ಬ್ಲಾಕಿಂಗ್‌ ಸೈಟ್‌ಗಳಿಗೂ ಪ್ರವೇಶ ನೀಡಬಲ್ಲ ಅತ್ಯುತ್ತಮ ಸ್ಟ್ರಿಮಿಂಗ್‌ VPN ಗಳು!

|

ಪ್ರಸ್ತುತ ದಿನಗಳಲ್ಲಿ ಆನ್‌ಲೈನ್‌ ಸೆಕ್ಯುರಿಟಿ ಸಾಫ್ಟ್‌ವೇರ್‌ಗಳಿಗೆ ಸಾಕಷ್ಟು ಬೇಡಿಕೆ ಇದೆ. ಅದರಲ್ಲೂ VPN ಸಾಪ್ಟ್‌ವೇರ್‌ಗಳಿಗೆ ಸಾಕಷ್ಟು ಜನಪ್ರಿಯತೆ ಇದೆ. VPNಗಳು ನಿಮಗೆ ಆನ್‌ಲೈನ್‌ ಸೆಕ್ಯುರಿಟಿ ಜೊತೆಗೆ ಸ್ಟ್ರೀಮಿಂಗ್ ಕ್ಯಾಚ್-ಅಪ್ ಟಿವಿ ಮತ್ತು ಆನ್‌ಲೈನ್ ಲೈವ್ ಈವೆಂಟ್‌ಗಳನ್ನು ಲೈಕ್‌ ಮಾಡುವವರಿಗೆ ಇದು ಸಹಾಯಕವಾಗಿದೆ. ಏಕೆಂದರೆ ಸ್ಟಿಮಿಂಗ್‌ VPNಗಳು ನಿಮ್ಮ ಇಂಟರ್‌ನೆಟ್ ಟ್ರಾಫಿಕ್ ಅನ್ನು ಸೇಪ್ಟಿ ಸರ್ವರ್ ಮೂಲಕ ರಿ ಡೈರೆಕ್ಟ್‌ ಮಾಡಲು ಅವಕಾಶ ನೀಡಲಿದೆ.

VPN

ಹೌದು, VPNಗಳು ಇಂದಿನ ದಿನಗಳಲ್ಲಿ ಸಾಕಷ್ಟು ಅವಶ್ಯಕ ಹಾಗೂ ಸಹಾಯಕವಾಗಿವೆ. ಅಲ್ಲದೆ VPN ಬಳಸುವುದರಿಂದ ಬೇರೆಯವರ ಹಸ್ತಕ್ಷೇಪ ಇರದಂತೆ ಎನ್‌ಕ್ರಿಪ್ಟ್‌ ಮಾಡಲಾಗಿದೆ. ಇದನ್ನು ಬಳಸಿಕೊಂಡು ನೀವು ನಿಮ್ಮದೇ ಆದ ಪ್ರೈವೆಟ್‌ ಇಂಟರ್‌ನೆಟ್‌ ಅನ್ನು ಕ್ರಿಯೆಟ್‌ ಮಾಡಿಕೊಳ್ಳಬಹುದು. ಇದರಿಂದ ನೀವು ನಿರ್ಬಂದಿತ ವಾಗಿರುವ ಸ್ಟ್ರಿಮಿಂಗ್‌ ಸೇವೆಗಳನ್ನು ಕೂಡ ಪ್ರವೇಶಿಸುವುದಕ್ಕೆ VPNಗಳು ಸಹಾಯಕವಾಗಿದೆ. ಹಾಗಾದ್ರೆ ಭಾರತದಲ್ಲಿ ನಿಮಗೆ ಉತ್ತಮ ಸ್ಟ್ರಿಮಿಂಗ್‌ ಸೇವೆ ನೀಡುವ VPNಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿಪಿಎನ್‌

ವಿಪಿಎನ್‌ ಅಂದರೆ, ವರ್ಚುವಲ್ ಪ್ರೈವೇಟ್ ನೆಟ್ವರ್ಕ್‌ ಎಂದರ್ಥ. ವಿಪಿಎನ್‌ ಅನ್ನು ಬಳಸುವುದರಿಂದ ನಿಮ್ಮ ಇಂಟರ್‌ನೆಟ್‌ ಬಳಕೆಯಲ್ಲಿ ಬೇರಯವರ ಹಸ್ತಕ್ಷೇಪ ಇರದಂತೆ ತಡೆಯಬಹುದು. ಸ್ಟ್ರೀಮಿಂಗ್‌ಗಾಗಿ ಒಂದು ನಿರ್ದಿಷ್ಟ ದೇಶಕ್ಕೆ ಕಂಟೆಂಟ್ ಲಾಕ್ ಆಗಿರುವ ಭೌಗೋಳಿಕ ನಿರ್ಬಂಧಗಳನ್ನು ತಪ್ಪಿಸಲು VPN ನಿಮಗೆ ಅನುಮತಿಸುತ್ತದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ವಿಪಿಎನ್‌ ಸೇವೆಯನ್ನು ಬಳಸುತ್ತಾರೆ. ಸದ್ಯ ಪ್ರಸ್ತುತ ನಿಮ್ಮ ಆಯ್ಕೆಯ ಸ್ಮಾರ್ಟ್‌ಟಿವಿಗಳಲ್ಲಿ ಸ್ಟ್ರೀಮಿಂಗ್ ಸೇವೆ ಸಾಕಷ್ಟು ಜನಪ್ರಿಯತೆ ಪಡೆದಿದೆ. ಇದರಲ್ಲಿ ನಿಮ್ಮ ಆಯ್ಕೆಯ ಸ್ಟ್ರಿಮಿಂಗ್‌ ಸೇಔಎ ನಿಮ್ಮ ಪ್ರದೇಶದಲ್ಲಿ ಬ್ಲಾಕ್‌ ಆಗಿದ್ದರೆ ವಿಪಿಎನ್‌ ಬಳಸುವ ಮೂಲಕ ಪ್ರವೇಶಿಸಬಹುದು. ಸದ್ಯ ಭಾರತದಲ್ಲಿ ಯಾವ ಸ್ಟ್ರೀಮಿಂಗ್ VPN ಯಾವುದನ್ನು ಅನ್‌ಬ್ಲಾಕ್‌ ಮಾಡಲಿ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

1. ಎಕ್ಸ್‌ಪ್ರೆಸ್ VPN

1. ಎಕ್ಸ್‌ಪ್ರೆಸ್ VPN

ಭಾರತದಲ್ಲಿ ನೀವು ಬಳಸಬಹುದಾದ ಪ್ರಮುಖ ಸ್ಟ್ರೀಮಿಂಗ್‌ ಸೇವೆಗಳಲ್ಲಿ ExpressVPN ಕೂಡ ಒಂದಾಗಿದೆ. ಇದು ವಿಶ್ವದಲ್ಲೇ ಅತ್ಯುತ್ತಮವಾದ VPN ಆಗಿದೆ. ಇದು ಸಾಕಷ್ಟು ಸುರಕ್ಷಿತವಾಗಿದ್ದು, ಬಳಸಲು ಸುಲಭವಾಗಿದೆ. ಇನ್ನು ಈ ವಿಪಿಎನ್‌ ಸೇವೆಯನ್ನು ವಾರ್ಷಿಕ ಯೋಜನೆಯೊಂದಿಗೆ ತೆಗೆದುಕೊಂಡರೆ 3 ತಿಂಗಳ ಹೆಚ್ಚುವರಿ ಉಚಿತ ಸೇವೆಯನ್ನು ನೀಡಲಿದೆ. ಈ ವಿಪಿಎನ್‌ ಸಾಫ್ಟ್‌ವೇರ್‌ ಮೂಲಕ ಪೀಕಾಕ್, ಕಾಯೋ ಮತ್ತು DAZN ನಂತಹ ಪ್ರಾದೇಶಿಕ ಸೇವೆಗಳೊಂದಿಗೆ, ಇನ್ನು ಅನೇಕ ಸ್ಟ್ರೀಮಿಂಗ್ ಸೈಟ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಇದರಲ್ಲಿ ವಾರ್ಷಿಕ ಯೋಜನೆಯನ್ನು ಖರೀದಿಸಿದರೆ ತಿಂಗಳಿಗೆ $6.67 ಶುಲ್ಕ ವಿಧಿಸಲಿದೆ.

2. ನಾರ್ಡ್‌ VPN

2. ನಾರ್ಡ್‌ VPN

ನೀವು ಉಪಯೋಗಿಸಬಹುದಾದ ವಿಪಿಎನ್‌ ಸೇವೆಗಳಲ್ಲಿ ನಾರ್ಡ್‌ ವಿಪಿಎನ್‌ ಕೂಡ ಉತ್ತಮ ಆಯ್ಕೆಯಾಗಿದೆ. ಇನ್ನು ಈ ವಿಪಿಎನ್‌ ಸುಮಾರು 5,000 ಸರ್ವರ್‌ಗಳನ್ನು ಹೊಂದಿದೆ. ಎರಡು ಪ್ರತ್ಯೇಕ ಸರ್ವರ್‌ಗಳ ಮೂಲಕ ಡೇಟಾವನ್ನು ಎರಡು ಬಾರಿ ಎನ್‌ಕ್ರಿಪ್ಟ್ ಮಾಡುವ ಡಬಲ್ VPN ಫೀಚರ್ಸ್‌ ಹೊಂದಿದೆ. ಸ್ಟ್ರೀಮಿಂಗ್ ವೆಬ್‌ಸೈಟ್‌ಗಳ ಜಿಯೋ-ಬ್ಲಾಕ್‌ಗಳನ್ನು ಬೈಪಾಸ್ ಮಾಡಲು ಬಳಸುವ ಸುರಕ್ಷಿತ ವಿಪಿಎನ್‌ ಇದಾಗಿದೆ. ಇದನ್ನು ಬಳಸಿ ನೆಟ್‌ಫ್ಲಿಕ್ಸ್‌, ಹುಲು, ಅಮೆಜಾನ್‌ ಪ್ರೈಮ್‌, BBC iPlayer, Disney+, HBO Max, ಯೂಟ್ಯೂಬ್‌ ಅನ್ನು ಪ್ರವೇಶಬಹುದು. ಜೊತೆಗೆ ಅನೇಕ್‌ ಬ್ಲಾಕ್‌ ಸೈಟ್‌ಗಳನ್ನು ಅನ್‌ಬ್ಲಾಕ್‌ ಮಾಡಬಹುದಾಗಿದೆ. ಇದಲ್ಲದೆ ವಿದೇಶದಿಂದ ಪ್ರಸಾರ ಆಗುವ ಅನೇಕ ಸ್ಟ್ರೀಮಿಂಗ್ ಸೇವೆಗಳ ಸಂಪೂರ್ಣ ಶ್ರೇಣಿಯನ್ನು ಸುಲಭವಾಗಿ ಅನ್‌ಬ್ಲಾಕ್‌ ಮಾಡಬಹುದಾಗಿದೆ. ಇನ್ನು ನಾರ್ಡ್‌ ವಿಪಿಎನ್‌ ಎರಡು ವರ್ಷದ ಆಯ್ಕೆಯ ಪ್ರಯೋಜನ ಪಡೆದರೆ ತಿಂಗಳಿಗೆ $3.29 ಶುಲ್ಕ ವಿಧಿಸಲಿದೆ.

3. ಸರ್ಫ್‌ಶಾರ್ಕ್

3. ಸರ್ಫ್‌ಶಾರ್ಕ್

ನಿಮ್ಮ ಆಯ್ಕೆಯ ವಿಪಿಎನ್‌ ಸೇವೆಗಳಲ್ಲಿ ಸರ್ಫ್‌ಶಾರ್ಕ್ ವಿಪಿಎನ್‌ ಕೂಡ ಉತ್ತಮವಾಗಿರಲಿದೆ. ಇದು ನಿಮಗೆ ಅನೇಕ ಉತ್ತಮ ಫೀಚರ್ಸ್‌ಗಳನ್ನು ಕಡಿಮೆ ಬೆಲೆಯಲ್ಲಿ ನೀಡಲಿದೆ.ನೀವು ಧೀರ್ಘಾವಧಿಯ ಪ್ಲಾನ್‌ಗಳನ್ನು ಬಯಸಿದರೆ ತಿಂಗಳಿಗೆ$2.50 USD ಗಿಂತ ಕಡಿಮೆಯಿರುತ್ತದೆ. ಇದರ ಮೂಲಕ ಒಂದು ಚಂದಾದಾರಿಕೆಯು ಅನಿಯಮಿತ ಏಕಕಾಲಿಕ ಸಂಪರ್ಕಗಳಿಗಾಗಿ ನಿಮ್ಮನ್ನು ಆವರಿಸುತ್ತದೆ. ಅನೇಕ ಡಿವೈಸ್‌ಗಳಲ್ಲಿ ಒಂದೇ ಸಮಯದಲ್ಲಿ ಸ್ಟ್ರೀಮ್ ಮಾಡಲು ನೀವು Surfshark ಅನ್ನು ಬಳಸಬಹುದು.

Best Mobiles in India

Read more about:
English summary
VPNs are a handy tool for live TV, sport and streaming services.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X