ಇನ್‌ಸ್ಟಾಗ್ರಾಮ್‌ನಲ್ಲಿರುವ ಈ ಅಚ್ಚರಿಯ ಫೀಚರ್ಸ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

|

ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಎಂದೆನಿಸಿಕೊಂಡಿದೆ. ಇನ್ನು ಬಳಕೆದಾರರ ಅನುಕೂಲಕ್ಕಾಗಿ ಇನ್‌ಸ್ಟಾಗ್ರಾಮ್‌ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಜೊತೆಗೆ ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದರಲ್ಲಿ ಹಲವು ಆಯ್ಕೆಯ ಫ್ರೈವೆಸಿ ಫೀಚರ್ಸ್‌ಗಳು ಕೂಡ ಸೇರಿವೆ. ಬಳಕೆದಾರರು ತಮ್ಮ ಖಾತೆಗಳ ಮೇಲೆ ಕಂಟ್ರೋಲ್‌ ಹೊಂದುವುದಕ್ಕೆ ಈ ಫೀಚರ್ಸ್‌ಗಳು ಅನುಕೂವಾಗಿವೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ಬಳಕೆದಾರರಿಗಾಗಿ ಹಲವು ಪ್ರೈವೆಸಿ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಿಂದ ನಿಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಅನಗತ್ಯ ಜನರನ್ನು ದೂರ ಇಡುವುದಕ್ಕೆ ಸಹಕಾರಿಯಾಗಲಿದೆ. ಅಲ್ಲದೆ ಅನಗತ್ಯ ಕಾಮೆಂಟ್‌ಗಳು ಮತ್ತು ಲೈಕ್ಸ್‌ಗಳನ್ನು ಹೈಡ್‌ ಮಾಡುವುದಕ್ಕೆ ಕೂಡ ಹಲವು ಫೀಚರ್ಸ್‌ಗಳು ಲಭ್ಯವಿದೆ. ಇದಲ್ಲದೆ ಇನ್‌ಸ್ಟಾಗ್ರಾಮ್‌ ಪ್ಲಾಟ್‌ಫಾರ್ಮ್‌ನಲ್ಲಿ ಯಾರು ನಿಮ್ಮನ್ನು ಟ್ಯಾಗ್ ಮಾಡಬಹುದು ಮತ್ತು ಮೆನ್ಶನ್‌ ಮಾಡಬಹುದು ಅನ್ನೊದನ್ನ ಕಂಟ್ರೋಲ್‌ ಮಾಡಬಹುದಾಗಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಅಕೌಂಟ್‌ ಅನ್ನು ಹೆಚ್ಚು ಸುರಕ್ಷಿತವಾಗಿಡಲು ಸಹಾಯ ಮಾಡುವ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಿರ್ಬಂಧಿತ ಖಾತೆಗಳು(Restricted accounts)

ನಿರ್ಬಂಧಿತ ಖಾತೆಗಳು(Restricted accounts)

ಇನ್‌ಸ್ಟಾಗ್ರಾಮ್‌ ಸೆಟ್ಟಿಂಗ್ಸ್‌ನಲ್ಲಿ "ನಿರ್ಬಂಧಿತ ಖಾತೆಗಳು" ಎಂಬ ಫೀಚರ್ಸ್‌ ಹೊಂದಿದೆ. ಈ ಫೀಚರ್ಸ್‌ ಅನ್ನು ಬಳಸಿ ನೀವು ಫಾಲೋ ಮಾಡದ ಯಾವುದೇ ವ್ಯಕ್ತಿಯನ್ನು ಕೂಡ ಬ್ಲಾಕ್‌ ಮಾಡಲು ಇದು ನಿಮಗೆ ಅನುಮತಿಸುತ್ತದೆ. ನೀವು ಅವರ ಖಾತೆಯನ್ನು ನಿರ್ಬಂಧಿಸಿದಾಗ ಅದು ತಿಳಿಯುವುದಿಲ್ಲ ಅನ್ನೊದು ಕೂಡ ಗಮನಾರ್ಹವಾಗಿದೆ. ಈ ಫೀಚರ್ಸ್‌ ಅನ್ನು ಆಕ್ಟಿವ್‌ ಮಾಡುವುದರಿಂದ ನೀವು ಆನ್‌ಲೈನ್‌ನಲ್ಲಿ ಇದ್ದರೂ ಕೂಡ ಬೇರೆಯವರಿಗೆ ತಿಳಿಯುವುದಿಲ್ಲ. ಅಲ್ಲದೆ ಅವರ ಸಂದೇಶಗಳನ್ನು ಓದಿದರೂ ಸಹ ಗೊತ್ತಾಗುವುದಿಲ್ಲ.

ಮೆನ್ಶನ್

ಮೆನ್ಶನ್

ಇನ್ನು ಇನ್‌ಸ್ಟಾಗ್ರಾಮ್‌ ಪ್ರೈವೆಸಿ ಸೆಟ್ಟಿoಗ್‌ನಲ್ಲಿ "ಮೆನ್ಶನ್‌" ಫೀಚರ್ಸ್‌ ಆಯ್ಕೆಯನ್ನು ಕೂಡ ಹೊಂದಿದೆ. ಇದರಲ್ಲಿ ಯಾರಾದರೂ ತಮ್ಮ ಸ್ಟೋರಿಸ್‌, ಕಾಮೆಂಟ್‌ಗಳು, ಲೈವ್ ವೀಡಿಯೊಗಳು ಮತ್ತು ಶೀರ್ಷಿಕೆಗಳಿಗೆ ನಿಮ್ಮನ್ನು ಮೆನ್ಶನ್‌ ಮಾಡುವುದನ್ನ ತಪ್ಪಿಸಲು ಉಪಯುಕ್ತವಾಗಿದೆ. ಇದರ ಮೂಲಕ ನಿಮ್ಮನ್ನು ಯಾವ ಕಾಮೆಂಟ್‌ ಕೂಡ ಮೆನ್ಶನ್‌ ಮಾಡದಂತೆ ತಡೆಯಬಹುದು. ಯಾರು ನಿಮ್ಮನ್ನು ಮೆನ್ಶನ್‌ ಮಾಡುವುದು ಇಷ್ಟವಿಲ್ಲವೂ ಅವರನ್ನು ಇದರಿಂದ ತಡೆಯುವುದಕ್ಕೆ ಅವಕಾಶವಿದೆ.

ರಿಮೂವ್ ಫಾಲೋವರ್ಸ್‌

ರಿಮೂವ್ ಫಾಲೋವರ್ಸ್‌

ಇದಲ್ಲದೆ ನಿಮಗೆ ಇಷ್ಟವಿಲ್ಲದ ಫಾಲೋವರ್ಸ್‌ಗಳನ್ನು ರಿಮೂವ್‌ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ನೀವು ನಿಮ್ಮ ಪ್ರೊಫೈಲ್‌ಗೆ ಭೇಟಿ ನೀಡಿ, ನಂತರ ನಿಮ್ಮ ಪ್ರೊಫೈಲ್ ಚಿತ್ರದ ಕೆಳಭಾಗದಲ್ಲಿ ಟ್ಯಾಪ್ ಮಾಡಿ. ಆಮೇಲೆ ನೀವು "ಫಾಲೋವರ್ಸ್" ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ಇದರಲ್ಲಿ ನೀವು ಅನುಯಾಯಿಗಳನ್ನು ತೆಗೆದುಹಾಕಲು ಬಯಸಿದರೆ, ನೀವು "ರಿಮೂವ್‌" ಬಟನ್ ಅನ್ನು ಟ್ಯಾಪ್ ಮಾಡಬಹುದು. ನೀವು ನಿಮ್ಮ ಫಾಲೋವರ್ಸ್‌ಗಳನ್ನು ತೆಗೆದು ಹಾಕಿದರೂ ಸಹ ಅವರಿಗೆ ತಿಳಿಯುವುದಿಲ್ಲ.

ಆಕ್ಟಿವಿಟಿ ಸ್ಟೇಟಸ್‌

ಆಕ್ಟಿವಿಟಿ ಸ್ಟೇಟಸ್‌

ಇನ್‌ಸ್ಟಾಗ್ರಾಮ್‌ನಲ್ಲಿ, ನೀವು ಸಕ್ರಿಯವಾಗಿರುವಾಗ ಅಥವಾ ಲಾಸ್ಟ್‌ ಸೀನ್‌ ಅನ್ನು ಬೇರೆಯವರು ನೋಡುವುದಕ್ಕೆ ಅವಕಾಶವಿದೆ. ಒಂದು ವೇಳೆ ನಿಮ್ಮ ಲಾಸ್ಟ್‌ ಸೀನ್‌ ಅನ್ನು ಬೇರೆಯವರು ನೋಡುವುದನ್ನು ತಡೆಯಬೇಕು ಅಂದುಕೊಂಡರೆ ಈ ಫೀಚರ್ಸ್‌ ಉಪಯುಕ್ತವಾಗಿದೆ. ಈ ಫೀಚರ್ಸ್‌ ಮೂಲಕ ನಿಮ್ಮ ಆಕ್ಟಿವಿಟಿ ಸ್ಟೇಟಸ್‌ ಅನ್ನು ಆಫ್ ಮಾಡುವ ಮೂಲಕ ನೀವು ಅದನ್ನು ಬದಲಾಯಿಸಬಹುದು.

ಲೈಕ್ಸ್‌ ಹೈಡ್‌ ಮಾಡಿ

ಲೈಕ್ಸ್‌ ಹೈಡ್‌ ಮಾಡಿ

ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಪೋಸ್ಟ್ ಮಾಡಿದ ನಂತರ ಕಾಮೆಂಟ್‌ಗಳನ್ನು ಆಫ್ ಮಾಡಲು ಮತ್ತು ಲೈಕ್‌ಗಳನ್ನು ಹೈಡ್‌ ಮಾಡಬಹುದಾಗಿದೆ. ಇದಕ್ಕಾಗಿ ನೀವು ಇನ್‌ಸ್ಟಾಗ್ರಾಮ್‌ ಪೋಸ್ಟ್‌ನ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಗಳ ಗುಂಡಿಯನ್ನು ನೀವು ಟ್ಯಾಪ್ ಮಾಡಬೇಕಾಗುತ್ತದೆ. ನಂತರ ನೀವು ಮೆನು ಪಡೆಯುತ್ತೀರಿ, ಇದರಲ್ಲಿ ನೀವು ಲೈಕ್ಸ್‌ ಮತ್ತು ಕಾಮೆಂಟ್‌ಗಳನ್ನು ಹೈಡ್‌ಮಾಡಲು ಆಯ್ಕೆಗಳನ್ನು ಕಾಣಬಹುದಾಗಿದೆ.

ಇನ್‌ಸ್ಟಾಗ್ರಾಮ್

ಇದಲ್ಲದೆ ಇನ್‌ಸ್ಟಾಗ್ರಾಮ್ ಇದೀಗ ಮತ್ತೊಂದು ಹೊಸ ಫೀಚರ್ಸ್‌ ಅನ್ನು ಪರೀಕ್ಷಿಸುತ್ತಿದೆ. ಅದು ಪ್ಲಾಟ್‌ಫಾರ್ಮ್ ಸ್ಥಗಿತ ಅಥವಾ ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿರುವಾಗ ಬಳಕೆದಾರರಿಗೆ ತಿಳಿಸುತ್ತದೆ ಎನ್ನಲಾಗಿದೆ. ಅಲ್ಲದೆ ಬಳಕೆದಾರರ ಆಕ್ಟಿವಿಟಿ ಫೀಡ್‌ಗಳಲ್ಲಿ ಅಧಿಸೂಚನೆಯು ನೇರವಾಗಿ ಕಾಣಿಸಿಕೊಳ್ಳುತ್ತದೆ. ಪ್ರತಿ ಬಾರಿ ಸ್ಥಗಿತಗೊಂಡಾಗ ಅದು ಅಧಿಸೂಚನೆಯನ್ನು ಕಳುಹಿಸುವುದಿಲ್ಲ ಎಂದು ಇನ್‌ಸ್ಟಾಗ್ರಾಮ್‌ ಹೇಳಿದೆ. ಆದರೆ ಬಳಕೆದಾರರು ಗೊಂದಲಕ್ಕೊಳಗಾಗಿದ್ದಾರೆ ಎಂದು ತಿಳಿದಾದ ನೊಟೀಫಿಕೇಶನ್‌ ಮೂಲಕ ವಿಷಯಗಳನ್ನು ಸ್ಪಷ್ಟಪಡಿಸುತ್ತದೆ.

Best Mobiles in India

English summary
Here’s instagram privacy features that you can enable right now to make your account more private.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X