ಐಟಿ ಉದ್ಯೋಗಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ!

|

ಭಾರತದ ಕೆಲವು ಐಟಿ ವೃತ್ತಿಪರರಿಗೆ ಕೆಲವು ಉತ್ತಮ ಸುದ್ದಿಗಳಿವೆ. ತಿಂಗಳ ವಿರಾಮದ ನಂತರ, ಈ ತಿಂಗಳ ಆರಂಭದಿಂದ ಮಾರ್ಚ್ 2019 ರ ವರೆಗೆ ಕೆಲವು ನೇಮಕಾತಿಗಳು ನಡೆಯಲಿವೆ ಎಂದು ಎಕ್ಸ್ಪೈರೀಸ್ ಐಟಿ ಉದ್ಯೋಗ ಔಟ್ ಲುಕ್ ಸಮೀಕ್ಷೆ ಹೇಳಿದೆ. ಈ ಸರ್ವೇಯಲ್ಲಿ ಸುಮಾರು ಭಾರತದಾದ್ಯಂತ 550 ಐಟಿ ಉದ್ಯೋಗದಾತರರನ್ನು ಒಳಗೊಂಡಿದೆ.ಮುಂದಿನ ಎರಡು ತ್ರೈಮಾಸಿಕದಲ್ಲಿ ಹಿಂದಿನ ಎರಡು ತ್ರೈಮಾಸಿಕಕ್ಕೆ ಹೋಲಿಸಿದರೆ ಹೆಚ್ಚಿನ ನೇಮಕಾತಿಗಳು ನಡೆಯಲಿದೆ ಎಂದು ಅಭಿಪ್ರಾಯವನ್ನು ಈ ಸರ್ವೇಯಲ್ಲಿ ವ್ಯಕ್ತ ಪಡಿಸಲಾಗಿದೆ.

ಕಳೆದೆರಡು ತಿಂಗಳಲ್ಲಿ ಭಾರತದಲ್ಲಿ ಐಟಿ ನೇಮಕಾತಿಯು ಇಳಿಮುಖವಾಗಿತ್ತು.ಆದರೆ ಮಾರ್ಚ್ 2019 ರ ಒಳಗೆ ಐಟಿ ನೇಮಕಾತಿ ಪ್ರಕ್ರಿಯೆಯಲ್ಲಿ ನಿಧಾನಗತಿಯ ಅಭಿವೃದ್ಧಿಯನ್ನು ಕಾಣಲು ಸಾಧ್ಯವಿದೆ. ನಾನ್-ಐಟಿ ಕಂಪೆನಿಗಳು ಐಟಿ ನೇಮಕಾತಿಯಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ ಎಂಬ ಅಭಿಪ್ರಾಯವನ್ನು ಮ್ಯಾನ್ ಪವರ್ ಗ್ರೂಪ್ ಇಂಡಿಯಾದ ಅಧ್ಯಕ್ಷರಾಗಿರುವ ಮನ್ಮೀತ್ ಸಿಂಗ್ ಅವರು ವ್ಯಕ್ತಪಡಿಸುತ್ತಾರೆ.

ಐಟಿ ಉದ್ಯೋಗಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ!

ಈ ಸಮೀಕ್ಷೆಯಲ್ಲಿ ಅಕ್ಟೋಬರ್ 2018 ರಿಂದ ಮಾರ್ಚ್ 2019 ರ ವರೆಗೆ 53% ಧನಾತ್ಮಕ ನಿವ್ವಳ ಅಭಿವೃದ್ಧಿಯ ಸೂಚ್ಯಂಕವನ್ನು ಒದಗಿಸುತ್ತದೆ. ಡಿಜಿಟಲ್ ರೂಪಾಂತರಕ್ಕಾಗಿ ತಂಡಗಳನ್ನು ರಚನೆ ಮಾಡುತ್ತಿರುವುದರಿಂದಾಗಿ ಐಟಿ ಅಲ್ಲದ ಕಂಪೆನಿಗಳು ಟೆಕ್ಕಿಗಳಿಗೆ ಹೆಚ್ಚಿನ ಬೇಡಿಕೆಗಳನ್ನು ನಡೆಸುತ್ತಿವೆ.

ನಾನ್-ಐಟಿ ಕಂಪೆನಿಗಳು 45% ನೇಮಕಾತಿಗಳನ್ನು ವಿಭಿನ್ನ ವಿಭಾಗಗಳಲ್ಲಿ ಮಾಡುತ್ತಿದೆ.ಸಾಫ್ಟ ವೇರ್ ಮತ್ತು ಟೆಸ್ಟಿಂಗ್ ಕಂಪೆನಿಗಳು ಇದರಲ್ಲಿ ಪ್ರಮುಖ ಪಾತ್ರದಾರಿಗಳಾಗಿದ್ದಾರೆ. ಹೊಸ ತಂತ್ರಜ್ಞಾನದ ಟ್ರೆಂಡ್ ಅನ್ನಿಸಿಕೊಂಡಿರುವ ಉದಾಹರಣೆಗೆ ಕೃತಕ ಬುದ್ಧಿಮತ್ತೆ, ಬ್ಲಾಕ್ ಚೈನ್ ಮತ್ತು ಸೈಬರ್ ಸೆಕ್ಯುರಿಟಿ ಮುಂತಾದವು ಸಾಂಪ್ರದಾಯಿಕ ಶೈಲಿಯ ಕೌಶಲ್ಯಗಳಿಂದ ಮಾರುಕಟ್ಟೆಯನ್ನು ಬದಲಾವಣೆ ಮಾಡಿ ಅಭಿವೃದ್ಧಿಯನ್ನು ವಿಭಿನ್ನ ರೂಪಕ್ಕೆ ತರುತ್ತಿದೆ.

ಯುಎಸ್ ನಲ್ಲಿ ವೀಸಾ ನಿರ್ಬಂಧದ ಕಾರಣದಿಂದಾಗಿ ಕಳೆದ ಕೆಲವು ತಿಂಗಳಿನ ಕುಸಿತದ ನಂತರ ಇದೀಗ ಪುನಃ ಐಟಿ ಕಂಪೆನಿಗಳು ನೇಮಕಾತಿಯನ್ನು ಪುನರ್ ಆರಂಭಿಸಿ ಹೊಸ ಬದಲಾವಣೆಗೆ ಸಜ್ಜಾಗುತ್ತಿದೆ.ಐಟಿ ಜಾಬ್ ಮಾರುಕಟ್ಟೆಯನ್ನು ಈಗಲೂ ಕೂಡ ಆಟೋಮೇಷನ್ ಆಳುತ್ತಿದೆ. ಹಾಗಾಗಿ ಹೆಚ್ಚು ವಿದ್ಯಾರ್ಹತೆ ಇರುವವರು ಮತ್ತು 0-5 ವರ್ಷ ಅನುಭವ ಇರುವವರನ್ನೇ ಇಂಡಸ್ಟ್ರಿ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ವರದಿ.

ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವವರು ಮತ್ತು ಹೆಚ್ಚು ಅನುಭವವಿರುವವರನ್ನು ಈಗಿನ ಕಂಪೆನಿಗಳು ಆಯ್ಕೆ ಮಾಡಿಕೊಳ್ಳುತ್ತಿದೆ. ಸಾಂಪ್ರದಾಯಿಕ ಕೌಂಟರ್ ಪಾರ್ಟ್ಸ್ ಗಳಿಗಿಂತ ಅಂತರ್ಜಾಲದ ವಿಷಯಗಳು, ಕೃತಕ ಬುದ್ಧಿಮತ್ತೆ, ವರ್ಚುವಲ್ ಮತ್ತು ಆರ್ಗ್ಯುಮೆಂಡೆಟ್ ರಿಯಾಲಿಟಿಗಳು ವೇಗವಾಗಿರುವುದನ್ನು ಸ್ವೀಕರಿಸುವವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ವರದಿ ತಿಳಿಸುತ್ತದೆ.

ಹಾರ್ಡ್ ವೇರ್ ಕಂಪೆನಿಗಳಿಗೆ ಹೋಲಿಸಿದರೆ ಸಾಫ್ಟ್ ವೇರ್ ಕಂಪೆನಿಗಳು 250 ಉದ್ಯೋಗಿಗಳಿಗಿಂತಲೂ ಹೆಚ್ಚಿನ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳಲು ಇಚ್ಛಿಸಿದೆ. ಆದರೆ ಬೇಡಿಕೆಯ ಮೇರೆಗೆ ನೇಮಕಾತಿಯನ್ನು ಮಾಡಲಾಗುತ್ತದೆ. ಐಟಿ ಅಲ್ಲದ ವಲಯಗಳಲ್ಲಿ ಯುಟಿಲಿಟಿ, ಹಣಕಾಸು,ಉತ್ಪಾದನೆ ಮತ್ತು ಚಿಲ್ಲರೆ ಕಂಪೆನಿಗಳು ನೇಮಕಾತಿಯನ್ನು ಹೆಚ್ಚು ಮಾಡುತ್ತಿದೆ. ಎಲ್ಲಾ ಕೆಲಸಕ್ಕೂ ಹೊಂದಿಕೊಳ್ಳುವ ಸಿಬ್ಬಂದಿಯನ್ನು ಕಂಪೆನಿಗಳು ಆಯ್ಕೆ ಮಾಡಿಕೊಳ್ಳುತ್ತಿದೆ.

Most Read Articles
Best Mobiles in India

English summary
There is some good news for India’s IT professionals. After months-long lull, hiring is set to pick up starting this month right up to March 2019. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more