HMD ಬ್ರ್ಯಾಂಡ್‌ನ ಮೊದಲ ಸ್ಮಾರ್ಟ್‌ಪೋನ್‌ನಲ್ಲಿರಲಿದೆ ಈ ಕ್ಯಾಮೆರಾ: ಟೆಕ್ ವಲಯದಲ್ಲಿ ಹೊಸ ಕಂಪನ!
HMD ಗ್ಲೋಬಲ್ ತನ್ನದೇ ಸ್ವಂತ ಬ್ರ್ಯಾಂಡ್ ಹೆಸರಿನ ಫೋನ್ ಪರಿಚಯಿಸುವುದಕ್ಕೆ ತಯಾರಿ ನಡೆಸಿದೆ. ಈ ವಿಚಾರ ಈಗಾಗಲೇ ಮೊಬೈಲ್ ಜಗತ್ತಿನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದೀಗ ಈ ಸ್ಮಾರ್ಟ್‌ಫೋನ್ ಕುರಿತಂತೆ ಹೊಸ ವಿಚಾರವೊಂದು ಬಹಿರಂಗವಾಗಿದೆ. ಅದೆನೆಂದರೆ ಈ ಸ್ಮಾರ್ಟ್‌ಫೋನ್ 108MP ಸೆನ್ಸಾರ್ ಒಳಗೊಂಡ ಡ್ಯುಯಲ್ ಕ್ಯಾಮೆರಾ ಹೊಂದಿರಲಿದೆ.
ಹೌದು, HMD ಗ್ಲೋಬಲ್‌ನ ಮೊದಲ ಸ್ಮಾರ್ಟ್‌ಫೋನಿನ ಕ್ಯಾಮೆರಾ ಫೀಚರ್ಸ್ ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ. ಈ ಸ್ಮಾರ್ಟ್‌ಫೋನ್ ಕ್ಯಾಮೆರಾ ವಿನ್ಯಾಸ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ತಕ್ಷಣವೇ ಟೆಕ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಸದ್ಯ ಸೋರಿಕೆಯಾಗಿರುವ ಇಮೇಜ್‌ನಲ್ಲಿ ಸಯಾನ್ ಕಲರ್ ಆಯ್ಕೆಯಲ್ಲಿ ಈ ಫೋನ್ ಕಾಣಿಸಿಕೊಂಡಿದೆ. ಫೋನ್‌ನ ಹಿಂಭಾಗದಲ್ಲಿ HMD ಬ್ರ್ಯಾಂಡಿಂಗ್ ಕೂಡ ಕಾಣಿಸಿದೆ. ಹಾಗಾದ್ರೆ HMD ಗ್ಲೋಬಲ್ನ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ನಿರೀಕ್ಷಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

HMD ಗ್ಲೋಬಲ್ ಫೋನ್ ಬಗ್ಗೆ ಹೆಚ್ಚಾಯ್ತು ನಿರೀಕ್ಷೆ?
HMD ಗ್ಲೋಬಲ್ 108MP ಕ್ಯಾಮೆರಾ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಈ ಮೂಲಕ ಈ ಸ್ಮಾರ್ಟ್‌ಫೋನ್ ಮಿಡ್‌ರೇಂಜ್ ಪ್ರೈಸ್‌ಟ್ಯಾಗ್‌ನಲ್ಲಿ ಬರುವ ಸೂಚನೆಯನ್ನು ನೀಡಿದೆ. ಸದ್ಯ ಸೋರಿಕೆಯಾದ ರೆಂಡರ್‌ನಲ್ಲಿ ಮಹಿಳೆಯೊಬ್ಬರು ಸಯಾನ್ ಬಣ್ಣದ ಸ್ಮಾರ್ಟ್‌ಫೋನ್ ಮೇಲೆ ಕುಳಿತಿರುವುದನ್ನು ಕಾಣಬಹುದು. ಇದು ಹಿಂಭಾಗದಲ್ಲಿ HMD ಬ್ರ್ಯಾಂಡಿಂಗ್ ಹೊಂದಿದೆ. ಅಲ್ಲದೆ ಕ್ಯಾಮೆರಾ ರಿಂಗ್‌ಗಳ ಸುತ್ತಲೂ ಸಿಯಾನ್ ಉಚ್ಚಾರಣೆಯೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇರಲಿದೆ ಎನ್ನಲಾಗಿದೆ.
ಇನ್ನು ಹಿಂಭಾಗದ ಕ್ಯಾಮೆರಾ ಮಾಡ್ಯೂಲ್‌ನಲ್ಲಿ "108MP OIS" ಬ್ಯಾಡ್ಜಿಂಗ್ ಅನ್ನು ಸಹ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಈ ಸ್ಮಾರ್ಟ್‌ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಬೆಂಬಲದೊಂದಿಗೆ 108MP ಕ್ಯಾಮೆರಾ ಸೆನ್ಸಾರ್‌ನಲ್ಲಿರಲಿದೆ ಅನ್ನೊದು ಕನ್ಫರ್ಮ್ ಆಗಿದೆ. ಸದ್ಯ ಇದು ಪ್ರಮೋಷನ್ ಸ್ಟಂಟ್ ಎಂದು ಅನಿಸಿದರೂ ಸ್ಮಾರ್ಟ್‌ಪೋನ್‌ನ ಲಾಂಚ್ ಟೀಸರ್‌ನಲ್ಲಿ ಈ ಮೊಬೈಲ್‌ನ ಕ್ಯಾಮೆರಾ ವಿವರಗಳ ಕುತೂಹಲಕ್ಕೆ ತೆರೆಬಿಳಲಿದೆ.

HMD ಗ್ಲೋಬಲ್ ಆರಂಭದಲ್ಲಿ ಬಜೆಟ್ ಮತ್ತು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. HMD ಗ್ಲೋಬಲ್ ಗೆ ಮೊಬೈಲ್ ಪರಿಚಯಿಸುವುದು ಹೊಸತೇನಲ್ಲ, ಇಲ್ಲಿಯವರೆಗೆ ನೋಕಿಯಾ ಫೋನ್‌ಗಳನ್ನು ಪರಿಚಯಿಸಿರುವ ತನ್ನದೇ ಬ್ರ್ಯಾಂಡ್ ಹೆಸರಿನಲ್ಲಿ ಇದೇ ಮೊದಲ ಭಾರಿಗೆ ಪರಿಚಯಿಸುತ್ತಿರುವುದು ವಿಶೇಷವಾಗಿದೆ. ಇದೆಲ್ಲವೂ ಮೊಬೈಲ್ ಮಾರುಕಟ್ಟೆಯಲ್ಲಿ ಸಹಜವಾಗಿಯೇ HMD ಗ್ಲೋಬಲ್ನ ಫೋನ್ ಬಗ್ಗೆ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.
HMD ಗ್ಲೋಬಲ್‌ಗೆಭಾರತವೇ ಮೊದಲ ಆದ್ಯತೆ
HMD ಗ್ಲೋಬಲ್ ಗೆ ಭಾರತವೇ ಮೊದಲ ಆದ್ಯತೆಯ ಮಾರುಕಟ್ಟೆಯಾಗಲಿದೆ ಎಂದು ಹೇಳಲಾಗಿದೆ. ಇದರ ಬಗ್ಗೆ ಭಾರತದ HMD ಗ್ಲೋಬಲ್ ಉಪಾಧ್ಯಕ್ಷರಾಗಿರುವ ರವಿ ಕುನ್ವಾರ್ ಮಾಹಿತಿ ನೀಡಿದ್ದಾರೆ. ಅದರಿಂದ HMD ಗ್ಲೋಬಲ್‌ನ ಎಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿಯೇ ತಯಾರಿಸಲಾಗುವುದು ಎಂದು ಹೇಳಿದ್ದಾರೆ. ಇನ್ನು HMD ಗ್ಲೋಬಲ್ 2024 ರ ಮೊದಲಾರ್ಧದಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಇದೆ ಸಂದರ್ಭದಲ್ಲಿ ನೀವು ಗಮನಿಸಲೇಬೇಕಾದ ವಿಷಯ ಮತ್ತೊಂದಿದೆ. ಅದೆನೆಂದರೆ HMD ಗ್ಲೋಬಲ್ ತನ್ನ ಸ್ವಂತ ಬ್ರ್ಯಾಂಡ್ ಹೆಸರಿನಲ್ಲಿ ಪೋನ್ ಪರಿಚಯಿಸದ ಮಾತ್ರ ನೋಕಿಯಾ -ಬ್ರಾಂಡ್ ಸ್ಮಾರ್ಟ್‌ಫೋನ್‌ಗಳಿಗೆ ವಿದಾಯ ಹೇಳುತ್ತಿಲ್ಲ. HMD ಮತ್ತು Nokia ಬ್ರಾಂಡ್ ಸ್ಮಾರ್ಟ್‌ಫೋನ್‌ಗಳು ಕೂಡ ಮಾರುಕಟ್ಟೆಗೆ ಎಂಟ್ರಿ ನೀಡುವುದು ಮುಮದುವರೆಯಲಿದೆ. ಆದರೆ ಗ್ರಾಹಕರ ವಿಭಿನ್ನ ಆಧ್ಯತೆಗಳಿಗೆ ಅನುಗುಣವಾಗಿ ಈ ಪ್ರಯತ್ನ ನಡೆದಿದೆ ಎಂದು HMD ಗ್ಲೋಬಲ್ ವರದಿಮಾಡಿದೆ. ಆದರಿಂದ ಹೆಚ್‌ಎಂಡಿ ಮೊಬೈಲ್‌ಗಳ ಜೊತೆಗೆ ನೋಕಿಯಾ ಮೊಬೈಲ್‌ಗಳನ್ನು ಸಹ ಮಾರುಕಟ್ಟೆಯಲ್ಲಿ ಕಾಣಬಹುದಾಗಿದೆ.


Click it and Unblock the Notifications








