ಸಿಕ್ಕಿದ್ರೆ ಇಂತಹ ಬಾಸ್‌ಗಳ ಕೈಕೆಳಗೆ ಕೆಲಸ ಸಿಗ್ಬೇಕು!..ಏಕೆ ಗೊತ್ತಾ?
ಖಾಸಾಗಿ ಕಂಪೆನಿಗಳಲ್ಲಿ ಕೆಲಸ ಮಾಡುವುದು ಎಂದರೆ ಗಾಣಕ್ಕೆ ಕಟ್ಟಿದ ಎತ್ತುಗಳಂತೆ, ಯಾವೊಂದು ಕಂಪೆನಿ ಕೂಡ ಹತ್ತರಷ್ಟು ಲಾಭವಿಲ್ಲದೆ ದುಡಿಸಿಕೊಳ್ಳುವುದಿಲ್ಲ, ಆ ಕಂಪೆನಿಗಳಲ್ಲಿ ಉದ್ಯೋಗಕ್ಕೆ ಯಾವ ಗ್ಯಾರಂಟಿಯೂ ಇಲ್ಲ ಎಂಬ ದೂರುಗಳು ಸಾಮಾನ್ಯ. ಏಕೆಂದರೆ, "ಒಳ್ಳೆಯ ಕಂಪೆನಿ' ಎನ್ನುವುದು ಇದುವರೆಗೂ ಹುಟ್ಟಿಯೇ ಇಲ್ಲ ಅನ್ನೋದು ಉದ್ಯೋಗಿಗಳ ಭಾವನೆ.
ಹೌದು, ಇದು ನಿಜ ಕೂಡ. ರಜೆ ಕೊಡಲ್ಲ, ಓವರ್ ಟೈಂ ಕೆಲಸ ಮಾಡಿಸ್ತಾರೆ, ಸಂಬಳ ಹೆಚ್ಚಿಸೋಲ್ಲ, ಎಷ್ಟು ಕೆಲಸ ಮಾಡಿದರೂ ಕಂಪೆನಿಗೆ ತೃಪ್ತಿಯೇ ಆಗಲ್ಲ ಎಂದು ಹೇಳುವುದು ನಿಜವೇ ಆಗಿರುತ್ತದೆ. ಆದರೆ, ಇದಕ್ಕೆ ವಿಭಿನ್ನವಾಗಿ ಉದ್ಯೋಗಿಗಳನ್ನು ಸಹ ತಮ್ಮ ಮಕ್ಕಳಂತೆ ನೋಡಿಕೊಳ್ಳುವ ಕೆಲವು ಖಾಸಾಗಿ ಕಂಪೆನಿಗಳು ಸಹ ಇವೆ ಎಂದರೆ ನೀವು ನಂಬದೇ ಇರಬಹುದು.

ರಜಾನೂ ಕೊಡದಿರೋ ಬಾಸ್‌ಗಳ ಮಧ್ಯೆ, ಕಾರು, ಸೈಟ್, ವಜ್ರದೊಡವೆ, ಕಂಪನಿ ಷೇರುಗಳನ್ನು ಕೊಡೋ "ದೇವರಂಥ ಕಂಪೆನಿ/ಬಾಸ್'ಗಳಿದ್ದಾರೆ ಎಂದರೆ ನೀವೂ ಆಶ್ಚರ್ಯಪಡಬಹುದು. ಹಾಗಾಗಿ, ಇಂದಿನ ಲೇಖನದಲ್ಲಿ ಕೆಲವು ಟೆಕ್ ಕಂಪೆನಿಗಳು ಸೇರಿದಂತೆ ಖಾಸಾಗಿ ಕಂಪೆನಿಗಳು ಉದ್ಯೋಗಿಗಳಿಗೆ ನೀಡಿರುವ ವಿಶೇಷ ಸೌಲತ್ತುಗಳು ಯಾವುವು ಎಂಬುದನ್ನು ನೋಡೋಣ.

ಟ್ವಿಟರ್ ಸಿಇಒ ಜ್ಯಾಕ್ ಡಾರ್ಸೆ!
ಟ್ವಿಟರ್‌ನ ಸಿಇಒ ಜ್ಯಾಕ್ ಡಾರ್ಸೆ ನಿಮಗೆ ಬಹುತೇಕ ಗೊತ್ತಿರಬಹುದು. ಈತ ತಾನು ಕಂಪೆನಿಯಲ್ಲಿ ಹೊಂದಿದ್ದ ಷೇರ್‌ನಲ್ಲಿ ಮೂರನೇ ಒಂದರಷ್ಟು ಭಾಗವನ್ನು ಉದ್ಯೋಗಿಗಳಿಗೆ ಹಂಚಿದ್ದಾರೆ. ತಮ್ಮ ಷೇರಿನ ಮೂರರಲ್ಲಿ ಒಂದರಷ್ಟು 200 ಮಿಲಿಯನ್ ಡಾಲರ್ ಅನ್ನು ಉದ್ಯೋಗಿಗಳಿಗೆ ಸ್ಟಾಕ್ ಆಗಿ ನೀಡಿದ್ದಾರೆ. ಈಗ ಇಡೀ ಕಂಪನಿಯ ಶೇ.1 ಸ್ಟಾಕ್ ಕೆಲಸಗಾರರ ಕೈಯಲ್ಲಿದೆ ಎಂದರೆ ಈತನೇ ಕಾರಣ.!

ನೆಟ್‌ಫ್ಲಿಕ್ಸ್ ಸಿಇಒ ರೀಡ್ ಹೇಸ್ಟಿಂಗ್ಸ್
ನೀವು ಇತ್ತೀಚಿಗೆ ಹೆಚ್ಚಾಗಿ ಹೆಸರನ್ನು ಕೇಳುತ್ತಿರುವ ನೆಟ್‌ಫ್ಲಿಕ್ಸ್ ಸಿಇಒ ರೀಡ್ ಹೇಸ್ಟಿಂಗ್ಸ್ ಬಗ್ಗೆ ನಿಮಗೆ ಹೆಚ್ಚು ಗೊತ್ತಿಲ್ಲ ಎನ್ನಬಹುದು.! ನಿಮಗೆ ಗೊತ್ತಾ? ನೆಟ್‌ಫ್ಲಿಕ್ಸ್‌ನ ಸಿಇಒ ರೀಡ್ ಹೇಸ್ಟಿಂಗ್ಸ್ ರಜೆಯ ವಿಷಯದಲ್ಲಿ ವಿಶ್ವದಲ್ಲೇ ಒಂದು ಹೆಜ್ಜೆ ಮುಂದಿದ್ದಾರೆ. ಹೊಸದಾಗಿ ತಂದೆ- ತಾಯಿಯಾದ ನೆಟ್‌ಫ್ಲಿಕ್ಸ್ ಉದ್ಯೋಗಿಗಳು, ವೇತನಸಹಿತ ಅನ್‌ಲಿಮಿಟೆಡ್ ರಜೆ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಇದರಿಂದ ನೆಟ್‌ಫ್ಲಿಕ್ಸ್ ಉದ್ಯೋಗಿಗಳು ಫುಲ್ ಖುಷ್!

ಗ್ರಾವಿಟಿ ಪೇಮೆಂಟ್ಸ್ ಸಿಇಒ ಡ್ಯಾನ್ ಪ್ರೈಸ್
ವಾಷಿಂಗ್ಟನ್‌ನ ಗ್ರಾವಿಟಿ ಪೇಮೆಂಟ್ಸ್ ಕಂಪನಿಯ ಸಿಇಒ ಡ್ಯಾನ್ ಪ್ರೈಸ್ ಅನ್ನು ಉದ್ಯೋಗಿಗಳು ಹಾಡಿ ಹೊಗಳುವುದಕ್ಕೆ ಕಾರಣವಿದೆ. ಈತ ಎಷ್ಟು ಧಾರಾಳಿಯೆಂದರೆ, ತನ್ನ ಉದ್ಯೋಗಿಗಳ ಕನಿಷ್ಠ ವಾರ್ಷಿಕ ಸಂಬಳವನ್ನು 70,000 ಡಾಲರ್‌ಗೆ ಏರಿಸಲು ಸ್ವಂತ ಸಂಬಳವನ್ನೇ 1 ಮಿಲಿಯನ್ ಡಾಲರ್‌ನಿಂದ 70, 000 ಡಾಲರ್‌ಗೆ ಇಳಿಸಿಕೊಂಡಿದ್ದಾನೆ. ತನ್ನ ಸಂಬಳಕ್ಕೇ ಕತ್ತರಿ ಹಾಕಿಕೊಳ್ಳುವ ಇಂಥ ಬಾಸ್ ಸಿಗಲು ಪುಣ್ಯ ಮಾಡಿರಲೇಬೇಕು.

ಟರ್ಕಿಷ್ ಉದ್ಯಮಿ ನೇವಾತ್ ಆಯಿನ್
ಕೆಲವು ಖಸಾಗಿ ಕಂಪೆನಿಗಳಲ್ಲಿ ಸಂಬಳದ ಜೊತೆ ಬೋನಸ್ ಕೊಡೋದೆ ಕಷ್ಟ. ಕೊಟ್ಟರೂ ಸಂಬಳದ ಶೇ.10-20 ಬೋನಸ್ ಕೊಡೋದು ಪದ್ಧತಿ. ಆದರೆ, ಟರ್ಕಿಷ್ ಉದ್ಯಮಿ ನೇವಾತ್ ಆಯಿನ್ ಕೊಟ್ಟಿರೋ ಬೋನಸ್ ಎಷ್ಟು ಗೊತ್ತಾ, ಸಂಬಳದ 150 ಪಟ್ಟು! 2015ರಲ್ಲಿ ತನ್ನ ಕಂಪನಿಯನ್ನು ಮಾರಾಟ ಮಾಡಿದ ನೇವಾತ್, ಅದರಲ್ಲಿ ಬಂದ 27 ಮಿಲಿಯನ್ ಡಾಲರ್ ಲಾಭವನ್ನು 114 ಉದ್ಯೋಗಿಗಳಿಗೆ ಸಮನಾಗಿ ಹಂಚಿದ. ಪ್ರತಿ ಉದ್ಯೋಗಿಯ ಸರಾಸರಿ ಬೋನಸ್ 2,37,000 ಡಾಲರ್!

ನ್ಪೋಟಿಫೈ ಕಂಪನಿಯ ಸಿಇಒ ಡೇನಿಯಲ್ ಎಕ್
ನಮ್ಮ ಸರ್ಕಾರಗಳು ಗರ್ಭಿಣಿಯರಿಗೇ ಸಂಬಳ ಸಹಿತ ಆರು ತಿಂಗಳು ರಜೆ ನೀಡುವುದು ಕಷ್ಟ. ಆದರೆ, ಸ್ವೀಡನ್‌ನ ನ್ಪೋಟಿಫೈ ಕಂಪನಿಯ ಸಿಇ ಡೇನಿಯಲ್ ಎಕ್ ತನ್ನ ಉದ್ಯೋಗಿಗಳ ಅಚ್ಚುಮೆಚ್ಚಿನ ಬಾಸ್. ಏಕೆಂದರೆ, ಹೊಸದಾಗಿ ತಂದೆ- ತಾಯಿಯಾದ ಉದ್ಯೋಗಿಗಳು, ಮನಸ್ಸಿಲ್ಲದ ಮನಸ್ಸಲ್ಲಿ ಕೆಲಸಕ್ಕೆ ಬರೋದು ಬೇಡ. 6 ತಿಂಗಳವರೆಗೆ ವೇತನಸಹಿತ ರಜೆ ತೆಗೆದುಕೊಳ್ಳಬಹುದು ಅಂತ 2015ರಲ್ಲಿ ಹೊಸ ನಿಯಮ ರೂಪಿಸಿದ್ದಾರೆ ಡೇನಿಯಲ್.

ಸಾವಿ ಧೋಲಾಕಿಯಾ ಗೊತ್ತಾ?
ವಜ್ರದ ಕಂಪನಿ ಮಾಲೀಕ ಸಾವಿ ಧೋಲಾಕಿಯಾ ತನ್ನ 600 ಉದ್ಯೋಗಿಗಳಿಗೆ ಹಬ್ಬದ ಉಡುಗೊರೆಯಾಗಿ ಪ್ರತಿವರ್ಷ ಕಾರನ್ನು ನೀಡುತ್ತಿದ್ದಾರೆ. 2011ರಿಂದ ಕಂಪನಿಯ ಲಾಯಲ್ಟಿ ಪ್ರೋಗ್ರಾಂ ಮೂಲಕ ಪ್ರತಿ ವರ್ಷ ಕೆಲಸಗಾರರಿಗೆ 50 ಕೋಟಿ ರೂ. ಬೋನಸ್ ನೀಡಲಾಗುತ್ತದೆ. 2014ರಲ್ಲಿ 500 ಫ್ಲ್ಯಾಟ್ಸ್, 525 ಜನರಿಗೆ ವಜ್ರದ ಜ್ಯುವೆಲರಿ, 2015ರಲ್ಲಿ 200 ಫ್ಲ್ಯಾಟ್ಸ್, 491 ಕಾರು, 2016ರಲ್ಲಿ, 400 ಫ್ಲ್ಯಾಟ್ಸ್, 1260 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು ಧೋಲಾಕಿಯಾ.

ಐಟಿ ಲೋಕವನ್ನು ಆಳುತ್ತಿದ್ದಾರೆ ಭಾರತೀಯ ಸಂಜಾತ ಸಿಇಒಗಳು..!
ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಿರುವ ಐತಿಹ್ಯ ಪುರಾಣ ಕಾಲದ್ದು, ರೈಟ್ ಸಹೋದರರು ವಿಮಾನ ಕಂಡು ಹಿಡಿಯುವುದಕ್ಕಿಂತ ಮುಂಚೆಯೇ ರಾಮಾಯಣದಲ್ಲಿ ಪುಷ್ಪಕ ವಿಮಾನವನ್ನು ಓಡಿಸಿದವರು ಭಾರತೀಯರು. ಅದಲ್ಲದೇ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಮೊದಲುಗಳನ್ನು ನೀಡಿರುವುದರಲ್ಲಿ ಭಾರತೀಯರು ಮೇಲುಗೈ ಸಾಧಿಸಿದ್ದಾರೆ.
ಸರ್. ಸಿ.ವಿ.ರಾಮನ್, ಜಗದೀಶ್ ಚಂದ್ರ ಬೋಸ್ ರಂತಹ ವಿಜ್ಞಾನಿಗಳನ್ನು ನೀಡಿದ ಭಾರತ ಈಗ ಮತ್ತೊಂದು ಜಗತ್ತನ್ನು ಆಳುತ್ತಿದೆ. ಹೌದು, ಮಾಹಿತಿ ತಂತ್ರಜ್ಞಾನದ ಹಲವು ದಿಗ್ಗಜ ಕಂಪನಿಗಳು ಭಾರತೀಯರ ನೇತೃತ್ವದಲ್ಲಿ ಸದ್ಯ ಮುನ್ನುಗ್ಗುತ್ತಿವೆ. ಪ್ರಮುಖವಾಗಿ ಗೂಗಲ್, ಮೈಕ್ರೋಸಾಫ್ಟ್, ಅಡೋಬ್ ನಂತಹ ದಿಗ್ಗಜ ಕಂಪನಿಗಳಿಗೆ ಭಾರತೀಯ ಸಂಜಾತರೆ ಸಿಇಒಗಳು ಎಂದರೆ ನಂಬಲೇಬೇಕು. ಇಂತಹ ಭಾರತೀಯ ಸಂಜಾತ ಐಟಿ ಸಿಇಒಗಳ ಕುರಿತು ಒಂದಿಷ್ಟು ಮಾಹಿತಿ ಮುಂದಿನ ಸ್ಲೈಡ್ ಗಳಲ್ಲಿ ನೋಡಿ.

1. ಸುಂದರ್ ಪಿಚ್ಚೈ, Google
ಸರ್ಚ್ ಇಂಜಿನ್ ದೈತ್ಯ ಗೂಗಲ್ ನ ಪ್ರಸ್ತುತ ಸಿಇಒ ತಮಿಳುನಾಡಿನ ಸುಂದರ್ ಪಿಚ್ಚೈ. 1972 ಜುಲೈ 12 ರಂದು ಚೆನ್ನೈನಲ್ಲಿ ಜನಿಸಿದ ಪಿಚ್ಚೈ ಆಗಸ್ಟ್ 10, 2015ರಲ್ಲಿ ಗೂಗಲ್ ಸಿಇಒ ಆಗಿ ನೇಮಕಗೊಂಡರು. IIT ಕಾನ್ಪುರದಲ್ಲಿ B.Tech ಪದವಿ ಪಡೆದಿರುವ ಇವರು, ಸ್ಟಾನ್ ಪೋರ್ಡ್ ವಿಶ್ವವಿದ್ಯಾಲಯದಲ್ಲಿ MS, ವಾರ್ಟಾನ್ ವಿಶ್ವವಿದ್ಯಾಲಯದಲ್ಲಿ MBA ಪದವಿ ಪಡೆದಿದ್ದಾರೆ.

2. ಸತ್ಯ ನಾದೆಲ್ಲಾ, Microsoft
ಮಾಹಿತಿ ತಂತ್ರಜ್ಞಾನದ ಬೃಹತ್ ಕಂಪನಿ ಮೈಕ್ರೋಸಾಫ್ಟ್ ನ ಪ್ರಸ್ತುತ ಸಿಇಒ ಸತ್ಯ ನಾದೆಲ್ಲಾ. ಮೈಕ್ರೋಸಾಫ್ಟ್ ನ ನಿವೃತ್ತ ಸಿಇಒ ಸ್ಟೀವ್ ಬಾಲ್ಮರ್ ನಂತರ 2014ರಲ್ಲಿ ನಾದೆಲ್ಲಾ ಮೈಕ್ರೋಸಾಫ್ಟ್ ಸಿಇಒ ಆಗಿ ನೇಮಕಗೊಂಡರು. 1967 ಆಗಸ್ಟ್ 19ರಂದು ಹೈದ್ರಾಬಾದ್ ನಲ್ಲಿ ಜನಿಸಿದ ಸತ್ಯ ಮಣಿಪಾಲ್ ಇನ್ಸಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ BE ಪದವಿ ಪಡೆದಿದ್ದು, University of Wisconsin-Milwaukee ನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ MS ಪದವಿ, University of Chicago ದಿಂದ MBA ಪದವಿ ಪಡೆದಿದ್ದಾರೆ.

3. ರಾಜೀವ್ ಸೂರಿ, Nokia
ಮೊಬೈಲ್ ಮಾರುಕಟ್ಟೆಯಲ್ಲಿ ಬಹುದೊಡ್ಡ ಹೆಸರೆಂದರೆ ನೋಕಿಯಾ. ನೋಕಿಯಾದ ಸಿಇಒ ಮತ್ತು ಅಧ್ಯಕ್ಷರಾಗಿ ಏಪ್ರೀಲ್ 2014ರಲ್ಲಿ ಭಾರತೀಯ ರಾಜೀವ್ ಸೂರಿ ನೇಮಕಗೊಂಡರು. ಸಿಇಒ ಆಗುವುದಕ್ಕಿಂತ ಮುಂಚೆ ರಾಜೀವ್ ಸೂರಿ 2007ರಿಂದ 2009ರವರೆಗೆ ನೋಕಿಯಾ ಸಿಮನ್ಸ್ ನೆಟ್ ವರ್ಕ್ಸ್ ನ ಹೆಡ್ ಆಫ್ ದಿ ಸರ್ವೀಸ್ ಆಗಿ ಸೇವೆ ಸಲ್ಲಿಸಿದ್ದರು. ಅಕ್ಟೋಬರ್ 10, 1967ರಲ್ಲಿ ಜನಿಸಿದ ಸೂರಿ ಮಣಿಪಾಲ್ ಇನ್ಸಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ BE ಪದವಿ ಪಡೆದಿದ್ದಾರೆ.

4. ಶಾಂತನು ನಾರಾಯಣ್, Adobe
ಪ್ರಮುಖ ಸಾಫ್ಟವೇರ್ ಸಂಸ್ಥೆಯಾಗಿರುವ ಅಡೋಬ್ ನ ಪ್ರಸ್ತುತ ಸಿಇಒ ಶಾಂತನು ನಾರಾಯಣ್. ಮೇ 17, 1962ರಲ್ಲಿ ಹೈದ್ರಾಬಾದ್ ನಲ್ಲಿ ಜನಿಸಿದ ನಾರಾಯಣ್ 2007ರಿಂದ ಅಡೋಬ್ ನ ಸಿಇಒ ಆಗಿ ನೇಮಕಗೊಂಡಿದ್ದಾರೆ. ಹೈದ್ರಾಬಾದ್ ನಲ್ಲಿರುವ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ BE ಪದವಿ ಪಡೆದಿದ್ದು, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ MBA ಪದವಿ, ಒಹಿಯೋದ ಬೌಲಿಂಗ್ ಗ್ರೀನ್ ಸ್ಟೇಟ್ ವಿಶ್ವವಿದ್ಯಾಲಯದಿಂದ MS ಪದವಿ ಪಡೆದಿದ್ದಾರೆ.

5. ಸಂಜಯ್ ಜಾ, Global Foundries
ಪ್ರಮುಖ ಚಿಪ್ ತಯಾರಿಕಾ ಕಂಪನಿ ಗ್ಲೋಬಲ್ ಫೌಂಡ್ರೀಸ್ ನ ಪ್ರಸ್ತುತ ಸಿಇಒ ಸಂಜಯ್ ಜಾ. ಜನೇವರಿ 2014ರಲ್ಲಿ ಸಿಇಒ ಆಗಿ ನೇಮಕಗೊಂಡಿದ್ದಾರೆ. ಅದಕ್ಕಿಂತ ಮುಂಚೆ Motorola Mobilityಯ ಸಿಇಒ ಮತ್ತು Qualcommನ ಸಿಒಒ ಆಗಿ ಕಾರ್ಯನಿರ್ವಹಿಸಿದ್ದರು. 2008ರಲ್ಲಿ ಮೊಟೊರೋಲಾ ಕಂಪನಿಯ ಸಹ ಸಿಇಒ ಆಗಿ ಸೇರಿ, ನಂತರ Motorola's Mobile Devices Business ಸಿಇಒ ಆಗಿ ಕಾರ್ಯನಿರ್ವಹಿಸಿದ್ದಾರೆ.

6. ಜಾರ್ಜ್ ಕುರಿಯನ್, NetApp
ಪ್ರಮುಖ ಸ್ಟೋರೆಜ್ ಮತ್ತು ಮಾಹಿತಿ ನಿರ್ವಹಣಾ ಕಂಪನಿ ನೆಟ್ ಆಪ್ ಗೆ ಜಾರ್ಜ್ ಕುರಿಯನ್ ಜೂನ್ 2015ರಲ್ಲಿ ಸಿಇಒ ಆಗಿ ನೇಮಕಗೊಂಡರು. ಇದಕ್ಕೂ ಮುನ್ನ ಕುರಿಯನ್ ನೆಟ್ ಆಪ್ ನಲ್ಲಿ ಪ್ರೋಡಕ್ಟ್ ಆಪರೇಷನ್ ವಿಭಾಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. NetAppಗೆ ಸೇರುವ ಮುಂಚೆ Cisco Systemsನಲ್ಲಿ Application Networking and Switching Technology Groupನ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೆಜರ್ ಆಗಿ ಕಾರ್ಯನಿರ್ವಹಿಸಿದ್ದರು. ಕೇರಳದ ಕೊಟ್ಟಾಯಮ್ ನಲ್ಲಿ ಜನಿಸಿರುವ ಕುರಿಯನ್ IIT ಮದ್ರಾಸ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

7. ಫ್ರಾನ್ಸಿಸ್ ಡಿಸೋಜಾ, Cognizant
ಸಾಫ್ಟ್ ವೇರ್ ಸೇವಾ ಕ್ಷೇತ್ರದಲ್ಲಿನ ಪ್ರಮುಖ ಕಂಪನಿ ಕಾಗ್ನಿಜೆಂಟ್ ನ ಪ್ರಸ್ತುತ ಸಿಇಒ ಭಾರತೀಯ ಸಂಜಾತಾ ಫ್ರಾನ್ಸಿಸ್ ಡಿಸೋಜಾ. 1994ರಲ್ಲಿ ಸಹ ಸಂಸ್ಥಾಪಕರಾಗಿ ಕಾಗ್ನಿಜೆಂಟ್ ಪ್ರವೇಶಿಸಿದ ಡಿಸೋಜಾ, 2007ರಲ್ಲಿ ಕಾಗ್ನಿಜೆಂಟ್ ನ ಸಿಇಒ ಆಗಿ ನೇಮಕಗೊಂಡರು. ಇವರ ಅವಧಿಯಲ್ಲಿ ಕಾಗ್ನಿಜೆಂಟ್ ಕಂಪನಿಯ ಕೆಲಸಗಾರರ ಸಂಖ್ಯೆ 55 ಸಾವಿರದಿಂದ 2.30 ಲಕ್ಷಕ್ಕೆ ಏರಿತು. ಕೀನ್ಯಾದಲ್ಲಿ ಜನಿಸಿದ ಇವರು ಈಸ್ಟ್ ಏಷ್ಯಾ ವಿಶ್ವವಿದ್ಯಾಲಯದಿಂದ BBA ಪದವಿ ಪಡೆದಿದ್ದಾರೆ.

8. ದಿನೇಶ್ ಪಲಿವಾಲ್, Harman International
ಜೆಬಿಎಲ್, ಬೆಕ್ಕರ್, ಡಿಬಿಎಕ್ಸ್ ನಂತಹ ಆಡಿಯೋ ಬ್ರಾಂಡ್ ಗಳನ್ನು ಹೊಂದಿರುವ ಹರ್ಮನ್ ಇಂಟರ್ ನ್ಯಾಷನಲ್ ನ ಪ್ರಸ್ತುತ ಸಿಇಒ ಭಾರತೀಯ ಮೂಲದ ದಿನೇಶ್ ಪಲಿವಾಲ್. ಉತ್ತರ ಪ್ರದೇಶದ ಆಗ್ರಾದಲ್ಲಿ ಜನಿಸಿದ ದಿನೇಶ್ ರೋರ್ಕಿಯ IITಯಿಂದ BE ಪದವಿ ಪಡೆದಿದ್ದಾರೆ. ABB Groupನಲ್ಲಿ ಹಲವು ಹುದ್ದೆಗಳಲ್ಲಿ ದಿನೇಶ್ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

9. ಅಶೋಕ್ ವೆಮುರಿ, Conduent Inc.
Xeroxನ ಸಹೋದರ ಕಂಪನಿಗಳಲ್ಲಿ ಜೂನ್ 2016ರಲ್ಲಿ ಪ್ರತ್ಯೇಕ ಕಂಪನಿಯಾಗಿ ಪ್ರಾರಂಭವಾದ ಕಂಡ್ಯೂಯೆಂಟ್ ಕಂಪನಿಗೆ ಪ್ರಸ್ತುತ ಸಿಇಒ ಅಶೋಕ್ ವೆಮುರಿ. 110 ವರ್ಷ ಹಳೆಯದಾದ Xerox ಕಂಪನಿ ತನ್ನ ಹೊಸ ಕಂಪನಿಗೆ iGateನ ಮಾಜಿ ಸಿಇಒ ಅಶೋಕ್ ವೆಮುರಿಯನ್ನು ಸಿಇಒ ಆಗಿ ನೇಮಿಸಿದೆ.


Click it and Unblock the Notifications