ಗೂಗಲ್ ಮ್ಯಾಪ್ ನಲ್ಲಿ ಗೋವಾ ಬೀಚ್ ಹುಡುಕಿದರೆ ಎಲ್ಲೆಲ್ಲಿಗೋ ಹೋಗುತ್ತೀರಿ!
ಗೂಗಲ್ ಮ್ಯಾಪ್ ಬಳಸಿ ನೇವಿಗೇಷನ್ ಮಾಡಿಕೊಂಡು ಅಪರಿಚಿತ ಸ್ಥಳವೊಂದಕ್ಕೆ ಹೋಗುವುದು ಬಹಳ ಸುಲಭವಾಗಿದೆ. ಆದರೆ ನೀವು ಆಯ್ಕೆ ಮಾಡಿಕೊಂಡ ಸ್ಥಳದ ಬದಲಾಗಿ ತಪ್ಪು ಸ್ಥಳಕ್ಕೆ ಗೂಗಲ್ ಮ್ಯಾಪ್ ನಿಮ್ಮನ್ನ ಕರೆದೊಯ್ಯುವ ಸಾಧ್ಯತೆ ಇದೆ. ಅಂತಹ ಒಂದು ಪ್ರಕರಣ ಇದೀಗ ಗೋವಾ ರಾಜ್ಯದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ತಪ್ಪು ದಾರಿ ತೋರಿಸುವ ಗೂಗಲ್ ಮ್ಯಾಪ್:
ಗೋವಾದ ಬಾಗಾ ಬೀಚ್ ಗೆ ಗೂಗಲ್ ಮ್ಯಾಪ್ ಸರಿಯಾಗಿ ಕರೆದುಕೊಂಡು ಹೋಗುವುದಿಲ್ಲ ಎಂಬ ಬಗ್ಗೆ ಹಲವು ಬಳಕೆದಾರರು ವರದಿ ಮಾಡಿದ್ದಾರೆ. ಒಂದು ವೇಳೆ ನೀವು ಗೂಗಲ್ ಮ್ಯಾಪ್ ನಲ್ಲಿ ಬಾಗಾ ಬೀಚ್ ಗೆ ಹೋಗುವಂತೆ ಸೆಟ್ ಮಾಡಿಕೊಂಡು ತೆರಳಿದರೆ ಅದು ತಪ್ಪು ದಾರಿಯನ್ನು ತೋರಿಸುತ್ತದೆ ಮತ್ತು ಸರಿಯಾದ ಜಾಗಕ್ಕೂ ಒಂದು ಕಿಲೋಮೀಟರ್ ಮುಂದೆ ನೀವು ತಲುಪಬೇಕಾಗಿರುವ ಸ್ಥಳ ಈಗ ತಲುಪಿದ್ದೀರಿ ಎಂದು ಹೇಳುತ್ತದೆ.

ಸ್ಥಳೀಯರಿಂದ ಬ್ಯಾನರ್:
ಈ ರೀತಿ ಗೂಗಲ್ ಮ್ಯಾಪ್ ನಿಂದ ಮೋಸ ಹೋಗಿ ಮುಂದೆ ಬರುವ ಪ್ರಕರಣಗಳು ಮಾಮೂಲಿಯಾಗಿ ನಡೆಯುತ್ತಿದ್ದುದರಿಂದಾಗಿ ಅಲ್ಲಿನ ಸ್ಥಳೀಯರು ಗೂಗಲ್ ಮ್ಯಾಪ್ ತೋರಿಸುವ ತಪ್ಪು ಡೆಸ್ಟಿನೇಷನ್ನಿನ ಜಾಗದಲ್ಲಿ ಒಂದು ಬ್ಯಾನರ್ ನ್ನೇ ಹಾಕಿದ್ದಾರೆ. " ನೀವು ಗೂಗಲ್ ಮ್ಯಾಪ್ ನಿಂದ ಫೂಲ್ ಆಗಿದ್ದೀರಿ. ಈ ರೋಡ್ ಬಾಗಾ ಬೀಚ್ ಗೆ ಹೋಗುವುದಿಲ್ಲ!!! ವಾಪಾಸು ತೆರಳಿ ಮತ್ತು ಎಡಕ್ಕೆ ತಿರುಗಿ. ಇಲ್ಲಿಂದ ಒಂದು ಕಿಲೋಮೀಟರ್ ಹಿಂದಕ್ಕೆ ಬಾಗಾ ಬೀಚ್ ಸಿಗುತ್ತದೆ" ಎಂಬ ಬ್ಯಾನರ್ ಕಾಣಿಸುತ್ತದೆ.

ಸುಮಂತ್ ರಾಜ್ ರಿಂದ ಬೆಳಕಿಗೆ:
ಈ ಸಮಸ್ಯೆ ಮೊದಲ ಬಾರಿಗೆ ಸುಮಂತ್ ರಾಜ್ ಎಂಬ ವ್ಯಕ್ತಿ ಬ್ಯಾನರ್ ನ ಫೋಟೋವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಾಗ ತಿಳಿದುಬಂದಿದೆ. " Hahaha. @googlemaps what's the route to Baga beach?", ಎಂದು ಬರೆದು ಅವರು ಬ್ಯಾನರ್ ನ ಫೋಟೋವನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.ಈ ಪೋಸ್ಟ್ ವೈರಲ್ ಆಗಿದೆ ಮತ್ತು ಟ್ವೀಟರ್ ಬಳಕೆದಾರರಿಗೆ ವಿಭಿನ್ನ ಪ್ರತಿಕ್ರಿಯೆಯನ್ನೂ ಕೂಡ ಪಡೆದಿದೆ.

ಟ್ವೀಟಿಗರ ಭರ್ಜರಿ ಪ್ರತಿಕ್ರಿಯೆ:
ಕೆಲವರು ಇದೇ ರೀತಿಯ ಅನುಭವ ತಮಗೂ ಆಗಿದ್ದರ ಬಗ್ಗೆ ಹಂಚಿಕೊಂಡಿದ್ದಾರೆ ಮತ್ತು ಕೆಲವರು ತಮಗೂ ಇದೇ ರೀತಿಯ ಅನುಭವ ಬಾಗಾ ಬೀಚ್ ನಲ್ಲಿ ಆಗಿರುವುದನ್ನು ತಿಳಿಸಿದ್ದಾರೆ. 2014 ರಲ್ಲಿ ನಾನೂ ಕೂಡ ನಮ್ಮ ಪೋಷಕರನ್ನು ಕರೆದುಕೊಂಡು ಹೋದಾಗ ಈ ಸಮಸ್ಯೆಯನ್ನು ಎದುರಿಸಿದ್ದೆ ಎಂದು ಮತ್ತೊಬ್ಬ ಟ್ವೀಟಿಗ ತಿಳಿಸಿದ್ದಾರೆ.

ಗೂಗಲ್ ಮ್ಯಾಪ್ ನ ಸಮಸ್ಯೆ:
ದೆಹಲಿಯಿಂದ ಚಂಡೀಘಡಕ್ಕೆ ಹೋಗುವಾಗ ಕೂಡ ಗೂಗಲ್ ಮ್ಯಾಪ್ ನನಗೆ ತಪ್ಪು ದಾರಿಯನ್ನು ತೋರಿಸಿದೆ ಎಂದು ಮತ್ತೊಬ್ಬ ಟ್ವೀಟಿಗರು ಅಭಿಪ್ರಾಯ ಪಟ್ಟಿದ್ದಾರೆ. ನೇರವಾಗೇ ಇರುವ ಹೈವೇ ದಾರಿಯನ್ನೂ ಕೂಡ ಗೂಗಲ್ ಮ್ಯಾಪ್ ತಪ್ಪಾಗಿ ತೋರಿಸಿದೆ ಎಂದು ಅವರು ಹೇಳಿದ್ದಾರೆ. ಆದರೆ ತಮಗಾದ ಈ ಅನುಭವವನ್ನು ಅವರು ಎಲ್ಲೂ ಹಂಚಿಕೊಂಡಿಕೊಂಡಿರಲಿಲ್ಲ. ಸುಮಂತ್ ಅವರು ಈ ಸಮಸ್ಯೆಯನ್ನು ಹಂಚಿಕೊಂಡಿರುವುದಕ್ಕೆ ಹೆಚ್ಚಿನವರು ಶ್ಲಾಘಿಸಿದ್ದಾರೆ.


Click it and Unblock the Notifications








