Home
ಸುದ್ದಿಜಾಲ

ಹೈಫ್ಯೂಚರ್‌ ಫ್ಲೈಬಡ್ಸ್‌ ಟ್ರೂ ವೈರ್‌ಲೆಸ್‌ ಇಯರ್‌ಬಡ್ಸ್‌ ಬಿಡುಗಡೆ!

ಟೆಕ್‌ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ವಿಸ್ತಾರವಾಗುತ್ತಿದ್ದು, ಸ್ಮಾರ್ಟ್‌ಫೋನ್‌ಗಳ ಜೊತೆಗೆ ಇಯರ್‌ಬಡ್ಸ್‌, ಇಯರ್‌ಫೋನ್‌, ಹೆಡ್‌ಫೋನ್‌ಗಳಿಗೆ ಭಾರಿ ಭೇಡಿಕೆ ಇದೆ. ಈಗಾಗ್ಲೆ ಹಲವಾರು ಕಂಪೆನಿಗಳ ಇಯರ್‌ಬಡ್ಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ, ಆದರೂ ಗ್ರಾಹಕರು ಮಾತ್ರ ಉತ್ತಮ ಬ್ರ್ಯಾಂಡ್‌ ಕಂಪೆನಿಗಳ ಇಯರ್‌ಬಡ್‌ಗಳನ್ನ್ಏ ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಚೀನಾ ಮೂಲದ ಹೈಪ್ಯೂಚರ್‌ ಕಂಪೆನಿ ಕೂಡ ತನ್ನ ಹೊಸ ವೈರ್‌ಲೆಸ್‌ ಇಯರ್‌ಬಡ್‌ಗಳನ್ನ ಭಾರತದಲ್ಲಿ ಲಾಂಚ್‌ ಮಾಡಿದೆ.

ಹೌದು

ಹೌದು, ಚೀನಾ ಮೂಲದ ಎಲೆಕ್ಟ್ರಾನಿಕ್ಸ್ ಕಂಪನಿ ಹೈಫ್ಯೂಚರ್ ತನ್ನ ಹೊಸ ಫ್ಲೈಬಡ್ಸ್ ವೈರ್‌ಲೆಸ್ ಇಯರ್‌ಬಡ್ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್‌ಗಳು ಬಳಕೆದಾರರ ಆಶಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಅಷ್ಟೇ ಅಲ್ಲ ಈ ಇಯರ್‌ಬಡ್ಸ್‌ಗಳು ಬಜೆಟ್‌ ಬೆಲೆಯನ್ನ ಹೊಂದಿದ್ದು, ಕೇವಲ 2,499 ರೂ.ಗೆ ಲಭ್ಯವಾಗಲಿವೆ ಎಂದು ಕಂಪೆನಿ ಹೇಳಿದೆ.

ಹೈಫ್ಯೂಚರ್ ಫ್ಲೈಬಡ್ಸ್

ಹೈಫ್ಯೂಚರ್ ಫ್ಲೈಬಡ್ಸ್

ಹೈಫ್ಯೂಚರ್ ಫ್ಲೈಬಡ್ಸ್ ವೈರ್‌ಲೆಸ್‌ ಇಯರ್‌ಬಡ್ಸ್‌ ಉತ್ತಮ ವಿನ್ಯಾಸವನ್ನ ಹೊಂದಿದ್ದು, ಯುವಜನತೆಯ ಆಶಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಈ ಇಯರ್‌ಬಡ್ಸ್‌ ಬ್ಲೂಟೂತ್ v5.0 ಅನ್ನು ಬೆಂಬಲಿಸಲಿದ್ದು, ಉತ್ತಮ ಗುಣಮಟ್ಟದ ಪ್ಲೇಬ್ಯಾಕ್‌ಗಾಗಿ ಡೈನಾಮಿಕ್ N42 ನಿಯೋಡೈಮಿಯಮ್ ಮ್ಯಾಗ್ನೆಟ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದಲ್ಲದೆ ಧ್ವನಿ ಸ್ಪಷ್ಟತೆಗಾಗಿ ಗ್ರ್ಯಾಫೀನ್ ಆಡಿಯೋ ಡ್ರೈವರ್‌ಗಳನ್ನುಒಳಗೊಂಡಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಹೈಫ್ಯೂಚರ್ ಫ್ಲೈಬಡ್ಸ್ ವಿನ್ಯಾಸ

ಹೈಫ್ಯೂಚರ್ ಫ್ಲೈಬಡ್ಸ್ ವಿನ್ಯಾಸ

ಇದು "ಅಲ್ಟ್ರಾ-ರಿಯಲಿಸ್ಟಿಕ್ ಲೀಸನಿಂಗ್‌ಅನುಭವ" ನೀಡಲಿದೆ ಎಂದು ಹೈಫ್ಯೂಚರ್ ಕಂಪೆನಿ ಹೇಳಿಕೊಂಡಿದೆ. ಇದಲ್ಲದೆ ಈ ಇಯರ್‌ಬಡ್‌ನ ಎರಡೂ ಇಯರ್‌ಪೀಸ್‌ಗಳು 5 ಗ್ರಾಂ ತೂಕವನ್ನು ಹೊಂದಿದ್ದು, ಚಾರ್ಜಿಂಗ್ ಕೇಸ್‌ ಸೇರಿದರೆ ಒಟ್ಟು 45 ಗ್ರಾಂ ತೂಕವನ್ನು ಒಳಗೊಂಡಿದೆ. ಜೊತೆಗೆ ಇಯರ್‌ಬಡ್ಸ್‌ಗಳನ್ನ ಚಾರ್ಜಿಂಗ್‌ ಮಾಡುವಾಗ ಚಾರ್ಜಿಂಗ್‌ ಮಟ್ಟವನ್ನ ತಿಳಿಸಲು ಮೂರು ಎಲ್ಇಡಿ ಸೂಚಕಗಳನ್ನು ನೀಡಲಾಗಿದೆ.

ಹೈಫ್ಯೂಚರ್ ಫ್ಲೈಬಡ್ಸ್ ವಿಶೇಷತೆ

ಹೈಫ್ಯೂಚರ್ ಫ್ಲೈಬಡ್ಸ್ ವಿಶೇಷತೆ

ಇನ್ನು ಈ ಹೈಫ್ಯೂಚರ್ ಫ್ಲೈಬಡ್ಸ್ ಇಯರ್‌ಬಡ್ಸ್‌ ವಾಟರ್‌ಪ್ರೂಪ್‌ ವ್ಯವಸ್ಥೆಯನ್ನು ಹೊಂದಿದ್ದು, IPSX 5 ಪ್ರಮಾಣೀಕರಣವನ್ನ ಹೊಂದಿದೆ. ಇದಲ್ಲದೆ ಇದು ಬೆವರು ನಿರೋದಕವನ್ನು ಸಹ ಹೊಂದಿದೆ. ಇದಲ್ಲದೆ ಉತ್ತಮ ಆಡಿಯೋ ಅನುಭವಕ್ಕಾಗಿ ಈ ಇಯರ್‌ಬಡ್ಸ್‌ಗಳಲ್ಲಿ ಹೈಫ್ಯೂಚರ್ 5-ಡಿಗ್ರಿ ನಾಝೆಲ್ಸ್‌ ವಿನ್ಯಾಸಗಳನ್ನ ಹೊಂದಿದೆ. ಈ ವಿನ್ಯಾಸವು ಕಿವಿ ಒಳಗೆ ಆರಾಮ ಮತ್ತು ಸುರಕ್ಷಿತ ಫಿಟ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಹೈಫ್ಯೂಚರ್ ಫ್ಲೈಬಡ್ಸ್ ಟ್ರೂಲಿ ವೈರ್‌ಲೆಸ್ ಇಯರ್‌ಬಡ್ಸ್‌ ನಾಲ್ಕು ಗಂಟೆಗಳ ಆಡಿಯೊ ಪ್ಲೇಬ್ಯಾಕ್ ಅನ್ನು ನೀಡಲಿದೆ. ಇದಲ್ಲದೆ ಚಾರ್ಜಿಂಗ್‌ ಕೇಸ್‌ ಮೂಲಕ 15 ಗಂಟೆಗಳವರೆಗೆ ಬ್ಯಾಟರಿ ಸಾಮರ್ಥ್ಯವನ್ನು ವಿಸ್ತರಿಸಿ ಬಳಸಬಹುದಾಗಿದೆ. ಇದರಿಂದ 19 ಗಂಟೆಗಳವರೆಗೆ ಮ್ಯೂಸಿಕ್‌ ಅನ್ನು ಕೇಳಬಹುದಾಗಿದೆ. ಇದರ ಜೊತೆಗ ಈ ಇಯರ್‌ಬಡ್ಸ್‌ನಲ್ಲಿ ಇಂಟೆಲಿಜೆಂಟ್ ಟಚ್ ಸೆನ್ಸರ್ ಕಂಟ್ರೋಲ್‌ ನೀಡಲಾಗಿದ್ದು, ಇದರಿಂದ ಬಳಕೆದಾರರಿಗೆ ಸಂಗೀತ ಪ್ಲೇಬ್ಯಾಕ್ ಅನ್ನು ಕಂಟ್ರೋಲ್‌ ಮಾಡಲು ಅವಕಾಶ ಸಿಗುತ್ತದೆ. ಅಲ್ಲದೆ ಗೂಗಲ್‌ ಅಸಿಸ್ಟೆಂಟ್‌ ಮೂಲಕ ಕರೆಗಳಿಗೆ ಉತ್ತರಿಸುವ ಅವಕಾಶವನ್ನ ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹೈ ಫ್ಯೂಚರ್‌ ಫ್ಲೈಬಡ್ಸ್ ವೈರ್‌ಲೆಸ್ ಇಯರ್‌ಬಡ್‌ಗಳು ಕೈ ಗೆಟಕುವ ಬೆಲೆಯನ್ನ ಹೊಂದಿದ್ದು, ಇವುಗಳ ಬೆಲೆ ಕೇವಲ 2,499 ರೂ ಆಗಿದ್ದು, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಇಂಡಿಯಾದಲ್ಲಿ ಖರೀದಿಸಬಹುದಾಗಿದೆ. ಅಲ್ಲದೆ ಈ ಇಯರ್‌ಬಡ್ಸ್‌ಗಳು ಮ್ಯಾಟ್ ಬ್ಲ್ಯಾಕ್, ಮಿಂಟ್ ಗ್ರೀನ್, ಫ್ಲೆಮಿಂಗೊ ಪಿಂಕ್ ಮತ್ತು ಪರ್ಲ್ ವೈಟ್ ಕಲರ್‌ ಗಳಲ್ಲಿ ಖರೀದಿಸಲು ಲಭ್ಯವಾಗಲಿದೆ.

Best Mobiles in India

English summary
China-based electronics company HiFuture has just launched its latest pair of wireless earbuds in the Indian market.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+