Subscribe to Gizbot

ಸ್ಮಾರ್ಟ್‌ಫೋನ್, ಟಿವಿ ಖರೀದಿದಾರರಿಗೆ ಭಾರೀ ಶಾಕ್!..ಉಲ್ಟಾ ಹೊಡೆದ ಶಿಯೋಮಿ ಕಂಪೆನಿ!!

Written By:

ಭಾರತದ ಟಿವಿ ಮಾರುಕಟ್ಟೆಯಲ್ಲಿ ಭಾರೀ ಹವಾ ಎಬ್ಬಿಸಿದ್ದ ಶಿಯೋಮಿ 'ಎಂಐ ಎಲ್‌ಇಡಿ ಟಿವಿ 4' (55 inch Mi LED TV 4) ಟಿವಿ ಬೆಲೆಯನ್ನು ಶಿಯೋಮಿ ಕಂಪನಿಯು ಹೆಚ್ಚಿಸಿದೆ. ಈವರೆಗೆ ₹39,999ಕ್ಕೆ ಲಭ್ಯವಿದ್ದ ಶಿಯೋಮಿ 'ಎಂಐ ಎಲ್‌ಇಡಿ ಟಿವಿ 4' ಟಿವಿ ಬೆಲೆ ಹೆಚ್ಚಳವಾಗಿ, ಇಂದಿನಿಂದ (ಮೇ 1) ಟಿವಿಯ ಬೆಲೆ ₹44,999 ಆಗಲಿದೆ ಎಂದು ಶಿಯೋಮಿ ಕಂಪೆನಿ ತಿಳಿಸಿದೆ.

ಎಂಐ ಎಲ್‌ಇಡಿ ಟಿವಿ 4' ಶಿಯೋಮಿ ಟಿವಿ ಬೆಲೆಯನ್ನು 5000 ರೂ. ಹೆಚ್ಚಳ ಮಾಡಿದರೆ, ಟಿವಿಯ ಜೊತೆಗೆ ಜನಪ್ರಿಯ ಮೊಬೈಲ್ 'ರೆಡ್‌ ಮಿ ನೋಟ್‌ 5 ಪ್ರೊ' ಬೆಲೆಯನ್ನೂ ಶಿಯೋಮಿ ಹೆಚ್ಚಿಸಿದೆ.ಈವರೆಗೆ ₹13,999ಕ್ಕೆ ಲಭ್ಯವಿದ್ದ ರೆಡ್‌ ಮಿ ನೋಟ್‌ 5 ಪ್ರೊ( 4GB RAM and 64GB storage)ದ ದರವನ್ನು ₹1,000 ಹೆಚ್ಚಿಸಿದ್ದು, ₹14,999ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಸ್ಮಾರ್ಟ್‌ಫೋನ್, ಟಿವಿ ಖರೀದಿದಾರರಿಗೆ ಭಾರೀ ಶಾಕ್!..ಉಲ್ಟಾ ಹೊಡೆದ ಶಿಯೋಮಿ!!

ನಮ್ಮ ಟಿವಿಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗಿದೆ. ಗ್ರಾಹಕರಿಗೆ ಬೇಗ ಲಭ್ಯವಾಗುವಂತೆ ಮಾಡಲು ಭಾರತದಲ್ಲಿಯೇ ಈ ಸಾಧನಗಳ ಉತ್ಪಾದನೆಯನ್ನು ಪ್ರಾರಂಭಿಸಿದ್ದೇವೆ. ಆದರೂ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಸಲುವಾಗಿ ಕೆಲ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಹೀಗಾಗಿ ದರ ಹೆಚ್ಚಳ ಅನಿವಾರ್ಯ' ಎಂದು ಶಿಯೋಮಿ ಕಂಪನಿ ವಿವರಿಸಿದೆ.

ಸ್ಮಾರ್ಟ್‌ಫೋನ್‌ಗಳ ಉತ್ಪನ್ನದಲ್ಲಿ ಮುಂಚೂಣಿಯಲ್ಲಿದ್ದ ಶಿಯೋಮಿ ಕಂಪನಿ ಈಚೆಗೆ ಮೂರು ಮಾದರಿಗಳಲ್ಲಿ ಸ್ಮಾರ್ಟ್‌ ಟಿ.ವಿ.ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಅದರಲ್ಲಿ ಹೆಚ್ಚು ಫೀಚರ್ಸ್ ಹೊಂದಿದ್ದ, ಶಿಯೋಮಿ 'ಎಂಐ ಎಲ್‌ಇಡಿ ಟಿವಿ 4' (55 inch Mi LED TV 4) ಹೊಂದಿದ್ದ ಈ ಕೆಳಗಿನ ಫೀಚರ್ಸ್ ಎಲ್ಲವೂ ಭಾರತೀಯರನ್ನು ಸೂಜಿಗಲ್ಲಿನಂತೆ ಸೆಳೆದಿದ್ದವು!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್ ಟಿವಿ:

ಸ್ಮಾರ್ಟ್ ಟಿವಿ:

Mi LED TV 4 ಸ್ಮಾರ್ಟ್ ಟಿವಿಯಾಗಿದ್ದು, 2GB RAM + 8GB ಇಂಟರ್ ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಬ್ಲೂಟೂತ್ ಕನೆಕ್ಟ್ ಮತ್ತು Wi Fi ಕನೆಕ್ಟ್ ಮಾಡಬಹುದಾಗಿದ್ದು, ಎರಡು USB ಪೋರ್ಟ್ ಗಳನ್ನು ಕಾಣಬಹುದಾಗಿದೆ. ಅಲ್ಲದೇ 100 MBPS ವೇಗದ ಇಂಟರ್ನೆಟ್ ಬಳಕೆ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ಪಾಲುದಾರರು:

ಹೆಚ್ಚಿನ ಪಾಲುದಾರರು:

ಇದಲ್ಲದೇ ದೇಶದಲ್ಲಿ ಲಭ್ಯವಿರುವ ಎಲ್ಲಾ ಡಿಜಿಟಪ್ ಕಂಟೆಟ್ ಗಳನ್ನು ಕಾಣಹುದಾಗಿದ್ದು, ಹಾಟ್ ಸ್ಟಾರ್, ಸೋನಿ, ವೂಟ್, ಸನ್, ಹಂಗಾಮ ಸೇರಿದಂತೆ ಎಲ್ಲಾ ಕಟೆಂಟ್ ಗಳು ದೊರೆಯಲಿದ್ದು, ಇದಲ್ಲದೇ ಉಚಿತವಾಗಿಯೂ ನೋಡಬಹುದಾಗಿದೆ.

ನಾಣ್ಯದಷ್ಟು ತೆಳು:

ನಾಣ್ಯದಷ್ಟು ತೆಳು:

ವಿಶ್ವದ ಅತೀ ತಳುವಾದ LED TV ಎನ್ನಲಾಗಿದೆ. ಒಂದು ರುಪಾಯಿ ಕಾಯಿನ್ ನಷ್ಟು ಸಣ್ಣದಾಗಿದೆ. ಇದು 4.9mm ನಷ್ಟು ತೆಳುವಾಗಿದ್ದು, ವಿಶ್ವದಲ್ಲಿಯೇ ಲಭ್ಯವಿರುವ ತೆಳು ಟಿವಿ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ .

55 ಇಂಚಿನ ಟಿವಿ

55 ಇಂಚಿನ ಟಿವಿ

Mi LED TV 4 ನಲ್ಲಿ ನೀವು ಸ್ಮಾಮ್ ಸಂಗ್ ಡಿಸ್‌ ಪ್ಲೇಯನ್ನು ಹೊಂದಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿಯನ್ನು ಮಾಡಿಕೊಂಡಿಲ್ಲ. ಇದು 55 ಇಂಚಿನ ಟಿವಿ ಇದಾಗಿದೆ. ಅಲ್ಲದೇ ಈ ಟಿವಿಗೆ ಫ್ರೇಮ್ ಇಲ್ಲ.

4K ಗುಣಮಟ್ಟ:

4K ಗುಣಮಟ್ಟ:

ಮಾರುಕಟ್ಟೆಯಲ್ಲಿ ಲಭ್ಯವಿರುವ Mi LED TV 4 4K UHD ಗುಣಮಟ್ಟವನ್ನು ಹೊಂದಿದ್ದು, ಇದರಲ್ಲಿ ಭಾರೀ ಗುಣಮಟ್ಟದ ವಿಡಿಯೋಗಳನ್ನು ಪ್ಲೇ ಮಾಡಬಹುದಾಗಿದ್ದು, ನೀಡು ಟಿವಿ ನೋಡುವ ವಿಧಾನವನ್ನು ಬದಲಾಯಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The brand has announced that its sleek-looking 4K TV will now cost Rs 44,999 in the country, which is a Rs 5,000 price hike for its flagship TV product in the market.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot