CES 2022 ಈವೆಂಟ್‌ನಲ್ಲಿ ಅನಾವರಣಗೊಂಡ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು!

|

ಈ ವರ್ಷ ನಡೆಯುತ್ತಿರುವ CES 2022ನಲ್ಲಿ ಸಾಕಷ್ಟು ಅಚ್ಚರಿಯ ಗ್ಯಾಜೆಟ್ಸ್‌ಗಳು ಅನಾವರಣಗೊಂಡಿವೆ. ಕಳೆದ ಬಾರಿ ಸಂಪೂರ್ಣ ವರ್ಚುವಲ್‌ ಈವೆಂಟ್‌ ಆಗಿದ್ದ CES ಈ ಬಾರಿ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಬಹುದು. ಟೆಕ್‌ ವಲಯದ ದೈತ್ಯ ಎನಿಸಿಕೊಂಡಿರುವ ಕಂಪೆನಿಗಳು ಹೊಸ ತಂತ್ರಜ್ಞಾನವನ್ನು ಪ್ರದರ್ಶನ ಮಾಡಿವೆ. ಇನ್ನು ಈ ಈವೆಂಟ್‌ನಲ್ಲಿ ಅನೇಕ ಕಂಪೆನಿಗಳು ತಮ್ಮ ಹೊಸ ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಆಸುಸ್‌, ಲೆನೊವೊ, ಏಸರ್‌ ಕಂಪೆನಿಗಳು ಅನೇಕ ಲ್ಯಾಪ್‌ಟಾಪ್‌ಗಳನ್ನು ಪ್ರದರ್ಶನ ಮಾಡಿವೆ.

ಲ್ಯಾಪ್‌ಟಾಪ್‌

ಹೌದು, CES 2022ರಲ್ಲಿ ಪ್ರಮುಖ ಲ್ಯಾಪ್‌ಟಾಪ್‌ ಕಂಪೆನಿಗಳು ತಮ್ಮ ಹೊಸ ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಅನಾವರಣಗೊಳಸಿವೆ. ಇದರಲ್ಲಿ ಹಲವು ಲ್ಯಾಪ್‌ಟಾಪ್‌ಗಳು ಆಕರ್ಷಕ ಫೀಚರ್ಸ್‌ಗಳನ್ನು ಪಡೆದುಕೊಂಡಿದ್ದು, ಹೊಸ ಟೆಕ್ನಾಲಜಿಯನ್ನು ಒಳಗೊಂಡಿವೆ. ಆದ್ದರಿಂದ CES 2022 ಈವೆಂಟ್‌ ಲ್ಯಾಪ್‌ಟಾಪ್‌ಗಳಿಗೆ ಅತ್ಯಾಕರ್ಷಕ ವರ್ಷವಾಗಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ CES 2022ಯಲ್ಲಿ ಬಿಡುಗಡೆ ಆದ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲೆನೊವೊ ಥಿಂಕ್‌ಬುಕ್‌ ಪ್ಲಸ್‌ Gen 3

ಲೆನೊವೊ ಥಿಂಕ್‌ಬುಕ್‌ ಪ್ಲಸ್‌ Gen 3

CES 2022ರಲ್ಲಿ ಲೆನೊವೊ ಕಂಪೆನಿ ಲೆನೊವೊ ಥಿಂಕ್‌ಬುಕ್‌ ಪ್ಲಸ್‌ Gen 3 ಲ್ಯಾಪ್‌ಟಾಪ್‌ ಅನ್ನು ಅನಾವರಣಗೊಳಿಸಿದೆ. ಈ ಲ್ಯಾಪ್‌ಟಾಪ್‌ 21:10 ಅಲ್ಟ್ರಾವೈಡ್ ರಚನೆಯ ಅನುಪಾತವನ್ನು ಒಳಗೊಂಡಿದೆ. ಇದು ಉದ್ದವಾದ ವಿನ್ಯಾಸವನ್ನು ಹೊಂದಿರುವುದರಿಂದ ನಿಮಗೆ ಕೆಲಸ ಮಾಡಲು ಹೆಚ್ಚುವರಿ ಜಾಗವನ್ನು ನೀಡುತ್ತದೆ. ಡೆಸ್ಕ್‌ಟಾಪ್ PC ಗಳಲ್ಲಿ ಅಲ್ಟ್ರಾವೈಡ್ ಮಾನಿಟರ್‌ಗಳನ್ನು ಕಾಣಬಹುದು. ಇನ್ನು ಈ ವಿಶಾಲವಾದ ಸ್ಕ್ರೀನ್‌ ಜೊತೆಗೆ ಕೀಬೋರ್ಡ್‌ನ ಬದಿಯಲ್ಲಿ‌ 8 ಇಂಚಿನ ಸೆಕೆಂಡ್‌ ಡಿಸ್‌ಪ್ಲೇ ಕೂಡ ಇದೆ. ಇದನ್ನು ಅಪ್ಲಿಕೇಶನ್‌ಗಳನ್ನು ತೆರೆಯಲು ಅಥವಾ ಸ್ಟೈಲಸ್‌ನೊಂದಿಗೆ ಡ್ರಾಯಿಂಗ್ ಟ್ಯಾಬ್ಲೆಟ್‌ನಂತೆ ಬಳಸಬಹುದು. ಇನ್ನು ಈ ಲ್ಯಾಪ್‌ಟಾಪ್‌ $1,399 (ಅಂದಾಜು £1,080 / AU$1,960) ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ.

ಅಲೈನ್‌ವೇರ್‌ X14

ಅಲೈನ್‌ವೇರ್‌ X14

ಈ ಬಾರಿಯ CES 2022ರಲ್ಲಿ ಅನಾವರಣಗೊಂಡ ಪ್ರಮುಖ ಲ್ಯಾಪ್‌ಟಾಪ್‌ಗಳಲ್ಲಿ ಅಲೈನ್‌ವೇರ್‌ X14 ಕೂಡ ಒಂದಾಗಿದೆ. Alienware ಐಷಾರಾಮಿ ಗೇಮಿಂಗ್ ಡಿವೈಸ್‌ಗಳಿಗೆ ಹೆಸರುವಾಸಿಯಾಗಿದೆ. ಅದರಂತೆ ಅಲೈನ್‌ವೇರ್‌ X14 ಕೂಡ ಹೊಸ ಮಾದರಿಯ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಈ ಲ್ಯಾಪ್‌ಟಾಪ್‌ Nvidia RTX 3060 GPU ಹೊಂದಿದೆ. ಇದು 14 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 144Hz ರಿಫ್ರೇಶ್‌ ರೇಟ್‌ ಅನ್ನು ಒಳಗೊಂಡಿದೆ. ನೀವು ಪ್ರಯಾಣ ಮಾಡುವಾಗಲು ಗೇಮಿಂಗ್‌ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ಆಸುಸ್‌ ROG ಫ್ಲೋ Z13

ಆಸುಸ್‌ ROG ಫ್ಲೋ Z13

ಆಸುಸ್‌ ಕಂಪೆನಿ CES 2022ರಲ್ಲಿ ಹಲವು ಆಕರ್ಷಕ ಲ್ಯಾಪ್‌ಟಾಪ್ ಗಳ ಪ್ರದರ್ಶನ ಮಾಡಿದೆ. ಇದರಲ್ಲಿ ಆಸುಸ್‌ ROG ಫ್ಲೋ Z13 ಕೂಡ ಸೇರಿದೆ. ಇದರಲ್ಲಿ ಕೀಬೋರ್ಡ್ ಅನ್ನು ತೆಗೆದುಹಾಕುವುದಕ್ಕೆ ಅವಕಾಶ ಇರುವುದರಿಂದ ಪವರ್‌ ಫುಲ್‌ ಗೇಮಿಂಗ್ ಟ್ಯಾಬ್ಲೆಟ್ ಮಾದರಿಯಲ್ಲಿ ಉಪಯೋಗಿಸಬಹುದಾಗಿದೆ. ಇನ್ನು ಟ್ಯಾಬ್ಲೆಟ್ ಕೇವಲ 12mmರಷ್ಟು ತೆಳುವಾಗಿದೆ. ಆದರೆ ಇದು ಇಂಟೆಲ್‌ ಕೋರ್‌ i9-12900H ಪ್ರೊಸೆಸರ್ ಮತ್ತು Nvidia RTX 3050 Ti ಗ್ರಾಫಿಕ್ಸ್ ಕಾರ್ಡ್ ಅನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ ಡಿಸ್‌ಪ್ಲೇ 1080p ರೆಸಲ್ಯೂಶನ್ ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಪಡೆದುಕೊಂಡಿದೆ. ಇದಲ್ಲದೆ ಹೆಚ್ಚಿನ ಪವರ್‌ಗಾಗಿ ಎಕ್ಸ್‌ಟರ್ನಲ್‌ GPU ಅನ್ನು ಪ್ಲಗ್ ಮಾಡಬಹುದಾಗಿದೆ.

ಆಸುಸ್‌ ಜೆನ್‌ಬುಕ್‌ 17 ಫೋಲ್ಡ್‌ OLED

ಆಸುಸ್‌ ಜೆನ್‌ಬುಕ್‌ 17 ಫೋಲ್ಡ್‌ OLED

ಆಸುಸ್‌ ಕಂಪೆನಿ ಪರಿಚಯಿಸಿರುವ ಮತ್ತೊಂದು ಲ್ಯಾಪ್‌ಟಾಪ್‌ ಆಸುಸ್‌ ಜೆನ್‌ಬುಕ್‌ 17 ಫೋಲ್ಡ್‌ OLED ಕೂಡ ಒಂದಾಗಿದೆ. ಹೆಸರೇ ಸೂಚಿಸುವಂತೆ, ಇದು ಫೋಲ್ಡ್‌ ಮಾಡಬಹುದಾದ ಸ್ಕ್ರೀನ್‌ ಹೊಂದಿರುವ ಲ್ಯಾಪ್‌ಟಾಪ್ ಆಗಿದೆ. ಈ ಲ್ಯಾಪ್‌ಟಾಪ್‌ 17.3 ಇಂಚಿನ ಟ್ಯಾಬ್ಲೆಟ್ ಆಗಿದೆ, ಇದನ್ನು L ಆಕಾರಕ್ಕೆ ಮಡಚಬಹುದು. ಅಲ್ಲದೆ 12.5-ಇಂಚಿನ ಮೇನ್‌ ಸ್ಕ್ರೀನ್‌ನಲ್ಲಿ 'ಲ್ಯಾಪ್‌ಟಾಪ್ ಮೋಡ್' ನಲ್ಲಿ ಬಳಸಬಹುದು. ಇದರಿಂದ ಇನ್ನುಳಿದ ಅರ್ಧಭಾಗದ ಆನ್-ಸ್ಕ್ರೀನ್ ಕೀಬೋರ್ಡ್‌ನಂತೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ಡಾಲ್ಬಿ ವಿಷನ್ ಮತ್ತು 100% DCIP3 ಕಲರ್‌ ಹರವುಗಳನ್ನು ಬೆಂಬಲಿಸುತ್ತದೆ.

XMG ನಿಯೋ 15 ವಿಥ್‌ XMG ಓಯಸಿಸ್

XMG ನಿಯೋ 15 ವಿಥ್‌ XMG ಓಯಸಿಸ್

ಗೇಮಿಂಗ್ ಲ್ಯಾಪ್‌ಟಾಪ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕಂಪೆನಿಗಳಲ್ಲಿ XMG ಕೂಡ ಒಂದಾಗಿದೆ. ಸದ್ಯ XMG ಪರಿಚಯಿಸಿರುವ XMG ನಿಯೋ ಲ್ಯಾಪ್‌ಟಾಪ್‌ ಆಕರ್ಷಕ ವಿನ್ಯಾಸವನ್ನು ಪಡೆದುಕೊಂಡಿದೆ. XMG Neo 15 ಗೇಮಿಂಗ್ ಲ್ಯಾಪ್‌ಟಾಪ್ XMG Oasis ಲ್ಯಾಪ್‌ಟಾಪ್‌ನ ಕೂಲಿಂಗ್ ಪರಿಹಾರಕ್ಕೆ ಪ್ಲಗ್ ಮಾಡುತ್ತದೆ. ಇನ್ನು XMG ಓಯಸಿಸ್ ಅನ್ನು ಪ್ರತ್ಯೇಕವಾಗಿ ಸುಮಾರು €200 (ಸುಮಾರು $225 / £165 / AU$310) ಗೆ ಮಾರಾಟ ಮಾಡಲಾಗುತ್ತದೆ ಎನ್ನಲಾಗಿದೆ.

Best Mobiles in India

English summary
CES 2022 was particularly exciting when it came to laptops.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X