ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾದ 43 ಇಂಚಿನ ಅತ್ಯುತ್ತಮ ಸ್ಮಾರ್ಟ್‌ಟಿವಿಗಳು!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಟಿವಿ ಮಾರುಕಟ್ಟೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಮುಂದುವರೆದ ಟೆಕ್ನಾಲಜಿಯ ಪರಿಣಾಮ ಸ್ಮಾರ್ಟ್‌ಟಿವಿಗಳು ಇಂದು ಮಲ್ಟಿ ಪಂಕ್ಷನ್‌ ಫೀಚರ್ಸ್‌ಗಳನ್ನು ಒಳಗೊಂಡಿವೆ. ಇದೇ ಕಾರಣಕ್ಕೆ ಟೆಕ್‌ ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳು ತಮ್ಮ ವೈವಿದ್ಯಮಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿವೆ. ಆದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರಾಂಡ್‌ಗಳ ಸ್ಮಾರ್ಟ್‌ಟಿವಿಗಳನ್ನೇ ಖರೀದಿಸುತ್ತಾರೆ. ಇನ್ನು ಸ್ಮಾರ್ಟ್‌ಟಿವಿ ಖರೀದಿಸುವಾಗ ಟಿವಿಯ ಗಾತ್ರದ ಜೊತೆಗೆ ಸ್ಮಾರ್ಟ್‌ಟಿವಿ ಒಳಗೊಂಡಿರುವ ಫೀಚರ್ಸ್‌ಗಳ ಬಗ್ಗೆ ಕೂಡ ಪರಿಗಣಿಸಬೇಕಾಗುತ್ತದೆ.

ಸ್ಮಾರ್ಟ್‌ಟಿವಿ

ಹೌದು, ಸ್ಮಾರ್ಟ್‌ಟಿವಿ ಖರೀದಿಸುವಾದ ಅನೇಕ ವಿಚಾರಗಳನ್ನು ಗಮನಿಸಬೇಕಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ 32 ಇಂಚಿನ ಟಿವಿ, 43 ಇಂಚಿನ ಟಿವಿ ಹಾಗೂ 55 ಇಂಚಿನ ಟಿವಿಗಳು ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಇದರ ಜೊತೆಗೆ ಹಲವು ಕಾರ್ಯಗಳನ್ನು ನಿರ್ವಹಿಸಬಲ್ಲ ಸ್ಮಾರ್ಟ್‌ಟಿವಿಗಳು ಹೆಚ್ಚು ಜನಪ್ರಿಯತೆಯನ್ನು ಪಡೆದಿವೆ. ಇದರಲ್ಲಿ 43 ಇಂಚಿನ ಟಿವಿಗಳು ಕೂಡ ಬೇಡಿಕೆ ಪಡೆದುಕೊಂಡಿವೆ. ಹಾಗಾದ್ರೆ ಭಾರತದಲ್ಲಿ ಲಭ್ಯವಿರುವ 43 ಇಂಚಿನ ಅತ್ಯುತ್ತಮ ಸ್ಮಾರ್ಟ್ ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ಬ್ರಾವಿಯಾ 43 ಇಂಚಿನ ಸ್ಮಾರ್ಟ್ LED TV

ಸೋನಿ ಬ್ರಾವಿಯಾ 43 ಇಂಚಿನ ಸ್ಮಾರ್ಟ್ LED TV

ಸೋನಿ ಬ್ರಾವಿಯಾ ಸ್ಮಾರ್ಟ್ LED TV ಮೂಲಬೆಲೆ 44,900ರೂ.ಆಗಿದೆ. ಸದ್ಯ ಈ ಸ್ಮಾರ್ಟ್‌ಟಿವಿ ಅಮೆಜಾನ್‌ ಸೇಲ್‌11% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ಈ ಸ್ಮಾರ್ಟ್‌ಟಿವಿಯನ್ನು ನೀವು ಕೇವಲ 39,990ರೂ.ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ HDR 10 ಬೆಂಬಲಿಸುವ 43 ಇಂಚಿನ ಫುಲ್‌ HD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೋಷನ್ ಫ್ಲೋ XR ಟೆಕ್ನಾಲಜಿಯನ್ನು ಒಳಗೊಂಡಿದೆ. ಇದು ಫಾಸ್ಟ್‌ ಮೂವಿಂಗ್‌ನಲ್ಲಿಯೂ ಸಹ ತೀಕ್ಷ್ಣವಾದ ವಿವರಗಳನ್ನು ನೀಡುತ್ತದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ಡಾಲ್ಬಿ ಆಡಿಯೊ ಸೌಂಡ್‌ ಬೆಂಬಲಿಸುವ 20 ವ್ಯಾಟ್ ಓಪನ್ ಬ್ಯಾಫಲ್ ಸ್ಪೀಕರ್‌ ಹೊಂದಿದೆ. ಇದಲ್ಲದೆ ಪ್ರಮುಖ OTT ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳಿಗೆ ಪ್ರವೇಶವನ್ನು ನೀಡಲಿದೆ.

ಮಿ ಟಿವಿ 4C ಫುಲ್‌ ಹೆಚ್‌ಡಿ ಆಂಡ್ರಾಯ್ಡ್ LED ಟಿವಿ

ಮಿ ಟಿವಿ 4C ಫುಲ್‌ ಹೆಚ್‌ಡಿ ಆಂಡ್ರಾಯ್ಡ್ LED ಟಿವಿ

ಮಿ ಟಿವಿ 4C ಫುಲ್‌ ಹೆಚ್‌ಡಿ ಆಂಡ್ರಾಯ್ಡ್‌ ಎಲ್‌ಇಡಿ ಟಿವಿ ಅಮೆಜಾನ್‌ ಸೇಲ್‌ನಲ್ಲಿ 26% ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಸ್ಮಾರ್ಟ್‌ಟಿವಿ ಮೂಲಬೆಲೆ 34,999ರೂ ಆಗಿದ್ದು, ಸದ್ಯ ಡಿಸ್ಕೌಂಟ್‌ನಲ್ಲಿ 25,999.ರೂ ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 43 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 178-ಡಿಗ್ರಿ ವ್ಯೂ ಆಂಗಲ್‌ ಮತ್ತು 6.5ms ಡೈನಾಮಿಕ್ ರೆಸ್ಪಾನ್ಸ್‌ ಅನ್ನು ನೀಡಲಿದೆ. ಇದು ಕ್ವಾಡ್-ಕೋರ್ ಅಮ್ಲಾಜಿಕ್ ಕಾರ್ಟೆಕ್ಸ್-A53 ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ ಟಿವಿ ಆಧಾರಿತ ಪ್ಯಾಚ್‌ವಾಲ್ 4.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 1GB RAM ಮತ್ತು 8GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

ಒನ್‌ಪ್ಲಸ್‌ Y ಸರಣಿ ಆಂಡ್ರಾಯ್ಡ್‌ TV 43Y1

ಒನ್‌ಪ್ಲಸ್‌ Y ಸರಣಿ ಆಂಡ್ರಾಯ್ಡ್‌ TV 43Y1

ಒನ್‌ಪ್ಲಸ್‌ ಕಂಪೆನಿಯ ಈ ಸ್ಮಾರ್ಟ್‌ಟಿವಿ ಅಮೆಜಾನ್‌ ಸೇಲ್‌ನಲ್ಲಿ 13% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ 29,999.ರೂ. ಮೂಲಬೆಲೆಯ ಈ ಸ್ಮಾರ್ಟ್‌ಟಿವಿ ನಿಮಗೆ ಕೇವಲ 25,999ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಒನ್‌ಪ್ಲಸ್‌ Y ಸರಣಿಯ ಈ ಸ್ಮಾರ್ಟ್‌ಟಿವಿ ಫುಲ್‌ HD ರೆಸಲ್ಯೂಶನ್ ಮತ್ತು 60Hz ರಿಫ್ರೆಶ್ ರೇಟ್‌ ಒಳಗೊಂಡ 43-ಇಂಚಿನ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ ಇದರಲ್ಲಿ ನಿಮ್ಮ ವೀಕ್ಷಣೆಯ ಅನುಭವವನ್ನು ಹೆಚ್ಚಿಸಲು ರಿಯಲ್‌ ಟೈಂನಲ್ಲಿ ವೀಡಿಯೊ ಸಬ್ಜೆಕ್ಟ್‌ ಆಪ್ಟಿಮೈಸ್ ಮಾಡುವ ಗಾಮಾ ಎಂಜಿನ್‌ ಅನ್ನು ನೀಡಲಾಗಿದೆ. ಜೊತೆಗೆ ಇದು ಡಾಲ್ಬಿ ಆಡಿಯೊ ಬೆಂಬಲದೊಂದಿಗೆ 20W ಬಾಕ್ಸ್ ಸ್ಪೀಕರ್‌ಗಳನ್ನು ಹೊಂದಿದೆ ಮತ್ತು ಆಂಡ್ರಾಯ್ಡ್ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತದೆ.

LG 43 ಇಂಚಿನ ಸ್ಮಾರ್ಟ್ LED ಟಿವಿ

LG 43 ಇಂಚಿನ ಸ್ಮಾರ್ಟ್ LED ಟಿವಿ

LG ಸ್ಮಾರ್ಟ್ LED ಟಿವಿ ಅಮೆಜಾನ್‌ ಸೇಲ್‌‌ನಲ್ಲಿ 25% ಡಿಸ್ಕೌಂಟ್‌ ಪಡೆದುಕೊಂಡಿದೆ. ಸದ್ಯ 43,990ರೂ.ಮೂಲ ಬೆಲೆಯ ಈ ಸ್ಮಾರ್ಟ್‌ಟಿವಿ ನಿಮಗೆ ಕೇವಲ 32,999ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಡೈನಾಮಿಕ್ ಕಲರ್‌ ವರ್ಧಕ ಟೆಕ್ನಾಲಜಿಯನ್ನು ಒಳಗೊಂಡ 43 ಇಂಚಿನ ಫುಲ್‌ HD ಡಿಸ್ಪ್ಲೇಯನ್ನು ಹೊಂದಿದೆ. ಇದು ಉತ್ಕೃಷ್ಟ ಮತ್ತು ನೈಸರ್ಗಿಕ ಚಿತ್ರಗಳನ್ನು ನೀಡಲು ಕಲರ್‌ ಸೆಟ್‌ ಮಾಡಲು ಅಪ್ಡೇಟ್‌ ಇಮೇಜ್ ಪ್ರೊಸೆಸರ್ ಅನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ಡಿಟಿಎಸ್ ವರ್ಚುವಲ್ ಎಕ್ಸ್ ಬೆಂಬಲಿಸುವ 20 ವ್ಯಾಟ್ ಸ್ಪೀಕರ್‌ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿ ಕ್ವಾಡ್-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು ಸಕ್ರಿಯ HDR ಬೆಂಬಲದೊಂದಿಗೆ ಬರುತ್ತದೆ.

ಕೊಡಾಕ್ 43-ಇಂಚಿನ 4K ಆಂಡ್ರಾಯ್ಡ್‌ LED ಟಿವಿ

ಕೊಡಾಕ್ 43-ಇಂಚಿನ 4K ಆಂಡ್ರಾಯ್ಡ್‌ LED ಟಿವಿ

ಕೊಡಾಕ್ 4K ಆಂಡ್ರಾಯ್ಡ್ LED TV ಅಮೆಜಾನ್‌ ಸೇಲ್‌‌ನಲ್ಲಿ 32% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ 33,999ರೂ ಮೂಲಬೆಲೆ ಹೊಂದಿರುವ ಈ ಸ್ಮಾರ್ಟ್‌ಟಿವಿ ನಿಮಗೆ 22,999ರೂ ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 43 ಇಂಚಿನ 4K UHD IPS ಡಿಸ್‌ಪ್ಲೇಯನ್ನು ಹೊಂದಿದೆ. ಇದು ಬ್ರೈಟ್‌ನೆಸ್‌ ಮತ್ತು ಎದ್ದುಕಾಣುವ ಚಿತ್ರ ಗುಣಮಟ್ಟ ಹಾಗೂ ಕಾಂಟ್ರಾಸ್ಟ್ ಅನ್ನು ನೀಡುತ್ತದೆ. ಇನ್ನು ಈ ಟಿವಿ ಕ್ವಾಡ್-ಕೋರ್ ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ನಿಮಗೆ ಅನುಮತಿಸುವ ಕಂಟೆಂಟ್ ಸ್ಟೋರ್‌ನೊಂದಿಗೆ ಬರುತ್ತದೆ. ಇದು ಎರಡು HDMI ಪೋರ್ಟ್‌ಗಳು ಮತ್ತು ಸಂಪರ್ಕಕ್ಕಾಗಿ ಒಂದು USB ಪೋರ್ಟ್‌ನೊಂದಿಗೆ ಬರುತ್ತದೆ.

Vu 43PM ಅಲ್ಟ್ರಾ HD ಆಂಡ್ರಾಯ್ಡ್ LED ಟಿವಿ

Vu 43PM ಅಲ್ಟ್ರಾ HD ಆಂಡ್ರಾಯ್ಡ್ LED ಟಿವಿ

Vu 43PM ಹೆಚ್‌ಡಿಆರ್‌10 ಟಿವಿ ಕೂಡ ನೀವು ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಟಿವಿಗಳಲ್ಲಿ ಒಂದಾಗಿದೆ. ಈ ಸ್ಮಾರ್ಟ್‌ಟಿವಿ HLG ಬೆಂಬಲಿಸುವ 43 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 2GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದ್ದು, 64-ಬಿಟ್ ಕ್ವಾಡ್-ಕೋರ್ ಪ್ರೊಸೆಸರ್‌ ಬೆಂಬಲಿಸಲಿದೆ. ಇದು Android 9.0 Pie ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಡಾಲ್ಬಿ ಆಡಿಯೋ ಮತ್ತು ಟ್ರೂಬಾಸ್‌ HDX ಬೆಂಬಲಿಸುವ 30W ಸ್ಪೀಕರ್ ಅನ್ನು ಹೊಂದಿದೆ.

Most Read Articles
Best Mobiles in India

English summary
While a 32-inch TV may be too small for you and a 55-inch TV may be too big, a 43-inch TV hits the sweet spot.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X