ಜೇಬು ಖಾಲಿ ಮಾಡಲಿವೆ ಟಿವಿ, ಫ್ರಿಜ್, ವಾಶಿಂಗ್ ಮಶೀನ್!!ಯಾಕೆ ಅಂತ ಕಾರಣ ಇಲ್ಲಿದೆ ನೋಡಿ.

By Gizbot Bureau
|

ಯಾವುದಾದರೂ ಗೃಹೋಪಯೋಗಿ ಸಲಕರಣೆಯನ್ನು ಖರೀದಿ ಮಾಡಲು ಯೋಜನೆ ಹಾಕಿಕೊಂಡಿದ್ದರೆ ಅದಕ್ಕಾಗಿ ಸ್ವಲ್ಪ ಹೆಚ್ಚು ಬೆಲೆ ತೆರಲು ನೀವು ಸಿದ್ಧವಾಗಿರಬೇಕಾಗುತ್ತದೆ. 2021ರ ಜನೇವರಿಯಿಂದ ಹಲವಾರು ವಸ್ತುಗಳ ಬೆಲೆಯೇರಿಕೆಯಾಗುವ ಸಾಧ್ಯತೆಗಳಿರುವುದರಿಂದ ಗೃಹೋಪಯೋಗಿ ಉಪಕರಣಗಳ ಬೆಲೆಗಳೂ ಹೆಚ್ಚಾಗಲಿವೆ.

ಕಚ್ಚಾ ಹಾಗೂ ಮೂಲ ವಸ್ತುಗಳ ಬೆಲೆ ಹೆಚ್ಚಳ

ಕಚ್ಚಾ ಹಾಗೂ ಮೂಲ ವಸ್ತುಗಳ ಬೆಲೆ ಹೆಚ್ಚಳ

ಬಹುತೇಕ ಸಲಕರಣೆಗಳ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳಾದ ತಾಮ್ರ, ಅಲ್ಯೂಮಿನಿಯಂ ಮತ್ತು ಉಕ್ಕಿನಂಥ ಲೋಹಗಳ ಬೆಲೆಗಳು ಹೆಚ್ಚಾಗಿರುವುದರಿಂದ ಎಲ್‌ಇಡಿ ಟಿವಿ, ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಷಿನ್ ಮುಂತಾದ ಉಪಕರಣಗಳ ಬೆಲೆಗಳು ಮುಂದಿನ ವರ್ಷದ ಜನವರಿಯಿಂದ ಶೇಕಡಾ 10 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಅಲ್ಲದೆ ಸಮುದ್ರ ಮಾರ್ಗ ಹಾಗೂ ವಿಮಾನ ಮಾರ್ಗದ ಮೂಲಕ ಸರಕು ಸಾಗಿಸುವ ಶುಲ್ಕಗಳು ಹೆಚ್ಚಾಗಿರುವುದು ಸಹ ಈ ಎಲ್ಲ ಉಪಕರಣಗಳ ಬೆಲೆ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ.

ಜಾಗತಿಕ ಮಟ್ಟದಲ್ಲಿ ಪೂರೈಕೆ ಕೊರತೆ

ಜಾಗತಿಕ ಮಟ್ಟದಲ್ಲಿ ಪೂರೈಕೆ ಕೊರತೆ

ಜಾಗತಿಕವಾಗಿ ಪೂರೈಕೆಯ ಕೊರತೆಯಿಂದ ಟಿವಿ ಪ್ಯಾನೆಲ್‌ಗಳ (ಓಪನ್ ಸೆಲ್‌ಗಳು) ಬೆಲೆಗಳು ಈಗಾಗಲೇ ಎರಡು ಪಟ್ಟು ಹೆಚ್ಚಾಗಿದೆ. ಇದರ ಜೊತೆಗೆ ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಪ್ಲಾಸ್ಟಿಕ್‌ನ ದರವೂ ಹೆಚ್ಚಾಗಿದೆ ಎಂದು ಉತ್ಪಾದಕರು ಹೇಳುತ್ತಿದ್ದಾರೆ.

ಬೆಲೆ ಹೆಚ್ಚಿಸಲು ನಿರ್ಧರಿಸಿದ ಎಲ್‌ಜಿ, ಪ್ಯಾನಾಸೋನಿಕ್, ಥಾಮ್ಸನ್

ಬೆಲೆ ಹೆಚ್ಚಿಸಲು ನಿರ್ಧರಿಸಿದ ಎಲ್‌ಜಿ, ಪ್ಯಾನಾಸೋನಿಕ್, ಥಾಮ್ಸನ್

ಸಲಕರಣೆಗಳ ತಯಾರಿಕೆಗೆ ಬೇಕಾಗುವ ಮೂಲ ವಸ್ತುಗಳ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ತಮ್ಮ ಉತ್ಪಾದನೆಗಳ ಬೆಲೆಯನ್ನು ಹೆಚ್ಚಿಸುವುದು ಅನಿವಾರ್ಯ ಎನ್ನುತ್ತಿರುವ ಎಲ್‌ಜಿ, ಪ್ಯಾನಾಸೋನಿಕ್ ಮತ್ತು ಥಾಮ್ಸನ್‌ನಂತಹ ಕಂಪನಿಗಳು ಜನವರಿಯಿಂದ ತಮ್ಮ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿವೆ. ಆದಾಗ್ಯೂ ಸೋನಿ ಕಂಪನಿಯು ಈ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಂಡಿಲ್ಲ.

"ಹಲವಾರು ಸರಕುಗಳ ದರ ಹೆಚ್ಚಳವು ಮುಂದಿನ ದಿನಗಳಲ್ಲಿ ನಮ್ಮ ಉತ್ಪನ್ನದ ಬೆಲೆಯ ಮೇಲೆ ಪರಿಣಾಮ ಬೀರಲಿದೆ. ಜನವರಿಯಲ್ಲಿಯೇ ಸರಕುಗಳ ಬೆಲೆಗಳು ಶೇ 6 ರಿಂದ 7 ರಷ್ಟು ಹೆಚ್ಚಾಗಲಿವೆ ಎಂದು ನಾನು ನಿರೀಕ್ಷಿಸಲಾಗಿದೆ. ಮುಂದಿನ ಹಣಕಾಸು ವರ್ಷದ ಅಂತ್ಯದ ವೇಳೆಗೆ ಈ ಬೆಲೆಯೇರಿಕೆ ಶೇ 10 ರಿಂದ 11 ರಷ್ಟಾಗಬಹುದು. ಎನ್ನುತ್ತಾರೆ ಪ್ಯಾನಾಸೋನಿಕ್ ಇಂಡಿಯಾ ಅಧ್ಯಕ್ಷ ಮತ್ತು ಸಿಇಒ ಮನೀಶ್ ಶರ್ಮಾ.

ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಸಹ ಬರುವ ಜನವರಿ 1 ರಿಂದ ತನ್ನ ಉಪಕರಣಗಳ ಬೆಲೆಗಳನ್ನು ಕನಿಷ್ಠ ಶೇ 7 ರಿಂದ 8 ರಷ್ಟು ಹೆಚ್ಚಿಸಲು ಮುಂದಾಗಿದೆ.

"ಜನವರಿಯಿಂದ ಟಿವಿ, ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ಸೇರಿದಂತೆ ಎಲ್ಲಾ ಉತ್ಪನ್ನಗಳ ಬೆಲೆಗಳನ್ನು ಶೇ 7 ರಿಂದ 8 ರವರೆಗೆ ಹೆಚ್ಚಿಸಲಿದ್ದೇವೆ. ಕಚ್ಚಾ ವಸ್ತುಗಳು ಮತ್ತು ತಾಮ್ರ, ಅಲ್ಯೂಮಿನಿಯಂ ಮುಂತಾದ ಲೋಹಗಳ ದರ ಹೆಚ್ಚಾಗಿದೆ. ಕಚ್ಚಾ ತೈಲ ಬೆಲೆ ಸಹ ಹೆಚ್ಚಾಗಿದೆ. ಇದರಿಂದ ಪ್ಲಾಸ್ಟಿಕ್ ವಸ್ತುಗಳ ಬೆಲೆಯೂ ಗಣನೀಯವಾಗಿ ಏರಿಕೆಯಾಗಿದೆ" ಎನ್ನುತ್ತಾರೆ ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾದ ಗೃಹೋಪಯೋಗಿ ವಸ್ತು ವಿಭಾಗದ ವೈಸ್ ಪ್ರೆಸಿಡೆಂಟ್ ವಿಜಯ್ ಬಾಬು.

ಕಾದು ನೋಡಲಿರುವ ಸೋನಿ

ಇಷ್ಟಾದರೂ ಸೋನಿ ಕಂಪನಿ ಮಾತ್ರ ತನ್ನ ಉಪಕರಣಗಳ ಬೆಲೆ ಹೆಚ್ಚಳದ ಬಗ್ಗೆ ಇನ್ನೂ ನಿರ್ಧರಿಸಿಲ್ಲ.

ಬೆಲೆ ಹೆಚ್ಚಳದ ಕುರಿತು ಮಾತನಾಡಿದ ಸೋನಿ ಇಂಡಿಯಾ ಮ್ಯಾನೇಜಿಂಗ್ ಡೈರೆಕ್ಟರ್ ಸುನೀಲ ನಯ್ಯರ್, ನಾವಿನ್ನೂ ಈ ಬಗ್ಗೆ ಚಿಂತನೆ ಮಾಡಿಲ್ಲ. ನಾವಿನ್ನೂ ಪರಿಸ್ಥಿತಿಯನ್ನು ಕಾದು ನೋಡುತ್ತಿದ್ದೇವೆ. ಸರಕು ಪೂರೈಕೆಯ ಬಗ್ಗೆ ಪರಿಶೀಲನೆ ಮಾಡುತ್ತಿದ್ದು, ಈ ವಲಯದಲ್ಲಿ ಪ್ರತಿನಿತ್ಯ ಬದಲಾವಣೆಗಳಾಗುತ್ತಿವೆ. ಹೀಗಾಗಿ ನಮ್ಮ ಉತ್ಪನ್ನಗಳ ಬೆಲೆ ಹೆಚ್ಚಿಸುವ ಕುರಿತಾಗಿ ಯಾವುದೇ ಸ್ಪಷ್ಟ ನಿರ್ಧಾರ ತಳೆದಿಲ್ಲ ಎಂದು ಹೇಳಿದರು.

ಟಿವಿ ಪ್ಯಾನೆಲ್‌ಗಳ ಬೆಲೆ ಹಾಗೂ ಅದಕ್ಕೆ ಬೇಕಾದ ಇತರ ವಸ್ತುಗಳ ಬೆಲೆಗಳೂ ಹೆಚ್ಚಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸುನೀಲ ನಯ್ಯರ್, ನಾವಿದನ್ನು ಸರಕು ಪೂರೈಕೆ ಮತ್ತು ಬೇಡಿಕೆಯ ದೃಷ್ಟಿಯಿಂದ ನೋಡುತ್ತೇವೆ. ಎಲ್ಲ ಕಡೆಯೂ ವರ್ಕ್ ಫ್ರಂ ಹೋಂ ಮಾದರಿಯಲ್ಲಿ ಕೆಲಸ ನಡೆದಿರುವುದರಿಂದ ಅದಕ್ಕೆ ಬೇಕಾದ ಉಪಕರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಇವನ್ನು ತಯಾರಿಸುವ ಕಂಪನಿಗಳು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದನೆ ಮಾಡುತ್ತಿಲ್ಲವಾದ್ದರಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದಲೂ ಉಪಕರಣಗಳ ಬೆಲೆ ಹೆಚ್ಚಾಗುತ್ತಿವೆ. ಸಣ್ಣ ಸೈಜಿನ ಸ್ಕ್ರೀನ್ ಬೆಲೆಗಳು ಗಮನಾರ್ಹವಾಗಿ ಹೆಚ್ಚುತ್ತಿವೆ. ಆದರೂ ಇದೇನೂ ಚಿಂತೆಯ ವಿಷಯವಲ್ಲ. ದೊಡ್ಡ ಸ್ಕ್ರೀನ್ ಬೆಲೆಗಳು ಸಹ ಹೆಚ್ಚಾಗುತ್ತಿವೆ. ಆದಾಗ್ಯೂ ಭಾರತದಲ್ಲಿ 32 ಇಂಚಿನ ಸ್ಕ್ರೀನ್‌ಗಳಿಗೆ ವ್ಯಾಪಕ ಬೇಡಿಕೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಟಿವಿ ಓಪನ್ ಸೆಲ್ ಪೂರೈಕೆಯಲ್ಲಿ ಕೊರತೆ

ಮಾರುಕಟ್ಟೆಯಲ್ಲಿ ಟಿವಿ ಓಪನ್ ಸೆಲ್‌ಗಳ ಕೊರತೆಯಿದ್ದು, ಇವುಗಳ ಬೆಲೆಗಳು ಶೇ 200 ರಷ್ಟು ಜಿಗಿದಿವೆ ಎಂದು ಸುಪರ್ ಪ್ಲಾಸ್ಟ್ರಾನಿಕ್ಸ್ ಕಂಪನಿ ಹೇಳಿದೆ. ಸುಪರ್ ಪ್ಲಾಸ್ಟ್ರಾನಿಕ್ಸ್ ಫ್ರೆಂಚ್ ಕಂಪನಿಯಾದ ಥಾಮ್ಸನ್ ಮತ್ತು ಕೋಡಕ್ ಕಂಪನಿಗಳ ಬ್ರಾಂಡ್ ಲೈಸೆನ್ಸ್ ಹೊಂದಿರುವ ಕಂಪನಿಯಾಗಿದೆ.

ಟಿವಿ ಪ್ಯಾನೆಲ್‌ಗಳ ಬೆಲೆಗಳು ಶೇ 200 ರಷ್ಟು ಹೆಚ್ಚಾದರೂ ಪೂರೈಕೆ ಹೆಚ್ಚಾಗುತ್ತಿಲ್ಲ. ಜಾಗತಿಕವಾಗಿ ನಾವು ಪರ್ಯಾವಾಗಿ ಈ ವಸ್ತುಗಳಿಗಾಗಿ ಚೀನಾ ದೇಶವನ್ನು ಅವಲಂಬಿಸಿದ್ದೇವೆ. ಹೀಗಾಗಿ ಥಾಮ್ಸನ್ ಮತ್ತು ಕೋಡಕ್ ಕಂಪನಿಗಳು ತಮ್ಮ ಆಂಡ್ರಾಯ್ಡ್ ಟಿವಿ ಬೆಲೆಗಳನ್ನು ಶೇ 20 ರಷ್ಟು ಹೆಚ್ಚಿಸಲಿವೆ ಎನ್ನುತ್ತಾರೆ ಸುಪರ್ ಪ್ಲಾಸ್ಟ್ರಾನಿಕ್ಸ್ ಸಿಇಓ ಅವನೀತ್ ಸಿಂಗ್ ಮಾರ್ವಾ.

ಸರಕು ಸಾಗಣೆ ಶುಲ್ಕ ಗಮನಾರ್ಹ ಹೆಚ್ಚಳ

ಅಕ್ಟೋಬರ್ 2020ಕ್ಕೆ ಹೋಲಿಸಿದರೆ ಪ್ರಸ್ತುತ ಆಮದು ಸರಕು ಸಾಗಣೆ ಶುಲ್ಕಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಿರುವುದರಿಂದ ಉಪಕರಣಗಳ ಬೆಲೆಗಳು ಹೆಚ್ಚಾಗುತ್ತಿವೆ ಎಂದು ವಿಡಿಯೋಟೆಕ್ಸ್ ಇಂಟರನ್ಯಾಷನಲ್ ಡೈರೆಕ್ಟರ್ ಅರುಣ ಬಜಾಜ್ ಹೇಳಿದರು.

ಬೆಲೆ ಹೆಚ್ಚಳ ತಿರುಗುಬಾಣವೂ ಆಗಬಹುದು..

ಈ ಮಧ್ಯೆ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಮತ್ತು ಅಪ್ಲಯನ್ಸಸ್ ಮ್ಯಾನುಫ್ಯಾಕ್ಚರ್ಸ್ ಅಸೋಸಿಯೇಶನ್ ಬೆಲೆ ಹೆಚ್ಚಳದ ಬಗ್ಗೆ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದು, ಬೆಲೆ ಹೆಚ್ಚಳದಿಂದ ಮುಂದಿನ ತ್ರೈಮಾಸಿಕದಲ್ಲಿ ಉಪಕರಣಗಳಿಗೆ ಬೇಡಿಕೆ ಕುಂಠಿತವಾಗುವ ಸಾಧ್ಯತೆಗಳಿವೆ ಎಂದಿದೆ.

ಮೂಲ ಸರಕುಗಳ ಬೆಲೆ ಶೇ 20 ರಿಂದ 25 ಹೆಚ್ಚಳ, ಸಮುದ್ರ ಹಾಗೂ ವಿಮಾನ ಕಾರ್ಗೊ ಶುಲ್ಕಗಳಲ್ಲಿ 5 ರಿಂದ 6 ಪಟ್ಟು ಹೆಚ್ಚಳ, ಕಂಟೇನರ್‌ಗಳ ಕೊರತೆ, ಗಣಿಗಾರಿಕೆಯಲ್ಲಿ ಹಿನ್ನಡೆ ಇವೇ ಮುಂತಾದ ಕಾರಣಗಳಿಂದ ಗೃಹೋಪಯೋಗಿ ವಸ್ತುಗಳ ಬೆಲೆಗಳು ಕೂಡ ಹೆಚ್ಚಾಗುತ್ತಿವೆ. ಹೀಗಾಗಿ ಬಹುತೇಕ ಬ್ರಾಂಡ್‌ಗಳು ತಮ್ಮ ಉತ್ಪನ್ನಗಳ ಬೆಲೆಗಳನ್ನು ಶೇ 8 ರಿಂದ 10 ರಷ್ಟು ಹೆಚ್ಚಿಸಬಹುದು. ಆದರೆ ಒಟ್ಟಾರೆಯಾಗಿ ಈ ಬೆಲೆ ಹೆಚ್ಚಳವು ಮುಂದಿನ ತ್ರೈಮಾಸಿಕದಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದು ಎನ್ನುತ್ತಾರೆ ಎಲೆಕ್ಟ್ರಾನಿಕ್ಸ್ ಮತ್ತು ಅಪ್ಲಯನ್ಸಸ್ ಮ್ಯಾನುಫ್ಯಾಕ್ಚರ್ಸ್ ಅಸೋಸಿಯೇಶನ್ ಅಧ್ಯಕ್ಷ ಕಮಲ್ ನಂದಿ.

ಮುಂದಿನ ದಿನಗಳಲ್ಲಿ ಬೇಡಿಕೆ ತಗ್ಗಿದಂತೆ ಪರಿಸ್ಥಿತಿ ಸುಧಾರಿಸಲೂಬಹುದು ಎಂಬುದು ಕಮಲ್ ನಂದಿ ಅವರ ಅಭಿಪ್ರಾಯವಾಗಿದೆ. ಕಮಲ್ ನಂದಿ ಗೋದ್ರೆಜ್ ಅಪ್ಲಯನ್ಸಸ್ ಬ್ಯುಸಿನೆಸ್ ಹೆಡ್ ಹಾಗೂ ಎಕ್ಸೆಕ್ಯುಟಿವ್ ವೈಸ್ ಪ್ರೆಸಿಡೆಂಟ್ ಸಹ ಆಗಿದ್ದಾರೆ.

ಬೆಲೆ ಹೆಚ್ಚಳ ಮಾತ್ರ ಖಚಿತ

ಬೆಲೆ ಹೆಚ್ಚಳ ಮಾತ್ರ ಖಚಿತ

ಭಾರತೀಯ ಉದ್ಯಮಿಗಳು ಎಲೆಕ್ಟ್ರಾನಿಕ್ ವಸ್ತುಗಳಿಗಾಗಿ ಬಹುತೇಕ ಚೀನಾ ಮಾರುಕಟ್ಟೆಯನ್ನೇ ಅವಲಂಬಿಸಿರುವುದು ಇಲ್ಲಿ ಗಮನಾರ್ಹ.

ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಿದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ತಮ್ಮ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುವುದು ಗೃಹೋಪಯೋಗಿ ಸಲಕರಣೆ ತಯಾರಕ ಕಂಪನಿಗಳಿಗೆ ಅನಿವಾರ್ಯವಾಗಿದೆ ಎಂಬುದು ಗೊತ್ತಾಗುತ್ತದೆ. ಹೀಗಾಗಿ ಬರುವ ದಿನಗಳಲ್ಲಿ ಟಿವಿ, ಫ್ರಿಜ್, ವಾಶಿಂಗ್ ಮಶೀನ್ ಮುಂತಾದುವುಗಳ ಬೆಲೆಗಳು ಹೆಚ್ಚಾಗುವುದು ಖಂಡಿತ ಎನ್ನಲಾಗುತ್ತಿದೆ.

Best Mobiles in India

Read more about:
English summary
Here’s Why Appliances Like TV, Refrigerator Will Cost More

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X