ಭಾರತದ 6,100 ರೈಲು ನಿಲ್ದಾಣಗಳಲ್ಲಿ ಲಭ್ಯವಾಗಲಿದೆ ಉಚಿತ ವೈಫೈ ಸೌಲಭ್ಯ ವ್ಯವಸ್ಥೆ!

|

ಭಾರತೀಯ ರೈಲ್ವೆ ಇಲಾಖೆ ರೈಲು ಪ್ರಯಾಣಿಕರಿಗಾಗಿ ಹಲವು ಸುದಾರಣೆಗಳನ್ನು ಮಾಡುತ್ತಲೇ ಬಂದಿದೆ. ಇದರಲ್ಲಿ ಉಚಿತ ಹೈಸ್ಪೀಡ್‌ ವೈಫೈ ಇಂಟರ್‌ನೆಟ್‌ ಸೌಲಭ್ಯ ಕೂಡ ಸೇರಿದೆ. ಈಗಾಗಲೇ ದೇಶದ ಅನೇಕ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಇಂಟರ್‌ನೆಟ್‌ ಸೇವೆಯನ್ನು ನೀಡಲಾಗ್ತಿದೆ. ಸದ್ಯ ಭಾರತೀಯ ರೈಲ್ವೆ ಇಲಾಖೆಯ ವರದಿಯಂತೆ ದೇಶದ 6100 ರೈಲು ನಿಲ್ದಾಣಗಳಲ್ಲಿ ಉಚಿತ ಹೈಸ್ಪೀಡ್ ವೈಫೈ ಇಂಟರ್ನೆಟ್ ಸೌಲಭ್ಯವನ್ನು ನೀಡಲಾಗ್ತಿದೆ. ಇದರಲ್ಲಿ 5,000ಕ್ಕೂ ಹೆಚ್ಚು ನಿಲ್ದಾಣಗಳು ಗ್ರಾಮೀಣ ಪ್ರದೇಶದಲ್ಲಿವೆ ಎಂದು ಹೇಳಲಾಗಿದೆ.

ಹೈಸ್ಪೀಡ್‌

ಹೌದು, ದೇಶದ 6100 ರೈಲು ನಿಲ್ದಾಣಗಳಲ್ಲಿ ಉಚಿತ ಹೈಸ್ಪೀಡ್‌ ವೈಫೈ ಇಂಟರ್‌ನೆಟ್‌ ಸೇವೆ ನೀಡುತ್ತಿರುವುದಾಗಿ ರೈಲ್ವೆ ಇಲಾಖೆ ಹೇಳಿದೆ. ಇದರಲ್ಲಿ ಈಶಾನ್ಯ ಪ್ರದೇಶದ ಅನೇಕ ದೂರದ ನಿಲ್ದಾಣಗಳಲ್ಲಿ ಮತ್ತು ಕಾಶ್ಮೀರ ಕಣಿವೆಯ ಎಲ್ಲಾ 15 ನಿಲ್ದಾಣಗಳಲ್ಲಿ ಹೈಸ್ಪೀಡ್‌ ವೈಫೈ ಸೌಲಭ್ಯ ಲಭ್ಯವಿದೆ. ಇನ್ನು ಈ ವೈಫೈ ಸೇವೆಯ ಮೂಲಕ ಚಲನಚಿತ್ರ, ಶೈಕ್ಷಣಿಕ ವಿಷಯಗಳ ಪ್ರದರ್ಶನವನ್ನು ವಿಕ್ಷಿಸಬಹುದು. ಹಾಗಯೇ ಇಂಟರ್‌ನೆಟ್‌ನ ಅನೇಕ ಸೇವೆಗಳನ್ನು ಪಡೆದುಕೊಳ್ಳಬಹುದು. ಹಾಗಾದ್ರೆ ದೇಶದ ರೈಲು ನಿಲ್ದಾಣಗಳಲ್ಲಿ ದೊರೆಯುವ ಉಚಿತ ವೈಫೈ ಇಂಟರ್‌ನೆಟ್‌ ಸೇವೆ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೈಲ್ವೇ

ಭಾರತದ ರೈಲ್ವೇ ಇಲಾಖೆ ದೇಶದಾದ್ಯಂತ 6100 ರೈಲು ನಿಲ್ದಾಣಗಳಲ್ಲಿ ಉಚಿತ ಹೈಸ್ಪೀಡ್‌ ವೈಫೈ ಇಂಟರ್‌ನೆಟ್‌ ನೀಡುತ್ತಿದೆ. ಇದರಲ್ಲಿ ಪ್ರತಿದಿನ 1 Mbps ವೇಗದಲ್ಲಿ ಮೊದಲ 30 ನಿಮಿಷಗಳ ಬಳಕೆಗೆ ವೈಫೈ ಉಚಿತವಾಗಿ ದೊರೆಯಲಿದೆ. ಹೆಚ್ಚಿನ ವೇಗದ ವೈಫೈ ಸೌಲಭ್ಯವನ್ನು 30 ನಿಮಿಷಗಳ ನಂತರ ಬಳಸುವುದಕ್ಕೆ ಬಳಕೆದಾರರು ಅತ್ಯಲ್ಪ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ರೈಲ್ವೇ ಸಚಿವಾಲಯದ ಅಡಿಯಲ್ಲಿ ಬರುವ ರೈಲ್‌ಟೆಲ್, ಈ ಸೌಲಭ್ಯವನ್ನು ದೇಶದಾದ್ಯಂತ ಎಲ್ಲಾ ನಿಲ್ದಾಣಗಳಿಗೆ ವಿಸ್ತರಿಸಲು ಹತ್ತಿರವಾಗುತ್ತಿದೆ ಎಂದು ಹೇಳಿದೆ. ಅಲ್ಲದೆ ದೇಶದ 6100 ನಿಲ್ದಾಣಗಳ ಪೈಕಿ 5000ಕ್ಕೂ ಹೆಚ್ಚು ರೈಲು ನಿಲ್ದಾಣಗಳು ಗ್ರಾಮೀಣ ಪ್ರದೇಶದಲ್ಲಿವೆ ಎಂದು ಸಂಸ್ಥೆ ತಿಳಿಸಿದೆ.

ವೈಫೈ

ಇನ್ನು ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಇಂಟರ್‌ನೆಟ್ ಸೌಲಭ್ಯ ಒದಗಿಸುವ ಪ್ಲಾನ್‌ ಅನ್ನು 2015ರ ರೈಲ್ವೆ ಬಜೆಟ್‌ನಲ್ಲಿ ಕಲ್ಪಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೆ 6100 ರೈಲು ನಿಲ್ದಾಣಗಳಲ್ಲಿ ಉಚಿತ ಹೈಸ್ಪೀಡ್‌ ವೈಫೈ ಇಂಟರ್‌ನೆಟ್‌ ಸೇವೆ ನೀಡಲಾಗ್ತಿದೆ. ಉತ್ತರ ರೈಲ್ವೆಯ ಲಕ್ನೋ ವಿಭಾಗದ ಉಬ್ರಾಣಿ ರೈಲು ನಿಲ್ದಾಣದಲ್ಲಿ (ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆ) ವೈಫೈ ಸೌಲಭ್ಯವನ್ನು ಪ್ರಾರಂಭಿಸುವ ಮೂಲಕ ಉಚಿತ ಹೈಸ್ಪೀಡ್‌ ವೈಫೈ ಇಂಟರ್‌ನೆಟ್‌ ಸೇವೆ ಸೌಲಭ್ಯ 6100ರ ಗಡಿ ದಾಟಿದೆ ಎಂದು ರೈಲ್‌ಟೆಲ್ ಹೇಳಿಕೆಯಲ್ಲಿ ತಿಳಿಸಿದೆ.

ರೈಲು ನಿಲ್ದಾಣಗಳಲ್ಲಿ ಉಚಿತ ಹೈಸ್ಪೀಡ್‌ ವೈಫೈ ಸೇವೆ ಪಡೆದುಕೊಳ್ಳುವುದು ಹೇಗೆ?

ರೈಲು ನಿಲ್ದಾಣಗಳಲ್ಲಿ ಉಚಿತ ಹೈಸ್ಪೀಡ್‌ ವೈಫೈ ಸೇವೆ ಪಡೆದುಕೊಳ್ಳುವುದು ಹೇಗೆ?

ಹಂತ:1 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈಗೆ ಸಂಪರ್ಕಿಸಲು, ವೈಫೈ ಆಯ್ಕೆಗಳನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ ಮತ್ತು ‘ರೈಲ್‌ವೈರ್' ಅನ್ನು ಆಯ್ಕೆ ಮಾಡಬೇಕಾಗುತ್ತದೆ.
ಹಂತ:2 ನಂತರ ನಿಮ್ಮ ವೆಬ್‌ ಬ್ರೌಸರ್ ಈಗ ಬಳಕೆದಾರರನ್ನು ರೈಲ್‌ವೈರ್ ಪೋರ್ಟಲ್‌ಗೆ ಕರೆದೊಯ್ಯುತ್ತದೆ ಮತ್ತು ಮೊಬೈಲ್ ಸಂಖ್ಯೆಯನ್ನು ಕೇಳುತ್ತದೆ.
ಹಂತ:3 ಇದೀಗ, ನಿಮ್ಮ ಫೋನ್ ಸಂಖ್ಯೆಗೆ ಒನ್‌ ಟೈಮ್‌ ಪಾಸ್‌ವರ್ಡ್ (OTP) ಕಳುಹಿಸಲಾಗುತ್ತದೆ.
ಹಂತ:4 ನಂತರ ನಿಮ್ಮ ಡಿವೈಸ್‌ ವೈಫೈ ಕನೆಕ್ಟಿವಿಟಿ ಪಡೆದುಕೊಳ್ಳಲಿದೆ. ಅಲ್ಲದೆ ವೈಫೈ ಕನೆಕ್ಟಿವಿಟಿ 30 ನಿಮಿಷಗಳವರೆಗೆ ಇರುತ್ತದೆ.
ಹಂತ:5 ವೈಫೈ 1 Mbps ವೇಗದಲ್ಲಿ ಚಲಿಸುತ್ತದೆ ಮತ್ತು 30 ನಿಮಿಷಗಳವರೆಗೆ 'ಉಚಿತ'ವಾಗಿರಲಿದೆ.
ಹಂತ:6 ವೈಫೈ ಸೌಲಭ್ಯವನ್ನು 30 ನಿಮಿಷಗಳಿಗಿಂತ ಹೆಚ್ಚು ಕಾಲ ಹೆಚ್ಚಿನ ವೇಗದಲ್ಲಿ ಬಳಸಲು, ಬಳಕೆದಾರರು ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಹಂತ:7 ಇದರಲ್ಲಿ ಪ್ಲಾನ್‌ಗಳು ದಿನಕ್ಕೆ 10ರೂ.ಗಳಿಂದ ಪ್ರಾರಂಭವಾಗುತ್ತವೆ ಮತ್ತು ಈ ಪ್ಲಾನ್‌ 5 GB ಇಂಟರ್ನೆಟ್ 34 Mbps ವೇಗದಲ್ಲಿ ಲಭ್ಯವಾಗಲಿದೆ.
ಹಂತ:8 ಈ ಪ್ಲಾನ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು ನೀವು ನೆಟ್ ಬ್ಯಾಂಕಿಂಗ್, ವ್ಯಾಲೆಟ್, ಕ್ರೆಡಿಟ್ ಕಾರ್ಡ್‌ನಂತಹ ಅನೇಕ ಪಾವತಿ ಆಯ್ಕೆಗಳನ್ನು ಬಳಸಬಹುದು.

Best Mobiles in India

Read more about:
English summary
The organization said that out of the above 6100 stations, more than 5000 stations are in rural areas.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X