ಫ್ರೆಂಡ್‌ಶಿಪ್ ಡೇಗೆ ಹೈಕ್‌ನಿಂದ ಸ್ಟೀಕರ್ ಲಾಂಚ್..!
ಸದ್ಯ ಮಾರುಕಟ್ಟೆಯಲ್ಲಿ ಫೇಸ್ ಬುಕ್ ಮಾಲೀಕತ್ವದ ವಾಟ್ಸ್ಆಪ್ ಗೆ ಸೆಡ್ಡು ಹೊಡೆಯುವ ಕಾರ್ಯವ ಮಾಡುತ್ತಿರುವ ಏಕೈಕ ಆಪ್ ಎಂದರೆ ಅದು ಹೈಕ್ ಮಾತ್ರವೇ. ಈಗಾಗಲೇ ತನ್ನ ನೂತನ ಪ್ಲಾನ್ ಗಳಿಂದ ಹೆಚ್ಚಿನ ಮಂದಿ ಬಳಕೆದಾರರನ್ನು ಸೆಳೆಯಲು ಮುಂದಾಗಿದೆ. ವಾಟ್ಸ್ಆಪ್ ನಲ್ಲಿಯೂ ಇಲ್ಲದ ಆಯ್ಕೆಗಳನ್ನು ಹೈಕ್ ಮೇಸೆಂಜರ್ ನಲ್ಲಿ ಕಾಣಬಹುದಾಗಿದೆ. ಇದರಲ್ಲಿರುವ ಸ್ಟೀಕರ್ ಗಳು ಹೆಚ್ಚಿನ ಖ್ಯಾತಿಯನ್ನು ಇದಕ್ಕೆ ತಂದು ಕೊಟ್ಟಿದೆ ಎಂದರೆ ತಪ್ಪಾಗುವುದಿಲ್ಲ.
ಇದೇ ಮಾದರಿಯಲ್ಲಿ ಸ್ನೇಹಿತರ ದಿನಾಚರಣೆಯಂದು ತನ್ನ ಬಳಕೆದಾದರಿಗೆ ಹೆಚ್ಚಿನ ಆಯ್ಕೆಯನ್ನು ನಿಡುವ ಸಲುವಾಗಿ ಹೈಕ್ ಮೇಸೆಂಜರ್ ಹೊಸ ಮಾದರಿಯ ಸ್ಟೀಕರ್ ಪ್ಯಾಕ್ ಅನ್ನು ಲಾಂಚ್ ಮಾಡಿದೆ. ಇದು ಸ್ನೇಹಿತರ ದಿನಾಚರಣೆಯಂದು ಬಳಕೆದಾರರಿಗೆ ಹೆಚ್ಚಿನ ಮೋಜು ಮಾಡಲು ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಡಲಿದೆ. ಇದರಿಂದಾಗಿ ಈ ಬಾರಿಯ ಸ್ನೇಹಿತರ ದಿನಾಚರಣೆಯೂ ಸಾಕಷ್ಟು ಹೆಚ್ಚಿನ ಸಂಭ್ರಮವನ್ನು ತಂದು ಕೊಡಲಿದೆ.

ಹೈಕ್ ಮೇಸೆಂಜರ್ ನಲ್ಲಿ ಸ್ಟೀಕರ್ ಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಅನೇಕ ಮಂದಿ ಇದರಲ್ಲಿ ಇರುವ ಸ್ಟೀಕರ್ ಗಳಿಗಾಗಿಯೇ ಹೈಕ್ ಮೇಸೆಂಜರ್ ಆಪ್ ಬಳಕೆ ಮಾಡುವವರನ್ನು ನಾವು ನೋಡಬಹುದಾಗಿದೆ. ಸುಮಾರು 20000ಕ್ಕೂ ಅಧಿಕ ಸ್ಟೀಕರ್ ಗಳನ್ನು ಹೈಕ್ ಬಳಕೆದಾರರಿಗೆ ನೀಡುತ್ತಿದೆ. ಇದಲ್ಲದೇ ದೇಶದಲ್ಲಿ ಬಳಕೆಯಾಗುವ ಸುಮಾರು 40ಕ್ಕೂ ಹೆಚ್ಚು ಭಾಷೆಗಳಲ್ಲಿ ಸ್ಟೀಕರ್ ಗಳನ್ನು ರಚನೆ ಮಾಡಿದೆ.
ಹೈಕ್ ಆಪ್ ಆಂಡ್ರಾಯ್ಡ್ ಮತ್ತು iOS ಗಳಲ್ಲಿ ಬಳಕೆ ಮಾಡಿಕೊಳ್ಳುವಂತೆ ವಿನ್ಯಾಸವನ್ನು ಮಾಡಿದೆ ಎನ್ನಲಾಗಿದ್ದು, ಈ ಹೊಸ ಮಾದರಿಯಲ್ಲಿ ಲಾಂಚ್ ಆಗಿರುವ ಸ್ಟೀಕರ್ ಈ ಎರಡು ಮಾದರಿಯಲ್ಲಿ ಬಳಕೆಗೆ ದೊರೆಯಲಿದೆ. ವಾಟ್ಸ್ಆಪ್ ಬಳಕೆದಾರರಿಗೆ ಇರುವ ಬಹುದೊಡ್ಡ ಕೊರತೆಯೇ ಈ ಸ್ಟೀಕರ್ ಗಳು ಎನ್ನಲಾಗಿದೆ. ಇದೊಂದು ಇದ್ದರೇ ಹೈಕ್ ತನ್ನ ಬೇಡಿಕೆಯನ್ನು ಕಳೆದುಕೊಳ್ಳಲಿದೆ. ಇದಕ್ಕಾಗಿ ದಿನಕ್ಕೊಂದು ಹೊಸ ಮಾದರಿಯ ಸ್ಟೀಕರ್ ಗಳನ್ನು ಬಳಕೆಗೆ ನಿಡುತ್ತಿದೆ.
ಹೈಕ್ ಮಾರುಕಟ್ಟೆಯಲ್ಲಿ ವಾಟ್ಸ್ಆಪ್ ಗಿಂತಲೂ ಬೆಸ್ಟ್ ಎನ್ನಿಸಿಕೊಂಡಿದ್ದರೂ ಸಹ ಹೆಚ್ಚಿನ ಪ್ರಮಾಣದಲ್ಲಿ ಖ್ಯಾತಿಯನ್ನು ಗಳಿಸಿಕೊಳ್ಳುವವಲ್ಲಿ ಕೊಂಚ ಹಿಂದುಳಿದಿದೆ. ಆದರೆ ಬಳಕೆದಾರರಿಗೆ ಬೆಸ್ಟ್ ಎನ್ನಿಸಿಕೊಳ್ಳುವ ಆಯ್ಕೆಗಳನ್ನು ಮಾರುಕಟ್ಟೆಯಲ್ಲಿಯೇ ಮೊದಲನೆಯದಾಗಿ ನೀಡುತ್ತಿದೆ ಎನ್ನಲಾಗಿದೆ. ಬಳಕೆದಾರರಿಗೆ ದೊಡ್ಡ ಮಾದರಿಯಲ್ಲಿ ಸ್ಟೀಕರ್ ಗಳನ್ನು ನೀಡುತ್ತಿದ್ದು, ಅವರ ಚಾಟಿಂಗ್ ಅನುಭವನ್ನು ಇದರಿಂದ ಉತ್ತಮ ಪಡಿಸುತ್ತಿದೆ.


Click it and Unblock the Notifications








