ಶೀಘ್ರದಲ್ಲೇ ವಾಟ್ಸಾಪ್ ಸೇರಲಿರುವ ಬಹುನಿರೀಕ್ಷಿತ ಫೀಚರ್ಸ್‌ಗಳು!
ವಾಟ್ಸಾಪ್ ಬಳಕೆದಾರರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಶನ್ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಈಗಾಗಲೇ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಕಾಲಕಾಲಕ್ಕೆ ತಕ್ಕಂತೆ ಹಲವು ಹೊಸ ಫೀಚರ್ಸ್‌ಗಳನ್ನು ಪರೀಕ್ಷಿಸುತ್ತಾ ಬಂದಿದೆ. ಸದ್ಯ ಪ್ರಸ್ತುತ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಫೀಚರ್ಸ್‌ಗಳನ್ನು ಅಭಿವೃದ್ದಿ ಪಡಿಸುತ್ತಿದೆ. ಈ ಫೀಚರ್ಸ್‌ಗಳು ಮುಂದಿನ ದಿನಗಳಲ್ಲಿ ಬಳಕೆದಾರರ ಅನುಭವವನ್ನು ಇನ್ನಷ್ಟು ಉತ್ತಮ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ಹೇಳಲಾಗಿದೆ.

ಹೌದು, ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಹೊಸ ಫೀಚರ್ಸ್‌ಗಳನ್ನು ಪರೀಕ್ಷಿಸುತ್ತಿದೆ. ಇವುಗಳಲ್ಲಿ ಹಲವು ಫೀಚರ್ಸ್‌ಗಳು ಈಗಾಗಲೇ ಬೀಟಾ ವರ್ಷನ್‌ನಲ್ಲಿ ಲಭ್ಯವಿದ್ದು, ಬೀಟಾ ಪರಿವೀಕ್ಷಕರ ಗಮನ ಸೆಳೆದಿದೆ. ಇನ್ನು ಅನೇಕ ಫೀಚರ್ಸ್‌ಗಳನ್ನು ಅಭಿವೃದ್ದಿಯ ಹಂತದಲ್ಲಿದ್ದು, ಶೀಘ್ರದಲ್ಲೇ ಬೀಟಾ ವರ್ಷನ್‌ನಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಶೀಘ್ರದಲ್ಲೇ ವಾಟ್ಸಾಪ್ ಬಳಕೆದಾರರಿಗೆ ಲಭ್ಯವಾಗುವ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸರ್ಚ್ ಮೆಸೇಜ್ ಶಾರ್ಟ್‌ಕಟ್
ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಶೀಘ್ರದಲ್ಲೇ ಹೊಸ ಸರ್ಚ್ ಮೆಸೇಜ್ ಶಾರ್ಟ್‌ಕಟ್ ಅನ್ನು ಪರಿಚಯಿಸಲು ಕಾರ್ಯನಿರ್ವಹಿಸುತ್ತಿದೆ. ಈ ಫೀಚರ್ಸ್ ಅನ್ನು ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ಪರೀಕ್ಷಿಸಲಾಗುತ್ತಿದೆ. ಈ ಫೀಚರ್ಸ್ ಮೂಲಕ ಬಳಕೆದಾರರು ತಾವು ಸೆಂಡ್ ಮಾಡಿರುವ ನಿರ್ದಿಷ್ಟ ಸಂದೇಶವನ್ನು ವೇಗವಾಗಿ ಸರ್ಚ್ ಮಾಡಲು ಸಾಧ್ಯವಾಗಲಿದೆ.

ನೋಟಿಫಿಕೇಶನ್‌ನಲ್ಲಿ ವಾಟ್ಸಾಪ್ ಪ್ರೊಫೈಲ್
ವಾಟ್ಸಾಪ್ ಅಭಿವೃದ್ದಿ ಪಡಿಸುತ್ತಿರುವ ಪ್ರಮುಖ ಫೀಚರ್ಸ್‌ಗಳಲ್ಲಿ ಇದು ಕೂಡ ಒಂದು. ಇದರಿಂದ ಬಳಕೆದಾರರು ಚಾಟ್‌ಗಳು ಮತ್ತು ಗುಂಪುಗಳಿಂದ ಹೊಸ ಸಂದೇಶಗಳನ್ನು ಸ್ವೀಕರಿಸಿದಾಗ ಪ್ರೊಫೈಲ್ ಫೋಟೋವನ್ನು iOS ಸಿಸ್ಟಮ್ ನೋಟಿಫಿಕೇಶನ್‌ಗಳಲ್ಲಿಯೂ ಸಹ ಕಾಣಬಹುದಾಗಿದೆ. ಸದ್ಯ ಈ ಫೀಚರ್ಸ್ iOS 15 ನಲ್ಲಿ ಕೆಲವು ಬೀಟಾ ಪರೀಕ್ಷಕರಿಗೆ ಮಾತ್ರ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಇದನ್ನು ಇತರ ಬಳಕೆದಾರರಿಗಾಗಿ ಹೊರತರಲಾಗುವುದು ಎಂದು ನಿರೀಕ್ಷಿಸಲಾಗಿದೆ.

ವಾಟ್ಸಾಪ್ ಕಮ್ಯೂನಿಟಿ
ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಾಟ್ಸಾಪ್ ಕಮ್ಯೂನಿಟಿಗ್ರೂಪ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಇದು ಡಿಸ್ಕಾರ್ಡ್‌ನಂತಹ ಒಂದೇ ಕಮ್ಯೂನಿಟಿ ಅಡಿಯಲ್ಲಿ 10 ಚಾಟ್ ಗುಂಪುಗಳನ್ನು ಕ್ಲಬ್ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಆದರೆ ಈ ಫೀಚರ್ಸ್ ಅಡ್ಮೀನ್‌ಗೆ ಮಾತ್ರ ಲಭ್ಯವಿರುತ್ತದೆ. ಇದರ ಮೂಲಕ ಎಲ್ಲಾ ಸಮುದಾಯ ಗುಂಪುಗಳಿಗೆ ಸಂದೇಶಗಳನ್ನು ಕಳುಹಿಸಬಹುದು ಎನ್ನಲಾಗಿದೆ.

ವಾಟ್ಸಾಪ್ ಲಾಗ್ಔಟ್
ವಾಟ್ಸಾಪ್ ಬಳಕೆದಾರರು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಪ್ರಮುಖ ಫೀಚರ್‌ಗಳಲ್ಲಿ ಇದು ಒಂದಾಗಿದೆ. ಈ ಫೀಚರ್ ಮೂಲಕ ಬಳಕೆದಾರರು ತಮ್ಮ ವಾಟ್ಸಾಪ್ ಅಕೌಂಟ್‌ನಿಂದ ಲಾಗ್ ಔಟ್ ಮಾಡಲು ಸಾಧ್ಯವಾಗುತ್ತದೆ. ಈಗಿನಂತೆ, ವಾಟ್ಸಾಪ್‌ನಲ್ಲಿ ಲಾಗ್‌ಔಟ್ ಫಿಚರ್ಸ್ ಲಭ್ಯವಿಲ್ಲ. ಪ್ರಸ್ತುತ ವಾಟ್ಸಾಪ್‌ನಿಂದ ನೀವು ವಿರಾಮ ತೆಗೆದುಕೊಳ್ಳಬೇಕು ಎನಿಸಿದರೆ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಅನ್ ಇನ್‌ಸ್ಟಾಲ್ ಮಾಡುವುದಕ್ಕೆ ಮಾತ್ರ ಸಾದ್ಯವಿದೆ. ಆದರೆ ವಾಟ್ಸಾಪ್ ಲಾಗ್ ಔಟ್ ಫೀಚರ್ಸ್ ಲಭ್ಯವಾದ ನಂತರ ಇದು ತಪ್ಪಲಿದೆ ಎಂದು ಹೇಳಲಾಗಿದೆ.

ಇದಲ್ಲದೆ ವಾಟ್ಸಾಪ್ ಇತ್ತೀಚಿಗೆ ತನ್ನ ವೆಬ್ ಆವೃತ್ತಿಯಲ್ಲಿ ಹೊಸ ಕೋಡ್ ವೆರಿಫೈ ವಿಸ್ತರಣೆಯನ್ನು ಪರಿಚಯಿಸಿದೆ. ವಾಟ್ಸಾಪ್ ಕೋಡ್ ವೆರಿಫೈ ವಿಸ್ತರಣೆ ಫೀಚರ್ಸ್ ಮೂಲಕ ನೀವು ಬಳಸುತ್ತಿರುವ ವಾಟ್ಸಾಪ್ ವೆಬ್ ಆವೃತ್ತಿ ದೃಡೀಕರಿಸಲಾದ ಆವೃತ್ತಿ ಹೌದ ಅಲ್ಲವಾ ಅನ್ನೊದನ್ನ ತಿಳಿಯಲು ಸಹಾಯ ಮಾಡಲಿದೆ. ಈ ಫೀಚರ್ಸ್ ಅನ್ನು ಕ್ಲೌಡ್‌ಫ್ಲೇರ್, ವೆಬ್ ಮೂಲಸೌಕರ್ಯ ಮತ್ತು ಭದ್ರತಾ ಕಂಪನಿಯ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸದ್ಯ ಈ ಫೀಚರ್ಸ್ ಅನ್ನು ಕ್ರೋಮ್, ಫೈರ್‌ಫಾಕ್ಸ್ ಮತ್ತು ಎಡ್ಜ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ನಿಮ್ಮ ಮೊಬೈಲ್ ಅಥವಾ ಡೆಸ್ಕ್‌ಟಾಪ್ ಬ್ರೌಸರ್‌ನಲ್ಲಿ ನೀವು ವಾಟ್ಸಾಪ್ ವೆಬ್ ಅನ್ನು ತೆರೆದಾಗ ಕೋಡ್‌ನ ದೃಢೀಕರಣವನ್ನು ಪರಿಶೀಲಿಸಲು ಕೋಡ್ ವೆರಿಫೈ ವಿಸ್ತರಣೆಯು ಕಂಪ್ಲೀಟ್ ವೆಬ್‌ಪೇಜ್‌ನಲ್ಲಿನ ಸಂಪನ್ಮೂಲಗಳನ್ನು ಪರಿಶೀಲಿಸುತ್ತದೆ.


Click it and Unblock the Notifications








