ಜೊಮ್ಯಾಟೋ ಮತ್ತು ಸ್ವಿಗ್ಗಿಗೆ ಬಿಗ್‌ ಶಾಕ್‌ ನೀಡಿದ ಸಿಸಿಐ!

|

ಆನ್‌ಲೈನ್‌ ಫುಡ್‌ ಡೆಲಿವರಿ ಮಾಡುವ ಜೊಮ್ಯಾಟೋ ಮತ್ತು ಸ್ವಿಗ್ಗಿ ಪ್ಲಾಟ್‌ಫಾರ್ಮ್‌ಗಳಿಗೆ ಸಿಸಿಐ ಬಿಗ್‌ ಶಾಕ್‌ ನೀಡಿದೆ. 50,000 ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳನ್ನು ಪ್ರತಿನಿಧಿಸುವ ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಎನ್‌ಆರ್‌ಎಐ) ನೀಡಿದ ದೂರಿನ ಅನ್ವಯ ಸಿಸಿಐ ಕ್ರಮ ತೆಗೆದುಕೊಂಡಿದೆ. ಭಾರತೀಯ ಸ್ಪರ್ಧಾ ಆಯೋಗವು (CCI) ಜೊಮ್ಯಾಟೋ ಮತ್ತು ಸ್ವಿಗ್ಗಿ ವಿರುದ್ಧ ಅನ್ಯಾಯದ ಬೆಲೆ ಮತ್ತು ವ್ಯಾಪಾರ ಪಾಲುದಾರರೊಂದಿಗಿನ ವ್ಯವಹಾರಗಳ ವಿರುದ್ಧ ತನಿಖೆಗೆ ಆದೇಶಿಸಿದೆ.

ಆನ್‌ಲೈನ್‌

ಹೌದು, ಆನ್‌ಲೈನ್‌ ಫುಡ್‌ ಡೆಲಿವರಿ ಮಾಡುವ ಜೊಮ್ಯಾಟೋ ಮತ್ತು ಸ್ವಿಗ್ಗಿ ಮೇಲೆ ಸಿಸಿಐ ತನಿಖೆಗೆ ಆದೇಶಿಸಿದೆ. NRAI ತನ್ನ ದೂರಿನಲ್ಲಿ, ಸ್ವಿಗ್ಗಿ ಮತ್ತು ಝೊಮಾಟೊ ಅಳವಡಿಸಿಕೊಂಡ 'ಸ್ಪರ್ಧಾತ್ಮಕ-ವಿರೋಧಿ' ಅಭ್ಯಾಸಗಳು ರೆಸ್ಟೋರೆಂಟ್‌ಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಇದರಿಂದ ರೆಸ್ಟೋರೆಂಟ್‌ಗಳು ಕನಿಷ್ಟ ಬೆಲೆಯನ್ನು ಕಾಯ್ದುಕೊಳ್ಳಲು ಅವಕಾಶ ನೀಡುತ್ತಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಸಿಸಿಐ ತನಿಖೆಗೆ ಆದೇಶಿಸಿರುವುದಾಗಿ ಹೇಳಿದೆ. ಹಾಗಾದ್ರೆ ಸ್ವಿಗ್ಗಿ ಮತ್ತು ಜೊಮ್ಯಾಟೊ ಮೇಲೆ ಸಿಸಿಐ ತನಿಖೆಗೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ವಿಗ್ಗಿ ಮತ್ತು ಜೊಮ್ಯಾಟೊ

ಸ್ವಿಗ್ಗಿ ಮತ್ತು ಜೊಮ್ಯಾಟೊ ಪರಸ್ಪರ ಸ್ಪರ್ಧೆ ನಡೆಸುತ್ತಿದ್ದು, ಸ್ಪರ್ಧಾತ್ಮಕ ವಿರೋಧಿ ಬೆಲೆಯನ್ನು ಅನುಸರಿಸುತ್ತಿವೆ. ಇದರಿಂದ ರೆಸ್ಟೋರೆಂಟ್‌ ಪಾಲುದಾರರಿಗೆ ಕನಿಷ್ಟ ಬೆಲೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಇದಲ್ಲದೆ ಡೇಟಾ ಮರೆಮಾಚುವಿಕೆ, ಬಂಡಲಿಂಗ್ ಲಾಜಿಸ್ಟಿಕ್ಸ್ ಮತ್ತು ಸರ್ವಿಸ್‌ ಲಿಸ್ಟ್‌ ಮತ್ತು ಸೂಕ್ತವಾದ ಪಟ್ಟಿಯನ್ನು ನಿರ್ವಹಿಸಲು ರಿಯಾಯಿತಿಗಳನ್ನು ನೀಡಲು ರೆಸ್ಟೋರೆಂಟ್ ಪಾಲುದಾರರನ್ನು ಒತ್ತಾಯಿಸುತ್ತಿವೆ. ಅಲ್ಲದೆ ಕೊರೊನಾ ನಂತರದ ದಿನಗಳಲ್ಲಿ Zomato ಮತ್ತು Swiggy ನ ಸ್ಪರ್ಧಾತ್ಮಕ-ವಿರೋಧಿ ಅಭ್ಯಾಸಗಳ ಪ್ರಮಾಣವು ಬಹುಪಟ್ಟು ಹೆಚ್ಚಾಗಿದೆ.

ನ್ಯಾಷನಲ್

ಇದೇ ಕಾರಣಕ್ಕೆ ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ ​​ಆಫ್ ಇಂಡಿಯಾ ಸಿಸಿಐನಲ್ಲಿ ದೂರು ದಾಖಲಿಸಿತ್ತು. ದೂರಿನ ಪರಿಗಣನೆಗೆ ತೆಗೆದುಕೊಂಡಿರುವ ಸಿಸಿಐ, ಈ ಬಗ್ಗೆ ತನಿಖೆ ನಡೆಸಿ 60 ದಿನಗಳಲ್ಲಿ ವರದಿ ಸಲ್ಲಿಸುವಂತೆ ಮಹಾನಿರ್ದೇಶಕರಿಗೆ (ಡಿಜಿ) ಆದೇಶಿಸಿದೆ. ಅಲ್ಲದೆ ಜೊಮ್ಯಾಟೊ ಮತ್ತು ಸ್ವಿಗ್ಗಿ ನಡತೆಗೆ ಸಂಬಂಧಿಸಿದಂತೆ ಪ್ರಾಥಮಿಕ ಪರಿಶೀಲನೆಯ ಅಗತ್ಯವಿದೆ ಎಂದು ತನ್ನ ಆದೇಶದಲ್ಲಿ ಹೇಳಿದೆ. ಈ ಪ್ಲಾಟ್‌ಫಾರ್ಮ್‌ಗಳು ಇಕ್ವಿಟಿ ಅಥವಾ ಆದಾಯದ ಆಸಕ್ತಿಯನ್ನು ಹೊಂದಿರುವ ರೆಸ್ಟೋರೆಂಟ್ ಪಾಲುದಾರರಿಗೆ ಆದ್ಯತೆ ನೀಡುತ್ತಿವೆ. ಇದರಿಂದ ಇತರ ರೆಸ್ಟೋರೆಂಟ್ ಪಾಲುದಾರರಿಗೆ ನ್ಯಾಯಯುತ ನಿಯಮಗಳಲ್ಲಿ ಸ್ಪರ್ಧಿಸಲು ಸಾದ್ಯವಾಗುತ್ತಿಲ್ಲ ಎಂದು ಹೇಳಿದೆ.

CCI

ಇನ್ನು CCI ತನ್ನ ಆದೇಶದಲ್ಲಿ ಬೆಲೆ ಸಮಾನತೆಯ ಸಮಸ್ಯೆಯ ಬಗ್ಗೆ ಸಹ ಹೇಳಿದೆ. ಇದರಲ್ಲಿ ರೆಸ್ಟೋರೆಂಟ್ ಪಾಲುದಾರರು ತಮ್ಮ ಸ್ವಂತ ಪೂರೈಕೆ ಸರಪಳಿಯಲ್ಲಿ ಹೆಚ್ಚಿನ ರಿಯಾಯಿತಿಯನ್ನು ನೀಡಲು ಅನುಮತಿಸುವುದಿಲ್ಲ. ಅದರಂತೆ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದೇ ರೀತಿಯ ಬೆಲೆಗಳನ್ನು ನಿರ್ವಹಿಸಬೇಕಾಗುತ್ತದೆ. ಪ್ಲಾಟ್‌ಫಾರ್ಮ್‌ಗೆ ಪಾವತಿಸಿದ ಕಮಿಷನ್ ದರಗಳನ್ನು ಲೆಕ್ಕಿಸದೆಯೇ ಗ್ರಾಹಕರಿಗೆ ಒಂದೇ ರೀತಿಯ ಬೆಲೆಗಳನ್ನು ಒದಗಿಸಬೇಕಾಗಿದೆ. ಇದರಿಂದ ಬೆಲೆ ಸಮಾನತೆಯ ಷರತ್ತುಗಳು ಕಮಿಷನ್ ಆಧಾರದ ಮೇಲೆ ಸ್ಪರ್ಧಿಸುವುದನ್ನು ಪ್ಲಾಟ್‌ಫಾರ್ಮ್‌ಗಳ ನಡುವೆ ಪೈಪೋಟಿ ತಪ್ಪಿಸಬಹುದು ಎಂದು CCI ಹೇಳಿದೆ.

ಜೊಮ್ಯಾಟೋ

ಜೊಮ್ಯಾಟೋ ಮತ್ತು ಸ್ವಿಗ್ಗಿ ಹೊಂದಿರುವ ಕೆಲವು ನಿಯಮಗಳು ಹೊಸ ಪ್ಲಾಟ್‌ಫಾರ್ಮ್‌ಗಳಿಗೆ ಸ್ಪರ್ಧಿಸಲು ಅಡ್ಡಿಯನ್ನುಂಟು ಮಾಡುವ ಸಾಧ್ಯತೆಯಿದೆ ಎಂದು ಸಿಸಿಐ ತನ್ನ ಆದೇಶದಲ್ಲಿ ಹೇಳಿದೆ. ಆಹಾರ ಪದಾರ್ಥಗಳ ಪೂರೈಕೆಯಲ್ಲಿ ದೊಡ್ಡ ಹೆಸರು ಮಾಡಿರುವ ಈ ಪ್ಲಾಟ್‌ಫಾರ್ಮ್‌ಗಳು ಇತರೆ ಪ್ಲಾಟ್‌ಫಾರ್ಮ್‌ಗಳಿಗೆ ಅಡ್ಡಿಯನ್ನುಂಟು ಮಾಡುತ್ತಿವೆ. ಜೊತೆಗೆ ನ್ಯಾಯಯುತ ಬೆಲೆ ಪಾಲಿಸುವ ರೆಸ್ಟೋರೆಂಟ್‌ಗಳಿಗೆ ಸಾಕಷ್ಟು ನಷ್ಟವನ್ನು ಉಂಟು ಮಾಡುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Best Mobiles in India

English summary
CCI has given 60 days to Director General to conduct its investigation and submit its report.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X