ನೀವು ಕಂಡರಿಯದ ಲಾಲಿಪಪ್ ವಿಶೇಷತೆಗಳಿವು

Written By:

ಆಧುನಿಕ ನೆಕ್ಸಸ್ ಡಿವೈಸ್‌ಗಳಿಗಾಗಿ ಗೂಗಲ್ ಕೊನೆಗೂ ಆಂಡ್ರಾಯ್ಡ್ 5.0 ಲಾಲಿಪಪ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಓಎಸ್ ನಿಜಕ್ಕೂ ಅದ್ಭುತ ಕಮಾಲನ್ನೇ ಫೋನ್ ಮಾರುಕಟ್ಟೆಯಲ್ಲಿ ಉಂಟುಮಾಡಲಿದ್ದು ಫೋನ್ ಬಳಕೆದಾರರಿಗೆ ಹೊಸದೊಂದು ಅನುಭವವನ್ನು ಇದು ಉಂಟುಮಾಡಲಿದೆ.

ಲಾಲಿಪಪ್ ಅನೂಹ್ಯ ವಿಶೇಷತೆಗಳನ್ನು ಒಳಗೊಂಡು ಫೋನ್ ಬಳಸುವವರಲ್ಲಿ ಇದು ಅದ್ಭುತವನ್ನೇ ಉಂಟುಮಾಡಲಿದೆ. ಇತರ ಓಎಸ್‌ಗೆ ಹೋಲಿಸಿದಾಗ ಲಾಲಿಪಪ್ ಫೋನ್ ಬಳಸುವವರ ಮೇಲೆ ಹೊಸ ಜಾದೂವನ್ನೇ ಉಂಟುಮಾಡುತ್ತಿದೆ.

ಇಂದಿನ ಲೇಖನದಲ್ಲಿ ಆಂಡ್ರಾಯ್ಡ್ ಲಾಲಿಪಪ್‌ನ ಅತಿ ವಿಶೇಷ ವಿಶೇಷತೆಗಳತ್ತ ಗಮನಹರಿಸೋಣ. ಈ ಫೀಚರ್‌ಗಳು ನಿಜಕ್ಕೂ ಅತ್ಯದ್ಭುತವಾಗಿದ್ದು ನಿಮ್ಮಲ್ಲಿ ಹುರುಪನ್ನು ಉಂಟುಮಾಡುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಈಸ್ಟರ್ ಎಗ್ಸ್

ಈಸ್ಟರ್ ಎಗ್ಸ್

#1

ಗೂಗಲ್ ಈಸ್ಟರ್ ಎಗ್ಸ್ ಎಂಬ ಗೇಮಿಂಗ್ ಅಪ್ಲಿಕೇಶನ್ ಅನ್ನು ಜಾರಿಗೆ ತಂದಿದೆ. ಅಬೌಟ್ ಫೋನ್ > ತ್ವರಿತ ಸೆಶನ್‌ನಲ್ಲಿ ಆಂಡ್ರಾಯ್ಡ್ ಆವೃತ್ತಿಗಳ ಮೇಲೆ ತಟ್ಟಿರಿ ಇಲ್ಲಿ ನಿಮಗೆ ಈಸ್ಟರ್ ಎಗ್ ಅನ್ನು ಪಡೆದುಕೊಳ್ಳಬಹುದು.

ಟ್ಯಾಪ್ ಏಂಡ್ ಗೋ

ಟ್ಯಾಪ್ ಏಂಡ್ ಗೋ

#2

ಅಪ್‌ಡೇಟ್ ಬದಲಿಗೆ ಆಂಡ್ರಾಯ್ಡ್ 5.0 ಲಾಲಿಪಪ್‌ಗೆ ನೀವು ಬದಲಾಯಿಸುತ್ತಿದ್ದೀರಿ ಎಂದಾದಲ್ಲಿ, ಹೊಸ ಫೀಚರ್ ಆದ ಟ್ಯಾಪ್ ಏಂಡ್ ಗೋವನ್ನು ನೀವು ನಿಜಕ್ಕೂ ಇಷ್ಟಪಡುತ್ತೀರಿ.

ಸೆಟ್ಟಿಂಗ್ಸ್‌ನಲ್ಲಿ ಸರ್ಚ್ ಮಾಡಿ

ಸೆಟ್ಟಿಂಗ್ಸ್‌ನಲ್ಲಿ ಸರ್ಚ್ ಮಾಡಿ

#3

ಈ ಹೊಸ ಓಎಸ್ ಒದಗಿಸುವ ಸರ್ಚ್ ಆಯ್ಕೆ ನಿಜಕ್ಕೂ ಅಮೂಲಾಗ್ರ ಸೇವೆಯನ್ನು ಫೋನ್ ಬಳಕೆದಾರರಿಗೆ ಒದಗಿಸಲಿದೆ. ಈ ಹಿಂದೆ ಸರ್ಚ್‌ನಲ್ಲಿ ಇದ್ದಂತಹ ಎಲ್ಲಾ ರೀತಿಯ ತೊಂದರೆಗಳನ್ನು ನಿವಾರಿಸಿ ಬಳಕೆದಾರರಿಗೆ ಹೊಸ ಸರ್ಚ್ ಅನುಭವವನ್ನು ಇದು ನೀಡಲಿದೆ.

ಕ್ವಿಕ್ ಏಕ್ಸೆಸ್ ಟಾಗಲ್ಸ್

ಕ್ವಿಕ್ ಏಕ್ಸೆಸ್ ಟಾಗಲ್ಸ್

#4

ಆಂಡ್ರಾಯ್ಡ್ 5.0 ಲಾಲಿಪಪ್‌ನಲ್ಲಿ ಗೂಗಲ್ ಅಧಿಸೂಚನೆ ಪಟ್ಟಿಯನ್ನು ಮರುವಿನ್ಯಾಸಗೊಳಿಸಿದೆ. ನಿಮ್ಮ ಟಾಗಲ್‌ಗಳನ್ನು ಹಿಡಿದಿಡುವ ಯಾವುದೇ ಲಾಂಗರ್ ಅಥವಾ ಸೆಕೆಂಡರಿ ಪ್ಯಾನೆಲ್‌ಗಳು ಇರಲು ಸಾಧ್ಯವೇ ಇಲ್ಲ.

ಬಿಲ್ಟ್ ಇನ್ ಫ್ಲ್ಯಾಶ್‌ಲೈಟ್

ಬಿಲ್ಟ್ ಇನ್ ಫ್ಲ್ಯಾಶ್‌ಲೈಟ್

#5

ಹೊಸ ಓಎಸ್ ಬಿಲ್ಟ್ ಇನ್ ಫ್ಲ್ಯಾಶ್‌ಲೈಟ್ ಫೀಚರ್ ಅನ್ನು ಒದಗಿಸುತ್ತಿದ್ದು ಅಧಿಸೂಚನೆ ಪಟ್ಟಿಯಲ್ಲೇ ಈ ಹೊಸ ಫೀಚರ್ ಆದ ಫ್ಲ್ಯಾಶ್‌ಲೈಟ್ ನಿಮಗೆ ಲಭ್ಯವಾಗಲಿದೆ.

ನಿಮ್ಮ ಡೇಟಾ ಬಳಕೆಯನ್ನು ತ್ವರಿತವಾಗಿ ಪರಿಶೀಲಿಸಿ

ನಿಮ್ಮ ಡೇಟಾ ಬಳಕೆಯನ್ನು ತ್ವರಿತವಾಗಿ ಪರಿಶೀಲಿಸಿ

#6

ಪುಲ್ ಡೌನ್ ಅಧಿಸೂಚನೆ ಇನ್ನೂ ಹೆಚ್ಚಿನ ಬದಲಾವಣೆಗಳನ್ನು ಕಾಣಲಿದೆ. ಸೆಲ್ಯುಲರ್ ಐಕಾನ್ ಮೇಲೆ ತಟ್ಟುವ ಮೂಲಕ ನಿಮ್ಮ ಡೇಟಾ ಎಷ್ಟು ಖರ್ಚಾಗಿದೆ ಎಂಬುದರ ಮೇಲೆ ನಿಮಗೆ ಮಾಹಿತಿ ದೊರೆಯಲಿದೆ.

ನಿಮ್ಮ ಅಲಾರಾಮ್‌ಗೆ ತ್ವರಿತ ಪ್ರವೇಶ

ನಿಮ್ಮ ಅಲಾರಾಮ್‌ಗೆ ತ್ವರಿತ ಪ್ರವೇಶ

#7

ಹೊಸ ಲಾಲಿಪಪ್ ಓಎಸ್‌ ಅಲಾರಾಮ್‌ಗೆ ನಿಮಗೆ ತ್ವರಿತ ಪ್ರವೇಶವನ್ನು ನೀಡಲಿದೆ.

ನೋಟಿಫಿಕೇಶನ್ ಇಲ್ಲ

ನೋಟಿಫಿಕೇಶನ್ ಇಲ್ಲ

#8

ಹೊಸ ಲಾಲಿಪಪ್ ಓಎಸ್ ನೋಟಿಫಿಕೇಶನ್‌ಗಳ ತೊಂದರೆ ಇಲ್ಲದಂತೆ ನಿಮಗೆ ಹೊಸ ಅನುಭವವನ್ನು ನೀಡಲಿದೆ.

ನಿಮ್ಮ ಲಾಕ್‌ಸ್ಕ್ರೀನ್‌ನಿಂದ ಸೂಕ್ಷ್ಮ ಅಧಿಸೂಚನೆಗಳನ್ನು ಮರೆಮಾಡಿ

ನಿಮ್ಮ ಲಾಕ್‌ಸ್ಕ್ರೀನ್‌ನಿಂದ ಸೂಕ್ಷ್ಮ ಅಧಿಸೂಚನೆಗಳನ್ನು ಮರೆಮಾಡಿ

#9

ನಿಮಗೆ ಮಾತ್ರವೇ ಖಾಸಗಿಯಾಗಿರುವ ಮತ್ತು ಯಾರೂ ವೀಕ್ಷಿಸಬಾರದು ಎಂದು ನೀವು ಬಯಸುವ ಸೂಕ್ಷ್ಮ ಅಧಿಸೂಚನೆಗಳನ್ನು ನಿಮ್ಮ ಲಾಕ್‌ಸ್ಕ್ರೀನ್‌ನಿಂದ ಮರೆಮಾಡಲು ಹೊಸ ಓಎಸ್ ಸಹಾಯ ಮಾಡುತ್ತದೆ.

ಲಾಕ್‌ಸ್ಕ್ರೀನ್ ಅಧಿಸೂಚನೆಗಳನ್ನು ನಿಷ್ಕ್ರಿಯಗೊಳಿಸಿ

ಲಾಕ್‌ಸ್ಕ್ರೀನ್ ಅಧಿಸೂಚನೆಗಳನ್ನು ನಿಷ್ಕ್ರಿಯಗೊಳಿಸಿ

#10

ಸೆಟ್ಟಿಂಗ್ಸ್ > ಸೌಂಡ್ ಏಂಡ್ ನೋಟಿಫಿಕೇಶನ್ಸ್> ವೆನ್ ಡಿವೈಸ್ ಈಸ್ ಲಾಕ್ಡ್> ಡೋನ್ಟ್ ಶೋ ನೋಟಿಫಿಕೇಶನ್ಸ್ ಎಟ್ ಆಲ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Google finally released the Android 5.0 Lollipop factory image for a few modern Nexus devices and we wasted no time flashing our resident Nexus 5.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot