ಹಿಮಾಚಲದ 3,243 ಗ್ರಾಮ ಪಂಚಾಯತ್‌ಗಳಿಗೆ ಬ್ರಾಡ್‌ಬ್ಯಾಂಡ್ ಸೌಲಭ್ಯ

Posted By:

ಹಿಮಾಚಲ ಪ್ರದೇಶವು ಅತಿ ಶೀಘ್ರದಲ್ಲಿ 3,243 ಗ್ರಾಮ ಪಂಚಾಯತ್‌ಗಳನ್ನು ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕದೊಂದಿಗೆ ಸದ್ಯದಲ್ಲಿಯೇ ಸಂಪರ್ಕಗೊಳಿಸಲಿದೆ ಎಂದು ಅಧಿಕೃತ ವರದಿ ತಿಳಿಸಿದೆ.

ಹಿಮಾಚಲದ 3,243 ಗ್ರಾಮ ಪಂಚಾಯತ್‌ಗಳಿಗೆ ಬ್ರಾಡ್‌ಬ್ಯಾಂಡ್ ಸೌಲಭ್ಯ

ಇದಕ್ಕಾಗಿ ರಾಷ್ಟ್ರೀಯ ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ಪ್ರಾಜೆಕ್ಟ್ ಅನ್ನು ಸರಕಾರವು ಅಳವಡಿಸುತ್ತಿದೆ ಎಂದು ಹೇಳಿಕೆಯಲ್ಲಿ ಲಭ್ಯವಾಗಿದೆ. ಪ್ರಸ್ತುತ ಆಪ್ಟಿಕಲ್ ಫೈಬರ್ ಕೇಬಲ್ ಸಂಪರ್ಕ ರಾಜ್ಯದ ರಾಜಧಾನಿಯಲ್ಲಿ ಮಾತ್ರ ಲಭ್ಯವಿದ್ದು, ನಂತರ ಜಿಲ್ಲಾ ಮುಖ್ಯಕಚೇರಿ ತದನಂತರ ಬ್ಲಾಕ್ ಲೆವಲ್‌ಗೆ ಇದು ವಿಸ್ತರಿತವಾಗಲಿದೆ.

ಓದಿರಿ: ಗ್ರಾಹಕರಿಗೆ ಚಳ್ಳೆಹಣ್ಣು ತಿನ್ನಿಸುವ ಬ್ರ್ಯಾಂಡ್ ಉತ್ಪನ್ನಗಳು

ಬಿಎಸ್‌ಎನ್‌ಎಲ್ ಈ ಕೂಡ ಈ ಯೋಜನೆಯಲ್ಲಿ ಕೈಜೋಡಿಸಲಿದ್ದು ಹೆಚ್ಚು ಸುಧಾರಿತ ಮಾಹಿತಿ ಮತ್ತು ಸಾರ್ವಜನಿಕ ಸೇವೆಗಳನ್ನು ಒದಗಿಸುವುದೇ ಯೋಜನೆಯ ಗುರಿಯಾಗಿದೆ.

ಇ-ವಿದ್ಯಾಭ್ಯಾಸ, ಇ-ಆರೋಗ್ಯ, ಇ-ಬ್ಯಾಂಕಿಂಗ್ ಮತ್ತು ಇ-ವ್ಯವಸಾಯವನ್ನು ಮತ್ತಷ್ಟು ಪುಷ್ಟೀಕರಿಸುವ ಧ್ಯೇಯವನ್ನು ಈ ಯೋಜನೆ ಹೊಂದಿದೆ.

English summary
Himachal Pradesh will soon connect all the 3,243 gram panchayats with broadband internet connectivity, an official said here on Friday.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot