ಅಲೆಕ್ಸಾದಲ್ಲಿ ಜನ ಕೇಳಿದ ಪ್ರಶ್ನೆಗಳಿಗೆ ನೀವು ಶಾಕ್ ಆಗ್ತೀರಾ?..ಇಂಥಾ ಪ್ರಶ್ನೆನೂ ಕೇಳ್ತಾರಾ!?
ಭಾರತದಲ್ಲಿ ಅಮೆಜಾನ್ ಅಲೆಕ್ಸಾ ಚಾಲಿತ ಸ್ಮಾರ್ಟ್ ಸ್ಪೀಕರ್‌ಗಳು ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿವೆ. ಬಳಕೆದಾರರು ಈ ಸ್ಮಾರ್ಟ್ ಸ್ಪೀಕರ್‌ಗಳ ಮೂಲಕ ಹಾಡನ್ನು ಪ್ಲೇ ಮಾಡಿಸುವ, ಸುದ್ದಿಯನ್ನು ಹೇಳಿಸುವ ಮುಂತಾದ ಕೆಲಸಗಳನ್ನು ಮಾಡಬಹುದಾಗಿದೆ. ಬಳಕೆದಾರರ ಪ್ರಶ್ನೆಗಳಿಗೆ ತಕ್ಕಂತೆ ಉತ್ತರ ನೀಡುವ ಮೂಲಕ ಅಲೆಕ್ಸಾ ಕೂಡ ಸಾಕಷ್ಟು ಗಮನಸೆಳೆದಿದೆ. ಅದರಂತೆ ಭಾರತದಲ್ಲಿಯೂ ಕೂಡ ಅಮೆಜಾನ್ ಅಲೆಕ್ಸಾ ಸ್ಮಾರ್ಟ್ ಸ್ಪೀಕರ್‌ಗಳ ಬಳಕೆ ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ಅಲೆಕ್ಸಾ ಮೂಲಕ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಕೂಡ ಪಡೆದುಕೊಂಡಿದ್ದಾರೆ.

ಹೌದು, ಅಮೆಜಾನ್ ಅಲೆಕ್ಸಾ ಚಾಲಿತ ಸ್ಮಾರ್ಟ್ ಸ್ಪೀಕರ್‌ಗಳು ಬಳಕೆದಾರರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಿದೆ. ಇದರಿಂದ ಬಳಕೆದಾರರು ತಮ್ಮ ಅಭಿರುಚಿಗೆ ತಕ್ಕಂತೆ ಅನೇಕ ಪ್ರಶ್ನೆಗಳನ್ನು ಅಲೆಕ್ಸಾ ಬಳಿ ಕೇಳುತ್ತಾರೆ. ಹಾಗಾದ್ರೆ ಕಳೆದ ವರ್ಷ ಅಂದರೆ 2022 ರಲ್ಲಿ ಭಾರತೀಯರು ಅಮೆಜಾನ್ ಅಲೆಕ್ಸಾ ಬಳಿ ಯಾವೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೇಳಿದ ಪ್ರಶ್ನೆಗಳು ಯಾವುವು ಅನ್ನೊದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತೀಯರು ಕಳೆದ ವರ್ಷ ಅಮೆಜಾನ್ ಅಲೆಕ್ಸಾ ಬಳಿ ಸಾಕಷ್ಟು ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಂಡಿದ್ದಾರೆ. ಹಲವು ವಲಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಹೆಚ್ಚು ಹೆಚ್ಚು ಕೇಳಿದ್ದಾರೆ. ಈ ಮೂಲಕ ತಮ್ಮ ಅಭಿರುಚಿಗೆ ಸಂಬಂಧಿಸಿದ ಅನೇಕ ವಿಚಾರಗಳಿಗೆ ಅಲೆಕ್ಸಾ ಮೂಲಕ ಉತ್ತರವನ್ನು ಕಂಡುಕೊಂಡಿದ್ದಾರೆ. ಇದರಲ್ಲಿ ಹಲವು ಪ್ರಶ್ನೆಗಳು ನಿಮಗೆ ಅಚ್ಚರಿ ಎನಿಸಿದರೆ, ಇನ್ನು ಕೆಲವು ಪ್ರಶ್ನೆಗಳು ನಗು ತರಿಸುವುದು ಗ್ಯಾರಂಟಿ. ಇನ್ನು ಅಲೆಕ್ಸಾ ಬಳಿ ಕೇಳಿದ ಪ್ರಶ್ನೆಗಳ ವಿವಿಧ ಹಂತಗಳಲ್ಲಿ ವಿಂಗಡಿಸಬಹುದಾಗಿದೆ.

ಅಲೆಕ್ಸಾದಲ್ಲಿಯೂ ಸದ್ದು ಮಾಡಿದ ರಾಕಿಬಾಯ್!
ಕಳೆದ ವರ್ಷ ಇಡೀ ವಿಶ್ವವೇ ದಕ್ಷಿಣ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದ ಕೆಜಿಎಫ್ 2 ಸಿನಿಮಾ. ಈ ಸಿನಿಮಾದ ಮೂಲಕ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಾತ್ರವಲ್ಲ ಗ್ಲೋಬಲ್ ಲೆವೆಲ್‌ನಲ್ಲೂ ಸಾಕಷ್ಟು ಸದ್ದು ಮಾಡಿದ್ದಾರೆ. ಅದರಂತೆ ಕಳೆದ ವರ್ಷ ಅಮೆಜಾನ್ ಅಲೆಕ್ಸಾದಲ್ಲಿಯೂ ರಾಕಿಬಾಯ್ ಸದ್ದು ಜೋರಾಗಿದೆ. ಅಲೆಕ್ಸಾ ರಾಕಿಬಾಯ್ ಯಾರು ಎಂದು ಅನೇಕ ಜನರು ಪ್ರಶ್ನೆ ಕೇಳಿದ್ದಾರೆ ಎಂದು ಹೇಳಲಾಗಿದೆ. ಚಲನಚಿತ್ರಗಳ ಪಾತ್ರದ ಬಗ್ಗೆ ಕೇಳಿದ ಪ್ರಶ್ನೆಗಳಲ್ಲಿ ರಾಕಿಬಾಯ್ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಗ್ಗೆ ತಿಳಿಯಲು ಹಲವರ ಕಾತುರ!
ಇನ್ನು ಅಲೆಕ್ಸಾದಲ್ಲಿ ಕೇವಲ ರಾಕಿಬಾಯ್ ಮಾತ್ರವಲ್ಲ ರಶ್ಮಿಕಾ ಮಂದಣ್ಣ ಬಗ್ಗೆ ಕೂಡ ಸಾಕಷ್ಟು ಮಂದಿ ಪ್ರಶ್ನೆ ಕೇಳಿದ್ದಾರೆ. ಅಲೆಕ್ಸಾ ರಶ್ಮಿಕಾ ಮಂದಣ್ಣ ಬಗ್ಗೆ ವಿವರ ನೀಡುವ ಎನ್ನುವ ಪ್ರಶ್ನೆ ಸಾಕಷ್ಟು ಮಂದಿ ಕೇಳಿದ್ದು ಸಾಕಷ್ಟು ಸಂಚಲನ ಸೃಷ್ಟಿಸಿದ್ದಾರೆ. ಇದಷ್ಟೇ ಅಲ್ಲ ವಿಜಯ್ ದೇವರಕೊಂಡ ಯಾರು ಎನ್ನುವ ಪ್ರಶ್ನೆಯನ್ನು ಸಹ ಹಲವು ಮಂದಿ ಕೇಳಿರುವುದು ಇಲ್ಲಿ ವಿಶೇಷ ಎನ್ನಬಹುದಾಗಿದೆ.

ಸಿನಿಮಾ ಪಾತ್ರಗಳ ಬಗ್ಗೆ ಅಲೆಕ್ಸಾದಲ್ಲಿ ಕೇಳಿದ ಪ್ರಶ್ನೆಗಳು ಯಾವುವು?
"ಅಲೆಕ್ಸಾ, ನಿನಗೆ ಚೋಟಾ ಭೀಮ್ ಗೊತ್ತಾ?"
"ಅಲೆಕ್ಸಾ, ರಾಕಿ ಭಾಯ್ ಯಾರು?"
"ಅಲೆಕ್ಸಾ, ಮಿಕ್ಕಿ ಮೌಸ್ ವಯಸ್ಸು ಎಷ್ಟು?"
"ಅಲೆಕ್ಸಾ, ಲಾಲ್ ಸಿಂಗ್ ಚಡ್ಡಾ ಯಾರು?"
"ಅಲೆಕ್ಸಾ, ಶೋಲೆ ಫಿಲ್ಮ್ ಕಾ ಡೈಲಾಗ್ ಸುನಾ"
"ಅಲೆಕ್ಸಾ, ಲಿಟಲ್ ಸಿಂಗಮ್ ಯಾರು?"

ಅಲೆಕ್ಸಾದಲ್ಲಿ ಭಾರತೀಯರು ಯಾವ ಸೆಲೆಬ್ರಿಟಿಗಳ ಬಗ್ಗೆ ಕೇಳಿದ ಪ್ರಶ್ನೆಗಳು ಯಾವುವು?
"ಅಲೆಕ್ಸಾ, ಆಲಿಯಾ ಭಟ್ ಅವರ ವಯಸ್ಸು ಎಷ್ಟು?"
"ಅಲೆಕ್ಸಾ, ಅನುಷ್ಕಾ ಶರ್ಮಾ ಮಗುವಿನ ಹೆಸರೇನು?"
"ಅಲೆಕ್ಸಾ, ಮಿಸ್ಟರ್ ಬೀಸ್ಟ್ ಯಾರು?"
"ಅಲೆಕ್ಸಾ, ಜಾನ್ ಸೆನಾ ಎಷ್ಟು ಬಲಶಾಲಿ?"
"ಅಲೆಕ್ಸಾ, ವಿಜಯ್ ದೇವರಕೊಂಡ ಯಾರು?"
"ಅಲೆಕ್ಸಾ, ದುಗ್ಗು ಯಾರು?"
"ಅಲೆಕ್ಸಾ, ಕೆಂಡಾಲ್ ಜೆನ್ನರ್ ಅವರ ವಯಸ್ಸು ಎಷ್ಟು?"
"ಅಲೆಕ್ಸಾ, ಪ್ರಿನ್ಸ್ ಹ್ಯಾರಿಯ ವಯಸ್ಸು ಎಷ್ಟು?"
"ಅಲೆಕ್ಸಾ, ಕತ್ರಿನಾ ಕೈಫ್ ಎತ್ತರ ಎಷ್ಟು?"
"ಅಲೆಕ್ಸಾ, ರಶ್ಮಿಕಾ ಮಂದಣ್ಣ ಬಗ್ಗೆ ಹೇಳು"
ಹೀಗೆ ಬಳಕೆದಾರರು ತಮ್ಮ ನೆಚ್ಚಿನ ಸೆಲೆಬ್ರಿಟಿಗಳ ಬಗ್ಗೆ ಹಲವು ಕುತೂಹಲಕರ ವಿಚಾರಗಳನ್ನು ತಿಳಿಯಲು ಬಯಸಿದ್ದಾರೆ.

ಇದಲ್ಲದೆ ಅಲೆಕ್ಸಾದಲ್ಲಿ ಕೇಳಲಾದ ಅನೇಕ ಪ್ರಶ್ನೆಗಳಲ್ಲಿ ಅಡುಗೆಗೆ ಸಬಂಧಿಸಿದ ವಿಷಯಗಳು ಕೂಡ ಸೇರಿವೆ. ಹಾಗೆಯೇ ಹಲವು ಜೋಕ್‌ಗಳು, ಕ್ರಿಕೆಟ್‌ಗೆ ಸಂಬಂಧಿಸಿದ ವಿಚಾರಗಳನ್ನು ತಿಳಿಯಲು ಜನರು ಬಯಸಿದ್ದಾರೆ. ಇದಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಅಲೆಕ್ಸಾ ಬಳಿ ಜನರು ಕೇಳಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications








