ಜಾಸ್ತಿ ಫೋನ್ ಬಳಸಿದರೆ ಕ್ಯಾನ್ಸರ್ ಪಕ್ಕಾ..! ದಶಕದ ಅಧ್ಯಯನದಲ್ಲಿ ಸತ್ಯ ಬಯಲು..!
ಮೊಬೈಲ್ ಹೆಚ್ಚು ಬಳಸಿದರೆ ಆರೋಗ್ಯಕ್ಕೆ ಹಾನಿಕರ ಎಂಬುದನ್ನು ಸಾಮಾನ್ಯವಾಗಿ ಕೇಳಿರ್ತಿವಿ. ಆದರೆ, ಈಗ ಅದೇ ಮಾತು ಸಂಪೂರ್ಣ ಸತ್ಯವಾಗಿದೆ. ಜಾಸ್ತಿ ಫೋನ್ ಬಳಸಿದರೆ ಕ್ಯಾನ್ಸರ್ ಬರುವುದು ಪಕ್ಕಾ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಅಧ್ಯಯನ ಹೇಳುವಂತೆ ಹೆಚ್ಚಿನ ಮಟ್ಟದ ರೇಡಿಯೋ ಆವರ್ತನ ತರಂಗಗಳು ಮತ್ತು ಕ್ಯಾನ್ಸರ್‌ಗೆ ನೇರ ಸಂಪರ್ಕವಿದೆಯಂತೆ.

ಹೌದು, ಯುನೈಟೆಡ್ ಸ್ಟೇಟ್ಸ್ ಫುಡ್ ಮತ್ತು ಡ್ರಗ್ ಅಡ್ಮಿನಿಸ್ಟ್ರೇಷನ್ [United States Food and Drug Administration (USFDA)] ನಡೆಸಿದ ಹತ್ತು ವರ್ಷಗಳ ದೀರ್ಘ ಅಧ್ಯಯನದಲ್ಲಿ ಈ ಅಂಶ ಬಹಿರಂಗವಾಗಿದೆ. ಅಧ್ಯಯನಕ್ಕೆ ಯುಎಸ್‌ಎಫ್‌ಡಿಎಎ ಬಳಸಿರುವುದು ಕೇವಲ 2G ಮತ್ತು 3G ಸೆಲ್‌ಫೋನ್‌ಗಳನ್ನು, ಇನ್ನು 4G ಮತ್ತು 5G ಅಥವಾ ಹೈಸ್ಪೀಡ್ ವೈ-ಫೈ ನೆಟ್‌ವರ್ಕ್‌ನಿಂದ ಇನ್ನು ಹೆಚ್ಚಿನ ಹಾನಿ ಎಂಬುದು ವಿಜ್ಞಾನಿಗಳ ವಾದ. USFDA ಅಧ್ಯಯನದಲ್ಲಿ ಏನೀದೆ..? ಎಂಬುದನ್ನು ಮುಂದೆ ನೋಡಿ.

ಹೇಗೆ ಅಧ್ಯಯನ..?
USFDA ಈ ಅಧ್ಯಯನವನ್ನು 10 ವರ್ಷಗಳ ಹಿಂದೆ ಆರಂಭಿಸಿತ್ತು ಎಂಬುದನ್ನು ಗಮನಿಸಬೇಕಾಗಿದೆ. ಇಂತಹ ದೀರ್ಘ ಅಧ್ಯಯನದಿಂದ ವಿಜ್ಞಾನಿಗಳು ಹೆಚ್ಚಿನ ಮಟ್ಟದ ರೇಡಿಯೋ ಆವರ್ತನ ತರಂಗಗಳಿಂದ ಕ್ಯಾನ್ಸರ್ ಬರುವುದು ಖಚಿತ ಎಂದು ಹೇಳಿವೆ. ಅಧ್ಯಯನಕ್ಕೆ ವಿಜ್ಞಾನಿಗಳು ಇಲಿಗಳನ್ನು ಬಳಸಿದ್ದು, ಇಲಿಗಳಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ.

ಫೋನ್ ಎಲ್ಲಿರುತ್ತೆ ಎನ್ನುವುದರ ಮೇಲೆ ನಿರ್ಧಾರ
NTPಯ ಹಿರಿಯ ಹಿರಿಯ ವಿಜ್ಞಾನಿ ಜಾನ್ ಬುಚರ್ ಹೇಳುವಂತೆ, "ಅಧ್ಯಯನದಲ್ಲಿ ಬಳಸಿದ ಮಾನ್ಯತೆಗಳನ್ನು ನೇರವಾಗಿ ಮಾನವನು ಸೆಲ್‌ಫೋನ್ ಬಳಸುವ ಮಾನ್ಯತೆಗಳಿಗೆ ಹೋಲಿಸಲಾಗುವುದಿಲ್ಲ. ಆದರೆ, ನಮ್ಮ ಅಧ್ಯಯನದಲ್ಲಿ ಇಲಿಗಳು ತಮ್ಮ ಇಡೀ ದೇಹದಾದ್ಯಂತ ರೇಡಿಯೊ ಆವರ್ತನ ವಿಕಿರಣಗಳನ್ನು ಪಡೆದುಕೊಂಡಿವೆ. ಅದರಂತೆ, ಜನರು ತಮ್ಮ ಫೋನ್‌ನ್ನು ಎಲ್ಲಿ ಹೆಚ್ಚು ಇಟ್ಟುಕೊಳ್ಳುತ್ತಾರ ಎಂಬುದು ಕ್ಯಾನ್ಸರ್ ಬರುವ ಅಂಗಾಂಶ ನಿರ್ಧಾರವಾಗುತ್ತದೆ."

ಎಲ್ಲೆಲ್ಲಿ ಪತ್ತೆ..?
ಅಧ್ಯಯನಕ್ಕೆ ಬಳಸಿದ ಇಲಿಗಳಲ್ಲಿ ಕ್ಯಾನ್ಸರ್ ರೋಗದ ಅಂಶಗಳು ಬಹಿರಂಗವಾಗಿದ್ದು,ಗಂಡು ಇಲಿಗಳಲ್ಲಿ ಅಡ್ರಿನಲ್ ಗ್ರಂಥಿ ಮತ್ತು ಮೆದುಳಿನಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ. ಹೆಣ್ಣು ಇಲಿಗಳಲ್ಲಿ ಹೆಚ್ಚಿನ ಮಟ್ಟದ ರೇಡಿಯೋ ಆವರ್ತನ ತರಂಗಗಳಿಂದ ಕ್ಯಾನ್ಸರ್ ಬಂದಿರುವ ಬಗ್ಗೆ ಸಾಕ್ಷಿಗಳು ಅಸ್ಪಷ್ಟವಾಗಿದ್ದು, ವಿಜ್ಞಾನಿಗಳು ಅಧ್ಯಯನ ಮುಂದುವರೆಸಿದ್ದಾರೆ.

ಮಾನವನ ಅಧ್ಯಯನದಲ್ಲಿ ಖಚಿತ ಫಲಿತಾಂಶ ಸಿಗಲ್ಲ
ನಮ್ಮ ಅಧ್ಯಯನದ ಪ್ರಮುಖ ಸಾಮರ್ಥ್ಯವೆಂದರೆ, ಪ್ರಾಣಿಗಳು ಎಷ್ಟು ಪ್ರಮಾಣದ ತರಂಗಗಳನ್ನು ಸ್ವೀಕರಿಸುತ್ತವೆ ಎಂಬುದರ ಮೇಲೆ ತರಂಗಗಳನ್ನು ನಿಯಂತ್ರಿಸಿ ಅಧ್ಯಯನ ಮಾಡಬಹುದು. ಆದರೆ, ಇದು ಜನ ಸೆಲ್‌ಫೋನ್ ಬಳಸುವಾಗ ಫಲಿತಾಂಶ ಖಚಿತವಾಗಿರುವುದಿಲ್ಲ. ಮನುಷ್ಯನಲ್ಲಿ ಅಧ್ಯಯನ ಮಾಡಬೇಕೆಂದರೆ ಪ್ರಶ್ನಾವಳಿ ವಿಧಾನವನ್ನು ಅವಲಂಭಿಸಬೇಕಾಗುತ್ತದೆ ಎಂಬುದು ಟಾಕ್ಸಿಕಾಲಾಜಿಸ್ಟ್ ಮುಖ್ಯಸ್ಥ ಮೈಕಲ್ ವೈಡ್ ಅಭಿಪ್ರಾಯ.

ಎಲ್ಲಿ ಅಧ್ಯಯನ..?
ಯುಎಸ್ ರಾಷ್ಟ್ರೀಯ ಟಾಕ್ಸಿಕಾಲಜಿ ಯೋಜನೆಯಡಿ ಯುಎಸ್‌ನ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳಲ್ಲಿನ ರಾಷ್ಟ್ರೀಯ ಪರಿಸರ ಆರೋಗ್ಯ ವಿಜ್ಞಾನ ಸಂಸ್ಥೆಯಲ್ಲಿ ಹೆಚ್ಚಿನ ಮಟ್ಟದ ರೇಡಿಯೋ ಆವರ್ತನ ತರಂಗಗಳಿಂದ ಆರೋಗ್ಯಕ್ಕೆ ಹಾನಿ ಎಂಬುದರ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಸರಾಸರಿ ಅವಧಿಯಲ್ಲಿ ಸೆಲ್‌ಫೋನ್ ಬಳಸುವುದರಿಂದ ಏನಾಗುತ್ತದೆ ಎಂಬುದನ್ನು ವರದಿ ಹೇಳಿದೆ.

2G/3G ತರಂಗಗಳ ಅಧ್ಯಯನ
ಈ ಅಧ್ಯಯನವು ಕಾಲ್ ಮತ್ತು ಮೆಸೇಜ್‌ಗಳಿಗೆ 2G ಮತ್ತು 3G ಬಳಕೆಯಲ್ಲಿದ್ದಾಗ ಪ್ರಾರಂಭವಾಗಿದ್ದರಿಂದ ವೈ-ಫೈ, 4G ಮತ್ತು 5G ನೆಟ್‌ವರ್ಕ್‌ಗಳ RFR ಅಧ್ಯಯನವನ್ನು ಮಾಡಿಲ್ಲ. ಒಟ್ಟಾರೆಯಾಗಿ ಈ ಅಧ್ಯಯನ ಮೊಬೈಲ್ ಫೋನ್ ಬಳಕೆ ಮತ್ತು ಕ್ಯಾನ್ಸರ್ ನಡುವೆ ಸಂಪರ್ಕವಿದೆ ಎಂಬುದನ್ನು ಸಾಭೀತುಪಡಿಸುತ್ತದೆ ಎಂದು ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ.

ಅಧ್ಯಯನ ವಿಧಾನ
ಈ ಅಧ್ಯಯನದ ಮಾನ್ಯತೆ ಮಟ್ಟಗಳು ಮತ್ತು ಸಮಯ ಜನರು ಅನುಭವಿಸುರುತ್ತಿರುವುದಕ್ಕಿಂತ ಹೆಚ್ಚಾಗಿವೆ. ಈ ಅಧ್ಯಯನಕ್ಕೆ ಬಳಸಲಾದ ಕಡಿಮೆ ಮಾನ್ಯತೆ ಮಟ್ಟವು ಪ್ರಸ್ತುತ ಸೆಲ್‌ಫೋನ್ ಬಳಕೆದಾರರು ಬಳಸುತ್ತಿರುವ ಗರಿಷ್ಟ ಮಟ್ಟದ ಮಾನ್ಯತೆ ಮಟ್ಟಕ್ಕೆ ಸಮವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.


Click it and Unblock the Notifications