ಈ ವರ್ಷ ಅತಿ ಹೆಚ್ಚು ಬಳಸಿದ ಎಮೋಜಿ ಯಾವುದು ಗೊತ್ತಾ?

|

ಇಂದಿನ ಡಿಜಿಟಲ್‌ ಪ್ರಪಂಚದಲ್ಲಿ ನಮ್ಮ ಭಾವೆನಗಳನ್ನು ವ್ಯಕ್ತಪಡಿಸುವುದಕ್ಕೂ ಹಲವು ಆಯ್ಕೆಗಳಿವೆ. ಅದರಲ್ಲೂ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಹಾಗೂ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ನಲ್ಲಿ ಎಮೋಜಿಗಳ ಪಾತ್ರ ದೊಡ್ಡದಾಗಿದೆ. ನಿಮ್ಮ ಸಂದೇಶಗಳಿಗಿಂತ ಎಮೋಜಿಗಳ ವ್ಯಕ್ತಪಡಿಸುವ ಭಾವೆನಗಳು ವೇವಾಗಿರುತ್ತದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಸಂಭಾಷಣೆಗಳನ್ನು ನಡೆಸುವಾಗ ಎಮೋಜಿಗಳನ್ನು ಬಳಸುತ್ತಾರೆ.

ಎಮೋಜಿ

ಹೌದು, ವಾಟ್ಸಾಪ್, ಟ್ವಿಟರ್, ಇನ್‌ಸ್ಟಾಗ್ರಾಮ್ ನಲ್ಲಿ ನಡೆಸುವ ಸಂಭಾಷಣೆಗಳಲ್ಲಿ ಎಮೋಜಿ ಪ್ರಮುಖ ಭಾಗವಾಗಿದೆ. ಬಳಕೆದಾರರು ಚಾಟ್ ಮಾಡುವಾಗ ಅಥವಾ ಸಂದೇಶ ಕಳುಹಿಸುವಾಗ ಎಮೋಜಿಯನ್ನು ಬಳಸುತ್ತಾರೆ. ಸಂದೇಶಗಳಿಗಿಂತ ಎಮೋಜಿಗಳು ತಮ್ಮ ಭಾವನೆಗಳನ್ನು ನಿಖರವಾಗಿ ತೋರಿಸಲಿವೆ ಅನ್ನೊದು ಎಲ್ಲರ ನಂಬಿಕೆ. ಇದೇ ಕಾರಣಕ್ಕೆ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ತಮ್ಮದೇ ಆದ ವಿವಿಧ ಅಭಿವ್ಯಕ್ತಿಗಳನ್ನು ಚಿತ್ರಿಸುವ ಹಲವಾರು ಎಮೋಜಿಗಳನ್ನು ಒದಗಿಸುತ್ತವೆ. ಹಾಗಾದ್ರೆ ಈ ವರ್ಷ ಹೆಚ್ಚಿನ ಜನರು ಯಾವ ಎಮೋಜಿಗಳನ್ನ ಬಳಸಿದ್ದಾರೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಎಮೋಜಿ

ಎಮೋಜಿಗಳನ್ನು ಜನರು ತಮ್ಮ ಭಾವನೆಗಳನ್ನು ಸುಲಭವಾಗಿ ಸಂವಹನ ಮಾಡಲು ಮತ್ತು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಬಳಸುತ್ತಾರೆ. ಈ ಎಮೋಜಿಗಳು ನಿಮ್ಮ ಕೋಪ, ಸಂತೋಷ, ಆಘಾತ ಅಥವಾ ಯಾವುದೇ ಮಾದರಿಯ ಭಾವನೆಯನ್ನು ಕೂಡ ಪ್ರತಿನಿಧಿಸುತ್ತದೆ. ಸದ್ಯ ವಿಶ್ವದ ಭಾಷೆಗಳನ್ನು ಡಿಜಿಟಲೀಕರಣಗೊಳಿಸುವ ಯುನಿಕೋಡ್ ಕನ್ಸೋರ್ಟಿಯಮ್ ಸಂಸ್ಥೆಯು 2021 ರಲ್ಲಿ ಹೆಚ್ಚಾಗಿ ಬಳಸುವ ಎಮೋಜಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಸಂಸ್ಥೆ ನೀಡಿರುವ ವರದಿಯ ಪ್ರಕಾರ, 2021 ರಲ್ಲಿ ಸಾಮಾನ್ಯವಾಗಿ ಬಳಸುವ ಎಮೋಜಿಯು ಸಂತೋಷದ ಕಣ್ಣೀರಿನ ಮುಖ ಹೊಂದಿರುವ ಎಮೋಜಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಲಾಗಿದೆ.

ಆನ್‌ಲೈನ್

ಇನ್ನು ಈ ವರದಿಯ ಪ್ರಕಾರ ವಿಶ್ವದ ಆನ್‌ಲೈನ್ ಜನಸಂಖ್ಯೆಯ ಶೇಕಡಾ 92 ರಷ್ಟು ಜನರು ಎಮೋಜಿಯನ್ನು ಬಳಸುತ್ತಾರೆ. ಅಲ್ಲದೆ, ಸಂತೋಷದ ಕಣ್ಣೀರು ಹೊಂದಿರುವ ಎಮೋಜಿಯನ್ನು ಈ ವಷ್ ಹೆಚ್ಚಿನ ಜನ ಬಳಸಿದ್ದು, ನಂತರದ ಸ್ಥಾನವನ್ನು ಕೆಂಪು ಹೃದಯದ ಎಮೋಜಿ ಪಡೆದುಕೊಂಡಿದೆ. ಇನ್ನುಳಿದಂತೆ ಸಂತೋಷದ ಕಣ್ಣೀರಿನ ಮುಖ, ಕೆಂಪು ಹೃದಯ, ನೆಲದ ಮೇಲೆ ನಗುವುದು, ಹೆಬ್ಬೆರಳುಗಳು, ಜೋರಾಗಿ ಅಳುವ ಮುಖ, ಮಡಚಿದ ಕೈಗಳು, ಮುತ್ತು ಊದುವ ಮುಖ, ಹೃದಯದಿಂದ ನಗುತ್ತಿರುವ ಮುಖ, ನಗುತ್ತಿರುವ ಮುಖ ಹೃದಯ ಕಣ್ಣುಗಳು ಮತ್ತು ನಗುತ್ತಿರುವ ಕಣ್ಣುಗಳೊಂದಿಗೆ ನಗುತ್ತಿರುವ ಮುಖ ಹೊಂದಿರುವ ಎಮೋಜಿಗಳ ಟಾಪ್‌ ಸ್ಥಾನ ಪಡೆದುಕೊಂಡಿವೆ.

ಎಮೋಜಿ

ಈ ವರ್ಷ ಎಮೋಜಿಗಳಲ್ಲಿ ಅಗ್ರಸ್ಥಾನದಲ್ಲಿರುವ ಎಮೋಜಿಗಳು ಹೆಚ್ಚು ಸಂತೋವನ್ನು ಸೂಚಿಸುವ ಎಮೋಜಿಗಳಾಗಿವೆ. ಆದರೂ ಕೂಡ ಕೊರೊನಾದಂತಹ ಕಾಲದಲ್ಲಿ ಹೆಚ್ಚಿನ ಜನರು ತಮ್ಮ ಭಾವೆನಗಳಲ್ಲಿ ಅಳುತ್ತಿರುವ ಮುಖದ ಎಮೋಜಿಗಳನ್ನು ಸಹ ಬಳಸಿದ್ದಾರೆ. ಉನ್ನತ ಶ್ರೇಣಿಯ ಎಮೋಜಿಗಳು ಅನೇಕ ಪರಿಕಲ್ಪನೆಗಳನ್ನು ಸ್ಥಿರವಾಗಿ ಪ್ರತಿನಿಧಿಸುತ್ತವೆ ಆದ್ದರಿಂದ ಅವುಗಳನ್ನು ವಿವಿಧ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ನಗು ಬಂದಾಗಲೂ, ಅಳು ಬಂದಾಗಲೂ, ಕೊನೆಗೆ ಸಿಟ್ಟು ಮಾಡಿಕೊಂಡರೂ ಸಹ ಎಲ್ಲರೂ ಎಮೊಜಿಗಳ ಮೂಲಕವೇ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಯುನಿಕೋಡ್

ಯುನಿಕೋಡ್ ವರದಿಯಲ್ಲಿ ತಿಳಿಸಿರುವಂತೆ 'ಸ್ಮೈಲೀಸ್ ಅಂಡ್ ಎಮೋಷನ್', 'ಪೀಪಲ್ ಮತ್ತು ಬಾಡಿ', 'ಚಟುವಟಿಕೆಗಳು', 'ಫ್ಲ್ಯಾಗ್‌ಗಳು' ಎಮೋಜಿಗಳು ವಿವಿಧ ವರ್ಗಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಮುಖ-ನಗುತ್ತಿರುವ ಮತ್ತು ಕೈಗಳಂತಹ ವಿಭಾಗಗಳು ಹೆಚ್ಚಾಗಿ ಬಳಸುವ ಎಮೋಜಿಗಳಲ್ಲಿ ಕೆಲವು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಏತನ್ಮಧ್ಯೆ, ಸಸ್ಯಗಳು ಮತ್ತು ಹೂವುಗಳ ಎಮೋಜಿಗಳನ್ನು ಸಹ ಆಗಾಗ್ಗೆ ಬಳಸಲಾಗುತ್ತಿತ್ತು ಮತ್ತು ಸಣ್ಣ ಉಪ-ಗುಂಪಾಗಿದ್ದರೂ ಸಹ 'ಪ್ರಾಣಿಗಳು ಮತ್ತು ಪ್ರಕೃತಿ' ವಿಭಾಗದಲ್ಲಿ ಪ್ರಾಬಲ್ಯ ಹೊಂದಿದೆ. ಇದಕ್ಕೆ ವ್ಯತಿರಿಕ್ತವಾಗಿ, ಧ್ವಜಗಳು ಅತಿ ದೊಡ್ಡ ವರ್ಗವಾಗಿದ್ದರೂ ಕಡಿಮೆ ಬಳಸಿದ ಎಮೋಜಿಯಾಗಿ ಗುರುತಿಸಿಕೊಂಡಿವೆ.

ಕ್ರೀಡೆ

ಇದಲ್ಲದೆ ಇನ್ನು ಕ್ರೀಡೆ ಮತ್ತು ಫಿಟ್ನೆಸ್, ಹವ್ಯಾಸಗಳು ಮತ್ತು ಚಟುವಟಿಕೆಗಳು, ಆಹಾರ ಮತ್ತು ಪಾನೀಯಗಳು, ಮೆಚ್ಚುಗೆ, ಪ್ರಕೃತಿ, COVID-19 ಸಾಂಕ್ರಾಮಿಕ ಸೇರಿದಂತೆ ಅನೇಕ ಎಮೋಜಿಗಳು ಟ್ರೆಂಡಿಂಗ್‌ನಲ್ಲಿ ಗುರುತಿಸಿಕೊಂಡಿವೆ. ಇನ್ನು ಆಯ್ಕೆ ಮಾಡಲು ಒಟ್ಟು 3,663 ಆಯ್ಕೆಗಳಲ್ಲಿ ಟಾಪ್ 100 ಎಮೋಜಿಗಳು ಇತರ ಎಮೋಜಿಗಳಿಗಿಂತ ಹೆಚ್ಚು ಜನಪ್ರಿಯವಾಗಿವೆ ಎಂದು ವರದಿಯು ಹೇಳಿದೆ. ಈ ಟಾಪ್ 100 ಎಮೋಜಿಗಳು 2021 ರಲ್ಲಿ ಶೇರ್‌ ಮಾಡಲಾದ ಎಲ್ಲಾ ಎಮೋಜಿಗಳಲ್ಲಿ ಶೇಕಡಾ 82ರಷ್ಟು ಪಾಲನ್ನುಪಡೆದುಕೊಂಡಿದೆ..

Most Read Articles
Best Mobiles in India

English summary
Emoji have become a major part of conversations held on social media platforms like WhatsApp, Twitter, Instagram etc.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X