ಹಿಸ್ಸೆನ್ಸ್‌ ಸಂಸ್ಥೆಯಿಂದ ಎರಡು ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ!

|

ಸ್ಮಾರ್ಟ್‌ಫೋನ್‌ ವಲಯದಲ್ಲಿ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ನಾವು ಕಾಣಬಹುದಾಗಿದೆ. ಹಲವು ಕಂಪೆನಿಗಳು ತಮ್ಮ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿವೆ. ತಮ್ಮ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸ್ಮಾರ್ಟ್‌ಫೋನ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಾಗಿ ಗುರುತಿಸಿಕೊಂಡಿವೆ. ಇನ್ನ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು ಸಾಕಷ್ಟು ಸೌಂಡ್‌ ಮಾಡ್ತಿರೋದು ನಿಮಗೆಲ್ಲಾ ಗೊತ್ತಿದೆ. ಹಲವು ಸ್ಮಾರ್ಟ್‌ಫೋನ್‌ಗಳ ಕಂಪೆನಿಗಳಲ್ಲಿ ಹಿಸ್ಸೆನ್ಸ್‌ ಕಂಪೆನಿ ಕೂಡ ಒಂದಾಗಿದ್ದು, ಇದೀಗ ತನ್ನ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದೆ.

ಹೌದು

ಹೌದು, ಚೀನಾ ಮೂಲದ ಸ್ಮಾರ್ಟ್‌ಫೋನ್‌ ತಯಾರಕ ಹಿಸ್ಸೆನ್ಸ್ ಕಂಪೆನಿ ತನ್ನ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ. ಇ-ಇಂಕ್‌ ಸ್ಕ್ರೀನ್‌ ಹೊಂದಿರುವ A5C ಮತ್ತು A5 ಪ್ರೋ CC ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಹ್ಯಾಂಡ್‌ಸೆಟ್‌ಗಳು ಕಲರ್‌ಪುಲ್‌ ಸ್ಕ್ರೀನ್‌ ಹೊಂದಿರುವ ಇ-ಪೇಪರ್ ಟೆಕ್ನಾಲಜಿಯನ್ನ ಬೆಂಬಲಿಸುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ ಮೂಲ ಕಪ್ಪು ಮತ್ತು ವೈಟ್‌ ಬಣ್ಣದ ಸ್ಕ್ರೀನ್‌ ಹೊಂದಿರುವ ಫಿಲ್ಟರ್‌ಗಳ ಪದರವನ್ನು ಸೇರಿಸುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಇನ್ನು ಹಿಸ್ಸೆನ್ಸ್ A5C A5 ಪ್ರೋ ಹ್ಯಾಡ್‌ಸೆಟ್‌ಗಳು 5.84 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, A5Pro ಕನಿಷ್ಠ ಸಂಯೋಜಿತ 3D ಬ್ಯಾಕ್‌ಪ್ಲೇನ್ ಆರ್ಕ್ ವಿನ್ಯಾಸವನ್ನು ಹೊಂದಿದೆ. ಅಲ್ಲದೆ ಈ ಹ್ಯಾಡ್‌ಸೆಟ್‌ಗಳು ಬೇಬಿ-ಸ್ಕಿನ್ ಟೆಕ್ಸ್ಚರ್ ಪೇಂಟ್ ಸಿಂಪಡಿಸುವ ಪ್ರಕ್ರಿಯೆಯನ್ನು ಹೊಂದಿವೆ. ಅಲ್ಲದೆ ಕಲರ್‌ ಸ್ಕ್ರೀನ್‌ಗೆ ಸಂಬಂಧಿಸಿದಂತೆ A5c ಮೂರು ಬಣ್ಣಗಳನ್ನು ಹೊಂದಿದೆ

ಪ್ರೊಸೆಸರ್‌

ಪ್ರೊಸೆಸರ್‌

ಇನ್ನು ಹಿಸ್ಸೆನ್ಸ್ A5 ಪ್ರೋ ಯುನಿಸಾಕ್ ಟಿ 610 ಪ್ರೊಸೆಸರ್ ಅನ್ನು ಹೊಂದಿದೆ. ಜೊತೆಗೆ ಹೊಸ ವೇಗದ ರಿಫ್ರೆಶ್ ಮೋಡ್‌ ಅನ್ನು ಹೊಂದಿದೆ. ಇನ್ನು ಇದು ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ A5c ಹ್ಯಾಡ್‌ಸೆಟ್‌ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 439 ಪ್ರೊಸೆಸರ್,ಹೊಂದಿದೆ. ಹಾಗೇಯೇ ಈ ಎರಡು ಸ್ಮಾರ್ಟ್‌ಫೋನ್‌ಗಳು 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನ ಹೊಂದಿವೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಹಿಸ್ಸೆನ್ಸ್‌ ಕಂಪೆನಿಯ ಈ ಎರಡು ಹೊಸ ಹ್ಯಾಡ್‌ಸೆಟ್‌ಗಳು ಸಿಂಗಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿವೆ. ಇದರಲ್ಲಿ ರಿಯರ್‌ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿವೆ. ಹಾಗೇಯೇ 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನ ಒಳಗೊಂಡಿವೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಹಿಸ್ಸೆನ್ಸ್‌ ಕಂಪೆನಿ ಈ ಎರಡು ಸ್ಮಾರ್ಟ್‌ಫೋನ್‌ಗಳು 4000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿದ್ದು, ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುವುದರ ಬಗ್ಗೆ ಮಾಹಿತಿ ಇಲ್ಲ. ಅಲ್ಲದೆ ಇದು ಟೈಪ್-ಸಿ ಚಾರ್ಜಿಂಗ್ ಇಂಟರ್ಫೇಸ್ ಅನ್ನು ಬೆಂಬಲಿಸಲಿದೆ. ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌ ಅನ್ನು ಬೆಂಬಲಿಸಿವೆ. ಇನ್ನು ಸ್ಟ್ಯಾಂಡರ್ಡ್ ಹಿಸ್ಸೆನ್ಸ್ A5c ಬೆಲೆಯನ್ನು RMB 1599 ಕ್ಕೆ ನಿಗದಿಪಡಿಸಲಾಗಿದೆ, ಇದು ಭಾರತದಲ್ಲಿ ಸುಮಾರು 17,200 ರೂ. ಹೊಂದಿರುವ ಸಾಧ್ಯತೆ ಇದೆ. ಹಾಗೇಯೇ ಹಿಸ್ಸೆನ್ಸ್ A5 ಪ್ರೋ CC ಯ 4GB RAM + 64GB ಶೇಖರಣಾ ಮಾದರಿಯ ಬೆಲೆ RMB 1,799 (ಅಂದಾಜು 19,409 ರೂ.).ಬೆಲೆಯನ್ನ ಹೊಂದಿದೆ.

Best Mobiles in India

English summary
Hisense has launched two new A5C and A5Pro CC phones with a color e-ink screen. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X