Home
ಸುದ್ದಿಜಾಲ

ನಿಮಗೆ ತಿಳಿದಿಲ್ಲದ Instagramನ ಕೆಲವು ಪ್ರಮುಖ ಫೀಚರ್ಸ್‌ಗಳು!

ಫೇಸ್‌ಬುಕ್ ಒಡೆತನದ ಫೋಟೋ-ಶೇರಿಂಗ್‌ ಅಪ್ಲಿಕೇಶನ್ ಇನ್‌ಸ್ಟಾಗ್ರಾಮ್ ಜನಪ್ರಿಯ ಸೊಶಿಯಲ್‌ ಮೀಡಿಯಾ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಈಗಗಾಲೇ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇನ್‌ಸ್ಟಾಗ್ರಾಮ್‌ ಫೇಸ್‌ಬುಕ್ ಮತ್ತು ವಾಟ್ಸಾಪ್‌ನಷ್ಟು ಜನಪ್ರಿಯವಾಗದಿರಬಹುದು, ಆದರೆ ಇದು ವರ್ಚುವಲ್ ಜಗತ್ತಿನಲ್ಲಿ ಖಂಡಿತವಾಗಿಯೂ ಪ್ರಮುಖ ಪಾತ್ರ ವಹಿಸುತ್ತಿದೆ.

ಸೊಶೀಯಲ್‌

ಹೌದು, ಜನಪ್ರಿಯ ಸೊಶೀಯಲ್‌ ಮೀಡಿಯಾ ಇನ್‌ಸ್ಟಾಗ್ರಾಮ್‌ ಬಳಕೆದಾರರ ನೆಚ್ಚಿನ ಫೋಟೋ ಶೇರಿಂಗ್‌ ಅಪ್ಲಿಕೇಶನ್‌ ಆಗಿದೆ. ಇನ್ನು ಇನ್‌ಸ್ಟಾಗ್ರಾಮ್‌ ಇತ್ತೀಚಿನ ದಿನಗಳಲ್ಲಿ ಹಲವು ಮಾದರಿಯ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಆದರೂ ಸಹ ನಿಮಗೆ ತಿಳಿದಿರುವ ಅಥವಾ ತಿಳಿದಿಲ್ಲದ ಕೆಲವು ಫೀಚರ್ಸ್‌ಗಳನ್ನು ಇನ್‌ಸ್ಟಾಗ್ರಾಮ್‌ ನಲ್ಲಿ ನಾವು ಕಾಣಬಹುದಾಗಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ನಲ್ಲಿ ನಿಮಗೆ ತಿಳಿದಿಲ್ಲದೆ ಕೆಲವು ಫೀಚರ್ಸ್‌ಗಳನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶಗಳನ್ನು ಅನ್ಸೆಂಡ್ ಮಾಡಬಹುದು

ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶಗಳನ್ನು ಅನ್ಸೆಂಡ್ ಮಾಡಬಹುದು

ನೀವು ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ಚಾಟ್‌ನಿಂದ ಸಂದೇಶಗಳನ್ನು ಕಳುಹಿಸಿದಾಗ ಅದನ್ನು ಡಿಲೀಟ್‌ ಮಾಡಲು ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಅನುಮತಿಸುತ್ತದೆ. ಸಂಭಾಷಣೆಯಿಂದ ನೀವು ತೆಗೆದುಹಾಕಲು ಬಯಸುವ ನಿರ್ದಿಷ್ಟ ಸಂದೇಶವನ್ನು ಟ್ಯಾಪ್ ಮಾಡಿ ಹಿಡಿದಿಟ್ಟುಕೊಳ್ಳುವ ಮೂಲಕ ಇದನ್ನು ಸರಳವಾಗಿ ಮಾಡಬಹುದು. ಅದು ಪರದೆಯ ಮೇಲೆ "ಅನ್ಸೆಂಡ್" ಎಂಬ ಆಯ್ಕೆಯನ್ನು ತೋರಿಸುತ್ತದೆ. ಈ ಆಯ್ಕೆಯು ರಿ-ಶೇರ್‌ ಮಾಡಿದ ಪೋಸ್ಟ್‌ಗಳು, ನಿಮ್ಮ ಫೋನ್‌ನ ಗ್ಯಾಲರಿಯ ಚಿತ್ರಗಳು ಮತ್ತು ವಿನಿಮಯವಾಗುವ ಪಠ್ಯ ಸಂದೇಶಗಳಲ್ಲಿ ಸಹ ಕಾರ್ಯನಿರ್ವಹಿಸುತ್ತದೆ.

ಕಣ್ಮರೆಯಾಗುತ್ತಿರುವ ಸಂದೇಶಗಳನ್ನು ಕಳುಹಿಸಬಹುದು

ಕಣ್ಮರೆಯಾಗುತ್ತಿರುವ ಸಂದೇಶಗಳನ್ನು ಕಳುಹಿಸಬಹುದು

ಇತ್ತೀಚೆಗೆ ಪರಿಚಯಿಸಲಾದ ವ್ಯಾನಿಶ್ ಮೋಡ್ ಫೀಚರ್ಸ್‌ ಅನ್ನು ಬಳಸುವುದರ ಮೂಲಕ ಕಣ್ಮರೆಯಾಗುತ್ತಿರುವ ಸಂದೇಶಗಳನ್ನು ಕಳುಹಿಸಬಹುದು. ಚಾಟ್ ಥ್ರೆಡ್‌ನಲ್ಲಿ ನಿಮ್ಮ ಮೊಬೈಲ್ ಡಿವೈಸ್‌ನಲ್ಲಿ ಸ್ವೈಪ್ ಮಾಡುವ ಮೂಲಕ ಈ ಮೋಡ್ ಅನ್ನು ಆನ್ ಮಾಡಬಹುದು ಮತ್ತು ಮತ್ತೆ ಸ್ವೈಪ್ ಮಾಡುವ ಮೂಲಕ ಅದೇ ರೀತಿಯಲ್ಲಿ ಆಫ್ ಮಾಡಬಹುದು. ಈ ಮೋಡ್ ಅನ್ನು ಆನ್ ಮಾಡಿದಾಗ, ಚಾಟ್‌ನಲ್ಲಿ ವಿನಿಮಯವಾಗುವ ಸಂದೇಶಗಳು ಚಾಟ್‌ನ ಭಾಗವಾಗಿರುವ ಪ್ರತಿಯೊಬ್ಬರೂ ಅದನ್ನು ನೋಡಿದ ನಂತರ ಕಣ್ಮರೆಯಾಗುತ್ತದೆ.

ಸ್ನೇಹಿತರೊಂದಿಗೆ ಪೋಸ್ಟ್‌ಗಳನ್ನು ಬ್ರೌಸ್ ಮಾಡಬಹುದು

ಸ್ನೇಹಿತರೊಂದಿಗೆ ಪೋಸ್ಟ್‌ಗಳನ್ನು ಬ್ರೌಸ್ ಮಾಡಬಹುದು

ಇನ್‌ಸ್ಟಾಗ್ರಾಮ್ 'ಕೋ-ವಾಚಿಂಗ್‌' ಎಂದು ಕರೆಯುವ ಫೀಚರ್ಸ್‌ ಮೂಲಕ ನಿಮ್ಮ ಫೋಸ್ಟ್‌ಗಳನ್ನ ಸ್ನೇಹಿತರ ಜೊತೆಗೆ ಬ್ರೌಸ್‌ ಮಾಡಬಹುದು. ಶಿಫಾರಸು ಮಾಡಲಾದ ಪೋಸ್ಟ್‌ಗಳು ಅಥವಾ ಚಲನಚಿತ್ರಗಳು, ಐಜಿಟಿವಿ ವೀಡಿಯೊಗಳು, ರೀಲ್‌ಗಳನ್ನು ಬ್ರೌಸ್‌ ಮಾಡಬಹುದಾಗಿದೆ.

ನೀವು ಲೈಕ್‌ ಮಾಡಿದ ಎಲ್ಲಾ ಪೋಸ್ಟ್‌ಗಳನ್ನು ನೋಡಬಹುದು

ನೀವು ಲೈಕ್‌ ಮಾಡಿದ ಎಲ್ಲಾ ಪೋಸ್ಟ್‌ಗಳನ್ನು ನೋಡಬಹುದು

ಹಾರ್ಟ್‌ ಐಕಾನ್ ಮೂಲಕ ಲೈಕ್‌ ಮಾಡುವುದು Instagram ನಲ್ಲಿ ಸಾಮಾನ್ಯ ವಿಷಯವಾಗಿದೆ, ಆದರೆ ನೀವು ಅನುಸರಿಸುವ ಎಲ್ಲ ಜನರಿಂದ ನೀವು ಇಷ್ಟಪಟ್ಟ ಎಲ್ಲಾ ಪೋಸ್ಟ್‌ಗಳನ್ನು ಕಂಡುಹಿಡಿಯುವುದು ಅಪ್ಲಿಕೇಶನ್‌ನಲ್ಲಿ ಒಂದು ಗುಪ್ತ ಸ್ಥಳವಾಗಿದೆ. ಇದಕ್ಕಾಗಿ, ನಿಮ್ಮ ಪ್ರೊಫೈಲ್ ಪುಟದಲ್ಲಿನ ಮೂರು ಅಡ್ಡ ರೇಖೆಗಳ ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು ‘ಸೆಟ್ಟಿಂಗ್‌ಗಳು' ತೆರೆಯಬೇಕು. ಇಲ್ಲಿಂದ ನೀವು ‘ಖಾತೆ' ತೆರೆಯಬೇಕು ಮತ್ತು ‘ನೀವು ಇಷ್ಟಪಟ್ಟ ಪೋಸ್ಟ್‌ಗಳನ್ನು' ಟ್ಯಾಪ್ ಮಾಡಬೇಕು.

Best Mobiles in India

English summary
Instagram features that you probably didn’t know about.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+