2021 ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಗ್ಯಾಜೆಟ್ಸ್‌ಗಳು!

|

ಇನ್ನು ಕೆಲವು ದಿನಗಳಲ್ಲಿ 2021ಕ್ಕೆ ಗುಡ್‌ ಬೈ ಹೇಳಿ 2022ಕ್ಕೆ ಹಾಯ್‌ ಹೇಳುವುದಕ್ಕೆ ಇಡೀ ವಿಶ್ವವೇ ಸಿದ್ದವಾಗಿದೆ. ಇನ್ನು ಈ ಒಂದು ವರ್ಷದಲ್ಲಿ ಸಾಕಷ್ಟು ಘಟನೆಗಳು ನಡೆದಿವೆ. 2019ರ ವರ್ಷಾಂತ್ಯದಲ್ಲಿ ಶರುವಾದ ಕೊರೊನಾ ಮಹಾಮಾರಿ ಈ ವರ್ಷವೂ ಕೂಡ ಮುಂದವರೆದಿದೆ. ಇದರ ನಡುವೆಯೂ ಹಲವು ವಲಯಗಳು ಚೇತರಿಕೆ ಕಾಣುವ ಪ್ರಯತ್ನ ನಡೆಸಿವೆ. ಅದರಂತೆ 2021ರಲ್ಲಿ ಟೆಕ್‌ ವಲಯದಲ್ಲಿ ಸಾಕಷ್ಟು ಹೊಸ ಗ್ಯಾಜೆಟ್ಸ್‌ಗಳು ಎಂಟ್ರಿ ನೀಡಿವೆ. ಹೊಸ ತಂತ್ರಜ್ಞಾನದ ಜೊತೆಗೆ ಹೊಸ ಸ್ವರೂಪದಲ್ಲಿ ಎಂಟ್ರಿ ನೀಡಿದ ಗ್ಯಾಜೆಟ್ಸ್‌ಗಳು ಸಾಕಷ್ಟು ಸೌಂಡ್‌ ಮಾಡಿವೆ.

ಗ್ಯಾಜೆಟ್ಸ್‌ಗಳು

ಹೌದು, 2021ನೇ ವರ್ಷದ ಅಂತಿಮ ಘಟ್ಟದಲ್ಲಿ ನಾವಿದ್ದೇವೆ. ಈ ಒಂದು ವರ್ಷದ ಅವಧಿಯಲ್ಲಿ ಏನೆಲ್ಲಾ ನೆದಿದೆ ಅನ್ನೊದನ್ನ ನೆನಪು ಮಾಡಿಕೊಳ್ಳುವ ಸಮಯ ಇದಾಗಿದೆ. ಸದ್ಯ ಟೆಕ್‌ ವಲಯದಲ್ಲಿ ಈ ವರ್ಷ ಅನೇಕ ಗ್ಯಾಜೆಟ್ಸ್‌ಗಳು ಬಿಡುಗಡೆ ಆಗಿವೆ. ಕೊರೊನಾ ಮಹಾಮಾರಿಯಿಂದ ಮನೆಯಿಂದಲೇ ಕಾರ್ಯನಿರ್ವಹಿಸುವವರಿಗಾಗಿ ಹೊಸ ಮಾದರಿಯ ಲ್ಯಾಪ್‌ಟಾಪ್‌ಗಳು, ಮಕ್ಕಳಿಗಾಗಿ ವಿಶೇಷ ಟ್ಯಾಬ್‌ಗಳು ಎಂಟ್ರಿ ನೀಡಿರೋದು ವಿಶೇಷ. ಹಾಗಾದ್ರೆ 2021ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಗ್ಯಾಜೆಟ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಮ್ಯಾಕ್‌ M1

ಐಮ್ಯಾಕ್‌ M1

ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಗ್ಯಾಜೆಟ್ಸ್‌ಗಳಲ್ಲಿ ಹೊಸ ಆಪಲ್‌ ಐಮ್ಯಾಕ್‌ ಕೂಡ ಒಂದಾಗಿದೆ. ಇದು ಆಲ್-ಇನ್-ಒನ್ ಡೆಸ್ಕ್‌ಟಾಪ್ ಕಂಪ್ಯೂಟರ್ ಆಗಿದ್ದು 24 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಆಪಲ್‌ ಐಮ್ಯಾಕ್‌ 24 4480x2520 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 24 ಇಂಚಿನ 4.5K ರೆಟಿನಾ ಡಿಸ್‌ಪ್ಲೇ ಹೊಂದಿದೆ. M1 ಆಧಾರಿತ ಐಮ್ಯಾಕ್ ಹೊಚ್ಚ ಹೊಸ ವಿನ್ಯಾಸವನ್ನು ಹೊಂದಿದೆ. ಮುಂಭಾಗದಲ್ಲಿ ಡಿಸ್ಟ್ರಕ್ಷನ್‌-ಫ್ರೀ-ಮ್ಯೂಟೆಡ್‌ ಕಲರ್‌ ಮತ್ತು ಹಿಂಭಾಗದಲ್ಲಿ ಬ್ರೈಟ್‌ನೆಸ್‌ ಕಲರ್‌ ಅನ್ನು ಒಳಗೊಂಡಿದೆ. ಐಮ್ಯಾಕ್‌ನಲ್ಲಿ 1080p ವೆಬ್‌ಕ್ಯಾಮ್ ಅನ್ನು ನೀಡಲಾಗಿದೆ. ಇದು ಫೇಸ್‌ ಡಿಟೆಕ್ಷನ್‌ ಮತ್ತು ಬೆಟರ್‌ ಎಕ್ಸಪೋಸರ್‌ ಮತ್ತು ಕಲರ್‌ ಬ್ಯಾಲೆನ್ಸ್‌ಗಾಗಿ M1 ನ್ಯೂರಲ್‌ ಇಂಜಿನ್‌ ಸಹಾಯ ಮಾಡಲಿದೆ.

ಆಪಲ್‌ 16-ಇಂಚಿನ ಮ್ಯಾಕ್‌ಬುಕ್ ಪ್ರೊ

ಆಪಲ್‌ 16-ಇಂಚಿನ ಮ್ಯಾಕ್‌ಬುಕ್ ಪ್ರೊ

2021 ರಲ್ಲಿ ಬಿಡುಗಡೆಯಾದ ಪ್ರಮುಖ ಗ್ಯಾಜೆಟ್ಸ್‌ಗಳಲ್ಲಿ 16-ಇಂಚಿನ ಮ್ಯಾಕ್‌ಬುಕ್ ಪ್ರೊ ಕೂಡ ಒಂದಾಗಿದೆ. 16-ಇಂಚಿನ ಈ ಮ್ಯಾಕ್‌ಬುಕ್ ಪ್ರೊ ಭಾರೀ ಕಂಪ್ಯೂಟಿಂಗ್ ಕಾರ್ಯಗಳಿಗೆ ಸಾಕಷ್ಟು ಶಕ್ತಿಯುತವಾಗಿದೆ. 16 ಇಂಚಿನ ಮಾಡೆಲ್‌ 7.7 ಮಿಲಿಯನ್ ಪಿಕ್ಸೆಲ್‌ ಸಾಮರ್ಥ್ಯದ 16.2 ಇಂಚಿನ ಏರಿಯಾವನ್ನು ಹೊಂದಿದೆ ಎಂದು ಆಪಲ್ ಹೇಳಿಕೊಂಡಿದೆ. ಇನ್ನು ಈ ಡಿಸ್‌ಪ್ಲೇ ಮಿನಿ-ಎಲ್ಇಡಿ ಟೆಕ್ನಾಲಜಿ ಜೊತೆಗೆ ಲಿಕ್ವಿಡ್ ರೆಟಿನಾ ಎಕ್ಸ್‌ಡಿಆರ್ ಯನ್ನು ಒಳಗೊಂಡಿದೆ. ಇನ್ನು ಈ ಹೊಸ ಡಿಸ್‌ಪ್ಲೇ ಟೆಕ್ನಾಲಜಿ 1,000 ನಿಟ್ಸ್‌ ಫುಲ್‌-ಸ್ಕ್ರೀನ್‌ ಬ್ರೈಟ್‌ನೆಸ್‌, 1,600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಮತ್ತು 1,000,000:1 ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿದೆ. ಮ್ಯಾಕ್‌ಬುಕ್ ಪ್ರೊ ಮಾಡೆಲ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ v5.0 ಮತ್ತು ವೈ-ಫೈಯನ್ನು ಬೆಂಬಲಿಸಲಿದೆ. ಬಳಕೆದಾರರು M1 ಮ್ಯಾಕ್ಸ್ ಆಧಾರಿತ ಮ್ಯಾಕ್‌ಬುಕ್ ಪ್ರೊನಲ್ಲಿ ಏಕಕಾಲದಲ್ಲಿ ಮೂರು ಪ್ರೊ ಡಿಸ್‌ಪ್ಲೇ ಎಕ್ಸ್‌ಡಿಆರ್‌ಗಳು ಮತ್ತು 4 ಕೆ ಟಿವಿಯನ್ನು ಸಂಪರ್ಕಿಸಬಹುದು.

ಡೆಲ್‌ XPS 13

ಡೆಲ್‌ XPS 13

ಈ ವರ್ಷ ಬಿಡುಗಡೆಯಾದ ಪ್ರಮುಖ ಲ್ಯಾಪ್‌ಟಾಪ್‌ಗಳಲ್ಲಿ ಡೆಲ್‌ XPS 13 ಲ್ಯಾಪ್‌ಟಾಪ್‌ ಕೂಡ ಒಂದಾಗಿದೆ. ಇದು ಬೆಜೆಲ್-ಫ್ರೀ 16:10 ಡಿಸ್ಪ್ಲೇ ಹೊಂದಿದೆ. ಇದರಲ್ಲಿ ವೆಬ್ ಬ್ರೌಸಿಂಗ್‌ನಿಂದ ಲೈಟ್ ವೀಡಿಯೋ ಎಡಿಟಿಂಗ್ ಎಲ್ಲವನ್ನೂ ನಿಭಾಯಿಸಬಹುದು. ಈ ಲ್ಯಾಪ್‌ಟಾಪ್‌ 720p ವೆಬ್‌ಕ್ಯಾಮ್ ಅನ್ನು ಹೊಂದಿದ್ದು, ವಿಶೇಷ ವಿನ್ಯಾಸವನ್ನು ಪಡೆದುಕೊಂಡಿದೆ.

ಹೆಚ್‌ಪಿ ಪೆವಿಲಿಯನ್ ಏರೋ 13

ಹೆಚ್‌ಪಿ ಪೆವಿಲಿಯನ್ ಏರೋ 13

ಹೆಚ್‌ಪಿ ಪೆವಿಲಿಯನ್ ಏರೋ 13 ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಅಲ್ಟ್ರಾಥಿನ್ ಮತ್ತು ಲೈಟ್ ವಿಂಡೋಸ್ ಲ್ಯಾಪ್‌ಟಾಪ್‌ಗಳಲ್ಲಿ ಒಂದಾಗಿದೆ. ವರ್ಕ್‌ ಪ್ರಂ ಹೋಮ್‌ ಮಾಡುವವರಿಗೆ ಇದು ಸೂಕ್ತವಾದ ಲ್ಯಾಪ್‌ಟಾಪ್‌ ಆಗಿದೆ. ಇದು ಮೆಗ್ನೀಸಿಯಮ್-ಅಲ್ಯೂಮಿನಿಯಂ ಚಾಸಿಸ್, ದೀರ್ಘ ಬ್ಯಾಟರಿ ಬಾಳಿಕೆಯಂತಹ ಫೀಚರ್ಸ್‌ಗಳನ್ನು ಪಡೆದಿದೆ. ಈ ಲ್ಯಾಪ್‌ಟಾಪ್‌ AMD Ryzen 5 5600U ಪ್ರೊಸೆಸರ್‌ ಹೊಂದಿರುವುದು ವಿಶೇಷವಾಗಿದೆ.

ಐಪ್ಯಾಡ್ ಮಿನಿ

ಐಪ್ಯಾಡ್ ಮಿನಿ

ಇನ್ನು ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಟ್ಯಾಬ್‌ಗಳಲ್ಲಿ ಐಪ್ಯಾಡ್‌ ಮಿನಿ 6 ಅನ್ನು ಕೂಡ ಒಂದು. ಇದು ನೋಡುವುದಕ್ಕೆ ಥೇಟ್‌ ಐಪ್ಯಾಡ್ ಏರ್ 4 ಮಾದರಿಯಂತೆಯೆ ಕಾಣುತ್ತದೆ. ಇನ್ನು ಐಪ್ಯಾಡ್ ಮಿನಿ 6 8.3 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 500 ನಿಟ್ಸ್ ಬ್ರೈಟ್ನೆಸ್ ಅನ್ನು ಬೆಂಬಲಿಸಲಿದೆ. ಈ ಐಪ್ಯಾಡ್ ಮಿನಿ 6 ಟಚ್-ಐಡಿಯನ್ನು ಸಹ ಹೊಂದಿದೆ, ಇದನ್ನು ಪವರ್ ಬಟನ್‌ನಲ್ಲಿ ನಿರ್ಮಿಸಲಾಗಿದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕವೇ ಕ್ಯಾಮೆರಾವನ್ನು ಕನೆಕ್ಟ್‌ ಮಾಡಬಹುದಾಗಿದೆ. ಈ ಐಪ್ಯಾಡ್ ಮಿನಿ 6 ಎಲ್ಇಡಿ ಫ್ಲ್ಯಾಷ್ ಜೊತೆಗೆ 12 ಎಂಪಿ ಪ್ರೈಮರಿ ಕ್ಯಾಮೆರಾ ಹೊಂದಿದೆ. ಜೊತೆಗೆ 12MP ಅಲ್ಟ್ರಾ ವೈಡ್ ಆಂಗಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಸೆಂಟರ್‌ ಸ್ಟೇಪ್‌ಗೆ ಬೆಂಬಲವನ್ನು ನೀಡುತ್ತದೆ.

ಆಪಲ್‌ ಐಪ್ಯಾಡ್‌(9 ನೇ ತಲೆಮಾರು)

ಆಪಲ್‌ ಐಪ್ಯಾಡ್‌(9 ನೇ ತಲೆಮಾರು)

ಆಪಲ್‌ ಕಂಪೆನಿ 9ನೇ ತಲೆಮಾರಿನ ಹೊಸ ಆಪಲ್ ಐಪ್ಯಾಡ್‌ ಅನ್ನು ಈ ವರ್ಷ ಪರಿಚಯಿಸಿತು. ಇದು A13 ಬಯೋನಿಕ್ ಚಿಪ್‌ಸೆಟ್‌ ಅನ್ನು ಪಡೆದುಕೊಂಡಿದ್ದು, 8 ನೇ ತಲೆಮಾರಿನ ಐಪ್ಯಾಡ್‌ಗಿಂತ ಹೆಚ್ಚು ಕಾರ್ಯದಕ್ಷತೆಯನ್ನು ಹೊಂದಿದೆ. ಈ ಐಪ್ಯಾಡ್‌ 12ಮೆಗಾಪಿಕ್ಸೆಲ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಹೊಸ ಐಪ್ಯಾಡ್ ಸೆಂಟರ್‌ ಸ್ಟೇಜ್‌ ಅನ್ನುಬೆಂಬಲಿಸುತ್ತದೆ. ಇದು ಆಟೋಮ್ಯಾಟಿಕ್‌ ಫ್ರೇಮ್ ಅನ್ನು ಸೆಟ್‌ ಮಾಡಲಿದೆ. ಜೊತೆಗೆ ಅತ್ಯಂತ ಪ್ರೀಮಿಯಂ ವಿಡಿಯೋ ಕಾನ್ಫರೆನ್ಸಿಂಗ್ ಆಪ್‌ಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 4

ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 4

ಸ್ಯಾಮ್‌ಸಂಗ್ ಈ ವರ್ಷ ಬಿಡುಗಡೆ ಮಾಡಿದ ಬೆಸ್ಟ್‌ ಗ್ಯಾಜೆಟ್ಸ್‌ಗಳಲ್ಲಿ ಗ್ಯಾಲಕ್ಸಿ ವಾಚ್ 4 ಕೂಡ ಒಂದು. ಗ್ಯಾಲಕ್ಸಿ ವಾಚ್ 4 ಗೂಗಲ್ ಮತ್ತು ಸ್ಯಾಮ್‌ಸಂಗ್ ಸಹ-ವಿನ್ಯಾಸಗೊಳಿಸಿದ ಹೊಸ ಗೂಗಲ್ ವೇರ್ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುವ ಮೊದಲ ಸ್ಮಾರ್ಟ್‌ವಾಚ್ ಆಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 4 ಹೃದಯ ಬಡಿತ ಮಾನಿಟರಿಂಗ್, ಬ್ಲಡ್ ಆಕ್ಸಿಜನ್ ಸ್ಯಾಚುರೇಶನ್ (SpO2) ಟ್ರ್ಯಾಕಿಂಗ್ ಮತ್ತು ನಿದ್ರೆಯ ವಿಶ್ಲೇಷಣೆಯಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಹಾಗೆಯೇ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ) ಬೆಂಬಲವೂ ಇದೆ. ಇದಲ್ಲದೆ, ಸ್ಮಾರ್ಟ್ ವಾಚ್‌ಗಳು ಫಾಲ್ ಡಿಟೆಕ್ಷನ್ ಮತ್ತು ನೀರು-ನಿರೋಧಕ IP68- ಪ್ರಮಾಣೀಕೃತ ನಿರ್ಮಾಣದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದಲ್ಲದೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳಿಗೆ ಪ್ರವೇಶ, Google ಸೇವೆಗಳನ್ನು ಬೆಂಬಲಿಸುತ್ತದೆ.

Best Mobiles in India

Read more about:
English summary
We put our heads together and reviewed the most interesting products in 2021. Here are the top picks in several categories.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X