ಆಪಲ್ ನೀಡಿರುವ ಹೊಸ ಉದ್ಯೋಗವಕಾಶಗಳ ಪಟ್ಟಿ ನೀಡುತ್ತಿದೆ ಹಲವು ಸುಳಿವು!

  By GizBot Bureau
  |

  ಈ ವರ್ಷದ ಆರಂಭದಲ್ಲಿ ನಡೆದ ವಾರ್ಷಿಕ ಡೆವಲಪರ್ ಕಾನ್ಫರೆನ್ಸ್ IO 2018 ನಲ್ಲಿ ಗೂಗಲ್ ಸಂಸ್ಥೆ ಗೂಗಲ್ ಮ್ಯಾಪ್ ಆಪ್ ನಲ್ಲಿ augmented reality (AR) ಸಾಮರ್ಥ್ಯವನ್ನು ಪ್ರದರ್ಶಿಸಿತ್ತು. ಇದೀಗ, ಆಪಲ್ ಕೂಡ ಇದೇ ಹಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿದುಬರುತ್ತಿದೆ. ಥಿಂಕ್ನಮ್ ವೆಬ್ ಸೈಟ್ ವೊಂದು ವರದಿ ಮಾಡಿರುವಂತೆ ಕ್ಯೂಪರ್ಟಿನೋ ಮೂಲದ ಆಪಲ್ ಸಂಸ್ಥೆ ಮ್ಯಾಪ್ ಗಳಿಗೆ AR ನ್ನು ತರುವ ಬಗ್ಗೆ ಕೆಲಸ ನಿರ್ವಹಿಸಲು ಕೆಲವು ಉದ್ಯೋಗ ಅವಕಾಶಗಳನ್ನು ಪ್ರಕಟಿಸಿದೆ ಎಂದು ಹೇಳಿದೆ.

  ಈ ವೆಬ್ ಸೈಟ್ ಆಪಲ್ ನ ಕರಿಯರ್ ಜಾಬ್ ವೆಬ್ ಸೈಟ್ ಮೂಲಕವೇ ಇಂತಹ ಉದ್ಯೋಗದ ಹುದ್ದೆಗಳು ಖಾಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಹೇಳಿದೆ.ಅಗಸ್ಟ್ 11 ರಂದು AR ಅಪ್ಲಿಕೇಷನ್ ಇಂಜಿನಿಯರ್ ಹುದ್ದೆಯ ಪಟ್ಟಿಯನ್ನು ನೋಡಲಾಗಿತ್ತು. ಇದರಲ್ಲಿ ಇನ್ನು ಐದು ಪೋಸ್ಟಿಂಗ್ ಗಳನ್ನು ಪಟ್ಟಿ ಮಾಡಲಾಗಿತ್ತು. AR ಅಪ್ಲಿಕೇಷನ್ ಅದರ ಟೈಟಲ್ ಹುದ್ದೆಯಾಗಿತ್ತು. ನೂತನವಾಗಿರುವ ಹುದ್ದೆಯೊಂದನ್ನು ಈ ವರ್ಷದ ಅಗಸ್ಟ್ 22 ರಂದು ಪೋಸ್ಟ್ ಮಾಡಲಾಗಿತ್ತು. ಇದೆಲ್ಲವನ್ನು ಗಮನಿಸಿದರೆ ಆಪಲ್ ನ ಪ್ರಾಮುಖ್ಯತೆ AR ಕಡೆಗಿದೆ ಎಂಬುದು ಸ್ಪಷ್ಟವಾಗುತ್ತಿದೆ.

  ಆಪಲ್ ನೀಡಿರುವ ಹೊಸ ಉದ್ಯೋಗವಕಾಶಗಳ ಪಟ್ಟಿ ನೀಡುತ್ತಿದೆ ಹಲವು ಸುಳಿವು!

  ಜುಲೈ ತಿಂಗಳಲ್ಲಿ ಆಪಲ್ ಸಂಸ್ಥೆಯು ಆಪಲ್ ಮ್ಯಾಪ್ಸ್ ತಂಡದೊಂದಿಗಿನ ಪ್ರೊಡಕ್ಟ್ ಆರ್ಕಿಟೆಕ್ಟ್ ಹುದ್ದೆಗಾಗಿ ಆಹ್ವಾನ ನೀಡಿತ್ತು ಮತ್ತು ಅದರಲ್ಲಿ ಹುದ್ದೆಯ ರೋಲ್ ಎಕ್ಸಿಕ್ಯೂಟೀವ್ ನಂತೆ ಎಂದು ವಿವರಣೆ ನೀಡಲಾಗಿತ್ತು.

  ಡಿಜಿಟಲ್ ಮ್ಯಾಪ್ ನಮ್ಮ ದೈನಂದಿನ ಬದುಕಿಗೆ ಅಗತ್ಯವಾಗಿ ಬೇಕಾಗಿದೆ. ಆದರೆ ಅದರಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ನಿರೀಕ್ಷೆ ಮಾಡಲಾಗುತ್ತಿದೆ. ನಗರ ವ್ಯವಸ್ಥೆಯಲ್ಲಿ ಇನ್ನಷ್ಟು ಬದಲಾವಣೆಯ ಅಗತ್ಯವಿದ್ದು, ಡಿಜಿಟಲ್ ಮ್ಯಾಪಿಂಗ್ ನಲ್ಲಿ ಹೊಸ ತಂತ್ರಜ್ಞಾನದ ಬಳಕೆಯಿಂದ ಗ್ರಾಹಕನ ಅನುಕೂಲತೆಗೆ ಇನ್ನಷ್ಟು ಅಭಿವೃದ್ಧಿ ಮಾಡುವ ಉದ್ದೇಶವನ್ನು ಆಪಲ್ ಹೊಂದಿದೆ.

  ಮತ್ತೊಂದು ಉದ್ಯೋಗವಕಾಶವೆಂದರೆ ಅದು iOS / macOS ಇಂಜಿನಿಯರ್. ಈ ಹುದ್ದೆಯ ಬಗ್ಗೆ ಆಪಲ್ ಜೂನ್ ನಲ್ಲಿ ಪೋಸ್ಟ್ ಮಾಡಿದೆ. ಆದರೆ ಈ ಹುದ್ದೆಯಲ್ಲಿ ಆಪಲ್ ಮ್ಯಾಪ್ ಬಗ್ಗೆ ಏನನ್ನೂ ಹೇಳಲಾಗಿಲ್ಲ. ಹುದ್ದೆಯನ್ನು ಅಲಂಕರಿಸುವವರಿಗೆ ಇರಬೇಕಾದ ಹೆಚ್ಚುವರಿ ಅಗತ್ಯತೆಗಳು ವಿಭಾಗದಲ್ಲಿ ಮ್ಯಾಪ್ ಮತ್ತು ಕೋರ್ ಲೋಕೇಷನ್ ಗಳ ಎಪಿಐಗಳ ಬಗ್ಗೆ ಪರಿಚಯ ಮತ್ತು AR ಎಪಿಐಗಳ ಬಗ್ಗೆ ಜ್ಞಾನವಿರಬೇಕು ಎಂದು ಹೇಳಿದೆ.

  ಐಓಎಸ್ 12 ನ ಭಾಗವಾಗಿ AR ವೈಶಿಷ್ಟ್ಯತೆಗಳು ಬರುತ್ತದೆಯಾ ಅಥವಾ ಯಾವಾಗ ಬಿಡುಗಡೆಗೊಳ್ಳುತ್ತದೆ ಖಂಡಿತ ತಿಳಿದಿಲ್ಲ. ಆದರೆ ಗೂಗಲ್ ಮ್ಯಾಪ್ IO 2018 ತೋರಿಸಿದಂತೆಯೇ ಇರಬಹುದು ಎಂಬುದರಲ್ಲಿ ಅನುಮಾನವಿಲ್ಲ,.

  ಒಂದು ಹೋಟೆಲ್ ನೆಡೆಗೆ ನಿಮ್ಮ ಫೋನ್ ಕ್ಯಾಮರಾ ತಿರುಗಿಸಿದ ಕೂಡಲೇ ಹೋಟೆಲ್ ಮೆನು ಕಾಣಿಸುವುದು, ಹ್ಯಾಪಿ ಹವರ್ಸ್ ಗಳ ಬಗ್ಗೆ ಮಾಹಿತಿ ಸಿಗುವುದು ಇತ್ಯಾದಿಗಳ ಸಾಧ್ಯತೆಗಳ ನಿರೀಕ್ಷಿಸಬಹುದು ಅಥವಾ ನೇವಿಗೇಷನ್ ನಲ್ಲೇ ವಿಭಿನ್ನತೆ ಮಾಡಬಹುದು.ಯಾವ ಬದಲಾವಣೆ ಆಗಲಿದೆ ಎಂಬುದು ಸದ್ಯದ ಯಕ್ಷ ಪ್ರಶ್ನೆ.

  English summary
  Now, it looks like Apple too is working in the same direction. The Cupertino-based firm has published some job postings hinting at bringing AR. to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more