PUBG ಆಟದಲ್ಲಿ ಮೋಸ ಮಾಡಿದ ಆಟಗಾರರಿಗೆ ನಿಷೇಧದ ಶಿಕ್ಷೆ

|

ಬ್ಯಾಟಲ್ ರಾಯಲ್ ಗೇಮ್ PUBG ನಾಲ್ಕು ಜನ ಪ್ಲೇಯರ್ ಗಳನ್ನು ಆಟದಲ್ಲಿ ಮೋಸ ಮಾಡಿದ ಕಾರಣದಿಂದಾಗಿ ನಿಷೇಧ ಹೇರಿದೆ. ಅನಧಿಕೃತ ಸಾಫ್ಟ್ ವೇರ್ ಬಳಸಿ ಮತ್ತು ಅನುಮಾನಾಸ್ಪದ ಸಾಫ್ಟ್ ವೇರ್ ಬಳಸಿ ಆಟವನ್ನು ಆಡಿದ ಕಾರಣದಿಂದಾಗಿ ಈ ಪ್ಲೇಯರ್ ಗಳನ್ನು ಬ್ಯಾನ್ ಮಾಡಲಾಗಿದೆ.

ನಾಲ್ಕು ವೃತ್ತಿಪರ ಆಟಗಾರರು ಬ್ಯಾನ್:

ನಾಲ್ಕು ವೃತ್ತಿಪರ ಆಟಗಾರರು ಬ್ಯಾನ್:

ನಿಷೇಧಕ್ಕೊಳಗಾಗಬೇಕಾದ ನಾಲ್ಕು 'ವೃತ್ತಿಪರ' PUBG ಆಟಗಾರರೆಂದರೆ ಕ್ರಿಶ್ಚಿಯನ್ "ಕುಹಿಸ್" ನರ್ವಾಝ್, ಲಿಯಾಮ್ "ಲಿಯಾಮ್ಮ್" ಟ್ರಾನ್, ಟೈಲರ್ "ಡೆವೊವ್ ಆರ್" ಸ್ಟಿ ಮತ್ತು ಮಾರ್ಕ್ "ಟೆಫ್ಲ್0ನ್" ಫಾರ್ಮಾರೊ. ಡಿಸೆಂಬರ್ 31,2018 ರಿಂದ ಈ ಪ್ಲೇಯರ್ ಗಳು ಯಾವುದೇ ಅಧಿಕೃತ ಆಟಗಳಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶವಿರುವುದಿಲ್ಲ. ಮುಂದಿನ ಮೂರು ವರ್ಷಗಳ ಕಾಲ ಇವರನ್ನು ಆಟಗಳಿಂದ ಬ್ಯಾನ್ ಮಾಡಲಾಗಿದೆ.

ಅರ್ಹತಾ ಸುತ್ತಿನಲ್ಲೂ ಮೋಸ:

ಅರ್ಹತಾ ಸುತ್ತಿನಲ್ಲೂ ಮೋಸ:

ಈ ನಾಲ್ಕು ಜನ ಪ್ಲೇಯರ್ ಗಳು ರಾಷ್ಟ್ರೀಯ PUBG ಲೀಗ್ (NPL) ನ ಪ್ರೀ- ಸೀಸನ್ ನ ಅರ್ಹತಾ ಆಟಗಾರರಾಗಿದ್ದರು. PUBG Esport ನ ಟ್ವೀಟ್ ನ ಪ್ರಕಾರ ಪ್ಲೇಯರ್ ಗಳು ಪಬ್ಲಿಕ್ ಮ್ಯಾಚ್ ಗಳಲ್ಲಿ ಮತ್ತು ಡಿಸೆಂಬರ್ ನಲ್ಲಿ ಆರಂಭವಾದ NPLಗಾಗಿ ಅನಕೃತವಾಗಿರುವ ಮೂರನೇ ಪಾರ್ಟಿ ಸಾಫ್ಟ್ ವೇರ್ ನ್ನು ಬಳಸಿದ್ದಾರೆ

ಅನರ್ಹತೆ:

ಅನರ್ಹತೆ:

PUBG ಕಾರ್ಪ್ ಅವರ ತಂಡವನ್ನು ಕೂಡ NPL ಪ್ರೀ-ಸೀಸನ್ ನಿಂದ ಅನರ್ಹಗೊಳಿಸಿದೆ. NPL ಕ್ವಾಲಿಫೈಯರ್ ರೌಂಡ್ 3( ಡಿಸೆಂಬರ್ 15-16,2018 ರಲ್ಲಿ ಆಯೋಜಿಸ್ಪಟ್ಟಿತ್ತು) ನಿಂದ ಒಟ್ಟಾರೆ ಮಾನ್ಯತೆ ಪಡೆದ ಮುಂದಿನ ನಾಲ್ಕು ತಂಡಗಳು ತಮ್ಮ ಸ್ಥಾನವನ್ನು ಪಡೆದುಕೊಳ್ಳುತ್ತದೆ.

ಇ-ಸ್ಪೋರ್ಟ್ಸ್ ನಿಂದಲೇ ಬ್ಯಾನ್?

ಇ-ಸ್ಪೋರ್ಟ್ಸ್ ನಿಂದಲೇ ಬ್ಯಾನ್?

ಈ ನಾಲ್ಕು ಪ್ಲೇಯರ್ ಗಳನ್ನು ಎಲ್ಲಾ ಇ-ಸ್ಪೋರ್ಟ್ಸ್ ನಿಂದ ಬ್ಯಾನ್ ಮಡಲಾಗಿದೆಯೇ ಅಥವಾ PUBG ಯಿಂದ ಮಾತ್ರವೇ ಬ್ಯಾನ್ ಮಾಡಲಾಗಿದೆಯೇ ಎಂಬ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ.

ಮೂರು ವರ್ಷಕ್ಕೆ ಬ್ಯಾನ್:

ಮೂರು ವರ್ಷಕ್ಕೆ ಬ್ಯಾನ್:

PUBG ಕಾರ್ಪ್ ಮೂರು ವರ್ಷಕ್ಕೆ ಇವರನ್ನು ಬ್ಯಾನ್ ಮಾಡಿದ್ದು ಅಧಿಕೃತ ಇನ್ವೆನ್ಸ್ಟಿಗೇಷನ್ ಇನ್ನೂ ಮುಂದುವರಿಯಲಿದೆ. ಸಂಪೂರ್ಣ ಗೈಡ್ ಲೈನ್ ಗಳು ಮತ್ತು ಪೆನಲ್ಟಿ ಸಿಸ್ಟಮ್ ಬಗೆಗಿನ ವಿವರಗಳು ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ.

30,000 ಖಾತೆ ನಿಷೇಧ:

ಇತ್ತೀಚೆಗೆ PUBG ಕಾರ್ಪ್ ಸುಮಾರು 30,000 ಖಾತೆಗಳನ್ನು ನಿಷೇಧಿಸಿದೆ. ಥರ್ಡ್ ಪಾರ್ಟಿ ಆಪ್ ರ್ಯಾಡರ್ ಹ್ಯಾಕ್ ಚೀಟ್ ಬಳಸಿ ಇವರು ಇತರೆ ಪ್ಲೇಯರ್ ಗಳ ಲೊಕೇಷನ್ ನ್ನು ಎರಡನೇ ಸ್ಕ್ರೀನ್ ಅಥವಾ ಮೊಬೈಲ್ ಆಪ್ ನಲ್ಲಿ ನೋಡಿ ಆಟವನ್ನು ಆಡುತ್ತಿದ್ದರು. ನಿಷೇಧ ಪಟ್ಟಿಯಲ್ಲಿ ಕೆಲವು ವೃತ್ತಿಪರ PUBG ಪ್ಲೇಯರ್ ಗಳು ಒಳಗೊಂಡಿದ್ದಾರೆ. ಈ ಹೊಸ ವಿರೋಧಿ ಕ್ರಮವನ್ನು ಡೆವಲಪರ್ ಹೊಸ ವೀಕೆಂಡಿ ಸ್ನೋ ಥೀಮಿನ ನಕ್ಷೆಯ ಬಿಡುಗಡೆಯನ್ನು ಅಳವಡಿಸಿಕೊಂಡಿದ್ದಾರೆ.

Best Mobiles in India

Read more about:
English summary
Here’s why PUBG has banned these players for three years

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X