ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಖರೀದಿಸುವ ಮುನ್ನ ಈ ಅಂಶಗಳನ್ನು ಪರಿಶೀಲಿಸಿ!

|

ಪ್ರಸ್ತುತ ದಿನಗಳಲ್ಲಿ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಸಾಕಷ್ಟು ವಿಶಾಲವಾಗಿದೆ. ಇದರಿಂದ ಸ್ಮಾರ್ಟ್‌ಫೋನ್‌ ಖರೀದಿಸುವವರಗೆ ಹಲವು ಸ್ಮಾರ್ಟ್‌ಫೋನ್‌ಗಳ ಆಯ್ಕೆ ಲಭ್ಯವಿದೆ. ನಿಮ್ಮ ಆಯ್ಕೆಯ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವುದಕ್ಕೆ ಸಾಧ್ಯವಾಗಲಿದೆ. ವಿಶ್ವದಲ್ಲಿ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಾಗಿರುವ ಭಾರತದಲ್ಲಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಬಿಡುಯಾಗುತ್ತಿವೆ. ಜೊತೆಗೆ ಮಧ್ಯಮ-ಶ್ರೇಣಿಯ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ಕೂಡ ಗ್ರಾಹಕರ ಕೈ ಸೇರುತ್ತಿವೆ.

ಬಜೆಟ್‌

ಹೌದು, ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಅನೇಕ ಸ್ಮಾರ್ಟ್‌ಫೋನ್ ಕಂಪನಿಗಳು ವೆಚ್ಚವನ್ನು ಕಡಿಮೆ ಮಾಡಲು ಬಜೆಟ್ ಡಿವೈಸ್‌ಗಳನ್ನು ಪರಿಚಯಿಸುತ್ತಿವೆ. ಇದರಿಂದ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತಿವೆ. ಇದೇ ಕಾರಣಕ್ಕೆ ಭಾರತದಲ್ಲಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಆದರೆ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಮುನ್ನ ನೀವು ಕೆಲವು ಅಂಶಗಳನ್ನು ಪರಿಗಣಿಸುವುದು ಸೂಕ್ತವಾಗಿದೆ. ಹಾಗಾದ್ರೆ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಖರೀದಿಸುವಾಗ ನೀವು ಗಮನಿಸಲೇಬೇಕಾದ ಅಂಶಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಆಯ್ಕೆಯ ಫೋನ್‌ ಯಾವುದು ಎಂದು ತಿಳಿಯಿರಿ?

ನಿಮ್ಮ ಆಯ್ಕೆಯ ಫೋನ್‌ ಯಾವುದು ಎಂದು ತಿಳಿಯಿರಿ?

ನೀವು ಬಜೆಟ್‌ ಸ್ಮಾರ್ಟ್‌ಫೋನ್‌ ಖರೀದಿಸುವ ಮುನ್ನ ನಿಮಗೆ ಯಾವ ಮಾದರಿಯ ಫೋನ್‌ ಬೇಕೆ ಎಂದು ನಿರ್ಧರಿಸುವುದು ಸೂಕ್ತ. ಡಿಸ್‌ಪ್ಲೇ, ಕ್ಯಾಮರಾ, ಬ್ಯಾಟರಿ ಬಾಳಿಕೆ, ಪ್ರೊಸೆಸರ್, ಸ್ಮಾರ್ಟ್‌ಫೋನ್‌ ವಿನ್ಯಾಸ, ಸಾಫ್ಟ್‌ವೇರ್ ಅಪ್‌ಡೇಟ್‌ ನಂತಹ ವಿಚಾರವನ್ನು ತಿಳಿದುಕೊಂಡು ಸ್ಮಾರ್ಟ್‌ಫೋನ್‌ ಖರೀದಿಸಲು ಮುಂದಾಗಿ. ಅಲ್ಲದೆ ಸ್ಮಾರ್ಟ್‌ಫೋನ್‌ ಸ್ಪೀಕರ್‌ಗಳು, ಬ್ಯಾಟರಿ ಗುಣಮಟ್ಟದ ಬಗ್ಗೆ ಸೂಕ್ತವಾಗಿ ಪರಿಶೀಲಿಸುವುದು ಉತ್ತಮ ಎನಿಸಲಿದೆ.

ಖರೀದಿಸುವ ಮುನ್ನ ಪರಿಶೀಲಿಸಿ

ಖರೀದಿಸುವ ಮುನ್ನ ಪರಿಶೀಲಿಸಿ

ಇದಲ್ಲದೆ ನೀವು ನಿಮ್ಮ ದಿನಿತ್ಯ ಬಳಕೆಯ ಸಂದರ್ಭಕ್ಕೆ ಅನುಗುಣವಾಗಿ ಸ್ಮಾರ್ಟ್‌ಫೋನ್‌ ಖರೀದಿಸಬೇಕು. ಅಂದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಹೆಚ್ಚಿನ ವಿಷಯವನ್ನು ಬಳಸುತ್ತಿದ್ದರೆ, ಡ್ಯುಯಲ್ ಸ್ಪೀಕರ್‌ಗಳೊಂದಿಗೆ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರುವ ಫೋನ್ ಅನ್ನು ಖರೀದಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಇದರಲ್ಲಿ ಹೆಚ್ಚಿನ ಬಜೆಟ್ ಸ್ಮಾರ್ಟ್‌ಫೋನ್‌ಗಳು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿವೆ. ಆದರೆ ಅಂತಿಮಗೊಳಿಸುವ ಮತ್ತು ಖರೀದಿಸುವ ಮೊದಲು ಒಮ್ಮೆ ಪರಿಶೀಲಿಸುವುದು ಉತ್ತಮ.

ಪ್ರೊಸೆಸರ್‌ ಯಾವುದು ಎಂದು ಅರಿಯಿರಿ?

ಪ್ರೊಸೆಸರ್‌ ಯಾವುದು ಎಂದು ಅರಿಯಿರಿ?

ಇನ್ನು ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಬಯಸಿದರೆ, ಇತ್ತೀಚಿನ ಪ್ರೊಸೆಸರ್‌ ಬಲವನ್ನು ಒಳಗೊಂಡ ಫೋನ್‌ ಖರೀದಿಸಬೇಕು. ಇದಲ್ಲದೆ ಶಟರ್‌ಬಗ್‌ಗಳಿಗಾಗಿ, ಅಸಾಧಾರಣ ಕ್ಯಾಮರಾ ಕಾರ್ಯಕ್ಷಮತೆಯನ್ನು ನೀಡುವ ಬಜೆಟ್ ವಿಭಾಗದಲ್ಲಿ ಅನೇಕ ಆಯ್ಕೆಗಳು ದೊರೆಯಲಿದೆ. ಜನಪ್ರಿಯ ಬ್ರ್ಯಾಂಡ್‌ಗಳು ಮಧ್ಯಮ ಶ್ರೇಣಿ ಮತ್ತು ಪ್ರೀಮಿಯಂ ಜಾಗದಲ್ಲಿ ಸಾಕಷ್ಟು ಉತ್ತಮ ಕ್ಯಾಮೆರಾ ಸೆನ್ಸರ್‌ಗಳನ್ನು ಹೊಂದಿರುವ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಆದರೆ ಮೆಗಾಪಿಕ್ಸೆಲ್ ಎಣಿಕೆ ಅಥವಾ ಸೆನ್ಸಾರ್‌ಗಳ ಸಂಖ್ಯೆಯ ಮೇಲೆ ನೀವು ಫೋನ್ ಅನ್ನು ಆಯ್ಕೆ ಮಾಡಬಾರದು. ಬದಲಿಗೆ ಕ್ಯಾಮರಾ ಕಾರ್ಯಕ್ಷಮತೆ ಮತ್ತು ಗುಣಮಟ್ಟಕ್ಕೆ ಮೊದಲ ಆಧ್ಯತೆ ನೀಡುವುದು ಉತ್ತಮ.

ಹೊಸ ಅಪ್ಡೇಟ್‌ಗಳಿಗೆ ಹೆಚ್ಚಿನ ಆದ್ಯತೆ

ಹೊಸ ಅಪ್ಡೇಟ್‌ಗಳಿಗೆ ಹೆಚ್ಚಿನ ಆದ್ಯತೆ

ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು 2022 ರಲ್ಲಿ ಆಂಡ್ರಾಯ್ಡ್‌ 11 ನೊಂದಿಗೆ ಬರುತ್ತಿವೆ. ಆದರೆ ನೀವು ಇತ್ತೀಚಿನ ಉಪಯುಕ್ತತೆ ವೈಶಿಷ್ಟ್ಯಗಳನ್ನು ಮಾತ್ರವಲ್ಲದೆ ಪ್ರಮುಖ ಗೌಪ್ಯತೆ ಮತ್ತು ಭದ್ರತಾ ನವೀಕರಣಗಳನ್ನು ಪಡೆಯುವುದಕ್ಕಾಗಿ ನೀವು ಆಂಡ್ರಾಯ್ಡ್‌ 12 ಅಪ್‌ಡೇಟ್‌ ಒಳಗೊಂಡ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವುದು ಉತ್ತಮ. ಇದಲ್ಲದೆ ನೀವು ಸ್ಮಾರ್ಟ್‌ಫೋನ್‌ ಖರೀದಿಸಿದ ನಂತರ ಸೇವಾ ನೆಟ್‌ವರ್ಕ್ ದೊರೆಯಲಿದೆಯಾ ಅನ್ನೊದನ್ನ ಗಮನಿಸಬೇಕು. ಅದರಲ್ಲೂ ನಿಮ್ಮ ಸ್ಮಾರ್ಟ್‌ಫೋನ್‌ ಸಮಸ್ಯೆಗಳನ್ನು ಪರಿಹರಿಸಲು ಮತ್ತು ದೂರುಗಳನ್ನು ಪರಿಹರಿಸಲು ಕಂಪನಿಯು ಸಾಮಾನ್ಯವಾಗಿ ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಪರಿಶೀಲಿಸುವುದು ಯೋಗ್ಯವಾಗಿದೆ.

4G ಅಥವಾ 5G ಸ್ಮಾರ್ಟ್‌ಫೋನ್?

4G ಅಥವಾ 5G ಸ್ಮಾರ್ಟ್‌ಫೋನ್?

ಇನ್ನು ಭಾರತದಲ್ಲಿ 5G ತರಂಗಾಂತರ ಹರಾಜುಗಳು ಈ ವರ್ಷದ ಕೊನೆಯಲ್ಲಿ ನಡೆಯಲಿವೆ. ಹರಾಜಿನ ನಂತರ, ದೇಶದ ವಿವಿಧ ಭಾಗಗಳಲ್ಲಿ ವಾಣಿಜ್ಯಿಕವಾಗಿ 5G ನೆಟ್‌ವರ್ಕ್ ಲಭ್ಯವಾಗಲಿದೆ. ಅದರಲ್ಲೂ ಮೆಟ್ರೋ ನಗರಗಳು ಮತ್ತು ಶ್ರೇಣಿ 1 ನಗರಗಳು ಮೊದಲು 5G ನೆಟ್‌ವರ್ಕ್ ಪಡೆಯುವ ಸಾಧ್ಯತೆಯಿದೆ. ಇದರಿಂದ ನೀವು ಸ್ಮಾರ್ಟ್‌ಫೋನ್‌ ಖರೀದಿಸುವಾಗ ಆದು 4G ಅಥವಾ 5G ಎಂದು ತಿಳಿದುಕೊಳ್ಳಿ.

Best Mobiles in India

English summary
Here's the most important things to know before buying a budget smartphone in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X