Home
ಸುದ್ದಿಜಾಲ

PUBG 2019 ರ ಟೂರ್ನಮೆಂಟ್ ನಲ್ಲಿ ಆಟವಾಡಿ ಗೆದ್ದರೆ 1 ಕೋಟಿ ಬಹುಮಾನ

ಬ್ಯಾಟಲ್ ರಾಯಲ್ ಮಲ್ಟಿಪ್ಲೇಯರ್ ಗೇಮ್ PUBG ಅಥವಾ ಪ್ಲೇಯರ್ ಅನ್ ನೋನ್ ಬ್ಯಾಟಲ್ ಗ್ರೌಂಡ್ ಇಂದು ಅತೀ ದೊಡ್ಡ ಇ-ಸ್ಪೋರ್ಟ್ಸ್ ಟೂರ್ನಮೆಂಟ್ 2019 ನ್ನು ಭಾರತದಲ್ಲಿ ಆಯೋಜಿಸಿದ್ದು ಅದುವೇ PUBG ಮೊಬೈಲ್ ಇಂಡಿಯಾ ಸರಣಿ 2019. ಕಳೆದ ವರ್ಷ ಕ್ಯಾಂಪಸ್ ಚಾಂಪಿಯನ್ ಶಿಪ್ ನ್ನು ಆಯೋಜಿಸಿದ್ದ ಕಂಪೆನಿ ಇದೀಗ ಎರಡನೇ ಬಾರಿಗೆ ಅತೀ ದೊಡ್ಡ ಇ-ಸ್ಪೋರ್ಟ್ ಟೂರ್ನಮೆಂಟ್ ನ್ನು ಆಯೋಜಿಸಿದೆ.

ರಿಜಿಸ್ಟ್ರೇಷನ್ ಫೀಸ್ ಇಲ್ಲ, ಕೋಟಿ ರುಪಾಯಿ ಗೆಲ್ಲುವ ಅವಕಾಶ:

ರಿಜಿಸ್ಟ್ರೇಷನ್ ಫೀಸ್ ಇಲ್ಲ, ಕೋಟಿ ರುಪಾಯಿ ಗೆಲ್ಲುವ ಅವಕಾಶ:

ಕ್ಯಾಂಪಲ್ ಚಾಂಪಿಯನ್ ಶಿಪ್ ಟೂರ್ನಮೆಂಟ್ ಕೇವಲ ಕಾಲೇಜ್ ಮತ್ತು ಯುನಿವರ್ಸಿಟಿ ವಿದ್ಯಾರ್ಥಿಗಳಿಗಾಗಿ ಮಾತ್ರವೇ ಇತ್ತು ಆದರೆ ಇಂಡಿಯಾ ಸರಣಿ 2019 ಎಲ್ಲರಿಗಾಗಿ ತೆರೆಯಲಾಗಿದೆ. ಅಧಿಕೃತ ವೆಬ್ ಸೈಟ್ ನ ಮಾಹಿತಿಯ ಪ್ರಕಾರ ಈ ಟೂರ್ನಮೆಂಟ್ ನಲ್ಲಿ ಒಂದು ಕೋಟಿ ರುಪಾಯಿ ಬಹುಮಾನವನ್ನು ಕೂಡ ನೀಡಲಾಗುತ್ತದೆ ಮತ್ತು ಯಾವುದೇ ರಿಜಿಸ್ಟ್ರೇಷನ್ ಫೀಸ್ ಆಟಕ್ಕೆ ಇರುವುದಿಲ್ಲ ಎಂದು ತಿಳಿಸಿದೆ.

PUBG ಮೊಬೈಲ್ ಇಂಡಿಯಾ ಸರಣಿ 2019:ಪ್ರಮುಖ ದಿನಾಂಕಗಳು, ಕನಿಷ್ಠ ಮಾನದಂಡಗಳು ಮತ್ತು ಇತ್ಯಾದಿ

PUBG ಇಂಡಿಯಾ ಸರಣಿ 2019 ರ ರಿಜಿಸ್ಟ್ರೇಷನ್ ಪ್ರೊಸೆಸ್ ಈಗಾಗಲೇ ಆರಂಭವಾಗಿದ್ದು ಜನವರಿ 23ರ ವರೆಗೆ ನಡೆಯಲಿದೆ. ರಿಜಿಸ್ಟ್ರೇಷನ್ ಮಾಡಿಸುವುದಕ್ಕೆ ಇರುವ ಕನಿಷ್ಠ ಮಾನದಂಡವೆಂದರೆ ಆಟಗಾರ 20 ನೇ ಹಂತದ ಆಟದಲ್ಲಿ ಇರಬೇಕಾಗುತ್ತದೆ

ಫೇಸ್ ತಂಡಗಳ ಅರ್ಹತೆ ದಿನಾಂಕ

ರಿಜಿಸ್ಟ್ರೇಷನ್ ಮಿತಿಯಿಲ್ಲ 9th ಜನವರಿಯಿಂದ 23 ಜನವರಿ 2019

ಗೇಮ್ ಇನ್ ಕ್ವಾಲಿಫೈಯರ್ ಮಿತಿಯಿಲ್ಲ 21st ಜನವರಿಯಿಂದ 28th ಜನವರಿ 2019

ಆನ್ ಲೈನ್ ಫ್ಲೇಆಫ್ಸ್ 2000 9th ಫೆಬ್ರವರಿಯಿಂದ 24th ಫೆಬ್ರವರಿ 2019

ಗ್ರ್ಯಾಂಡ್ ಫೈನಲ್ 20 10th ಮಾರ್ಚ್

ರಿಜಿಸ್ಟ್ರೇಷನ್ ಪ್ರೊಸೆಸ್:

ರಿಜಿಸ್ಟ್ರೇಷನ್ ಪ್ರೊಸೆಸ್:

1. PUBG ಮೊಬೈಲ್ ಇಂಡಿಯಾ 2019 ರ ಇಂಡಿಯಾದ ರಿಜಿಸ್ಟ್ರೇಷನ್ನಿನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ .

2. 'Register Now' ಬಟನ್ ನ್ನು ಕ್ಲಿಕ್ಕಿಸಿ.

3. ನಿಮ್ಮ ರಿಜಿಸ್ಟರ್ ಆಗಿರುವ ಅಕೌಂಟ್ ನಿಂದ ಸೈನ್ ಇನ್ ಆಗಿ. ಒಂದು ವೇಳೆ ಅಕೌಂಟ್ ಇಲ್ಲದೇ ಇದ್ದಲ್ಲಿ ಹೊಸ ಅಕೌಂಟ್ ಕ್ರಿಯೇಟ್ ಮಾಡಿ.

4. ರಿಜಿಸ್ಟ್ರೇಷನ್ ಪ್ರೊಸೆಸ್ ಪೂರ್ಣಗೊಂಡ ನಂತರ ಸ್ಕ್ವಾಡ್ ಐಡಿ ಬಳಸಿ ಸ್ಕ್ವಾಡ್ ಗೆ ಸೇರಬಹುದು ಅಥವಾ ಹೊಸ ಸ್ಕ್ವಾಡ್ ಸೃಷ್ಟಿಸಲು ಇತರೆ ಪ್ಲೇಯರ್ ಗಳಿಗೆ ಆಮಂತ್ರಣವನ್ನೂ ಕಳುಹಿಸಬಹುದು.

ಟೂರ್ನಮೆಂಟ್ ಫಾರ್ಮೆಟ್ ಈ ರೀತಿಯಲ್ಲಿ ಸಾಗುತ್ತದೆ:

ಟೂರ್ನಮೆಂಟ್ ಫಾರ್ಮೆಟ್ ಈ ರೀತಿಯಲ್ಲಿ ಸಾಗುತ್ತದೆ:

ಎರಾಂಜೆಲ್ ಮ್ಯಾಪ್ ನಲ್ಲಿ ಮೊದಲಿಗೆ ಪ್ಲೇಯರ್ ಗಳು 15 ರೌಂಡಿನ ಕ್ಲಾಸಿಕ್ ಮ್ಯಾಚ್ ನ್ನು ಆಡಬೇಕು ಮತ್ತು ಆ 15 ಮ್ಯಾಚ್ ಗಳಲ್ಲಿ ಅತ್ಯುತ್ತಮ 10 ಮ್ಯಾಚ್ ಗಳನ್ನು ಫೈನಲ್ ಆಯ್ಕೆ ಪ್ರೊಸೆಸ್ ಗೆ ತೆಗೆದುಕೊಳ್ಳಲಾಗುತ್ತದೆ. ಫಲಿತಾಂಶವು ಸಾಯಿಸುವಿಕೆ ಮತ್ತು ಅಂತ್ಯಗೊಳಿಸುವ ಸ್ಥಾನವನ್ನು ಅವಲಂಬಿಸಿರುತ್ತದೆ.

ಒಮ್ಮೆ ತಂಡವು ಕ್ವಾಲಿಫೈಯರ್ ಹಂತವನ್ನು ಪೂರ್ಣಗೊಳಿಸಿದ ನಂತರ ಅವರು ಆನ್ ಲೈನ್ ಪ್ಲೇ ಆಫ್ ನ್ನು ಆಡಬೇಕಾಗುತ್ತದೆ ಇದರಲ್ಲಿ 3 ರೌಂಡ್ ಗಳಿರುತ್ತದೆ.

ಆನ್ ಲೈನ್ ಪ್ಲೇ ಆಫ್ ನ ನಂತರದ ಟಾಪ್ 20 ಪ್ಲೇ ಆಫ್ ಗಳು ಗ್ರ್ಯಾಂಡ್ ಫೈನಲ್ ನ್ನು ತಲುಪಲಿವೆ ಮತ್ತು ಚಿಕನ್ ಊಟವನ್ನು ಪಡೆಯುವ ಒಂದು ಕೊನೆಯ ಮ್ಯಾಚ್ ನ್ನು ಹೊಂದಿರುತ್ತಾರೆ ಮತ್ತು ಅವರನ್ನು 2019 ರ PUBG ಮೊಬೈಲ್ ಇಂಡಿಯಾ ಸರಣಿ 2019 ರ ವಿಜೇತರೆಂದು ಘೋಷಿಸಲಾಗುತ್ತದೆ.

Best Mobiles in India

English summary
Here’s your chance to win prize money of up to Rs 1 crore by playing PUBG
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+