ನೀವು ಕೂಡ ಇದೇ ಪಾಸ್‌ವರ್ಡ್ ಬಳಸ್ತಾ ಇದ್ದೀರಾ? ಈ ವರದಿಯನ್ನೊಮ್ಮೆ ನೋಡಿ!
ಇದು ಡಿಜಿಟಲ್ ಜಮಾನ, ಜನರು ಹೆಚ್ಚಿನ ಸಮಯವನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿಯೇ ಕಳೆಯುತ್ತಾರೆ. ಇನ್ನು ತಮ್ಮ ಆನ್‌ಲೈನ್ ಡೇಟಾ ರಕ್ಷಣೆಗಾಗಿ ವಿಧವಿಧವಾದ ಪಾಸ್‌ವರ್ಡ್‌ಗಳನ್ನು ಸೆಟ್ ಮಾಡುತ್ತಾರೆ. ಆದರೆ ಭಾರತದಲ್ಲಿ ಹೆಚ್ಚಿನ ಜನರು ಒಂದೇ ರೀತಿಯ ಪಾಸ್‌ವರ್ಡ್‌ಗಳನ್ನು ಬಳಸುತ್ತಾರೆ ಅನ್ನೊದು ವರದಿಯಲ್ಲಿ ಬಹಿರಂಗವಾಗಿದೆ.
ಹೌದು, ವಿಶ್ವ ಪಾಸ್‌ವರ್ಡ್ ದಿನವನ್ನಾಗಿ ಮೇ 4ರಂದು ಆಚರಿಸಲಾಗುತ್ತದೆ. ಇದೇ ಸಮಯದಲ್ಲಿ ಪಾಸ್‌ವರ್ಡ್‌ಗಳ ಬಳಕೆ, ಪಾಸ್‌ವರ್ಡ್‌ಗಳ ಸುರಕ್ಷತೆಯ ಬಗ್ಗೆ ವರದಿಮಾಡುವ ನಾರ್ಡ್‌ಪಾಸ್ ಅಚ್ಚರಿಯ ವಿಚಾರವೊಂದನ್ನು ಬಹಿರಂಗಪಡಿಸಿದೆ. ಸದ್ಯ NordPass ನ ವರದಿಯು 2022 ರಲ್ಲಿ ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಬಳಸಿದ ಪಾಸ್‌ವರ್ಡ್‌ಗಳ ಲಿಸ್ಟ್ ಅನ್ನು ಬಹಿರಂಗಪಡಿಸಿದೆ. ಹಾಗಾದ್ರೆ ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಾಗಿರುವ ಪಾಸ್‌ವರ್ಡ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪಾಸ್‌ವರ್ಡ್‌ಗಳ ಬಳಕೆ ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ. ನಿಮ್ಮ ಆನ್‌ಲೈನ್ ಅಕೌಂಟ್‌ಗಳ ಮಾಹಿತಿ ಬೇರೆಯವರ ಕೈಗೆ ದೊರೆಯದಂತೆ ಮಾಡುವಲ್ಲಿ ಪಾಸ್‌ವರ್ಡ್‌ಗಳ ಪಾತ್ರ ಮಹತ್ವದ್ದು, ಆದರೆ ಭಾರತದಲ್ಲಿ ಹೆಚ್ಚಿನ ಜನರು ಬಳಸುತ್ತಿರುವ ಪಾಸ್‌ವರ್ಡ್‌ಗಳು ಸುರಕ್ಷಿತವಾಗಿಲ್ಲ ಅನ್ನೊ ವಿಚಾರ ಬಹಿರಂಗವಾಗಿದೆ. ಅದರಲ್ಲೂ ಭಾರತೀಯರು ಬಳಸುತ್ತಿರುವ ಪಾಸ್‌ವರ್ಡ್‌ಗಳನ್ನು ಹ್ಯಾಕರ್‌ಗಳು ಕೇವಲ ಒಂದು ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಕ್ರ್ಯಾಕ್ ಮಾಡಬಹುದು ಎಂದು ವರದಿಯಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಬಳಸಲ್ಪಡುವ ಪಾಸ್‌ವರ್ಡ್‌ಗಳು!
* password
* 123456
* 12345678
* bigbasket
* 123456789
* pass@123
* 1234567890
* anmol123
* abcd1234
* googledummy
ಆತಂಕಕಾರಿ ವಿಚಾರವೆಂದರೆ ಈ ಮೇಲಿನ ಪಾಸ್‌ವರ್ಡ್‌ಗಳನ್ನು ಹ್ಯಾಕರ್‌ಗಳು ಕೇವಲ ಕೆಲವೇ ಸೆಕೆಂಡುಗಳಲ್ಲಿ ಕ್ರ್ಯಾಕ್‌ಮಾಡಬಹುದು ಎನ್ನಲಾಗಿದೆ. ಇನ್ನು ಕೂಡ ಅನೇಕರು ಹೆಚ್ಚಾಗಿ '12345' ಅಥವಾ '111111' ಅನ್ನು ತಮ್ಮ ಪಾಸ್‌ವರ್ಡ್‌ಗಳಾಗಿ ಬಳಸಲು ಆಯ್ಕೆ ಮಾಡುತ್ತಾರೆ. ಇದು ಹ್ಯಾಕರ್ಸ್‌ಗಳಿಗೆ ಹ್ಯಾಕ್ ಮಾಡಲು ಸುಲಭ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಆದರೆ ಹೆಚ್ಚಿನ ಜನರು ಸರಳ ಪಾಸ್‌ವರ್ಡ್‌ಗಳನ್ನು ಆಯ್ಕೆಮಾಡಲು ಒಲವು ತೋರುತ್ತಿದ್ದಾರೆ ಎಂದು ವರದಿಯಾಗಿದೆ. ಆದರಿಂದ ಬಳಕೆದಾರರು ಸ್ಟ್ರಾಂಗ್ ಪಾಸ್‌ವರ್ಡ್‌ಗಳನ್ನು ಕ್ರಿಯೆಟ್ ಮಾಡುವುದು ಸೂಕ್ತ ಎಂದು ಹೇಳಲಾಗಿದೆ.

ಸ್ಟ್ರಾಂಗ್ ಪಾಸ್‌ವರ್ಡ್ ಕ್ರಿಯೆಟ್ ಮಾಡುವುದು ಹೇಗೆ?
ಸಾಮಾನ್ಯವಾಗಿ ಹೆಚ್ಚಿನ ಜನರು ಪಾಸ್‌ವರ್ಡ್‌ಗಳನ್ನು ಕ್ರಿಯೆಟ್ ಮಾಡುವಾಗ ತಮ್ಮ ಹೆಸರು, ಜನ್ಮ ದಿನಾಂಕ, ತಮಗಿಷ್ಟವಾದವರ ಹೆಸರು, ಊರಿನ ಹೆಸರು, ಕುಟುಂಬ ಸದಸ್ಯರ ಹೆಸರಗಳನ್ನು ಬಳಸುತ್ತಾರೆ. ಆದರೆ ಈ ರೀತಿಯ ಪಾಸ್‌ವರ್ಡ್‌ಗಳು ಸೂಕ್ತವಲ್ಲ. ಬದಲಿಗೆ ನಿಮ್ಮ ಪಾಸ್‌ವರ್ಡ್‌ಗಳಿಗೆ ದೊಡ್ಡ ಅಕ್ಷರಗಳು, ಸಣ್ಣ ಅಕ್ಷರಗಳು, ಸಂಖ್ಯೆಗಳು ಮತ್ತು ಚಿಹ್ನೆಗಳನ್ನು ಬಳಸುವುದರಿಂದ ನಿಮ್ಮ ಪಾಸ್‌ವರ್ಡ್ ಸ್ಟ್ರಾಂಗ್ ಆಗಿರಲಿದೆ. ಅಂದ್ರೆ ಈ ಈ ರೀತಿಯ ಪಾಸ್‌ವರ್ಡ್‌ಗಳನ್ನು ಹ್ಯಾಕರ್‌ಗಳು ಕ್ರ್ಯಾಕ್ ಮಾಡುವುದಕ್ಕೆ ಸಾದ್ಯವಾಗುವುದಿಲ್ಲ. ಇದೇ ಕಾರಣಕ್ಕೆ ನಿಮ್ಮ ಪಾಸ್‌ವರ್ಡ್ ಕನಿಷ್ಠ 16 ಅಕ್ಷರಗಳನ್ನು ಒಳಗೊಂಡಿದ್ದರೆ ಬೆಸ್ಟ್ ಎಂದು ಹೇಳಲಾಗಿದೆ.

ಪಾಸ್‌ವರ್ಡ್ ಬಳಕೆಗೆ ನೀವು ಅನುಸರಿಸಬೇಕಾದ ಅಂಶಗಳು
ಪಾಸ್‌ವರ್ಡ್‌ಗಳನ್ನು ಬಳಸುವ ನಿಮ್ಮ ಅಕೌಂಟ್‌ಗಳಿಗೆ ಹೆಚ್ಚಿನ ರಕ್ಷಣೆಗಾಗಿ ಎರಡು ಅಂಶದ ದೃಢೀಕರಣವನ್ನು (2FA) ಬಳಸುವುದು ಸೂಕ್ತವಾಗಿದೆ. ಇದಲ್ಲದೆ ನೀವು ಬಳಸುತ್ತಿರುವ ಅಪ್ಲಿಕೇಶನ್‌ಗಳು ಅಧಿಕೃತ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಲಾಗಿದೆಯೇ ಅನ್ನೊದನ್ನು ಖಚಿತಪಡಿಸಿಕೊಳ್ಳಬೇಕು. ಇನ್ನು ನಿಮಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟ ಎನಿಸಿದರೆ ಪಾಸ್‌ವರ್ಡ್ ಮ್ಯಾನೇಜರ್ ಅನ್ನು ಬಳಕೆ ಮಾಡಿರಿ. ಇದರಿಂದ ನೀವು ಬಳಕೆ ಮಾಡುವ ಪ್ಲಾಟ್‌ಪಾರ್ಮ್‌ಗಳ ಪಾಸ್‌ವರ್ಡ್ ಸುಲಭವಾಗಿ ನಿಮಗೆ ಬಳಕೆಗೆ ಬರಲಿದೆ.


Click it and Unblock the Notifications








