ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ 43-ಇಂಚಿನ ಆಂಡ್ರಾಯ್ಡ್ ಸ್ಮಾರ್ಟ್ ಟಿವಿಗಳು

|

ಪ್ರಸ್ತುತ ದಿನಗಳಲ್ಲಿ ನಾನಾ ಗಾತ್ರದ ಸ್ಮಾರ್ಟ್‌ಟಿವಿಗಳನ್ನು ಕಾಣಬಹುದಾಗಿದೆ. ಹೊಸ ಮಾದರಿಯ ಟೆಕ್ನಾಲಜಿ ಆಧಾರಿತ ಸ್ಮಾರ್ಟ್‌ಟಿವಿಗಳು ಸಾಕಷ್ಟು ಸೌಂಡ್‌ ಮಾಡುತ್ತಿವೆ. ವಿಭಿನ್ನ ವಿನ್ಯಾಸದ ಸ್ಮಾರ್ಟ್‌ಟಿವಿಗಳ ಎಂಟ್ರಿಯಿಂದ ಟಿವಿ ಮಾರುಕಟ್ಟೆಯ ಶೈಲಿ ಬದಲಾಗಿ ಹೋಗಿದೆ. ಸದ್ಯ 4K ಅಲ್ಟ್ರಾ HD ವೀಡಿಯೊ ಗುಣಮಟ್ಟ ನೀಡುವ ಸ್ಮಾರ್ಟ್‌ಟಿವಿಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಅನೇಕ ಜನಪ್ರಿಯ ಬ್ರಾಂಡ್‌ಗಳು ಹಲವು ಆಕರ್ಷಕ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿವೆ.

ಸ್ಮಾರ್ಟ್‌ಟಿವಿ

ಹೌದು, ಟಿವಿ ಮಾರುಕಟ್ಟೆಯಲ್ಲಿ ಹಲವು ಆಕರ್ಷಕ ಸ್ಮಾರ್ಟ್‌ಟಿವಿಗಳು ಲಭ್ಯವಿದೆ. ಈ ಪೈಕಿ 43 ಇಂಚಿನ ಟಿವಿಗಳು ಕೂಡ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಅದರಲ್ಲೂ ಡಾಲ್ಬಿ ಸೌಂಡ್ ಔಟ್‌ಪುಟ್‌ ನೀಡುವ ಸ್ಮಾರ್ಟ್ ಟಿವಿಗಳಿಗೆ ಬೇಡಿಕೆ ಇದೆ. ಇನ್ನು ನೀವು ಕೂಡ 43 ಇಂಚಿನ ಸ್ಮಾರ್ಟ್‌ಟಿವಿ ಖರೀದಿಸಲು ಬಯಸಿದರೆ ಮಾರುಕಟ್ಟೆಯಲ್ಲಿ ಹಲವಾರು ಆಯ್ಕೆಗಳು ಲಭ್ಯವಿದೆ. ಒನ್‌ಪ್ಲಸ್‌, ಎಲ್‌ಜಿ, ಒನಿಡಾ ಸೇರಿದಂತೆ ಅನೇಕ ಬ್ರ್ಯಾಂಡ್‌ಗಳ ಟಿವಿಗಳನ್ನು ಖರೀದಿಸಬಹುದಾಗಿದೆ. ಹಾಗಾದ್ರೆ ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ 43 ಇಂಚಿನ ಅತ್ಯುತ್ತಮ ಸ್ಮಾರ್ಟ್‌ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್‌ ಬೇಸಿಕ್ಸ್‌ 43 ಇಂಚು

ಅಮೆಜಾನ್‌ ಬೇಸಿಕ್ಸ್‌ 43 ಇಂಚು

ಅಮೆಜಾನ್‌ ಬೇಸಿಕ್ಸ್‌ 43 ಇಂಚಿನ ಫುಲ್‌ ಹೆಚ್‌ಡಿ ಸ್ಮಾರ್ಟ್‌ LED ಫೈರ್‌ TV ಅತ್ಯುತ್ತಮ ಆಯ್ಕೆಯಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 26,999 ರೂ. ಬೆಲೆ ಹೊಂದಿದೆ. ಇದು 1920x1080 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ ಹೆಚ್‌ಡಿ ಸ್ಕ್ರೀನ್‌ ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ 2 HDMI ಪೋರ್ಟ್‌ಗಳು, ಬ್ಲೂ-ರೇ ಪ್ಲೇಯರ್‌ಗಳು, ಗೇಮಿಂಗ್ ಕನ್ಸೋಲ್, ಅಂತರ್ನಿರ್ಮಿತ 20 ವ್ಯಾಟ್‌ ಪವರ್‌ ಬಾಸ್‌ ಸ್ಪೀಕರ್‌ಗಳು, ಅಂತರ್ನಿರ್ಮಿತ ಅಲೆಕ್ಸಾ ಮತ್ತು ಅಲೆಕ್ಸಾ ವಾಯ್ಸ್‌ ಕಂಟ್ರೋಲ್‌ನಿ ಮತ್ತು DTH ಸೆಟ್-ಟಾಪ್ ಬಾಕ್ಸ್ ಇಂಟಿಗ್ರೇಷನ್ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ನೆಟ್‌ಫ್ಲಿಕ್ಸ್‌, ಸೋನಿ ಲೈವ್‌, ಅಲೆಕ್ಸಾ, ಅಮೆಜಾನ್‌ ವೀಡಿಯೊ,ಹಾಟ್‌ಸ್ಟಾರ್‌, ಮೂವಿಸ್‌ & TV, ಯೂಟ್ಯೂಬ್‌ ಅನ್ನು ಬೆಂಬಲಿಸುತ್ತದೆ.

ಒನ್‌ಪ್ಲಸ್‌ 43 ಇಂಚಿನ Y ಸರಣಿ

ಒನ್‌ಪ್ಲಸ್‌ 43 ಇಂಚಿನ Y ಸರಣಿ

43 ಇಂಚಿನ ಸ್ಮಾರ್ಟ್‌ಟಿವಿಗಳಲ್ಲಿ ಒನ್‌ಪ್ಲಸ್‌ 43 ಇಂಚು Y ಸರಣಿಯ ಫುಲ್‌ HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಕೂಡ ಉತ್ತಮ ಆಯ್ಕೆಯಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ 27,999ರೂ.ಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಟಿವಿಯು ಬ್ಲೂ ರೇ ಪ್ಲೇಯರ್‌ಗಳು, ಗೇಮಿಂಗ್ ಕನ್ಸೋಲ್, 20 ವ್ಯಾಟ್ಸ್ ಡಾಲ್ಬಿ ಆಡಿಯೋ, ಆಂಡ್ರಾಯ್ಡ್ ಟಿವಿ 9.0, ಕನೆಕ್ಟ್, ಗೂಗಲ್ ಅಸಿಸ್ಟೆಂಟ್ ಮತ್ತು ಹಾರ್ಡ್ ಡ್ರೈವ್‌ಗಳನ್ನು ಬೆಂಬಲಿಸಲಿದೆ. ಇತರ USB ಡಿವೈಸ್‌ಗಳನ್ನು ಕನೆಕ್ಟ್‌ ಮಾಡಲು 2 USB ಪೋರ್ಟ್‌ಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಟಿವಿಯು ಪ್ಲೇ ಸ್ಟೋರ್, ಕ್ರೋಮ್‌ಕಾಸ್ಟ್ ಮತ್ತು ಹಂಚಿದ ಆಲ್ಬಮ್‌ನೊಂದಿಗೆ ಬರುತ್ತದೆ.

ಒನಿಡಾ 43 ಇಂಚಿನ ಸ್ಮಾರ್ಟ್ LED ಫೈರ್ ಟಿವಿ

ಒನಿಡಾ 43 ಇಂಚಿನ ಸ್ಮಾರ್ಟ್ LED ಫೈರ್ ಟಿವಿ

ಒನಿಡಾ ಸಂಸ್ಥೆಯ 43 ಇಂಚಿನ ಫೈರ್ ಟಿವಿ 27,499ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಈ ಟಿವಿಯು ಕಾಂಪ್ಯಾಕ್ಟ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಲಾದ ಫೀಚರ್ಸ್‌ಗಳ ಒಂದು ಬಂಡಲ್ ಆಗಿದೆ. ಇದರಲ್ಲಿ ನೆಟ್‌ಫ್ಲಿಕ್ಸ್, ಪ್ರೈಮ್ ಮತ್ತು ಹಾಟ್‌ಸ್ಟಾರ್ ಎಲ್ಲವನ್ನೂ ಒಟ್ಟುಗೂಡಿಸಲಾಗಿದೆ. ಬ್ಲೂ ರೇ ಪ್ಲೇಯರ್‌ಗಳು, ಗೇಮಿಂಗ್ ಕನ್ಸೋಲ್‌ಗಳು ಮತ್ತು ಪಿಸಿಯನ್ನು ಸಹ ಸಂಪರ್ಕಿಸಲು 3HDMI ಪೋರ್ಟ್‌ಗಳಿವೆ. ಚಲನಚಿತ್ರಗಳು, ಮ್ಯೂಸಿಕ್‌ ಮತ್ತು ಹೆಚ್ಚಿನದನ್ನು ಹುಡುಕಲು ಅಲೆಕ್ಸಾ ಜೊತೆಗಿನ ಧ್ವನಿ ದೂರಸ್ಥವು ನಿಮಗೆ ಸಹಾಯ ಮಾಡುತ್ತದೆ. ರಿಮೋಟ್ ಅಲೆಕ್ಸಾ ವಾಯ್ಸ್ ಸರ್ಚ್, ಡಿಟಿಎಸ್ ಟ್ರೂಸರೌಂಡ್, ಬಿಲ್ಟ್-ಇನ್ ಫೈರ್ ಟಿವಿ ಓಎಸ್, ಅಲೆಕ್ಸಾ ವಾಯ್ಸ್ ಕಂಟ್ರೋಲ್, ಲೈವ್ ಟಿವಿ ಟ್ಯಾಬ್ ಫೀಚರ್ಸ್‌ ಅನ್ನು ಒಳಗೊಂಡಿದೆ.

LG 43 ಇಂಚಿನ ಫುಲ್‌ HD LED ಸ್ಮಾರ್ಟ್ ಟಿವಿ

LG 43 ಇಂಚಿನ ಫುಲ್‌ HD LED ಸ್ಮಾರ್ಟ್ ಟಿವಿ

ಎಲ್‌ಜಿ 43 ಇಂಚಿನ 4K ಫುಲ್‌ ಹೆಚ್‌ಡಿ LED ಸ್ಮಾರ್ಟ್‌ಟಿವಿ 43 ಇಂಚಿನ ಟಿವಿಗಳಲ್ಲಿ ಒಂದಾಗಿದೆ. ಇದು 1920 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಹೊಂದಿದ್ದು, 50Hz ರಿಫ್ರೆಶ್ ರೇಟ್‌ಅನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿ DTS ವರ್ಚುವಲ್ X ಸೌಂಡ್‌ ನಿಮಗೆ ಬಹುಆಯಾಮದ ಆಡಿಯೊಗೆ ಪ್ರವೇಶವನ್ನು ನೀಡುತ್ತದೆ. ಇದು ಸಕ್ರಿಯ ಎಚ್‌ಡಿಆರ್ ಪರದೆಯ ಮೇಲಿನ ಪ್ರತಿಯೊಂದು ವಿವರವನ್ನು ಅತ್ಯುತ್ತಮವಾಗಿಸುತ್ತದೆ. ಜೊತೆಗೆ ಎಲ್‌ಜಿಯ ಡೈನಾಮಿಕ್ Scene-by-scene Adjustment ಟೆಕ್ನಾಲಜೆಯನ್ನು ಸಹ ನೀಡಲಾಗಿದೆ. ಇದು Amazon ನಲ್ಲಿ 33,490 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಟಿವಿ ಮಲ್ಟಿ-ಟಾಸ್ಕಿಂಗ್, ಸ್ಕ್ರೀನ್ ಮಿರರಿಂಗ್, ಆಫೀಸ್ 365, ಮತ್ತು ವೈ-ಫೈ. ಯನ್ನು ಹೊಂದಿದೆ.

Vu 43 ಇಂಚು ಫುಲ್‌ HD ಅಲ್ಟ್ರಾ ಆಂಡ್ರಾಯ್ಡ್‌ ಎಲ್‌ಇಡಿ ಟಿವಿ

Vu 43 ಇಂಚು ಫುಲ್‌ HD ಅಲ್ಟ್ರಾ ಆಂಡ್ರಾಯ್ಡ್‌ ಎಲ್‌ಇಡಿ ಟಿವಿ

ಇನ್ನು Vu 43 ಇಂಚಿನಫುಲ್‌ ಹೆಚ್‌ಡಿ ಅಲ್ಟ್ರಾ ಆಂಡ್ರಾಯ್ಡ್‌ LED TV ನಿಮಗೆ ಕೇವಲ 26,990 ರೂ. ಗಳಿಗೆ ಲಭ್ಯವಾಗಲಿದೆ. ಇದು Android Pie 9.0, A+ ಗ್ರೇಡ್ LED ಪ್ಯಾನಲ್, ಬ್ಲೂಟೂತ್ 5.0, ನಂತಹ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ. ಇದಲ್ಲದೆ ಕ್ರೊಮಾಕಾಸ್ಟ್‌ ಬಿಲ್ಟ್‌ ಇನ್‌ ಗೂಗಲ್‌ ಗೇಮ್ಸ್‌, ಗೂಗಲ್‌ ಎಕೋ ಸಿಸ್ಟಂ, 24 Watts ಔಟ್‌ಪುಟ್, ಹಾರ್ಡ್ ಡ್ರೈವ್‌ಗಳು ಮತ್ತು ಇತರ USB ಡಿವೈಸ್‌ಗಳನ್ನು ಕನೆಕ್ಟ್‌ ಮಾಡಲು 2USB ಪೋರ್ಟ್‌ಗಳನ್ನು ಸಹ ಹೊಂದಿದೆ.

Most Read Articles
Best Mobiles in India

English summary
If you want to buy a new 43-inch smart TV with 4K Ultra HD video quality and blazing Dolby sound output, several options are available in the market.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X