Home
ಸುದ್ದಿಜಾಲ

2020 ರಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ ಯಾವುದು ಗೊತ್ತಾ?

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಲಭ್ಯವಿದ್ದು, ಪ್ರತಿನಿತ್ಯ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ನೀಡುತ್ತಲೇ ಇರುತ್ತವೆ. ಇನ್ನು ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಕೂಡ ಸ್ಮಾರ್ಟ್‌ಫೋನ್‌ ಕಂಪೆನಿಗಳಿಗೆ ದೊಡ್ಡ ಮಾರುಕಟ್ಟೆಯಾಗಿದೆ. ಇನ್ನು ಭಾರತದ ಮಾರುಕಟ್ಟೆಯಲ್ಲಿ ಹಲವಾರು ಕಂಪೆನಿಗಳು ತಮ್ಮ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸುತ್ತಲೇ ಬಂದಿವೆ. ಅದರಂತೆ 2020 ರಲ್ಲೂ ಕೂಡ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳು ಭಾರತಕ್ಕೆ ಎಂಟ್ರಿ ನೀಡಿವೆ.

ಸ್ಮಾರ್ಟ್‌ಫೋನ್‌

ಹೌದು, ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆ ಇದೆ. ದಿನ ಕಳೆದಂತೆ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ವಿಶಾಲವಾಗಿ ಬೆಳೆಯುತ್ತಿದೆ. ಇನ್ನು 2020 ರಲ್ಲಿ ಹಲವು ಕಂಪೆನಿಗಳು ತಮ್ಮ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಭಾರತದಲ್ಲಿ ಪರಿಚಯಿಸಿವೆ. ಆದರಲ್ಲಿ ಕೆಲವು ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಹಾಗಾದ್ರೆ 2020ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್ ಐಫೋನ್ 11 ಸರಣಿ

ಆಪಲ್ ಐಫೋನ್ 11 ಸರಣಿ

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಆಪಲ್ ಕಂಪೆನಿ ಐಫೋನ್‌ 11 ಸರಣಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು 2019 ರ ಕೊನೆಯಲ್ಲಿ ಪ್ರಮುಖ ಐಫೋನ್ 11 ಸರಣಿಯನ್ನು ಪರಿಚಯಿಸಿತು. ಈ ಸರಣಿಯಲ್ಲಿ ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್ ಅನ್ನು ಪರಿಚಯಿಸಿತು. ಸದ್ಯ ಆನ್‌ಲೈನ್‌ನಲ್ಲಿ ಹಲವಾರು ವರದಿಗಳ ಪ್ರಕಾರ, ಐಫೋನ್ 11 ಸರಣಿಯ ಎಲ್ಲಾ ಮಾದರಿಗಳು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ವಿಷಯದಲ್ಲಿ ಅಗ್ರಸ್ಥಾನದಲ್ಲಿವೆ. ಆಪಲ್ ಭಾರತದಲ್ಲಿ ಪ್ರಾರಂಭವಾದಾಗಿನಿಂದ ಸ್ಟ್ಯಾಂಡರ್ಡ್ ಐಫೋನ್ 11 ಮಾರಾಟ 37 ಮಿಲಿಯನ್ ಯೂನಿಟ್‌ಗಳನ್ನು ದಾಟಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S20 ಪ್ಲಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ S20 ಪ್ಲಸ್

ಇನ್ನು ಭಾರತದಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 20ಪ್ಲಸ್‌ ಕೂಡ ಒಂದಾಗಿದೆ. ಗ್ಯಾಲಕ್ಸಿ S20 ಸರಣಿಯಲ್ಲಿ ಪರಿಚಯಿಸಲಾದ ಈ ಸ್ಮಾರ್ಟ್‌ಫೋನ್‌ 2020 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಸ್ಥಾನ ಪಡೆದುಕೊಂಡಿದೆ. 2020 ರ 1ನೇ ತ್ರೈಮಾಸಿಕದಲ್ಲಿ ಇದರ ಮಾರಾಟವು 3.5 ಮಿಲಿಯನ್ ಅಂಕಗಳನ್ನು ದಾಟಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A51

ಸ್ಯಾಮ್‌ಸಂಗ್ ಗ್ಯಾಲಕ್ಸಿ A51

ಸ್ಯಾಮ್‌ಸಂಗ್ ಗ್ಯಾಲಕ್ಸಿ A51 ಸ್ಮಾರ್ಟ್‌ಫೋನ್‌ ಕೂಡ 2020 ರಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಆಗಿದೆ. ಇದು ಸಮರ್ಥ ಮಧ್ಯಮ ಶ್ರೇಣಿಯ ಯಂತ್ರಾಂಶ ಮತ್ತು ಪಾಕೆಟ್ ಸ್ನೇಹಿ ಬೆಲೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಈ ವರ್ಷ ಭಾರತದಲ್ಲಿ ಗರಿಷ್ಠ ಮಾರಾಟವನ್ನು ದಾಖಲಿಸಿದೆ. ಕಂಪನಿಯು 2020 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 11 ದಶಲಕ್ಷಕ್ಕೂ ಹೆಚ್ಚು ಮಾರಾಟ ಮಾಡಿದೆ.

ಶಿಯೋಮಿ ರೆಡ್ಮಿ ನೋಟ್ 8 ಸರಣಿ

ಶಿಯೋಮಿ ರೆಡ್ಮಿ ನೋಟ್ 8 ಸರಣಿ

ಚೀನಾದ ಕಂಪನಿ ಶಿಯೋಮಿಯ ಮಧ್ಯಮ ಶ್ರೇಣಿಯ ಕೈಗೆಟುಕುವ ಶ್ರೇಣಿಯು ಈ ವರ್ಷ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ರೆಡ್ಮಿ ನೋಟ್ 8 ಮತ್ತು ರೆಡ್ಮಿ ನೋಟ್ 8 ಪ್ರೊ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಆಂಡ್ರಾಯ್ಡ್ ಮಿಡ್-ಟಯರ್ ಸ್ಮಾರ್ಟ್‌ಫೋನ್‌ ಆಗಿದೆ. ಈ ಸರಣಿಯನ್ನು 2019 ರಲ್ಲಿ ಪರಿಚಯಿಸ ಲಾಗಿತ್ತು. ಆದರೂ 2020 ರಲ್ಲಿ ಹೆಚ್ಚಿನ ಮಾರಾಟವನ್ನು ಕಂಡಿದೆ. ಬಿಡುಗಡೆಯಾದ ದಿನದಿಂದ ಇಂದಿನವರೆಗೆ ಈ ಸ್ಮಾರ್ಟ್‌ಫೋನ್‌ ಸರಣಿ 30 ಮಿಲಿಯನ್ ಮಾರಾಟವಾಗಿದೆ ಎನ್ನಲಾಗಿದೆ.

Best Mobiles in India

English summary
we have compiled a list of the highest-selling smartphones of 2020.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+