ಭಾರತದಲ್ಲಿ ಹೆಚ್ಚಿನ ಜನರು ಬಳಸುವ ಪಾಸ್‌ವರ್ಡ್‌ ಯಾವುದು ಗೊತ್ತಾ?

|

ಇಂದಿನ ಡಿಜಿಟಲ್‌ ಪ್ರಪಂಚದಲ್ಲಿ ಆನ್‌ಲೈನ್‌ ಕೆಲಸ ಕಾರ್ಯಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿವೆ. ನಿಮಗೆ ಯಾವುದೇ ಕೆಲಸ ಆಗಬೇಕಿದ್ದರೂ ಆನ್‌ಲೈನ್‌ ಅಕೌಂಟ್‌ ಬಲಸಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ನಿಮ್ಮ ಆನ್‌ಲೈನ್‌ ಆಕೌಂಟ್‌ನಲ್ಲಿ ಡೇಟಾ ಸುರಕ್ಷತೆಗಾಗಿ ಪಾಸ್‌ವರ್ಡ್‌ ಇಡಬೇಕಾದ ಅವಶ್ಯಕತೆ ಕೂಡ ಇದೆ. ಪಾಸ್‌ವರ್ಡ್‌ ನಿಮ್ಮ ಡಿಜಿಟಲ್‌ ದಾಖಲೆಗಳಿಗೆ ಸುರಕ್ಷತೆಯನ್ನು ನೀಡಲಿದೆ. ಆದರೆ ಇಂದಿಗೂ ಕೂಡ ಭಾರತದಲ್ಲಿ 12345, qwerty ಯಂತಹ ಸಾಮಾನ್ಯ ಪಾಸ್‌ವರ್ಡ್‌ಗಳನ್ನೇ ಹೆಚ್ಚಿನ ಜನರು ಬಳಸುತ್ತಿದ್ದಾರೆ ಎಂದು ವರದಿಯಾಗಿದೆ.

ಪಾಸ್‌ವರ್ಡ್‌

ಹೌದು, ಭಾರತದಲ್ಲಿ ಇಂದಿಗೂ ಕೂಡ ಹೆಚ್ಚಿನ ಜನರು 123456, 123456789, 111111, ಮತ್ತು 12345 ನಂತಹ ಸಾಮಾನ್ಯ ಪಾಸ್‌ವರ್ಡ್‌ ಬಳಸುತ್ತಿದ್ದಾರೆ ಎನ್ನಲಾಗಿದೆ. ಭಾರತದಲ್ಲಿ ಪಾಸ್‌ವರ್ಡ್‌ ಬಳಕೆ ಕುರಿತು NordPass ನ ನಡೆಸಿದ 2021 ರ ಸಂಶೋಧನಾ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಹಾಗಾದ್ರೆ ಭಾರತದಲ್ಲಿ ಜನಸಾಮಾನ್ಯರು ಯಾವ ಮಾದರಿಯ ಪಾಸ್‌ವರ್ಡ್‌ಗಳನ್ನು ಬಳಸುತ್ತಿದ್ದಾರೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪಾಸ್‌ವರ್ಡ್‌

ಭಾರತದಲ್ಲಿ ಹೆಚ್ಚಿನ ಜನರು 123456, 123456789, 111111, ಮತ್ತು 12345 ಪಾಸ್‌ವರ್ಡ್‌ ಅನ್ನು ಇಂದಿಗೂ ಬಳಸುತ್ತಿದ್ದಾರೆ. ಸ್ಟ್ರಾಂಗ್‌ ಪಾಸ್‌ವರ್ಡ್‌ ಬಳಸುವುದು ಇತ್ತೀಚಿನ ದಿನಗಳಲ್ಲಿ ಅತಿ ಅವಶ್ಯಕವಾಗಿದೆ. ಆದರೂ ಕೂಡ ಹೆಚ್ಚಿನ ಜನರು ಸರಳ ಪಾಸ್‌ವರ್ಡ್‌ಗಳನ್ನು ಆಯ್ಕೆಮಾಡಲು ಒಲವು ತೋರುತ್ತಿದ್ದಾರೆ. NordPass ನಡೆಸಿದ ವರದಿಯ ಪ್ರಕಾರ, 123456, 123456789, 111111, ಮತ್ತು 12345 ನಂತಹ ಸರಳ ಪಾಸ್‌ವರ್ಡ್‌ಗಳನ್ನು ಭಾರತ ಮಾತ್ರವಲ್ಲ, ಪ್ರಪಂಚದಾದ್ಯಂತದ ಬಳಕೆದಾರರು ಕೂಡ ವ್ಯಾಪಕವಾಗಿ ಅಳವಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪಾಸ್‌ವರ್ಡ್‌

ಇನ್ನು ಭಾರತಕ್ಕೆ ಸಂಬಂಧಿಸಿದಂತೆ, ಸಾಮಾನ್ಯವಾಗಿ 12345, 123456, 123456789, 12345678, india123, 1234567890, 1234567, qwerty, abc123, iloveyou ಪಾಸ್‌ವರ್ಡ್‌ಗಳನ್ನು ಬಳಸುತ್ತಿದ್ದಾರೆ ಎನ್ನಲಾಗಿದೆ. ವರದಿಯ ಪ್ರಕಾರ, india123 ಅನ್ನು ಹೊರತುಪಡಿಸಿ, ಈ ಎಲ್ಲಾ ಪಾಸ್‌ವರ್ಡ್‌ಗಳನ್ನು ಒಂದು ನಿಮಿಷದಲ್ಲಿ ಭೇದಿಸಬಹುದಾಗಿದೆ. ಆದರೂ ಕೂಡ ಇಂತಹ ಸಾಮಾನ್ಯ ಪಾಸ್‌ವರ್ಡ್‌ಗಳನ್ನು ಬಳಸುತ್ತಿದ್ದಾರೆ. ಇದಲ್ಲದೆ ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಹೆಸರನ್ನು ಪಾಸ್‌ವರ್ಡ್‌ಗಳಾಗಿ ಬಳಸುತ್ತಾರೆ ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ. ಇನ್ನು ಯುಎಸ್‌ನಲ್ಲಿ ಪುರುಷರಿಗಿಂತ ಹೆಚ್ಚಿನ ಮಹಿಳೆಯರು 'iloveyou' ಎಂಬ ಪಾಸ್‌ವರ್ಡ್ ಬಳಸುತ್ತಿದ್ದಾರೆ ಎನ್ನಲಾಗಿದೆ.

ಸೈಬರ್‌

ಇಂದಿನ ಸೈಬರ್‌ ಜಗತ್ತಿನಲ್ಲಿ ಸೈಬರ್‌ಟಾಕ್‌ಗಳಿಂದ ಸುರಕ್ಷಿತವಾಗಿರಲು ಬಲವಾದ ಪಾಸ್‌ವರ್ಡ್ ಅನ್ನು ಆಯ್ಕೆ ಮಾಡುವುದು ಅತ್ಯಗತ್ಯ. ಕನಿಷ್ಠ 12 ಅಕ್ಷರಗಳು ಮತ್ತು ದೊಡ್ಡಕ್ಷರಗಳು, ಸಣ್ಣ ಅಕ್ಷರಗಳು, ಸಂಖ್ಯೆಗಳು ಮತ್ತು ಚಿಹ್ನೆಗಳ ಸಂಯೋಜನೆಯೊಂದಿಗೆ ಸಂಕೀರ್ಣವಾದ ಪಾಸ್‌ವರ್ಡ್‌ಗಳನ್ನು ಆಯ್ಕೆ ಮಾಡಲು ಈ ವರದಿಯು ಬಳಕೆದಾರರಿಗೆ ಸಲಹೆ ನೀಡಿದೆ. ಏಕೆಂದರೆ ಡಿಜಿಟಲ್‌ ಖಾತೆಗಳಿಗೆ ಪಾಸ್‌ವರ್ಡ್‌ ಅನ್ನು ಸೆಟ್‌ ಮಾಡುವಾಗ ನಮ್ಮ ಹೆಸರುಗಳನ್ನೇ ಬಳಸುವುದು ಸುರಕ್ಷಿತವಲ್ಲ. ಏಕೆಂದರೆ ಪಾಸ್‌ವರ್ಡ್‌ಗೆ ವೈಯಕ್ತಿಕ ಮಾಹಿತಿಗಳು ಸುಲಭವಾಗಿ ಹ್ಯಾಕರ್‌ಗಳ ಪಾಲಿಗೆ ದಕ್ಕಿಬಿಡುತ್ತದೆ. ನಿಮ್ಮ ಖಾತೆಗಳಿಗೆ ಈ ಪಾಸ್‌ವರ್ಡ್‌ಗಳು ಹೆಚ್ಚು ಭದ್ರತೆ ನೀಡುವುದಿಲ್ಲ ಹ್ಯಾಕ್‌ ಆಗುವ ಸಂಭವಗಳಿರುತ್ತವೆ.

ಪಾಸ್‌ವರ್ಡ್‌

ಕೆಲವರು ಪಾಸ್‌ವರ್ಡ್‌ ಬೇಗ ನೆನಪಾಗಲಿ ಎಂದು ಪಾಸ್‌ವರ್ಡ್‌ಗಳನ್ನು ಪುಸ್ತಕದಲ್ಲಿ ನೋಟ್‌ ಮಾಡಿರುತ್ತಾರೆ ಆದರೆ ಕೆಲವು ಸಂದರ್ಭಗಳಲ್ಲಿ ಇತರರಿಂದ ದುರುಪಯೋಗ ಆಗುವ ಸಾಧ್ಯತೆಗಳು ಇರುತ್ತವೆ. ಒಂದು ವೇಳೆ ಬರೆದಿಟ್ಟರು ಅದು ನಿಮಗೆ ಮಾತ್ರ ತಿಳಿಯುವಂತಿರಲಿ. ಹೆಸರು, ನಂಬರ್‌ ಬಳಸಿ ಪಾಸ್‌ವರ್ಡ್‌ಗಳನ್ನು ಸರಳವಾಗಿ ಇಡುವ ಬದಲು ಪಾಸ್‌ವರ್ಡ್‌ನಲ್ಲಿ ಸ್ಪೆಷಲ್ ಕ್ಯಾರೆಕ್ಟರ್ಸ್‌ಗಳನ್ನು ಬಳಸಿಕೊಳ್ಳುವುದರ ಮೂಲಕ ಸ್ಟ್ರಾಂಗ್‌ ಪಾಸ್‌ವರ್ಡ್‌ ಕ್ರಿಯೆಟ್‌ ಮಾಡುವುದು ಉತ್ತಮ ಎನಿಸಲಿದೆ. ಇದಲ್ಲದೆ ಆನ್‌ಲೈನ್‌ನಲ್ಲಿ ಮತ್ತು ಇತರೆ ಆಪ್‌ಗಳಿಗೆ ನೀವು ಹಲವಾರು ಖಾತೆಗಳನ್ನು ಹೊಂದಿರುತ್ತಿರಿ ಆ ಎಲ್ಲ ಖಾತೆಗಳಿಗೂ ಒಂದೇ ಪಾಸ್‌ವರ್ಡ್‌ ಬಳಸಬೇಡಿರಿ. ನೀವು ಒಂದೇ ಪಾಸ್‌ವರ್ಡ್‌ ಬಳಸುವುದರಿಂದ ನಿಮ್ಮ ಪಾಸ್‌ವರ್ಡ್ ಸುರಕ್ಷತೆ ಹ್ಯಾಕ್‌ ಆಗಲು ಸಾಧ್ಯತೆಗಳಿರುತ್ತವೆ.

ಪಾಸ್‌ವರ್ಡ್‌

ಇದಲ್ಲದೆ ನಿಮ್ಮ ಎಲ್ಲ ಬಗೆಯ ಖಾತೆಗಳ ಪಾಸ್‌ವರ್ಡ್‌ಗಳನ್ನು ಆಗಾಗ ಬದಲಾಯಿಸುವುದು ಉತ್ತಮ. ಒಂದೇ ಮಾದರಿಯ ಪಾಸ್‌ವರ್ಡ್‌ ಅನ್ನು ದೀರ್ಘಕಾಲ ಬಳಸುವುದು ಸೂಕ್ತವಲ್ಲ. ಬಹುತೇಕರು ಖಾತೆ ತೆರೆದಾಗ ಇಟ್ಟ ಪಾಸ್‌ವರ್ಡ್ ಅನ್ನು ಮತ್ತೆ ಬದಲಾಯಿಸಿರುವುದೇ ಇಲ್ಲ. ಇದು ಹೆಚ್ಚು ಸುರಕ್ಷಿತವಲ್ಲ. ಕಾಲ ಕಳೆದಂತೆ ನಿಮಗೆ ನೆನಪಿನಲ್ಲಿ ಇರುವಂತಹ ಹಾಗೂ ಸ್ಟ್ರಾಗ್‌ ಎನಿಸುವ ಪಾಸ್‌ವರ್ಡ್‌ ಸೆಟ್‌ ಮಾಡುವುದು ಅನುಕೂಲಕರವಾಗಲಿದೆ.

Best Mobiles in India

English summary
Most of our confidential information, whether it is payment information or photo/video sharing websites requires us to choose a password.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X