HMD ಗ್ಲೋಬಲ್‌ನಿಂದ ಶಾಕಿಂಗ್ ನಿರ್ಧಾರ! ಸ್ವಂತ ಬ್ರ್ಯಾಂಡ್ ಹೆಸರಿನ ಫೋನ್ ಪರಿಚಯಿಸಲು ಪ್ಲಾನ್!
HMD ಗ್ಲೋಬಲ್ ತನ್ನ ಸ್ವಂತ ಬ್ರಾಂಡ್ ಹೆಸರಿನಲ್ಲಿ ಮೊದಲ ಬಾರಿಗೆ ಸ್ಮಾರ್ಟ್‌ಫೋನ್ ಪರಿಚಯಿಸಲು ಮುಂದಾಗಿದೆ. ಇಲ್ಲಿಯವರೆಗೆ ನೋಕಿಯಾ ಬ್ರಾಂಡ್ ಹೆಸರಿನಲ್ಲಿ ಸ್ಮಾರ್ಟ್‌ಫೋನ್ ಪರಿಚಯಿಸುತ್ತಿದ್ದ HMD ಗ್ಲೋಬಲ್ ನಿರ್ಧಾರ ಟೆಕ್ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಅಲ್ಲದೆ HMD ಗ್ಲೋಬಲ್ ಬ್ರಾಂಡ್ ಹೆಸರಿನ ಮೊದಲ ಸ್ಮಾರ್ಟ್‌ಫೋನ್ ಹೇಗಿರಲಿದೆ ಎನ್ನುವ ಕುತೂಹಲ ಎಲ್ಲೆಡೆ ಮನೆ ಮಾಡಿದೆ.
ಹೌದು, HMD ಗ್ಲೋಬಲ್ ತನ್ನದೇ ಬ್ರಾಂಡ್ ಹೆಸರಿನಲ್ಲಿ ಮೊದಲ ಬಾರಿಗೆ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ ಎಂದು ವರದಿಯಾಗಿದೆ. ಈ ಸ್ಮಾರ್ಟ್‌ಫೋನ್‌ನ ಉದ್ದೇಶಿತ ರೆಂಡರ್ ಈಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಆದರಿಂದ HMD ಗ್ಲೋಬಲ್ನ ಮೊಬೈಲ್ ವಿಶೇಷತೆ ಏನಿರಲಿದೆ? ಇದರ ಸ್ಮಾರ್ಟ್‌ಫೋನ್ ವಿನ್ಯಾಸದ ಬಗ್ಗೆ ಚರ್ಚೆ ಆಗುತ್ತಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ನ ವಿಶೇಷತೆ ಏನಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

HMD ಗ್ಲೊಬಲ್‌ನ ಉದ್ದೇಶಿತ N159V ಸ್ಮಾರ್ಟ್‌ಫೋನ್‌ನ ಚಿತ್ರ ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ. ಈ ಚಿತ್ರದಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಹ್ಯಾಂಡ್‌ಸೆಟ್ ಅನ್ನು ಕಪ್ಪು ಬಣ್ಣದಲ್ಲಿ ತೋರಿಸಲಾಗಿದೆ. ಅಲ್ಲದೆ ಸ್ಮಾರ್ಟ್‌ಫೋನ್‌ನ ರಿಯರ್ ಪ್ಯಾನಲ್‌ನ ಮಧ್ಯಭಾಗದಲ್ಲಿ HMD ಲೋಗೋ ಗೋಚರಿಸಲಿದೆ. ಸೋರಿಕೆಯಾದ ಚಿತ್ರದ ಪ್ರಕಾರ ಮಿಡ್‌ರೇಂಜ್ ಫೋನ್ ಆಗಿ ಬರಲಿದೆ ಎಂದು ಸೂಚಿಸಿದೆ.
HMD ಗ್ಲೊಬಲ್ ಫೋನ್ ಪ್ಲಾಸ್ಟಿಕ್ ಹಿಂಬದಿಯ ಪ್ಯಾನೆಲ್‌ನೊಂದಿಗೆ ಸಜ್ಜುಗೊಂಡಂತೆ ತೋರುತ್ತಿದೆ. ಈ ಮೊಬೈಲ್‌ನ ಪವರ್ ಮತ್ತು ವಾಲ್ಯೂಮ್ ಬಟನ್‌ಗಳು ಹ್ಯಾಂಡ್‌ಸೆಟ್‌ನ ಬಲಭಾಗದಲ್ಲಿ ಇದೆ ಎಂದು ಹೇಳಲಾಗಿದೆ. ಜೊತೆಗೆ ಸ್ಮಾರ್ಟ್‌ಫೋನ್ ಫ್ಲಾಟ್ ಡಿಸ್‌ಪ್ಲೇಯನ್ನು ತೋರಿಸಲಾಗಿದೆ. ಅಲ್ಲದೆ ಸ್ಮಾರ್ಟ್‌ಫೋನ್‌ನ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದ ಕ್ಯಾಮೆರಾವನ್ನು ಹೊಂದಿದ್ದು, ಸ್ಕ್ರೀನ್ ಮೇಲ್ಭಾಗದಲ್ಲಿ ಹೋಲ್ ಪಂಚ್ ಕಟೌಟ್‌ನಲ್ಲಿದೆ ಎಂದು ಸೂಚಿಸುತ್ತದೆ.

HMD ಗ್ಲೋಬಲ್ ಸಿಇಒ ಜೀನ್-ಫ್ರಾಂಕೋಯಿಸ್ ಬರಿಲ್ ಫಿನ್ನಿಷ್ ಸಂಸ್ಥೆಯು HMD ಬ್ರ್ಯಾಂಡ್‌ನ ಅಡಿಯಲ್ಲಿ ಬಿಡುಗಡೆಯಾದ ಸ್ಮಾರ್ಟ್‌ಫೋನ್‌ಗಳೊಂದಿಗೆ ತನ್ನ ಪ್ರಾಡಕ್ಟ್ ಪೋರ್ಟ್‌ಫೋಲಿಯೊವನ್ನು ಶೀಘ್ರದಲ್ಲೇ ವಿಸ್ತರಿಸಲಿದೆ ಎಂದು ಘೋಷಿಸಿದೆ.
ಇನ್ನು ಇತ್ತೀಚಿಗೆ HMD ಗ್ಲೋಬಲ್ ನೋಕಿಯಾ ಬ್ರ್ಯಾಂಡ್ ಅಡಿಯಲ್ಲಿ ಹೊಸದಾಗಿ ನೋಕಿಯಾ G42 5G ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ 6.56 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, 720 x 1612 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಇದು ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್13ನಲ್ಲಿ ರನ್ ಆಗಲಿದೆ. ಹಾಗೆಯೆ 6GB RAM, 128GB ಇಂಟರ್ ಸ್ಟೋರೇಜ್ ಆಯ್ಕೆ ನೀಡಲಾಗಿದ್ದು ಹೆಚ್ಚುವರಿ ಸ್ಟೋರೇಜ್‌ಗಾಗಿ SD ಕಾರ್ಡ್ ಆಯ್ಕೆ ಹೊಮದಿದೆ.
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಹೊಂದಿದೆ. ಇದರೊಂದಿಗೆ ಎಲ್‌ಇಡಿ ಫ್ಲ್ಯಾಶ್, ನೈಟ್ ಮೋಡ್ 2.0, AI ಪೋರ್ಟ್ರೇಟ್ ಮತ್ತು OZO 3D ಆಡಿಯೊ ಕ್ಯಾಪ್ಚರ್ ಸೌಲಭ್ಯ ಸಹ ಈ ಫೋನ್‌ನಲ್ಲಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಪಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 20W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದು ತ್ವರಿತವಾಗಿ ಮೊಬೈಲ್ ಅನ್ನು ಚಾರ್ಜ್ ಮಾಡಲಿದೆ.


Click it and Unblock the Notifications








