ಹಿಸೆನ್ಸ್ ಸಂಸ್ಥೆಯಿಂದ ಹೊಸ ಹಿಸೆನ್ಸ್ A85K ಸ್ಮಾರ್ಟ್‌ಟಿವಿ ಅನಾವರಣ! ಅತ್ಯಾಕರ್ಷಕ ಡಿಸ್‌ಪ್ಲೇ ವಿನ್ಯಾಸ!
ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಹಿಸೆನ್ಸ್ ಕಂಪೆನಿಯ ಟಿವಿಗಳಿಗೆ ಭಾರಿ ಕ್ರೇಜ್ ಇದೆ. ನವೀನ ಮಾದರಿಯ ತಂತ್ರಜ್ಞಾನ ಮತ್ತು ಬಿಗ್ ಸೈಜ್ ಟಿವಿಗಳಿಗೆ ಹಿಸೆನ್ಸ್ ಬ್ರ್ಯಾಂಡ್ ಪ್ರಸಿದ್ಧಿ ಪಡೆದುಕೊಂಡಿದೆ. ಸದ್ಯ ಇದೀಗ ಹಿಸೆನ್ಸ್ ಕಂಪೆನಿ ಹೊಸ A85K OLED ಟಿವಿ ಸರಣಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 55-ಇಂಚಿನ ಮತ್ತು 65-ಇಂಚಿನ ಟಿವಿಗಳನ್ನು ಪರಿಚಯಿಸಲಾಗಿದೆ.
ಹೌದು, ಹಿಸೆನ್ಸ್ ಕಂಪೆನಿ ಹೊಸ ಹಿಸೆನ್ಸ್ A85K ಟಿವಿ ಸರಣಿಯನ್ನು ಅನಾವರಣಗೊಳಿಸಿದೆ. ಇನ್ನು ಈ ಸರಣಿಯ ಸ್ಮಾರ್ಟ್‌ಟಿವಿಗಳು DCI-P3 ಕಲರ್ ಸ್ಪೇಸ್ 97% ಅನ್ನು ಒಳಗೊಂಡಿರುವ ಡಿಸ್‌ಪ್ಲೇ ಹೊಂದಿವೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಹಿಸೆನ್ಸ್ A85K ಸ್ಮಾರ್ಟ್‌ಟಿವಿ ನವೀನ ಮಾದರಿಯ ಡಿಸ್‌ಪ್ಲೇ ಡಿಸೈನ್ ಅನ್ನು ಹೊಂದಿದೆ. ಇದು 55-ಇಂಚಿನ ಮತ್ತು 65-ಇಂಚಿನ ಡಿಸ್‌ಪ್ಲೇ ಆಯ್ಕೆಗಳಲ್ಲಿ ಬರಲಿದೆ. ಇನ್ನು ಈ ಡಿಸ್‌ಪ್ಲೇ 150,000:1 ರಚನೆಯ ಅನುಪಾತವನ್ನು ಪಡೆದಿದೆ. ಈ ಸ್ಮಾರ್ಟ್‌ಟಿವಿ ಟಿವಿ ಡಾಲ್ಬಿ ವಿಷನ್ IQ, HDR10+ ಮತ್ತು HLG ಅನ್ನು ಬೆಂಬಲಿಸಲಿದೆ. ಜೊತೆಗೆ ಸ್ಮಾರ್ಟ್‌ಟಿವಿ 4K ಅಪ್‌ಸ್ಕೇಲಿಂಗ್, MEMC ಮೋಷನ್ ಸ್ಮೂತಿಂಗ್ ಮತ್ತು ನಾಯ್ಸ್ ಕ್ಯಾನ್ಸಲೇಶನ್ ಡಿವೈಸ್‌ನೊಂದಿಗೆ ಬರುತ್ತದೆ.
ಹಿಸೆನ್ಸ್ A85K ಸ್ಮಾರ್ಟ್‌ಟಿವಿ ಗೇಮರ್‌ಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ ಗೇಮ್ ಮೋಡ್ ಪ್ರೊ ಇನ್‌ಪುಟ್ ಲ್ಯಾಗ್ ಅನ್ನು ಕೇವಲ 9ms ಗೆ ಕಡಿಮೆ ಮಾಡಲಿದೆ. ಜೊತೆಗೆ ಸ್ಮಾರ್ಟ್‌ಟಿವಿ ಎಎಮ್‌ಡಿ ಫ್ರೀಸಿಂಕ್ ಪ್ರೀಮಿಯಂ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ಟಿವಿ ಆರು ಇನ್‌ಬಿಲ್ಟ್ 10W ಸ್ಪೀಕರ್‌ಗಳನ್ನು ಹೊಂದಿದ್ದು. ಸ್ಮಾರ್ಟ್‌ಟಿವಿ ಡಾಲ್ಬಿ ಅಟ್ಮೋಸ್ ಮತ್ತು ಡಿಟಿಎಸ್ ವರ್ಚುವಲ್:X ಗೆ ಹೊಂದಿಕೆಯಾಗಲಿದೆ.

ಇನ್ನು ಸ್ಮಾರ್ಟ್‌ಟಿವಿ ಮಾದರಿಯು VIDAA U7.0 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು Netflix, Disney+ ಮತ್ತು YouTube ಸೇರಿದಂತೆ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಒದಗಿಸಲಿದೆ. ಹಿಸೆನ್ಸ್ A85K ಸ್ಮಾರ್ಟ್‌ಟಿವಿ ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ 5.0 ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ HDMI 2.1, HDMI 2.0, USB 3.0, ಮತ್ತು USB 2.0 ಪೋರ್ಟ್‌ಗಳನ್ನು ಬೆಂಬಲಿಸಲಿದೆ.
ಹಿಸೆನ್ಸ್ A85K ಸ್ಮಾರ್ಟ್‌ಟಿವಿ ಮೀಡಿಯಾಟೆಕ್ MT9618 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಅಮೆಜಾನ್ ಅಲೆಕ್ಸಾ ಅಥವಾ ಗೂಗಲ್ ಅಸಿಸ್ಟೆಂಟ್ ವಾಯ್ಸ್ ಕಮಾಂಡ್‌ಗಳನ್ನು ಬಳಸಿಕೊಂಡು ಕಂಟ್ರೋಲ್ ಮಾಡಬಹುದು. ಸದ್ಯ ಈ ಸ್ಮಾರ್ಟ್‌ಟಿವಿ ಬಿಡುಗಡೆ ದಿನಾಂಕ ಮತ್ತು ಬೆಲೆಯನ್ನು ಇನ್ನೂ ಘೋಷಿಸಿಲ್ಲ, ಆದರೆ OLED ಟಿವಿಗಳಿಗೆ ಬಂದಾಗ ಹೆಚ್ಚಿನ ಬೆಲೆಯಲ್ಲಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಇನ್ನು ಕಳೆದ ವರ್ಷ ಹಿಸೆನ್ಸ್ ಕಂಪೆನಿ ಭಾರತದಲ್ಲಿ 120-ಇಂಚಿನ 4K ಸ್ಮಾರ್ಟ್ ಲೇಸರ್ ಟಿವಿ, 120L9G ಅನ್ನು ಬಿಡುಗಡೆ ಮಾಡಿತ್ತು. ಹಿಸೆನ್ಸ್ ಕಂಪೆನಿ ತನ್ನ ಲೇಸರ್ ಟಿವಿ ಆವಿಷ್ಕಾರಗಳಿಗಾಗೊ ಜಾಗತಿಕವಾಗ ಅತಿ ಹೆಚ್ಚು ಪ್ರಶಸ್ತಿ ಹಾಗೂ ಮನ್ನಣೆ ಪಡೆದ ಬ್ರ್ಯಾಂಡ್ ಎನಿಸಿಕೊಂಡಿದೆ. 120-ಇಂಚಿನ 4K ಸ್ಮಾರ್ಟ್ ಲೇಸರ್ ಟಿವಿ ಮೊದಲ 4K ಸ್ಮಾರ್ಟ್ ಲೇಸರ್ ಟಿವಿ ಆಗಿದೆ. ಇನ್ನು 120-ಇಂಚಿನ 4K ಸ್ಮಾರ್ಟ್ ಲೇಸರ್ ಟಿವಿ ಹೋಮ್ ಎಂಟರ್‌ಟೈನ್‌ಮೆಂಟ್ ಅನ್ನು ಇನ್ನಷ್ಟು ಹೊಸ ಅನುಭವದೊಂದಿಗೆ ನೀಡಲಿದೆ. ಇದು ವಿಶ್ವದಲ್ಲೇ ಮೊದಲ ಬಾರಿಗೆ ಟ್ರಿಪಲ್ ಕಲರ್ ಲೇಸರ್ ತಂತ್ರಜ್ಞಾನವನ್ನು ಒಳಗೊಂಡಿರುವ ಸ್ಮಾರ್ಟ್‌ಟಿವಿ ಆಗಿದೆ. ಇದರಲ್ಲಿ ಶುದ್ಧಕೆಂಪು, ಹಸಿರು ಮತ್ತು ಬ್ಲೂ ಲೇಸರ್‌ಗಳನ್ನು ನೀಡಲಾಗಿದೆ. ನ್ಯೂ ಕಲರ್ ಕಾರ್ಯಕ್ಷಮತೆಯನ್ನು ಸಾಧಿಸಲು BT.2020 ಕಲರ್ ಸ್ಪೇಸ್ 107% ಅನ್ನು ತಲುಪುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.


Click it and Unblock the Notifications








