ಭಾರತಕ್ಕೆ ಬರುತ್ತೆ ಹೊಸ HMD ಫೋನ್; ಅತ್ಯಂತ ಅಗ್ಗದ ಬೆಲೆ, ವಿಶೇಷತೆಗಳೇನು ಗೊತ್ತಾ?
ಹೆಚ್‌ಎಂಡಿ ಸಂಸ್ಥೆಯು ಭಾರತದಲ್ಲಿ ಹೊಸ ಮೊಬೈಲ್ ಬಿಡುಗಡೆಗೆ ಸಜ್ಜಾಗಿದೆ. ಇದನ್ನು 10,000 ರೂ.ಗಳ ಬಜೆಟ್‌ನಲ್ಲಿ ಪರಿಚಯಿಸಲಿದೆ. ಹೌದು, ಕಂಪನಿಯು ಕಳೆದ ವರ್ಷ ಆಗಸ್ಟ್‌ನಲ್ಲಿ ಹೆಚ್‌ಎಂಡಿ ಬಾರ್ಬಿ ಫ್ಲಿಪ್ (HMD Barbie Flip) ಫೋನನ್ನು ಬಿಡುಗಡೆ ಮಾಡಿತ್ತು. ಆದರೆ, ಇದು ಕೆಲವು ಮಾರುಕಟ್ಟೆಗಳಲ್ಲಿ ಮಾತ್ರ ಲಭ್ಯವಿತ್ತು. ಇದೀಗ, ಕಂಪನಿಯು ಭಾರತದಲ್ಲಿ ಹೆಚ್‌ಎಂಡಿ ಬಾರ್ಬಿ ಫ್ಲಿಪ್ ಫೋನನ್ನು ಬಿಡುಗಡೆ ಮಾಡುವುದಾಗಿ ದೃಢಪಡಿಸಿದೆ. ಈ ಫ್ಲಿಪ್ ಫೋನ್ ಸಂಪೂರ್ಣವಾಗಿ ಬಾರ್ಬಿ ಥೀಮ್ ಹೊಂದಿದೆ. ಇದು ಗುಲಾಬಿ ಬಣ್ಣದಲ್ಲಿ ಬರುತ್ತದೆ.
ಹೆಚ್‌ಎಂಡಿ ಬಾರ್ಬಿ ಫ್ಲಿಪ್ ಫೋನ್ 2000ರ ದಶಕವನ್ನು ನೆನಪಿಸುತ್ತದೆ. ಇದಲ್ಲದೆ ಡಿಜಿಟಲ್ ಡಿಟಾಕ್ಸ್‌ಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಫೋನಿನ ವಿಶೇಷತೆಗಳನ್ನು ನೋಡುವುದಾದರೆ, ಇದು ಯುನಿಸಾಕ್ T107 ಪ್ರೊಸೆಸರ್ ಹೊಂದಿರುತ್ತದೆ. ಈ ಮೊಬೈಲ್ 64MB RAM + 128MB ಆಂತರಿಕ ಸ್ಟೋರೇಜ್ ಒಳಗೊಂಡಿರುತ್ತದೆ. ಇದು 2.8 ಇಂಚಿನ ಆಂತರಿಕ ಡಿಸ್ಪ್ಲೇ ಮತ್ತು 1.77 ಇಂಚಿನ ಬಾಹ್ಯ ಡಿಸ್ಪ್ಲೇಯನ್ನು ಹೊಂದರಲಿದೆ. ಹಾಗೆಯೇ 1450mAh ಬ್ಯಾಟರಿ, S30+ ಆಪರೇಟಿಂಗ್ ಸಿಸ್ಟಂ, ಸಿಂಗಲ್ VGA ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.

ಹೆಚ್‌ಎಂಡಿ ಬಾರ್ಬಿ ಫ್ಲಿಪ್ ಟೀಸರ್ ಬಿಡುಗಡೆ
ಹೆಚ್‌ಎಂಡಿ ತನ್ನ ಎಕ್ಸ್ ಖಾತೆಯಲ್ಲಿ ಹೆಚ್‌ಎಂಡಿ ಬಾರ್ಬಿ ಫ್ಲಿಪ್ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಆದರೆ, ಕಂಪನಿಯು ಬಿಡುಗಡೆ ದಿನಾಂಕವನ್ನು ಮಾತ್ರ ಬಹಿರಂಗಪಡಿಸಿಲ್ಲ. ಈ ಮೊಬೈಲ್ HMD.com ನಲ್ಲಿ ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಅಂದರೆ, ಬಾರ್ಬಿ ಫ್ಲಿಪ್ ಫೋನ್ ಇತರ ಚಿಲ್ಲರೆ ವ್ಯಾಪಾರಿಗಳ ಮೂಲಕ ಮಾರಾಟಕ್ಕೆ ಲಭ್ಯವಿರುವುದಿಲ್ಲ. ಈ ಹೆಚ್‌ಎಂಡಿ ಬಾರ್ಬಿ ಫ್ಲಿಪ್ ಫೋನ್ 'ಪವರ್ ಪಿಂಕ್' ಬಣ್ಣದಲ್ಲಿ ಬರುತ್ತದೆ. ಇದರಲ್ಲಿ ಯಾವುದೇ ಸೋಶಿಯಲ್ ಮೀಡಿಯಾ (ಸಾಮಾಜಿಕ ಮಾಧ್ಯಮ) ಅಪ್ಲಿಕೇಶನ್‌ಗಳಿಲ್ಲ ಮತ್ತು ಕೇವಲ ಮೂಲಭೂತ ವೈಶಿಷ್ಟ್ಯಗಳಿವೆ.
ಹೆಚ್‌ಎಂಡಿ ಬಾರ್ಬಿ ಫ್ಲಿಪ್ ಬೆಲೆ (ನಿರೀಕ್ಷಿತ)
ಅಮೆರಿಕ, ಯುಕೆ ಮತ್ತು ಯುರೋಪ್‌ನಲ್ಲಿ ಹೆಚ್‌ಎಂಡಿ ಬಾರ್ಬಿ ಫ್ಲಿಪ್ ಫೋನಿನ ಬೆಲೆ ಸುಮಾರು 10,000 ರೂ.ನಿಂದ 12,000 ರೂ. ವರೆಗೆ ಇದೆ. ಭಾರತದಲ್ಲಿ ಈ ಮೊಬೈಲ್ ಬೆಲೆಯೂ ಇದೇ ಬಜೆಟ್‌ನಲ್ಲಿ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಸಾಮಾನ್ಯ ಫ್ಲಿಪ್ ಫೀಚರ್ ಫೋನ್ ಅಲ್ಲದ ಕಾರಣ, ಕಂಪನಿಯು ಇದರ ಬೆಲೆಯನ್ನು ಸ್ವಲ್ಪ ಹೆಚ್ಚಿಸಬಹುದು.

ಹೆಚ್‌ಎಂಡಿ ಬಾರ್ಬಿ ಫ್ಲಿಪ್ ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಹೆಚ್‌ಎಂಡಿ ಬಾರ್ಬಿ ಫ್ಲಿಪ್ ಸ್ಮಾರ್ಟ್‌ಫೋನ್ 2.8 ಇಂಚಿನ QGVA ಆಂತರಿಕ ಡಿಸ್ಪ್ಲೇ ಹೊಂದಿರುತ್ತದೆ. ಹಾಗೆಯೇ 1.77 ಇಂಚಿನ ಬಾಹ್ಯ ಡಿಸ್ಪ್ಲೇಯೊಂದಿಗೆ ಬರುತ್ತದೆ.
ಪ್ರೊಸೆಸರ್ ಸಾಮರ್ಥ್ಯ
ಹೆಚ್‌ಎಂಡಿ ಬಾರ್ಬಿ ಫ್ಲಿಪ್ ಮೊಬೈಲ್ ಯುನಿಸಾಕ್ T107 ಪ್ರೊಸೆಸರ್ ಹೊಂದಿರುತ್ತದೆ. ಈ ಫೋನ್ S30+ ಆಪರೇಟಿಂಗ್ ಸಿಸ್ಟಮ್ ನೊಂದಿಗೆ ಕೆಲಸ ಮಾಡುತ್ತದೆ. ಇದು 64MB RAM, 128MB ಆಂತರಿಕ ಸ್ಟೋರೇಜ್ ಆಯ್ಕೆ ಒಳಗೊಂಡಿರುತ್ತದೆ. ನೀವು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 32GB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.
ಕ್ಯಾಮೆರಾ ಸೆಟಪ್
ಹೆಚ್‌ಎಂಡಿ ಬಾರ್ಬಿ ಫ್ಲಿಪ್ ಫೋನ್ ಕ್ಯಾಮೆರಾ ಸೆಟಪ್ ವಿಶೇಷವಾಗಿರುತ್ತದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಶ್ ಹೊಂದಿರುವ ಸಿಂಗಲ್ VGA ಹಿಂಬದಿಯ ಕ್ಯಾಮೆರಾ ಇರುತ್ತದೆ.
ಬ್ಯಾಟರಿ ಬ್ಯಾಕಪ್
ಹೆಚ್‌ಎಂಡಿ ಬಾರ್ಬಿ ಫ್ಲಿಪ್ ಸ್ಮಾರ್ಟ್‌ಫೋನ್ 1450mAh ಬ್ಯಾಟರಿ ಹೊಂದಿರುತ್ತದೆ. ಇದು 9 ಗಂಟೆಗಳ ಟಾಕ್ ಟೈಮ್ ಅನ್ನು ಒದಗಿಸುತ್ತದೆ. ಈ ಮೊಬೈಲ್ ಡ್ಯುಯಲ್ ಸಿಮ್, 4G LTE, ಎಫ್‌ಎಂ ರೇಡಿಯೋ, 3.5mm ಹೆಡ್‌ಫೋನ್ ಜ್ಯಾಕ್, MP3 ಪ್ಲೇಯರ್, ಯುಎಸ್‌ಬಿ ಟೈಪ್ ಸಿ ಪೋರ್ಟ್, ಬ್ಲೂಟೂತ್ 5.0 ಸೇರಿದಂತೆ ಹಲವು ಕನೆಕ್ಟಿವಿಟಿ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.


Click it and Unblock the Notifications








