1 ಲಕ್ಷದೊಳಗೆ ನೀವು ಖರೀದಿಸಬಹುದಾದ ಅತ್ಯುತ್ತಮ ಮಿರರ್‌ಲೆಸ್‌ ಕ್ಯಾಮೆರಾಗಳು!

|

ಪ್ರಸ್ತುತ ದಿನಗಳಲ್ಲಿ ಕ್ಯಾಮೆರಾ ಮಾರುಕಟ್ಟೆ ಸಾಕಷ್ಟು ಬದಲಾಗಿದೆ. ಇಂದಿನ ಟೆಕ್ನಾಲಜಿ ಜಮಾನದಲ್ಲಿ ಸಾಕಷ್ಟು ಕಲರ್‌ ಫುಲ್‌ ಕ್ಯಾಮೆರಾಗಳು ಮಾರುಕಟ್ಟೆಗೆ ಎಂಟ್ರಿ ನೀಡುತ್ತಾ ಬಂದಿದೆ. ಇದರ ನಡುವೆ ಕ್ಯಾಮೆರಾ ಮಾರುಕಟ್ಟೆಯಲ್ಲಿ ಕೆಲವು ಕಂಪೆನಿ ಜನಪ್ರಿಯ ಬ್ರ್ಯಾಂಡ್‌ ಎನಿಸಿಕೊಂಡಿವೆ. ಇದರಲ್ಲಿ ಕ್ಯಾನನ್‌, ನಿಕಾನ್‌, ಸೋನಿ, ಫ್ಯೂಜಿಫಿಲ್ಮ್‌ ಕಂಪೆನಿಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಈ ಎಲ್ಲಾ ಪ್ರಮುಖ ಕಂಪೆನಿಗಳ ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ತಮ್ಮದೇ ಆದ ಪ್ರಾಬಲ್ಯವನ್ನು ಸಾಧಿಸಿವೆ.

ಕ್ಯಾಮೆರಾ

ಹೌದು, ಕ್ಯಾಮೆರಾ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕ್ಯಾಮೆರಾಗಳು ಲಭ್ಯವಿವೆ. ಇವುಗಳಲ್ಲಿ ನೀವು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನಿಮ್ಮ ಬಜೆಟ್‌ಗೆ ಸರಿ ಹೊಂದುವ ಕ್ಯಾಮೆರಾಗಳನ್ನು ಆಯ್ಕೆ ಮಾಡಬಹುದು. ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾ ವಿನ್ಯಾಸ ಬದಲಾದಂತೆ ಕ್ಯಾಮೆರಾಗಳನ್ನು ಬಳಸುವವರ ಸಂಖ್ಯೆ ಕಡಿಮೆಯಾಗಿದೆ ಎಂದು ನಿಮಗೆ ಅನಿಸಬಹುದು. ಆದರೆ ಫೋಟೋಗ್ರಫಿ ಹಾಗೂ ವೀಡಿಯೊಗ್ರಫಿಯಲ್ಲಿ ಕ್ಯಾಮೆರಾಗಳ ಪಾತ್ರ ಮಹತ್ವದ್ದು. ಇದೇ ಕಾರಣಕ್ಕೆ ಇಂದಿಗೂ ಕೂಡ ಕ್ಯಾಮೆರಾ ಮಾರುಕಟ್ಟೆ ಸಾಕಷ್ಟು ಸೌಂಡ್‌ ಮಾಡ್ತಿದೆ.

ಕ್ಯಾಮೆರಾ

ಇನ್ನು ಕ್ಯಾಮೆರಾ ಮಾರುಕಟ್ಟೆಯಲ್ಲಿ ಪ್ರಮುಖ ಬ್ರ್ಯಾಂಡ್‌ಗಳು ಮಾತ್ರವಲ್ಲದೆ ಇತರೆ ಕಂಪೆನಿಗಳ ಕ್ಯಾಮೆರಾಗಳು ಕೂಡ ದೊರೆಯುತ್ತವೆ. ಆದರೆ ಹೆಚ್ಚಿನ ಜನರು ಬ್ರ್ಯಾಂಡ್‌ ಕಂಪೆನಿಗಳ ಕ್ಯಾಮೆರಾಗಳನ್ನು ಆಯ್ಕೆ ಮಾಡಲು ಬಯಸುತ್ತಾರೆ. ಇದಕ್ಕೆ ತಕ್ಕಂತೆ ಬ್ರ್ಯಾಂಡ್‌ ಕಂಪೆನಿಗಳು ಕೂಡ ವಿವಿಧ ಬೆಲೆ ಮಾದರಿಯಲ್ಲಿ ಅನೇಕ ಕ್ಯಾಮೆರಾಗಳನ್ನು ಪರಿಚಯಿಸುತ್ತಿವೆ. ಹಾಗಾದ್ರೆ ನೀವು ಕೂಡ ಒಂದೊಳ್ಳೆ ಕ್ಯಾಮೆರಾ ತೆಗೆದುಕೊಳ್ಳಲು ತಯಾರಿ ನಡೆಸಿದ್ದರೆ, ಒಂದು ಲಕ್ಷ ರೂ.ಒಳಗೆ ನೀವು ಖರೀದಿಸಬಹುದಾದ ಅತ್ಯುತ್ತಮ ಕ್ಯಾಮೆರಾಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ಯಾನನ್ EOS R10

ಕ್ಯಾನನ್ EOS R10

ಕ್ಯಾನನ್‌ ಕಂಪೆನಿಯ ಕ್ಯಾನನ್‌ EOS R10 ಕ್ಯಾಮೆರಾ 1 ಲಕ್ಷದೊಳಗೆ ನೀವು ಖರೀದಿಸಬಹುದಾದ ಅತ್ಯುತ್ತಮ ಮಿರರ್‌ಲೆಸ್‌ ಕ್ಯಾಮೆರಾ ಎನಿಸಿಕೊಂಡಿದೆ. ಈ ಕ್ಯಾಮೆರಾ 1.6x ಕ್ರಾಪ್ ಫ್ಯಾಕ್ಟರ್ ಜೊತೆಗೆ 24.2MP APS-C CMOS ಸೆನ್ಸಾರ್‌ ಅನ್ನು ಹೊಂದಿದೆ. ಇದು ಪ್ರತಿ ಸೆಕೆಂಡಿಗೆ 23 ಫ್ರೇಮ್‌ಗಳನ್ನು ಶೂಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಕ್ಯಾಮೆರಾ DIGIC X ಇಮೇಜ್ ಪ್ರೊಸೆಸರ್‌ ಒಳಗೊಂಡಿದ್ದು, ಹೆಚ್ಚಿನ ಇಮೇಜ್ ಗುಣಮಟ್ಟವನ್ನು ಅನುಮತಿಸುತ್ತದೆ. ಇನ್ನು ಈ ಕ್ಯಾಮೆರಾ 100 ರಿಂದ 32,000 ವರೆಗಿನ ವೈಡ್‌ ನಾರ್ಮಲ್‌ ISO ಸ್ಪೀಡ್‌ ರೇಂಜ್‌ ಅನ್ನು ಹೊಂದಿದೆ. ಇದು 60fps ನಲ್ಲಿ 4K ವೀಡಿಯೊಗಳನ್ನು ಶೂಟ್ ಮಾಡಬಹುದಕ್ಕೆ ಅವಕಾಶವಿದೆ. ಭಾರತದಲ್ಲಿ ಕ್ಯಾಮೆರಾ ಬೆಲೆ 80,995ರೂ.ಗಳಿಂದ ಪ್ರಾರಂಭವಾಗುತ್ತದೆ.

ನಿಕಾನ್ Z 30

ನಿಕಾನ್ Z 30

ನಿಕಾನ್‌ Z 30 ಕ್ಯಾಮೆರಾ ಅತ್ಯತ ಚಿಕ್ಕದಾದ ಮತ್ತು ಹಗುರವಾದ ಮಿರರ್‌ಲೆಸ್‌ ಕ್ಯಾಮೆರಾ ಆಗಿದೆ. ಈ ಕ್ಯಾಮೆರಾ ಕೇವಲ 350 ಗ್ರಾಂ ತೂಕವನ್ನು ಹೊಂದಿದೆ. ಇದು ವೇರಿ-ಆಂಗಲ್ 3-ಇಂಚಿನ ಟಚ್-ಸೆನ್ಸಿಟಿವ್ LCD ಅನ್ನು ಹೊಂದಿದೆ. ಈ ಕ್ಯಾಮೆರಾ ಮೂಲಕ ಬಳಕೆದಾರರು 125 ನಿಮಿಷಗಳ ಶೂಟಿಂಗ್ ಸಮಯವನ್ನು ನಿರೀಕ್ಷಿಸಬಹುದಾಗಿದೆ. ಅಲ್ಲದೆ ಸ್ಲೋ ಮೋಷನ್‌ ವೀಡಿಯೊಗಳಿಗಾಗಿ ಪ್ರತಿ ಸೆಕೆಂಡಿಗೆ 120 ಫ್ರೇಮ್‌ಗಳವರೆಗೆ ಫುಲ್‌ HD ವೀಡಿಯೊಗಳನ್ನು ಶೂಟ್ ಮಾಡಬಹುದು. ಇದರಲ್ಲಿ 20MP APS-C ಸೆನ್ಸಾರ್‌ ಜೊತೆಗೆ ಐ-ಡಿಟೆಕ್ಷನ್ ಆಟೋಫೋಕಸ್ ಮತ್ತು ಫುಲ್-ಟೈಮ್ ಆಟೋಫೋಕಸ್ ಫೀಚರ್ಸ್‌ಗಳನ್ನು ಕೂಡ ನೀಡಲಾಗಿದೆ. ಈ ಕ್ಯಾಮೆರಾ ಅಂದಾಜು 80,000 ರೂ. ಬೆಲೆಯಲ್ಲಿ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ.

ಸೋನಿ A6400

ಸೋನಿ A6400

ಸೋನಿ ಕಂಪೆನಿಯ ಕ್ಯಾಮೆರಾಗಳು ತಮ್ಮ ಗುಣಮಟ್ಟದ ಕಾರಣಕ್ಕಾಗಿ ಸಾಕಷ್ಟು ಸಂಚಲನ ಸೃಷ್ಟಿಸಿವೆ. ಇವುಗಳಲ್ಲಿ ಸೋನಿ A6400 ಕ್ಯಾಮೆರಾ ಕೂಡ ಒಂದು. ಈ ಕ್ಯಾಮೆರಾ ಹಳೆಯ ಮಾಡೆಲ್‌ ಆಗಿದ್ದರೂ ಈಗಲೂ ಕೂಡ ಅತ್ಯುತ್ತಮವಾದ ಮಿರರ್‌ಲೆಸ್‌ ಕ್ಯಾಮೆರಾ ಎನಿಸಿಕೊಂಡಿದೆ. ಇದು ಟಚ್‌ಸ್ಕ್ರೀನ್ ಅನ್ನು ಹೊಂದಿದ್ದು, ಇದನ್ನು 180 ಡಿಗ್ರಿಗಳವರೆಗೆ ತಿರುಗಿಸಬಹುದಾಗಿದೆ. ಈ ಕ್ಯಾಮೆರಾ 30fps ನಲ್ಲಿ 4K ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇನ್ನು ಈ ಕ್ಯಾಮೆರಾವು ವಿಶ್ವದ ಅತ್ಯಂತ ವೇಗದ 0.02 ಸೆಕೆಂಡ್ ಎಎಫ್ ಸ್ವಾಧೀನತೆಯ ವೇಗವನ್ನು ಹೊಂದಿದೆ ಎಂದು ಸೋನಿ ಹೇಳಿಕೊಂಡಿದೆ. ಇದರಲ್ಲಿ ನೀವು ನಿರಂತರ AF/AE ಟ್ರ್ಯಾಕಿಂಗ್‌ನೊಂದಿಗೆ ಅದರ ಸೈಲೆಂಟ್‌ ಶೂಟಿಂಗ್ ಮೋಡ್‌ನಲ್ಲಿ 8 fps ವರೆಗೆ ಶೂಟ್ ಮಾಡಬಹುದು. ಈ ಕ್ಯಾಮೆರಾ ಬಾಡಿಯನ್ನು 75,990 ರೂ.ಗೆ ಪರಿಚಯಿಸಲಾಗಿತ್ತು, ಇದರ 16-50 ಎಂಎಂ ಲೆನ್ಸ್ ಹೊಂದಿರುವ ಕಿಟ್‌ನ ಬೆಲೆ 85,990 ರೂ.ಗಳಿಗೆ ದೊರೆಯಲಿದೆ.

ಫ್ಯೂಜಿಫಿಲ್ಮ್ X-T30

ಫ್ಯೂಜಿಫಿಲ್ಮ್ X-T30

ಅತ್ಯುತ್ತಮ ಛಾಯಗ್ರಹಣಕ್ಕೆ ಸೂಕ್ತವಾದ ಕ್ಯಾಮೆರಾಗಳಲ್ಲಿ ಫ್ಯೂಜಿಫಿಲ್ಮ್‌ ಕಂಪೆನಿಯ ಕ್ಯಾಮೆರಾಗಳು ಸೇರಿವೆ. ಫ್ಯೂಜಿಫಿಲ್ಮ್‌ ಕಂಪೆನಿಯ X-T30 AF ಕ್ಯಾಮೆರಾ ವೇಗ, ನಿಖರತೆ ಮತ್ತು ಚಿತ್ರದ ಗುಣಮಟ್ಟವನ್ನು ಸುಧಾರಿತ ಮಟ್ಟದಲ್ಲಿ ನೀಡುವ ಸಾಫ್ಟ್‌ವೇರ್ ಅನ್ನು ಹೊಂದಿದೆ. ಈ ಕ್ಯಾಮೆರಾವು ಹೈ-ರೆಸ್ 1.62-ಮಿಲಿಯನ್-ಡಾಟ್ LCD ಪ್ಯಾನೆಲ್ ಅನ್ನು ಹೊಂದಿದೆ. ಇದು 26.1-ಮೆಗಾಪಿಕ್ಸೆಲ್ "X-Trans CMOS 4" ಸೆನ್ಸಾರ್‌ ಅನ್ನು ಹೊಂದಿದೆ. ಹಾಗೆಯೇ ಹೈ-ಸ್ಪೀಡ್ ಇಮೇಜ್ ಪ್ರೊಸೆಸಿಂಗ್ ಎಂಜಿನ್ "X-ಪ್ರೊಸೆಸರ್ 4" ಅನ್ನು ಹೊಂದಿದೆ. ಈ ಕ್ಯಾಮೆರಾ ನಿಮಗೆ 88,999 ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

ಕ್ಯಾನನ್ EOS M50 ಮಾರ್ಕ್ II

ಕ್ಯಾನನ್ EOS M50 ಮಾರ್ಕ್ II

ಕ್ಯಾನನ ಕಂಪನಿ M-ಸರಣಿಯಲ್ಲಿ ಪರಿಚಯಿಸಿರುವ ಕ್ಯಾಮೆರಾಗಳಲ್ಲಿ ಕ್ಯಾನನ್ EOS M50 ಮಾರ್ಕ್ II ಕೂಡ ಒಂದು. ಈ ಕ್ಯಾಮೆರಾ ವೈಫೈಯನ್ನು ಬೆಂಬಲಿಸಲಿದ್ದು, ವೈಫೈ ಸಂಪರ್ಕದ ಮೂಲಕ ಕೆಲವೇ ಸೆಕೆಂಡುಗಳಲ್ಲಿ ಕ್ಯಾಮರಾದಿಂದ ನಿಮ್ಮ ಸ್ಮಾರ್ಟ್‌ಫೋನ್‌ಗೆ ಫೈಲ್‌ಗಳನ್ನು ವರ್ಗಾಯಿಸಲು ಸಹಾಯ ಮಾಡುತ್ತದೆ. ಇದು 24.1MP CMOS ಸೆನ್ಸಾರ್‌ ಅನ್ನು ಹೊಂದಿದೆ. ಈ ಕ್ಯಾಮೆರಾ ಮೂಲಕ ನೀವು 4K ವೀಡಿಯೊಗಳನ್ನು ಶೂಟ್ ಮಾಡುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ ರಿಯಲ್‌ ಟೈಂನಲ್ಲಿ ಯುಟ್ಯೂಬ್‌ ಲೈವ್ ಸ್ಟ್ರೀಮಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಭಾರತದಲ್ಲಿ ಈ ಕ್ಯಾಮೆರಾವನ್ನು ನೀವು ಕೇವಲ 58,995 ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
there are also a few mirrorless cameras which come in a compact form factor

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X