Home
ಸುದ್ದಿಜಾಲ

ನಿಮ್ಮ ಮೊಬೈಲ್‌ಗೆ ಸರಿ ಹೊಂದುವ ಅತ್ಯುತ್ತಮ ಪವರ್‌ಬ್ಯಾಂಕ್‌ಗಳ ವಿವರ ಇಲ್ಲಿದೆ!

ನೀವು ಎಲ್ಲಿಗಾದರೂ ಪ್ರಯಾಣ ಮಾಡುತ್ತಿದ್ದರೆ ನಿಮ್ಮ ಮೊಬೈಲ್‌ ಜೊತೆಗೊಂದು ಪವರ್‌ಬ್ಯಾಂಕ್‌ ಹೊಂದಿರುವುದು ಅತ್ಯಗತ್ಯ. ಅದರಲ್ಲೂ ದೂರದ ಪ್ರಯಾಣದ ಸಂದರ್ಭದಲ್ಲಿ ನೀವು ಹೊಂದಿರಬೇಕಾದ ಅಗತ್ಯ ಡಿವೈಸ್‌ಗಳಲ್ಲಿ ಪವರ್‌ಬ್ಯಾಂಕ್‌ ಕೂಡ ಒಂದಾಗಿದೆ. ಇದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಕೂಡ ವಿವಿಧ ಬೆಲೆಯ ಪವರ್‌ಬ್ಯಾಂಕ್‌ಗಳು ಲಭ್ಯವಿವೆ.

ಹೌದು, ನಿಮ್ಮ ಮೊಬೈಲ್‌ ಜೊತೆಗೊಂದು ಅತ್ಯುತ್ತಮ ಪವರ್‌ಬ್ಯಾಂಕ್‌ ಸರ್ಚ್‌ ಮಾಡ್ತಾ ಇದ್ದೀರಾ. ಮಾರುಕಟ್ಟೆಯಲ್ಲಿ ಸಾಕಷ್ಟು ಪವರ್‌ಬ್ಯಾಂಕ್‌ಗಳು ಲಭ್ಯವಿದೆ ನಿಜ. ಆದರೆ ನಿಮ್ಮ ಬೆಲೆಗೆ ಸರಿ ಹೊಂದುವ ಹಾಗೂ ನೀವು ಕ್ಯಾರಿ ಮಾಡುವುದಕ್ಕೆ ಸುಲಭವಾಗುವ ಬೆಸ್ಟ್‌ ಪವರ್‌ಬ್ಯಾಂಕ್‌ಗಳ ಬಗ್ಗೆ ನಿಮಗೆಷ್ಟು ತಿಳಿದಿದೆ. ಹಾಗಂತ ಯೋಚಿಸಬೇಕಾದ ಅಗತ್ಯವಿಲ್ಲ ನಿಮಗೆ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ದಿ ಬೆಸ್ಟ್‌ ಎನಿಸುವ ಪವರ್‌ಬ್ಯಾಂಕ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಮೊಬೈಲ್‌ಗೆ ಸರಿ ಹೊಂದುವ ಅತ್ಯುತ್ತಮ ಪವರ್‌ಬ್ಯಾಂಕ್‌ಗಳ ವಿವರ ಇಲ್ಲಿದೆ!

ಅಂಬ್ರೇನ್ 10000mAh ಸ್ಲಿಮ್ ಪವರ್ ಬ್ಯಾಂಕ್
ಅಂಬ್ರೇನ್‌ ಕಂಪೆನಿಯ ಪವರ್‌ಬ್ಯಾಂಕ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್‌ ಇದೆ. ನೀವು ಬಜೆಟ್‌ ಬೆಲೆಯಲ್ಲಿ ಉತ್ತಮ ಪವರ್‌ಬ್ಯಾಕ್‌ ಖರೀದಿಸುವುದಾದರೆ ಅಂಬ್ರೇನ್ 10000mAh ಸ್ಲಿಮ್ ಪವರ್ ಬ್ಯಾಂಕ್ ಸೂಕ್ತವಾಗಿದೆ. ಇದನ್ನು ನೀವು ಸುಲಭವಾಗಿ ಕ್ಯಾರಿ ಮಾಡಬಹುದಾಗಿದ್ದು, ಟೈಪ್-ಸಿ ಇನ್‌ಪುಟ್ ಸ್ಲಾಟ್ ಅನ್ನು ಹೊಂದಿದೆ. ಇದರ ಬೆಲೆ ಪ್ರಸ್ತುತ ಅಮೆಜಾನ್‌ನಲ್ಲಿ ಕೇವಲ 999ರೂ.ಆಗಿದೆ.

MI ಪವರ್ ಬ್ಯಾಂಕ್ 3i 20000mAh
MI ಪವರ್ ಬ್ಯಾಂಕ್ 3i 20000mAh ನೀವು ಖರೀದಿಸಬಹುದಾದ ಬೆಸ್ಟ್‌ ಪವರ್‌ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಈ ಪವರ್ ಬ್ಯಾಂಕ್‌ನ ಲಿಥಿಯಂ-ಐಯಾನ್ ಬ್ಯಾಟರಿಯು ಪವರ್ ಬ್ಯಾಂಕ್ ಬೇಗನೆ ಖಾಲಿಯಾಗುವುದನ್ನು ತಪ್ಪಿಸಲಿದೆ. ಇದನ್ನು ಕೂಡ ನೀವು ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ. ಇನ್ನು ಈ ಪವರ್‌ ಬ್ಯಾಂಕ್‌ ಪ್ರಸ್ತುತ ಅಮೆಜಾನ್‌ ತಾಣದಲ್ಲಿ ಡಿಸ್ಕೌಂಟ್‌ ಪಡೆದುಕೊಂಡಿದ್ದು, ಕೇವಲ 1,998ರೂ.ಬೆಲೆಗೆ ಲಭ್ಯವಾಗುತ್ತಿದೆ.

ಪೋರ್ಟ್ರೋನಿಕ್ಸ್ 10000mAh ಪವರ್ ಬ್ಯಾಂಕ್
ಪೋರ್ಟ್ರೋನಿಕ್ಸ್ ಕಂಪೆನಿ ಪವರ್ ಬ್ಯಾಂಕ್ ಕೂಡ ಬೆಸ್ಟ್‌ ಪವರ್‌ಬ್ಯಾಂಕ್‌ಗಳ ಸಾಲಿನಲ್ಲಿ ಸೇರಲಿದೆ. ಸದ್ಯ ಈ ಪವರ್‌ಬ್ಯಾಂಕ್‌ 10000mAh ಲಿಥಿಯಂ ಪಾಲಿಮರ್ ಬ್ಯಾಟರಿಯನ್ನು ಹೊಂದಿದ್ದು, ಲಾಂಗ್‌ ಬ್ಯಾಕ್‌ಅಪ್‌ ನೀಡಡಲಿದೆ. ಇದರಿಂದ ನಿಮ್ಮ ಮೊಬೈಲ್ ಫೋನ್ ಅನ್ನು 0 ರಿಂದ 100 ವರೆಗೆ ಚಾರ್ಜ್ ಮಾಡಬಹುದು. ಇದು ನೋಡುವುದಕ್ಕೆ ಸ್ಟೈಲಿಶ್‌ ಲುಕ್‌ ಹೊಂದಿದ್ದು, ಯುವಜನತೆಯನ್ನು ಸುಲಭವಾಗಿ ಆಕರ್ಷಿಸಲಿದೆ. ಪ್ರಸ್ತುತ ಈ ಪವರ್‌ಬ್ಯಾಂಕ್‌ ಅಮೆಜಾನ್‌ ತಾಣದಲ್ಲಿ 65% ಡಿಸ್ಕೌಂಟ್‌ ಪಡೆದುಕೊಂಡಿದ್ದು ಕೇವಲ 699ರೂ.ಬೆಲೆಗೆ ದೊರೆಯಲಿದೆ.

ನಿಮ್ಮ ಮೊಬೈಲ್‌ಗೆ ಸರಿ ಹೊಂದುವ ಅತ್ಯುತ್ತಮ ಪವರ್‌ಬ್ಯಾಂಕ್‌ಗಳ ವಿವರ ಇಲ್ಲಿದೆ!

ಡ್ಯುರಾಸೆಲ್ ಪವರ್ ಬ್ಯಾಂಕ್ 10000mah
ನೀವು ಖರೀದಿಸಬಹುದಾದ ಮತ್ತೊಂದು ಬೆಸ್ಟ್‌ ಪವರ್‌ಬ್ಯಾಂಕ್‌ ಅಂದರೆ ಅದು ಡ್ಯುರಾಸೆಲ್ ಪವರ್ ಬ್ಯಾಂಕ್ 10000mah ಆಗಿದೆ. ಇದು ನಿಮಗೆ ಎರಡು USB ಔಟ್‌ಪುಟ್‌ಗಳು ಮತ್ತು ಒಂದು ಟೈಪ್-C ಔಟ್‌ಪುಟ್ ಅನ್ನು ನೀಡಲಿದೆ. ಇದು ಕೂಡ ಯುವಜನರ ಹಾಟ್‌ಫೇವರಿಟ್‌ಗಳಲ್ಲಿ ಒಂದಾಗಿದ್ದು, ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ. ಪ್ರಸ್ತುತ ಇದರ ಬೆಲೆ ಅಮೆಜಾನ್‌ ತಾಣದಲ್ಲಿ 1,599ರೂ.ಆಗಿದೆ.

ರೆಡ್ಮಿ 10000mAh ಫಾಸ್ಟ್ ಚಾರ್ಜಿಂಗ್ ಸ್ಲಿಮ್ ಪವರ್ ಬ್ಯಾಂಕ್
ರೆಡ್ಮಿ 10000mAh ಫಾಸ್ಟ್ ಚಾರ್ಜಿಂಗ್ ಸ್ಲಿಮ್ ಪವರ್ ಬ್ಯಾಂಕ್ ನೀವು ಖರೀದಿಸಬಹುದಾದ ಬೆಸ್ಟ್‌ ಪೋರ್ಟಬಲ್‌ ಪವರ್‌ ಬ್ಯಾಂಕ್‌ ಆಗಿದೆ. ಈ ಪವರ್ ಬ್ಯಾಂಕ್ ಮೂಲಕ ನಿಮ್ಮ ಫೋನ್ ಅನ್ನು 2-3 ಬಾರಿ ಸುಲಭವಾಗಿ ಚಾರ್ಜ್ ಮಾಡಬಹುದಾಗಿದೆ. ಇದು ತುಂಬಾ ಸ್ಲಿಮ್ ಮತ್ತು ಸ್ಟೈಲಿಶ್‌ ಡಿಸೈನ್‌ ಹೊಂದಿದ್ದು, ತುಂಬಾ ಅನುಕೂಲಕರ ಪವರ್‌ಬ್ಯಾಂಕ್‌ಗಳಲ್ಲಿ ಒಂದೆನಿಸಿಕೊಂಡಿದೆ. ಇದರ ವೇಗದ ಚಾರ್ಜಿಂಗ್ ಫೀಚರ್ಸ್‌ ನಿಮ್ಮನ್ನು ಆಕರ್ಷಿಸಲಿದೆ. ಪ್ರಸ್ತುತ ಅಮೆಜಾನ್‌ ತಾಣದಲ್ಲಿ ಇದರ ಬೆಲೆ 1,098ರೂ. ಆಗಿದೆ.

Best Mobiles in India

English summary
Here's the list of Best Power Banks That Are Super Fast
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+