್ಲಿ ದಾಖಲಿಸಿ ನೀವದನ್ನು ಟ್ರ್ಯಾಕ್ ಮಾಡುವುದಕ್ಕೂ ಅವಕಾಶವಿರುತ್ತದೆ. ರಿಪೋರ್ಟ್ಸ್ ನ್ನು ಕ್ಲಿಕ್ ಮಾಡಿ ಮತ್ತು ಹೋಮ್ ಪೇಜ್ ನಲ್ಲಿರುವ "Report Your Complaint" ವಿಭಾಗದಲ್ಲಿ ಟ್ರ್ಯಾಕ್ ಆಯ್ಕೆ ಇರುತ್ತದೆ. ನೀವು ನಿಮ್ಮ ಮೊಬೈಲ್ ನಂಬರ್ ಮತ್ತು ಹೆಸರನ್ನು ದಾಖಲಿಸಿ ಅಕೌಂಟ್ ನ್ನು ಕ್ರಿಯೇಟ್ ಮಾಡಬೇಕಾಗುತ್ತದೆ. ನಂತರ ನಿಮಗೆ ಕಟೆಂಟ್ ನ್ನು ವರದಿ ಮಾಡಲು ಮತ್ತು ಅದರ ಪ್ರೊಗ್ರೆಸ್ ನ್ನು ಟ್ರ್ಯಾಕ್ ಮಾಡಲು ಅವಕಾಶವಿರುತ್ತದೆ.

1,30,000 ವಾಟ್ಸ್ ಆಪ್ ಅಕೌಂಟ್ ಬ್ಯಾನ್:
ET ವರದಿಯ ಪ್ರಕಾರ ಪ್ರತೀಕಾರದ ಅಶ್ಲೀಲತೆ,ಮಕ್ಕಳ ಅಶ್ಲೀಲತೆ,ಮಾಜಿ ಪಾಲುದಾರರಿಂದ ನಿಕಟವಾದ ಲೈಂಗಿಕ ಸಂಬಂಧವಿಲ್ಲದ ಚಿತ್ರಗಳ ಹಂಚಿಕೆಯನ್ನು ಸಾಮಾಜಿಕ ಮಾಧ್ಯಮ ಮತ್ತು ಚಾಟ್ ಆಪ್ ಗಳನ್ನು ಬಳಸಿ ಹಂಚಿಕೊಳ್ಳಲಾಗುತ್ತಿದ್ದು ಸಮಾಜಕ್ಕೆ ಮಾರಕವಾಗಿರುವ ಬೆಳವಣಿಗೆ ಇದಾಗಿದೆ. ವರದಿಯ ಪ್ರಕಾರ ವಾಟ್ಸ್ ಆಪ್ ನಲ್ಲಿ ಇದೀಗ ಅಂದಾಜು ಕೇವಲ 10 ದಿನಗಳಲ್ಲಿ 1,30,000 ಅಕೌಂಟ್ ಗಳನ್ನು ಬ್ಯಾನ್ ಮಾಡಲಾಗಿದೆ ಮತ್ತು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲಾ ಗ್ರೂಪ್ ಲಿಂಕ್ ಶೇರಿಂಗ್ ಆಪ್ಸ್ ಗಳನ್ನು ರಿಮೂವ್ ಮಾಡಲು ಸೂಚಿಸಲಾಗಿದೆ.


Click it and Unblock the Notifications








