WWDC 2022ರಲ್ಲಿ ಆಪಲ್ ತೆಗೆದುಕೊಂಡ ಅಚ್ಚರಿಯ ನಿರ್ಧಾರಗಳು!
ಟೆಕ್ ಲೋಕದ ದಿಗ್ಗಜ ಎನಿಸಿಕೊಂಡಿರುವ ಆಪಲ್ ಕಂಪೆನಿ ತನ್ನ ವಾರ್ಷಿಕ ಸಮ್ಮೇಳನ WWDC 2022 ರಲ್ಲಿ ಹಲವು ಹೊಸ ಪ್ರಾಡಕ್ಟ್‌ಗಳನ್ನು ಅನಾವರಣಗೊಳಿಸಿದೆ. ಇದಲ್ಲದೆ ಆಪಲ್ ಕಂಪನಿ ಹೊಸದಾಗಿ iOS16 ಅನ್ನು ಘೋಷಣೆ ಮಾಡಿದೆ. ಜೊತೆಗೆ ಆಪಲ್ ವಾಚ್, ಮ್ಯಾಕ್ ಮತ್ತು ಐಪ್ಯಾಡ್‌ಗಾಗಿ ಸಾಫ್ಟ್‌ವೇರ್ ಅಪ್ಡೇಟ್‌ಗಳನ್ನು ಕೂಡ ಪ್ರಕಟಿಸಿದೆ. ಹಾಗೆಯೇ M2 ಪ್ರೊಸೆಸರ್ ಒಗೊಂಡಿರುವ ಅಪ್ಡೇಟೆಡ್ ಮ್ಯಾಕ್‌ಬುಕ್ ಏರ್ ಅನ್ನು ಕೂಡ ಪರಿಚಯಿಸಿದೆ. ಇನ್ನು ಈ ಸಮ್ಮೇಳನದಲ್ಲಿ ಆಪಲ್ ಕಂಪೆನಿ ಕೆಲವು ಅಚ್ಚರಿಯ ನಿರ್ಧಾರಗಳನ್ನು ಕೂಡ ಪ್ರಕಟಿಸಿದೆ.

ಹೌದು, ಆಪಲ್ ಕಂಪೆನಿಯ ಈ ವರ್ಷದ WWDC ಸಮ್ಮೇಳನದಲ್ಲಿ ಹಲವು ಅಚ್ಚರಿಯ ನಿರ್ಧಾರಗಳು ಪ್ರಕಟವಾಗಿವೆ. ಇದರಲ್ಲಿ ಭವಿಷ್ಯದ ಕಾರ್‌ಪ್ಲೇ, ಐಫೋನ್ ಅನ್ನು ಮ್ಯಾಕ್‌ನಲ್ಲಿ ವೆಬ್‌ಕ್ಯಾಮ್‌ನಂತೆ ಬಳಸುವ ಸಾಮರ್ಥ್ಯ ಸೇರಿದಂತೆ ಹಲವು ಹೊಸತನಗಳನ್ನು ಆಪಲ್ ಕಂಪೆನಿ ಪ್ರಕಟಿಸಿದೆ. ಇದಲ್ಲದೆ ಹೊಸ ಮ್ಯಾಕ್‌ಬುಕ್ ಏರ್ ಬೆಲೆಯನ್ನು ಕೂಡ ಹೆಚ್ಚಳ ಮಾಡಿದ್ದು ಗ್ರಾಹಕರಿಗೆ ಶಾಕ್ ನೀಡಿದೆ. ಹಾಗಾದ್ರೆ ಆಪಲ್ ಕಂಪೆನಿ WWDC 2022ನಲ್ಲಿ ತೆಗೆದುಕೊಂಡಿರುವ ಕೆಲವು ಅಚ್ಚರಿಯ ನಿಧಾರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್ ಅನ್ನು ಮ್ಯಾಕ್ ವೆಬ್‌ಕ್ಯಾಮ್ ಆಗಿ ಬಳಸುವ ಆಯ್ಕೆ
ಆಪಲ್ ಕಂಪೆನಿ ತನ್ನ WWDC 2022 ಸಮ್ಮೇಳನದಲ್ಲಿ ತೆಗೆದುಕೊಂಡಿರುವ ಆಶ್ಚರ್ಯಕರ ನಿರ್ಧಾರಗಳಲ್ಲಿ ಇದು ಕೂಡ ಒಂದಾಗಿದೆ. ಆಪಲ್ ಕಂಪೆನಿ ಹೇಳಿರುವಂತೆ ಶೀಘ್ರದಲ್ಲೇ ಐಫೋನ್ ಅನ್ನು ಮ್ಯಾಕ್ ವೆಬ್‌ಕ್ಯಾಮ್ ಆಗಿ ಬಳಸುವ ಆಯ್ಕೆ ಲಭ್ಯವಾಗಲಿದೆ. ಇದರಿಂದ ನಿಮ್ಮ ಐಫೋನ್‌ಗಳನ್ನು ಮ್ಯಾಕ್‌ಗಳಿಗೆ ಪ್ಲಗ್ ಮಾಡಲು ಸಾಧ್ಯವಾಗುತ್ತದೆ. ಆದರೆ ಐಫೋನ್ ಅನ್ನು ವೆಬ್‌ಕ್ಯಾಮ್ ಆಗಿ ಪರಿವರ್ತಿಸಲು ನೀವು ಐಫೋನ್ ಅನ್ನು iOS 16 ಗೆ ಅಪ್ಡೇಟ್ ಮಾಡಬೇಕಾಗುತ್ತದೆ. ಅಲ್ಲದೆ ಮ್ಯಾಕ್ ಅನ್ನು ಇತ್ತೀಚಿನ ಮ್ಯಾಕ್OS Venturaಗೆ ಅಪ್ಡೇಟ್ ಮಾಡಬೇಕಾಗುತ್ತದೆ. ಇನ್ನು ಈ ಫೀಚರ್ಸ್ ಮೂಲಕ ನೀವು ಒಂದೇ ಸಮಯದಲ್ಲಿ ಎರಡು ಐಫೋನ್ ಕ್ಯಾಮೆರಾ ಲೆನ್ಸ್‌ಗಳನ್ನು ಬಳಸಲು ಅವಕಾಶ ಸಿಗಲಿದೆ. ಇದನ್ನು "ಡೆಸ್ಕ್ ವ್ಯೂ" ಎಂದು ಹೆಸರಿಸಲಾಗಿದ್ದು, ಅನ್ಬಾಕ್ಸಿಂಗ್ ವೀಡಿಯೊಗಳನ್ನು ಮಾಡಲು ಇದು ಉತ್ತಮವಾಗಿದೆ.

ಆಲ್- ನ್ಯೂ ಕಾರ್‌ಪ್ಲೇ
ಆಪಲ್ ಕಂಪನಿ ತನ್ನ ಕಾರ್ ಪ್ಲೇ ಅಪ್ಲಿಕೇಶನ್‌ನಲ್ಲಿ ಹೊಸ ಬದಲಾವಣೆ ಮಾಡಿದೆ. ತನ್ನ ವಾರ್ಷಿಕ ಸಮ್ಮೇಳನದಲ್ಲಿ ಹೊಸ ತಲೆಮಾರಿನ ಆಲ್-ನ್ಯೂ ಕಾರ್‌ಪ್ಲೇ ಬಗ್ಗೆ ಪ್ರಕಟಣೆ ನೀಡಿದೆ. ಇನ್ನು ಆಲ್ ಇನ್-ಕಾರ್ ಇಂಟರ್ಫೇಸ್ ಅನ್ನು ಹೊಂದಿದ್ದು, ನಿಮ್ಮ ರೇಡಿಯೊವನ್ನು ನೀವು ಕಂಟ್ರೋಲ್ ಮಾಡುವ ವಿಧಾನ, ನಿಮ್ಮ AC ಅನ್ನು ಸರಿಹೊಂದಿಸುವುದು ಮತ್ತು ಇಂಧನ ಮಟ್ಟ ಅಥವಾ ವೇಗದಂತಹ ಕಾರ್ ಡೇಟಾವನ್ನು ವೀಕ್ಷಿಸುವುದು ಇದರಿಂದ ಸುಲಭವಾಗಲಿದೆ. ನೆಕ್ಸ್ಟ್ ಜನರೇಶನ್ ಕಾರ್‌ಪ್ಲೇ ಬೆಂಬಲಿಸುವ ಮೊದಲ ಕಾರುಗಳನ್ನು ಮುಂದಿನ ವರ್ಷದ ಕೊನೆಯಲ್ಲಿ ಘೋಷಿಸಲಾಗುತ್ತದೆ ಎನ್ನಲಾಗಿದೆ.

ಡಿಜಿಟಲ್ ವೈಟ್‌ಬೋರ್ಡ್ ಅಪ್ಲಿಕೇಶನ್
ಪ್ರಸ್ತುತ ದಿನಗಳಲ್ಲಿ ವೈಟ್‌ಬೋರ್ಡ್ ಅಪ್ಲಿಕೇಶನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ರಿಮೋಟ್ ಮೀಟಿಂಗ್, ಆನ್‌ಲೈನ್ ಕೊಲಾಬ್ರೇಶನ್ ಮತ್ತು ಪ್ರಸ್ತುತಿಗಳಿಗಾಗಿ ವೈಟ್‌ಬೋರ್ಡ್ ಅನ್ನು ಬಳಸಲಾಗುತ್ತದೆ. ಇದೇ ಕಾರಣಕ್ಕೆ ಆಪಲ್ ಕಂಪೆನಿ ವೈಟ್‌ಬೋರ್ಡ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಲಾಗಿದೆ. ಇದನ್ನು ಫ್ರೀಫಾರ್ಮ್ ಎಂದು ಹೇಳಲಾಗಿದ್ದು, ಈ ವರ್ಷದ ನಂತರ iOS 16, iPadOS 16 ಮತ್ತು macOS ವೆಂಚುರಾದಲ್ಲಿ ಲಭ್ಯವಾಗಲಿದೆ. ಫ್ರೀಫಾರ್ಮ್ ಲೋಕಲ್ ಫೇಸ್‌ಟೈಮ್ ಏಕೀಕರಣದೊಂದಿಗೆ ನೋಟ್ ತೆಗೆದುಕೊಳ್ಳುವ ಅಪ್ಲಿಕೇಶನ್ ಆಗಿದೆ. ಇದರಲ್ಲಿ ಬಳಕೆದಾರರು ಟಿಪ್ಪಣಿಗಳು, ಫೋಟೋಗಳು, ಡೂಡಲ್‌ಗಳು ಅಥವಾ PDF ಗಳನ್ನು ಡ್ರಾಪ್-ಇನ್ ಮಾಡಬಹುದಾಗಿದೆ.


Click it and Unblock the Notifications








