Home
ಸುದ್ದಿಜಾಲ

ಸ್ಟೀವ್ ಜಾಬ್ಸ್‌ ನಿರ್ಮಿಸಿದ ಮೊದಲ ಕಂಪ್ಯೂಟರ್ ಮೌಲ್ಯ ಎಷ್ಟು ಗೊತ್ತಾ..?

By Gizbot Bureau

ಇಂದಿನ ತಂತ್ರಜ್ಞಾನ ಮತ್ತು ಆಧುನಿಕ ಗೆಜೆಟ್ ಗಳ ವಿಚಾರದಲ್ಲಿ ಜನರು ಒಂದು ಹಂತದವರೆಗಿನ ಪ್ರೀಮಿಯಂ ಮೊತ್ತವನ್ನು ಪಾವತಿಸಲು ಸಿದ್ಧರಿರುತ್ತಾರೆ. ಅತೀ ದುಬಾರಿ ಗೆಜೆಟ್ ಗಳನ್ನು ಕೊಂಡುಕೊಳ್ಳುವವರು ಅತ್ಯಂತ ಹೆಚ್ಚು ಸ್ಥಿತಿವಂತರು ಮಾತ್ರವೇ ಇರಬಹುದೇನೋ.ಯಾಕೆಂದರೆ ಎಲ್ಲರಿಗೂ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ ಮತ್ತು ಇಂದಿನ ತಾಂತ್ರಿಕ ವಸ್ತುಗಳ ಬೆಲೆಯು ಹೆಚ್ಚುವುದಿಲ್ಲ ಬದಲಾಗಿ ಇಳಿಯುತ್ತದೆ ಎಂಬ ಪರಿಕಲ್ಪನೆ ಇದ್ದೇ ಇದೆ.

ಆದರೆ ಇನ್ನು ಕೆಲವೇ ದಿನಗಳಲ್ಲಿ ಒಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಅದು ಮೂಲ ಮತ್ತು ವಿರಳವಾಗಿರುವ ಆಪಲ್ ಕಂಪ್ಯೂಟರ್ ಒಂದರ ಹರಾಜು ಪ್ರಕ್ರಿಯೆ ಮತ್ತು ಇದರಲ್ಲಿ ಬಹಳ ಉತ್ತಮ ಬೆಲೆಗೆ ಈ ಆಪಲ್ ಕಂಪ್ಯೂಟರ್ ಮಾರಾಟವಾಗಲಿದೆ ಎಂದು ಹೇಳಲಾಗುತ್ತಿದೆ. ಅದು ಕೂಡ ಒಂದೆರಡು ರೂಪಾಯಿಗೆ ಅಲ್ಲ ಬದಲಾಗಿ $300,000 ಅಂದರೆ ಹೆಚ್ಚು ಕಡಿಮೆ Rs 2.1 ಕೋಟಿ ರುಪಾಯಿ ಮಾರಾಟವಾಗಬಹುದು ಎಂದು ಅಂದಾಜಿಸಲಾಗುತ್ತಿದೆ.

ಸ್ಟೀವ್ ಜಾಬ್ಸ್‌ ನಿರ್ಮಿಸಿದ ಮೊದಲ ಕಂಪ್ಯೂಟರ್ ಮೌಲ್ಯ ಎಷ್ಟು ಗೊತ್ತಾ..?

ಕೆಲವು ಹೈ-ಎಂಡ್ ಕಾರುಗಳ ಬೆಲೆಗಿಂತಲೂ ಅಧಿಕ ಮತ್ತು ಇಂದಿನ ಜಮಾನದ ಕೆಲವು ಕಂಪ್ಯೂಟರ್ ಗಳ ಬೆಲೆಗಿಂತಲೂ ಹೆಚ್ಚಿನ ಬೆಲೆಗೆ ಒಂದು ಹಳೆಯ ಕಂಪ್ಯೂಟರ್ ಮಾರಾಟವಾಗಬಹುದು ಎಂದರೆ ಆಶ್ಚರ್ಯವಲ್ಲವೇ? ಹಾಗಾದರೆ ಯಾಕೆ ಈ ಕಂಪ್ಯೂಟರ್ ಗೆ ಇಷ್ಟೊಂದು ಬೆಲೆ. ಅಂತದ್ದೇನಿದೆ ಇದರಲ್ಲಿ?

ಪ್ರಾರಂಭಿಕರಿಗೆ, ಇದು ಸ್ಟೀವ್ ಜಾಬ್ಸ್ ಮತ್ತು ಸ್ಟೀವ್ ವೊಜ್ನಿಕಾ ರಿಂದ ತಯಾರಿಸಲ್ಪಟ್ಟ ಮೊದಲ ಸರಣಿಯ ಕಂಪ್ಯೂಟರ್ ಆಗಿದೆ ಮತ್ತು ಇದನ್ನು ಆಪಲ್ -1 ಎಂದು ಕರೆಯಲಾಗಿದೆ. ಸಿಎನ್ ಇಟಿ ಹೇಳುವಂತೆ, ಜಾಬ್ಸ್ ಮತ್ತು ವೊಜ್ನಿಕಾ ಸುಮಾರು ಇಂತಹ 200 ಕಂಪ್ಯೂಟರ್ ಗಳನ್ನು ತಯಾರಿಸಿದ್ದಾರೆ. ಅಂದರೆ “Byte Shop style Apple-1 model” ನ್ನು ತಯಾರಿಸಿದ್ದಾರೆ.ಇದನ್ನು ಬೈಟ್ ಶಾಪ್ ಎಂದು ಕರೆಯಲಾಯಿತು ಯಾಕೆಂದರೆ ಇದನ್ನು ವಿಶೇಷವಾಗಿ ಕ್ಯಾಲಿಫೋರ್ನಿಯಾ ಮೂಲದ ಬೈಟ್ ಶಾಪ್ ಗಾಗಿ ತಯಾರಿಸಲಾಗಿತ್ತು.ಇದು ವಿಶ್ವದಲ್ಲೇ ಮೊದಲ ಪರ್ಸನಲ್ ಕಂಪ್ಯೂಟರ್ ಸ್ಟೋರ್ ಆಗಿತ್ತು.

ಆರ್ ಆರ್ ಆಕ್ಷನ್ ಹೇಳುವ ಪ್ರಕಾರ, ಈ ಆಪಲ್-1 ಕಂಪ್ಯೂಟರ್ ನ್ನು ತನ್ನ ಮೂಲ ಸ್ಥಿತಿಗೆ ರೀಸ್ಟೋರ್ ಮಾಡಲಾಗಿದೆ ಮತ್ತು ಜೂನ್ 2018 ರಲ್ಲಿ ಆಪಲ್ 1 ತಜ್ಞ ಕೋರೆ ಕೊಹೆನ್ ಅವರು ಇದನ್ನು ಆಪರೇಷನಲ್ ಸ್ಟೇಟ್ ಗೆ ತಂದಿದ್ದಾರೆ. ವಿನಂತಿಯ ಮೇರೆಗೆ ಇದರ ರನ್ನಿಂಗ್ ಮತ್ತು ಫಂಕ್ಷನಿಂಗ್ ನ ವೀಡಿಯೋ ಕೂಡ ಲಭ್ಯವಿದೆ. ಕೊಹೆನ್ ಅವರು ಸಿದ್ಧಪಡಿಸಿರುವ ಈ ತಾಂತ್ರಿಕ ಸ್ಥಿತಿಗತಿಯ ವರದಿಯು ಅರ್ಹ ಬಿಡ್ಡರ್ ಗಳಿಗೆ ಲಭ್ಯವಿರುತ್ತದೆ.

ಸ್ಟೀವ್ ಜಾಬ್ಸ್‌ ನಿರ್ಮಿಸಿದ ಮೊದಲ ಕಂಪ್ಯೂಟರ್ ಮೌಲ್ಯ ಎಷ್ಟು ಗೊತ್ತಾ..?

ಕೊಹೆನ್ ಅವರ ಪ್ರಕಾರ ಸದ್ಯ ಈ ಕಂಪ್ಯೂಟರ್ ಯುನಿಟ್ ನ ಪ್ರಸ್ತುತ ಸ್ಥಿತಿಗತಿಗೆ ಅವರು 10 ಕ್ಕೆ 8.5 ರಷ್ಟು ಅಂಕವನ್ನು ನೀಡುತ್ತಾರೆ.ಇದರಿಂದ ತಿಳಿದುಕೊಳ್ಳಲು ಇಚ್ಛಿಸುವವರು ಸಂಪೂರ್ಣ ವಿವರಣೆಯನ್ನು ಪಡೆಯಲು ಸಾಧ್ಯವಿದೆ ಮತ್ತು ಅದು ಅಧ್ಯಯನಕಾರರಿಗೆ ಬಹಳ ಉಪಯುಕ್ತವಾಗಲಿದೆ.

ಸದ್ಯ ಈ ಆಪಲ್ 1 ಕಂಪ್ಯೂಟರ್ ನ್ನು ಟೆಸ್ಟ್ ಮಾಡಿದಾಗ ಸುಮಾರು 8 ಘಂಟೆಗಳ ಕಾಲ ಯಾವುದೇ ತೊಂದರೆ ಇಲ್ಲದೆ ಕೆಲಸ ಮಾಡಿದೆ ಎಂದು ಹೇಳಲಾಗಿದೆ. ಒಟ್ಟಾರೆ ಇದು ಈಗಲೂ ಸಂಪೂರ್ಣ ಕಾರ್ಯಗತವಾಗಿರುವುದು ನಿಜಕ್ಕೂ ಆಶ್ಚರ್ಯಕರ ವಿಚಾರವಾಗಿದೆ.

ಸದ್ಯ ಆಗಿನ ಈ ಆಪಲ್ -1 ಕಂಪ್ಯೂಟರ್ ಬಹಿರಂಗ ಪಡಿಸುವ ಪ್ರಮುಖ ವಿಚಾರವೇನೆಂದರೆ ಅದು ಆಗಿನ ಕಾಲದಲ್ಲಿ ಸಂಸ್ಥೆಯು ಜಗತ್ತಿಗೆ ಪರಿಚಯಿಸಿದ ಶಕ್ತಿಶಾಲಿ ಯಂತ್ರಗಳಲ್ಲಿ ಒಂದಾಗಿದೆ. ಸದ್ಯ ಇದಕ್ಕೆ ಯಾವುದೇ ಫಂಕ್ಷನಲ್ ಬೆಲೆ ಇಲ್ಲದೇ ಇರಬಹುದು ಆದರೆ ಸಂಗ್ರಹಣೆ ಮಾಡುವ ಆಸಕ್ತಿ ಇರುವವರಿಗೆ ಇದೊಂದು ಚಿನ್ನದ ಬಹುದೊಡ್ಡ ಘಂಟು! ಅದಕ್ಕಾಗಿಯೇ ಆಪಲ್ 1 ಗೆ ಅಷ್ಟೊಂದು ದುಬಾರಿ ಬೆಲೆ!

Best Mobiles in India

English summary
Here’s why this Steve Jobs-made Apple computer could sell for Rs 2.1 crore. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+