ಬೇರೆಯವರಿಗೆ ತಿಳಿಯದಂತೆ ಅವರ ವಾಟ್ಸಾಪ್‌ ಸ್ಟೇಟಸ್‌ ಅನ್ನು ವೀಕ್ಷಿಸುವುದು ಹೇಗೆ?

|

ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಆಪ್‌ ವಾಟ್ಸಾಪ್‌. ಈಗಾಗಲೇ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ವಾಟ್ಸಾಪ್‌ ಸ್ಟೇಟಸ್‌ನಲ್ಲಿ ನಿಮ್ಮ ಸ್ಟೋರಿಗಳನ್ನ ಶೇರ್‌ ಮಾಡುವ ಅವಕಾಶವಿದೆ. ಈ ಸ್ಟೇಟಸ್‌ ಆಪ್ಡೇಟ್‌ 24 ಗಂಟೆಗಳವರೆಗೂ ಲಭ್ಯವಿರುತ್ತೆ. ಇನ್ನು ಈ ಸ್ಟೇಟಸ್‌ ಅನ್ನು ವೀಕ್ಷಿಸಿದವರನ್ನ ಸ್ಟೇಟಸ್‌ ಶೇರ್‌ ಮಾಡಿದವರು ನೋಡಬಹುದು. ಆದರೆ ಸ್ಟೇಟಸ್‌ ಹಾಕಿದವರಿಗೆ ನಮ್ಮ ಕಂಟ್ಯಾಕ್ಟ್‌ ಕಾಣದಂತೆ ಸ್ಟೇಟಸ್‌ ಅನ್ನು ವೀಕ್ಷಿಸುವ ಅವಕಾಶ ಕೂಡ ಇದೆ.

ವಾಟ್ಸಾಪ್

ಹೌದು, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸ್ಟೋರಿಗಳಂತೆ ವಾಟ್ಸಾಪ್ ಸ್ಟೇಟಸ್ ಕೂಡ ಕೆಲಸ ಮಾಡುತ್ತದೆ. ಇದು 24 ಗಂಟೆಗಳ ಕಾಲ ಇರುತ್ತದೆ ಮತ್ತು ಫೇಸ್‌ಬುಕ್ ಒಡೆತನದ ಇತರ ಪ್ಲ್ಯಾಟ್‌ಫಾರ್ಮ್‌ಗಳಲ್ಲಿನ ಸ್ಟೋರಿಗಳಂತೆ ನೀವು ಅನೇಕ ಸ್ಟೇಟಸ್‌ ಅಪ್ಡೇಟ್ಸ್‌ ಅನ್ನು ಸೇರಿಸಬಹುದು. ಇನ್‌ಸ್ಟಾಗ್ರಾಮ್‌ನಲ್ಲಿ ಅನುಸರಿಸುವವರಿಂದ ಕೆಲವು ವಿಷಯವನ್ನು ದೂರವಿರಿಸಲು ನೀವು ಬಯಸಿದರೆ ಅದಕ್ಕೂ ಅವಕಾಶವಿದೆ, ವಾಟ್ಸಾಪ್‌ಗೆ ಈ ಆಯ್ಕೆ ಇಲ್ಲ.

ವಾಟ್ಸಾಪ್‌ ಸ್ಟೇಟಸ್

ವಾಟ್ಸಾಪ್‌ ಸ್ಟೇಟಸ್‌ನಲ್ಲಿ ನೀವು ಒಂದನ್ನು ಪೋಸ್ಟ್ ಮಾಡಿದರೆ ವಾಟ್ಸಾಪ್‌ನಲ್ಲಿನ ಎಲ್ಲಾ ಸಂಪರ್ಕಗಳು ನಿಮ್ಮ ಸ್ಟೇಟಸ್‌ ಆಪ್ಡೇಟ್‌ ಅನ್ನು ನೋಡಬಹುದು. ಆದರೆ ನೀವು ಇನ್ನೊಬ್ಬರ ಸ್ಟೇಟಸ್‌ ನೋಡಿದರು ಅವರಿಗೆ ತಿಳಿಯದ ಹಾಗೇ ಮಾಡಲು ಒಂದು ಅವಕಾಶವಿದೆ ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ನೀವು ನಿಮ್ಮ ಸ್ನೇಹಿತರ ವಾಟ್ಸಾಪ್‌ ಸ್ಟೇಟಸ್‌ ನೋಡಿದರ ಅವರ ವಿವ್ಯೂ ಲಿಸ್ಟ್‌ನಲ್ಲಿ ನಿಮ್ಮ ಕಂಟ್ಯಾಕ್ಟ್‌ ಕಾಣಿಸಿಕೊಳ್ಳದ ಹಾಗೇ ಮಾಡಲು ಅವಕಾಶವಿದೆ. ಇದಕ್ಕಾಗಿ ವಾಟ್ಸಾಪ್‌ನಲ್ಲಿ ‘ರೀಡ್‌ ರೆಸಿಪ್ಟ್' ಆಯ್ಕೆಯನ್ನು ನೀಡಲಾಗಿದೆ. Reed receiptಅನ್ನು ಆಫ್ ಮಾಡುವ ಮೂಲಕ ನಿಮ್ಮ ಪ್ರೊಫೈಲ್ ಬೇರೊಬ್ಬರ ಸ್ಥಿತಿ ಪರಿಶೀಲಿಸಿದ-ಪಟ್ಟಿಗೆ ಬರದಂತೆ ನೋಡಿಕೊಳ್ಳಲು ನೀವು ಮಾಡಬಹುದಾಗಿದೆ. ಹಾಗಾದ್ರೆ ರೀಡ್‌ ರೆಸಿಪ್ಟ್‌ ಆಯ್ಕೆಯನ್ನು ಆಪ್‌ ಮಾಡುವುದು ಹೇಗೆ ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಬೇರೆಯವರಿಗೆ ತಿಳಿಯದಂತೆ ಅವರ ವಾಟ್ಸಾಪ್‌ ಸ್ಟೇಟಸ್‌ ಅನ್ನು ವೀಕ್ಷಿಸುವುದು ಹೇಗೆ?

ಬೇರೆಯವರಿಗೆ ತಿಳಿಯದಂತೆ ಅವರ ವಾಟ್ಸಾಪ್‌ ಸ್ಟೇಟಸ್‌ ಅನ್ನು ವೀಕ್ಷಿಸುವುದು ಹೇಗೆ?

ವಾಟ್ಸಾಪ್‌ನಲ್ಲಿ ಸೆಟ್ಟಿಂಗ್‌ಗಳಿಗೆ ಹೋಗಿ, ‘ಗೌಪ್ಯತೆ' ಕ್ಲಿಕ್ ಮಾಡಿ ಮತ್ತು ರೀಡ್ ರೆಸಿಪ್ಟ್‌ದಿಗಳನ್ನು ಆಫ್ ಮಾಡಿ. ಈಗ ನೀವು ಇನ್ನೊಬ್ಬರ ವಟ್ಸಾಪ್‌ ಸ್ಟೇಟಸ್‌ ಆಪ್ಡೇಟ್‌ ಅನ್ನು ಪರಿಶೀಲಿಸಿದರೆ, ಅವನು / ಅವಳು ಜನರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡಲು ಸಾಧ್ಯವಾಗುವುದಿಲ್ಲ.

ರೀಡ್ ರೆಸಿಪ್ಟ್

ನಿಮ್ಮ ಸಂದೇಶಗಳಿಂದ ಡಬಲ್ ಬ್ಲೂ ಟಿಕ್ ಅನ್ನು ತೆಗೆದುಹಾಕುವ ರೀಡ್ ರೆಸಿಪ್ಟ್‌ಗಳನ್ನು ಆಫ್ ಮಾಡುವಂತೆಯೇ, ಇದು ನಿಮ್ಮ ಎಲ್ಲಾ ಚಾಟ್‌ಗಳಿಗೂ ಕಣ್ಮರೆಯಾಗುತ್ತದೆ ಮತ್ತು ಇತರರು ನಿಮ್ಮ ಸಂದೇಶಗಳನ್ನು ಓದಿದ್ದಾರೆಯೇ ಇಲ್ಲವೇ ಅನ್ನುವುದು ಸಹ ಈಗ ನಿಮಗೆ ತಿಳಿಯುವುದಿಲ್ಲ.

ರೀಡ್ ರೆಸಿಪ್ಟ್

ಇನ್ನು ನೀವು ರೀಡ್ ರೆಸಿಪ್ಟ್‌ಗಳನ್ನು ಆಫ್ ಮಾಡಿದರೆ, ಎಲ್ಲರೂ ನಿಮ್ಮ ಆಪ್ಡೇಟ್‌ ಅನ್ನು ಯಾರು ಪರಿಶೀಲಿಸಿದ್ದಾರೆ ಎಂಬುದನ್ನು ನೋಡಲು ನಿಮಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ನೀವು ಯಾರೊಬ್ಬರ ಸ್ಥಿತಿಯನ್ನು ನೋಡಲು ಬಯಸಿದಾಗಲೆಲ್ಲಾ ಓದುವ ರಶೀದಿಗಳನ್ನು ಟಾಗಲ್ ಮಾಡುವುದು ಮತ್ತು ಅವರಿಗೆ ತಿಳಿಸದಿರುವುದು ಮತ್ತು 24 ಗಂಟೆಗಳ ನಂತರ ಅದನ್ನು ಆನ್ ಮಾಡುವುದು ಕೆಲಸಗಳನ್ನು ಮಾಡಬಹುದು. ಇಲ್ಲವೇ ನಿಮಗೆ ಯಾವಾಗ ಅವರಿಗೆ ತಿಳಿಯದಂತೆ ನೋಡಬೇಕು ಎನಿಸುವುದೊ ಆಗ ಈ ರೀತಿ ಮಾಡುವುದು ಒಳಿತು ಎನ್ನಬಹುದಾಗಿದೆ.

Most Read Articles
Best Mobiles in India

English summary
Here's How You Can See Other's WhatsApp Status Without Their Knowledge.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X